MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Gig Workers: 90,000 ಡೆಲಿವರಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ಘೋಷಿಸಿದ ಅಮೆಜಾನ್ ಇಂಡಿಯಾ

Gig Workers: 90,000 ಡೆಲಿವರಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ಘೋಷಿಸಿದ ಅಮೆಜಾನ್ ಇಂಡಿಯಾ

ಅಮೆಜಾನ್ ಇಂಡಿಯಾ ತನ್ನ 90,000ಕ್ಕೂ ಹೆಚ್ಚು ವಿತರಣಾ ಸಿಬ್ಬಂದಿಗಾಗಿ ಸಮಗ್ರ ಆರೋಗ್ಯ ಮತ್ತು ವಿಮಾ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ಹೆಚ್ಚುವರಿ ಮೆಡಿಕ್ಲೈಮ್, ಅಪಘಾತ ವಿಮೆ, ಮತ್ತು ಓಪಿಡಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಿಬ್ಬಂದಿಗೆ ಸಾಮಾಜಿಕ ಭದ್ರತೆ ನೀಡುವ ಗುರಿ ಹೊಂದಿದೆ.

2 Min read
Author : Kannadaprabha News
Published : May 13 2026, 07:32 AM IST
Share this Photo Gallery
  • FB
  • TW
  • Linkdin
  • Whatsapp
16
ಇ ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ
Image Credit : Gemini

ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ

ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ತನ್ನ ವಿತರಣಾ ಜಾಲದ 90,000ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗಾಗಿ ಸಮಗ್ರ ಆರೋಗ್ಯ ಮತ್ತು ವಿಮಾ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ಕೊನೆಯ ಹಂತದ ವಿತರಣಾ ಸಿಬ್ಬಂದಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ರಕ್ಷಣೆ ಒದಗಿಸುವ ಗುರಿ ಹೊಂದಿದೆ. ಈ ಹೊಸ ಯೋಜನೆಯಡಿ ಆರೋಗ್ಯ ರಕ್ಷಣೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ.

Add Asianetnews Kannada as a Preferred SourcegooglePreferred
26
ನೀಡಲಾಗಿರುವ ಸೌಲಭ್ಯಗಳ ಮಾಹಿತಿ
Image Credit : Amazon

ನೀಡಲಾಗಿರುವ ಸೌಲಭ್ಯಗಳ ಮಾಹಿತಿ

ಹೆಚ್ಚುವರಿ ವಿಮಾ ಮೊತ್ತ: ಮೆಡಿಕ್ಲೈಮ್ ಮೊತ್ತವನ್ನು ₹1.5 ಲಕ್ಷಕ್ಕೆ ಏರಿಸಲಾಗಿದ್ದು, ಅಪಘಾತ ವಿಮಾ ಕವರೇಜ್ ಅನ್ನು ₹10 ಲಕ್ಷಕ್ಕೆ ವಿಸ್ತರಿಸಲಾಗಿದೆ.

ಓಪಿಡಿ ಮತ್ತು ಚಿಕಿತ್ಸೆ: ದಿನನಿತ್ಯದ ವೈದ್ಯಕೀಯ ತಪಾಸಣೆಗಾಗಿ ₹10,000 ವರೆಗೆ ಓಪಿಡಿ ಸೌಲಭ್ಯ ನೀಡಲಾಗುತ್ತಿದೆ.

ಕುಟುಂಬದ ರಕ್ಷಣೆ: ಸಿಬ್ಬಂದಿ ಸೇರಿದಂತೆ ಕುಟುಂಬದ ಗರಿಷ್ಠ ಮೂವರು ಸದಸ್ಯರಿಗೆ ಅನಿಯಮಿತ ಬಹುಭಾಷಾ ವರ್ಚುವಲ್ ವೈದ್ಯಕೀಯ ಸಮಾಲೋಚನೆ ಮತ್ತು ಉಚಿತ ಓಪಿಡಿ ಭೇಟಿ ಅವಕಾಶವಿದೆ.

Related Articles

Related image1
ಬೆಂಗಳೂರಿನಲ್ಲಿ ಯುವತಿಯರ ಜತೆ ಅಸಭ್ಯ ವರ್ತನೆ: ಫುಡ್ ಡೆಲಿವರಿ ಬಾಯ್ಸ್‌ಗೆ ಲಾಠಿ ರುಚಿ ತೋರಿಸಿದ ಸಿಸಿಬಿ ಪೊಲೀಸರು!
Related image2
ಬೆಂಗಳೂರು: ಮಧ್ಯರಾತ್ರಿ ಆರ್ಡರ್ ಮಾಡಿದ ಗ್ರಾಹಕನೊಂದಿಗೆ ಕಿರಿಕ್, ಮೂಗು ಗುದ್ದಿ ಪುಡಿ ಮಾಡಿದ ಡೆಲಿವರಿ ಬಾಯ್‌!
36
 ₹2,800 ಕೋಟಿ ಹೂಡಿಕೆ
Image Credit : Getty

₹2,800 ಕೋಟಿ ಹೂಡಿಕೆ

ಈ ಕುರಿತು ಮಾತನಾಡಿರುವ ಅಮೆಜಾನ್ ಇಂಡಿಯಾದ ನಿರ್ದೇಶಕ ಸಲೀಂ ಮೆಮನ್ ಅವರು, ‘ನಮ್ಮ ವಿತರಣಾ ಸಿಬ್ಬಂದಿಗಳ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಮೊದಲ ಆದ್ಯತೆಯಾಗಿದೆ. ಇತ್ತೀಚೆಗೆ ಘೋಷಿಸಿದ ₹2,800 ಕೋಟಿ ಹೂಡಿಕೆಯ ಭಾಗವಾಗಿ ಈ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

46
ಕ್ಷೇಮ ಕೇಂದ್ರಗಳು ಮತ್ತು ಸಾಮಾಜಿಕ ಬೆಂಬಲ
Image Credit : Amazon

ಕ್ಷೇಮ ಕೇಂದ್ರಗಳು ಮತ್ತು ಸಾಮಾಜಿಕ ಬೆಂಬಲ

ಕಂಪನಿಯು ಆರೋಗ್ಯ ಸೌಲಭ್ಯಗಳ ಜೊತೆಗೆ ಸಿಬ್ಬಂದಿಗಳ ದೈನಂದಿನ ಅನುಕೂಲಕ್ಕಾಗಿ ‘ಪ್ರಾಜೆಕ್ಟ್ ಆಶ್ರಯ್’ ಅಡಿಯಲ್ಲಿ ವಿಶ್ರಾಂತಿ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಪ್ರಸ್ತುತ 100 ಇರುವ ಈ ಕೇಂದ್ರಗಳನ್ನು 2026ರ ವೇಳೆಗೆ 250ಕ್ಕೆ ವಿಸ್ತರಿಸುವ ಗುರಿ ಹೊಂದಿದೆ. ಇಲ್ಲಿ ಕುಡಿಯುವ ನೀರು, ಚಾರ್ಜಿಂಗ್ ಪಾಯಿಂಟ್ ಮತ್ತು ಪ್ರಥಮ ಚಿಕಿತ್ಸಾ ಸೌಲಭ್ಯಗಳಿರುತ್ತವೆ.

56
 24/7 ತುರ್ತು ಸುರಕ್ಷತಾ ನೆರವು
Image Credit : our own

24/7 ತುರ್ತು ಸುರಕ್ಷತಾ ನೆರವು

ಅಮೆಜಾನ್ ಇಂಡಿಯಾವು ವಿತರಣಾ ಸಿಬ್ಬಂದಿಗಳಿಗೆ 24/7 ತುರ್ತು ಸುರಕ್ಷತಾ ನೆರವನ್ನು ನೀಡುತ್ತದೆ. ಇದರಲ್ಲಿ ಡಯಲ್ 4242 ಸಹಯೋಗದೊಂದಿಗೆ 730ಕ್ಕೂ ಹೆಚ್ಚು ನಗರಗಳಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಗಳು (ಪ್ರಾಥಮಿಕ ಮತ್ತು ಸುಧಾರಿತ ಜೀವ ರಕ್ಷಣಾ ವ್ಯವಸ್ಥೆಯೊಂದಿಗೆ), ಮೀಸಲಾದ ಸಹಾಯವಾಣಿಗಳು ಮತ್ತು ತುರ್ತು ನೆರವು ಸೇರಿವೆ.

66
 ಸುರಕ್ಷಿತ ಮತ್ತು ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಜಾಲ
Image Credit : AI meta

ಸುರಕ್ಷಿತ ಮತ್ತು ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಜಾಲ

ಇದಲ್ಲದೆ, ಸಿಬ್ಬಂದಿಗಳ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ‘ಪ್ರತಿಧಿ’ ವಿದ್ಯಾರ್ಥಿವೇತನ ಮತ್ತು ದೇಶಾದ್ಯಂತ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಮೂಲಕ ಅಮೆಜಾನ್ ತನ್ನ ಮಾನವ ಸಂಪನ್ಮೂಲದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ. ಜೊತೆ ರಸ್ತೆ ಸುರಕ್ಷತಾ ಜಾಗೃತಿಯನ್ನೂ ಮೂಡಿಸುವ ಕೆಲಸ ಮಾಡುತ್ತಿದ್ದು, ತನ್ನ ಉದ್ಯೋಗಿಗಳ ಕೌಶಲ್ಯಾಭಿವೃದ್ಧಿಗೂ ಒತ್ತು ನೀಡಿದೆ. ಈ ಬೃಹತ್ ಹೂಡಿಕೆಯು ಭಾರತದಲ್ಲಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಜಾಲವನ್ನು ನಿರ್ಮಿಸುವ ಕಂಪನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಅಮೆಜಾನ್
ಡೆಲಿವರಿ ಬಾಯ್
ವಿಮೆ

Latest Videos
Recommended Stories
Recommended image1
ಮಿತವ್ಯಯ ಸೂತ್ರ ಪಾಲನೆ ಜಾರಿಗೊಳಿಸಲು ಮುಂದಾದ ಕೇಂದ್ರ, ಯೋಜನೆ ಸಲ್ಲಿಸಲು ಸಚಿವಾಲಯಗಳಿಗೆ ಆದೇಶ, ಎಲ್ಲವೂ ಬದಲಾಗಲಿದೆ!
Recommended image2
ಷೇರು ಮಾರುಕಟ್ಟೆ ಕುಸಿತಕ್ಕೆ 4 ದಿನದಲ್ಲಿ ₹16.77 ಲಕ್ಷ ಕೋಟಿ ಧೂಳೀಪಟ! ಹೂಡಿಕೆದಾರರಿಗೆ ತಜ್ಞರ ಸಲಹೆ ಇಲ್ಲಿವೆ!
Recommended image3
ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಭಾರತದ ಮುಂದಿದೆ ಅಗ್ನಿಪರೀಕ್ಷೆ! ವಿಶ್ವ ಆರ್ಥಿಕ ಸಮರ
Related Stories
Recommended image1
ಬೆಂಗಳೂರಿನಲ್ಲಿ ಯುವತಿಯರ ಜತೆ ಅಸಭ್ಯ ವರ್ತನೆ: ಫುಡ್ ಡೆಲಿವರಿ ಬಾಯ್ಸ್‌ಗೆ ಲಾಠಿ ರುಚಿ ತೋರಿಸಿದ ಸಿಸಿಬಿ ಪೊಲೀಸರು!
Recommended image2
ಬೆಂಗಳೂರು: ಮಧ್ಯರಾತ್ರಿ ಆರ್ಡರ್ ಮಾಡಿದ ಗ್ರಾಹಕನೊಂದಿಗೆ ಕಿರಿಕ್, ಮೂಗು ಗುದ್ದಿ ಪುಡಿ ಮಾಡಿದ ಡೆಲಿವರಿ ಬಾಯ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved