ನೇಪಾಳದ ಜೆನ್‌ಜಿ ಪ್ರತಿಭಟನಕಾರರು ಇದೀಗ ನೇಪಾಳ ಸರ್ಕಾರ ಮುನ್ನಡೆಸಲು ಸುಶೀಲ್ ಕರ್ಕಿ ಹೆಸರು ಸೂಚಿಸಿದ್ದಾರೆ. ಪ್ರಧಾನಿ ಮೋದಿ, ಗಂಗಾ ಮಾತೆ ಸೇರಿದಂತೆ ಭಾರತ ಬಗ್ಗೆ ಉತ್ತಮ ಅಭಿಪ್ರಾಯ, ಸಂಬಂಧ ಇಟ್ಟುಕೊಂಡಿರುವ ಸುಶೀಲಾ ಕರ್ಕಿ ಯಾರು?
- Home
- News
- India News
- India Latest News Live: ನೇಪಾಳ ಮುನ್ನಡೆಸಲು ಜೆನ್‌ಜಿ ಸೂಚಿಸಿದ ಸುಶೀಲಾ ಕರ್ಕಿ ಯಾರು, ಭಾರತ ಜೊತೆಗಿದೆ ಬಾಂಧವ್ಯ
India Latest News Live: ನೇಪಾಳ ಮುನ್ನಡೆಸಲು ಜೆನ್‌ಜಿ ಸೂಚಿಸಿದ ಸುಶೀಲಾ ಕರ್ಕಿ ಯಾರು, ಭಾರತ ಜೊತೆಗಿದೆ ಬಾಂಧವ್ಯ

ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು 26 ಸಾಮಾಜಿಕ ಜಾಲತಾಣ ವೇದಿಕೆಗಳ ನಿಷೇಧ ವಿರೋಧಿಸಿ 'ಜೆನ್-ಝೀ' ಯುವಕರು ಹಾಗೂ ಜನತೆಯ ಹಿಂಸಾತ್ಮಕ ಪ್ರತಿಭಟನೆ ಮಂಗಳವಾರ ಮತ್ತೊಂದು ದಿಕ್ಕಿಗೆ ಹೊರಳಿದೆ. ಪ್ರಧಾನಿ ಹಾಗೂ ಜನಪ್ರತಿನಿಧಿಗಳ ಮೇಲೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಆರೋಪ ಹೊರಿಸಿದ ಜನತೆ ಸಂಸತ್ ಭವನ, ಅಧ್ಯಕ್ಷರ ಕಚೇರಿ, ಹಾಗೂ ಪ್ರಧಾನಿ ಖಾಸಗಿ ನಿವಾಸ, ಸಚಿವರ ಮನೆಗಳು, ಅಧ್ಯಕ್ಷೀಯ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸೇನೆಯು ಪ್ರಧಾನಿ ಅನುಪಸ್ಥಿತಿಯಲ್ಲಿ ದೇಶದ ಭದ್ರತೆ ಹೊಣೆ ಹೊತ್ತಿದ್ದೇವೆ ಎಂದು ಸೇನೆ ಘೋಷಿಸಿದೆ. ಈ ದಂಗೆ ಇತ್ತೀಚಿನ ಬಾಂಗ್ಲಾದೇಶ, ಸಿರಿಯಾ ಹಾಗೂ ಶ್ರೀಲಂಕಾ ದಂಗೆ ನೆನಪಿಸಿದೆ. ಘಟನೆಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಪಾಳಿಗರೇ, ಶಾಂತಿ ಕಾಪಾಡಿಕೊಳ್ಳಿ ನೇಪಾಳದಲ್ಲಿ ಸಂಭವಿಸಿದ ಹಿಂಸಾಚಾರವು ಹೃದಯ ವಿದ್ರಾವಕ. ಅನೇಕ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಸಂಗತಿಯಿಂದ ನನ್ನ ಮನಸ್ಸಿಗೆ ನೋವಾಗಿದೆ. ನೇಪಾಳದ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿ ಅತ್ಯಂತ ಮಹತ್ವದ್ದಾಗಿದೆ. ನೇಪಾಳದಲ್ಲಿರುವ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಮನವಿ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.
India Latest News Liveನೇಪಾಳ ಮುನ್ನಡೆಸಲು ಜೆನ್‌ಜಿ ಸೂಚಿಸಿದ ಸುಶೀಲಾ ಕರ್ಕಿ ಯಾರು, ಭಾರತ ಜೊತೆಗಿದೆ ಬಾಂಧವ್ಯ
India Latest News Liveಭಾರತದ ಮೇಲೆ ಟ್ರಂಪ್‌ಗೆ ತೆರಿಗೆ ಬೆನ್ನಲ್ಲೇ ವಿಶ್ವದ ಶ್ರೀಮಂತ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್!
ಭಾರತ ಸೇರಿದಂತೆ ಜಾಗತಿಕ ಮಟ್ಟದ ಅನೇಕ ರಾಷ್ಟ್ರಗಳ ಮೇಲೆ ಸುಂಕ ಭಾರ ಹೇರಿದ್ದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಆಪ್ತ ಸ್ನೇಹಿತ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇದೀಗ ನಂ.1 ಶ್ರೀಮಂತ ಪಟ್ಟ ಕಳೆದುಕೊಂಡಿದ್ದಾರೆ. ಇದೀಗ ವಿಶ್ವದ ಶ್ರೀಮಂತ ವ್ಯಕ್ತಿ ಯಾರು, ಆತನ ಆಸ್ತಿ ಎಷ್ಟಿದೆ? ನೋಡಿ.
India Latest News Liveನೇಪಾಳ ದಂಗೆಗೆ ಕಾರಣರಾದ ಜನರೇಶನ್ ಝಡ್ ಯಾರು? ಈ ಹೊಸ ತಲೆಮಾರನ್ನೇಕೆ ಜೆನ್ ಝೀ ಕಿಡ್ ಗಳೆನ್ನತ್ತಾರೆ?
ನೇಪಾಳದಲ್ಲಿ ಆರಂಭವಾದ ಜೆನ್ ಝೀ ಕಿಡ್‌ಗಳ ಆಕ್ರೋಶದಿಂದ ಜನರೇಶನ್ ಝೆಡ್‌ಗಳ ಬಗ್ಗೆ ಹುಡುಕಾಟ ಆರಂಭವಾಗಿದೆ. 1997 ರಿಂದ 2012 ರ ನಡುವೆ ಜನಿಸಿದ ಈ ತಲೆಮಾರಿನವರು ತಂತ್ರಜ್ಞಾನದಲ್ಲಿ ನಿಪುಣರಾಗಿದ್ದು, ಪ್ರಾಯೋಗಿಕ ಮತ್ತು ಮೌಲ್ಯ-ಚಾಲಿತ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.
India Latest News Live2 ವರ್ಷ ಮೊದಲೇ ನೇಪಾಳ ಪರಿಸ್ಥಿತಿ ಸ್ಫೋಟಕ ಭವಿಷ್ಯ ನುಡಿದಿದ್ದ ಭಾರತೀಯ ಜ್ಯೋತಿಷಿ
2023ರಲ್ಲೇ ಭಾರತದ ಜ್ಯೋತಿಷಿ ನೇಪಾಳ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದರು. ಇದೀಗ ಈ ಜ್ಯೋತಿಷಿ ನುಡಿದಂತೆ ನೇಪಾಳದಲ್ಲಿ ಸರ್ಕಾರದ ಪತನದ ಅಂಚಿನಲ್ಲಿದೆ. ಇದೇ ಜ್ಯೋತಿಷಿ ನೇಪಾಳದಲ್ಲಿನ ಮಹತ್ತರ ಬದಲಾವಣೆ ಕುರಿತು ಭವಿಷ್ಯ ನುಡಿದಿದ್ದಾರೆ. ಇದು ಶೀಘ್ರದಲ್ಲೇ ಆಗುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.
India Latest News Liveಮಾರುಕಟ್ಟೆಗೆ ಲಗ್ಗೆ ಇಟ್ಟ ಚೀನಾದ ಡೇಂಜರಸ್ ಬೆಳ್ಳುಳ್ಳಿ - ಗುರುತಿಸೋದು ಹೇಗೆ? ಡಿಟೇಲ್ಸ್ ಇಲ್ಲಿದೆ..
ಭಾರತದ ಮಾರುಕಟ್ಟೆಗೆ ಚೀನಾದ ಬೆಳ್ಳುಳ್ಳಿ ಆಗಾಗ್ಗೆ ಲಗ್ಗೆ ಇಟ್ಟು ಸದ್ದು ಮಾಡುತ್ತಲೇ ಇರುತ್ತದೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ಬೆಳ್ಳುಳ್ಳಿ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
India Latest News Liveಹೂಡಿಕೆದಾರರಿಗೆ 2323% ಲಾಭ ನೀಡಿದ ಷೇರು; 1 ಲಕ್ಷ ಇದೀಗ 24 ಲಕ್ಷ, 6 ತಿಂಗಳಲ್ಲಿ 172% ಪ್ರಚಂಡ ಲಾಭ
ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ 2323% ರಷ್ಟು ಲಾಭ ತಂದುಕೊಟ್ಟಿದೆ. ₹11 ರಿಂದ ₹290 ಕ್ಕೆ ಏರಿಕೆಯಾಗಿರುವ ಈ ಷೇರು, ಕೇವಲ ಆರು ತಿಂಗಳಲ್ಲಿ 172% ಲಾಭ ನೀಡಿದೆ.
India Latest News Liveಡಿವೋರ್ಸ್ ಪಡೆದ ಭಾರತದ ಮೊದಲ ಮಹಿಳೆ ಈಕೆ! ಸ್ತ್ರೀ ಸಬಲೀಕರಣಕ್ಕೆ ಕಾರಣವಾದ ರೋಚಕ ಸ್ಟೋರಿ
140 ವರ್ಷಗಳ ಹಿಂದೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಡಿವೋರ್ಸ್ ಪಡೆದ ರುಕ್ಮಾಬಾಯಿಯ ಸ್ಟೋರಿ ಇದು. ಬಾಲ್ಯ ವಿವಾಹ ಸೇರಿದಂತೆ ಇಡೀ ದೇಶದಲ್ಲಿಯೇ ಮಹಿಳಾ ಕ್ರಾಂತಿಗೆ ನಾಂದಿ ಹಾಡಿದ ಈಕೆಯ ರೋಚಕ ಕಥೆ ಕೇಳಿ...
India Latest News LiveOperation Sindoor ಶಾಕಿಂಗ್ ವರದಿ ರಿವೀಲ್ ಮಾಡಿದ ಇಸ್ರೋ - 400 ವಿಜ್ಞಾನಿಗಳ ಸ್ಟೋರಿ ಇದು!
ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಭಾರತದತ್ತ ದೃಷ್ಟಿ ಹರಿಸಿದ್ದಕ್ಕೆ ಕಾರಣವಾದದ್ದು ಆಪರೇಷನ್ ಸಿಂದೂರ್. ಯುದ್ಧ ಮಾಡದೇ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದ ಈ ಕಾರ್ಯಾಚರಣೆಯ ಕುತೂಹಲದ ಸ್ಟೋರಿ ಹಂಚಿಕೊಂಡಿದೆ ಇಸ್ರೊ. ಏನದು?
India Latest News Liveನಿದ್ದೆ ಮಾಡದೇ ಅಳುತ್ತಿದೆ ಎಂದು 15 ದಿನದ ಮಗುವನ್ನು ಫ್ರಿಡ್ಜ್‌ನಲ್ಲಿಟ್ಟ ತಾಯಿ
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು 15 ದಿನದ ಮಗುವನ್ನು ಫ್ರಿಡ್ಜ್‌ನಲ್ಲಿ ಇಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
India Latest News Liveಹೊತ್ತಿ ಉರಿದ ನೇಪಾಳ - ದೇಶವನ್ನೇ ನಲುಗಿಸಿದ ಜೆನ್ ಜೀ ಪ್ರತಿಭಟನಾಕಾರರು ಮತ್ತು ಭಾರತಕ್ಕಿರುವ ಪಾಠ
India Latest News Liveಸಂಜಯ್ ಕಪೂರ್ ಬಿಟ್ಟು ಹೋದ 30,000 ಕೋಟಿ ಮೊತ್ತದ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ ಅಮ್ಮ, ಸೊಸೆ, ಮಕ್ಕಳು
ಸಂಜಯ್ ಕಪೂರ್ ಅವರ ನಿಧನದ ನಂತರ, ಅವರ 30,000 ಕೋಟಿ ರೂಪಾಯಿಗಳ ಆಸ್ತಿಯನ್ನು ಪಡೆಯಲು ಕುಟುಂಬದ ಸದಸ್ಯರ ನಡುವೆ ಕಾನೂನು ಹೋರಾಟ ಆರಂಭವಾಗಿದೆ. ತಾಯಿ, ಪತ್ನಿ ಮತ್ತು ಮಕ್ಕಳು ಆಸ್ತಿಯಲ್ಲಿ ತಮ್ಮ ಪಾ ಲು ಕೇಳಿದ್ದು, ಈ ಸುದ್ದಿ ತೀವ್ರ ಕುತೂಹಲವನ್ನು ಸೃಷ್ಟಿಸಿದೆ.
India Latest News Liveಚಿನ್ನದ ಬೆಲೆ ಏರಿಕೆ ಎಲ್ಲಿಗೆ ಹೋಗಿ ನಿಲ್ಲುತ್ತೆ? ಖರೀದಿಗೆ ಬೆಸ್ಟ್ ಟೈಮ್ ಹೇಳಿದ ತಜ್ಞರು
India Latest News Liveಪಾಕಿಸ್ತಾನ ಐಎಸ್‌ಐಗೆ ಸಿಮ್ ಕಾರ್ಡ್ ಪೂರೈಕೆ, ನೇಪಾಳಿ ಪ್ರಜೆ ದೆಹಲಿಯಲ್ಲಿ ಅರೆಸ್ಟ್, ನೇಪಾಳ ದಂಗೆಗೆ ಈತನೂ ಕಾರಣ!
India Latest News Liveನಿಂಬೆಹಣ್ಣಿನ ಮೇಲೆ ಓಡಿಸಲು ಹೋಗಿ ದುರಂತ - ಶೋರೂಮ್‌ನ ಮಹಡಿಯಿಂದ ಕೆಳಗೆ ಬಿದ್ದ ಹೊಸ ಮಹೀಂದ್ರ ಥಾರ್
India Latest News Liveಯುವತಿಯ ಅಶ್ಲೀಲ ನೃತ್ಯ ಕಾರ್ಯಕ್ರಮ ಆಯೋಜಿಸಿದ ದೇವಸ್ಥಾನ ಆಡಳಿತ ಮಂಡಳಿ - ವಿಡಿಯೋ ವೈರಲ್
ಖೆರೇಶ್ವರ್ ಮಹಾದೇವ ದೇವಸ್ಥಾನದಲ್ಲಿ ರಷ್ಯನ್ ಯುವತಿಯೊಬ್ಬರು ಅಶ್ಲೀಲ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ದೇವಸ್ಥಾನದ ಆಡಳಿತ ಮಂಡಳಿಯೇ ಈ ಕಾರ್ಯಕ್ರಮ ಆಯೋಜಿಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
India Latest News Liveಚಿನ್ನದ ದರದಲ್ಲಿ ಸರ್ವಕಾಲಿಕ ದಾಖಲೆಯ ಏರಿಕೆ - ಹೇಗಿದೆ ಇಂದಿನ ದರ
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.
India Latest News Liveನನ್ನ ಆತ್ಮೀಯ ಗೆಳೆಯ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ - ಡೋನಾಲ್ಡ್ ಟ್ರಂಪ್
ಭಾರತದ ಮೇಲಿನ ತೆರಿಗೆ ಹೇರಿಕೆ ನಂತರ ಭಾರತ ಚೀನಾದತ್ತ ಮುಖ ಮಾಡಿದ ಹಿನ್ನೆಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ಆಸಕ್ತಿ ತೋರಿಸಿದ್ದಾರೆ.
India Latest News LiveToday Top News - ಚಿನ್ನದ ಬೆಲೆ 10 ಗ್ರಾಂಗೆ 1.14 ಲಕ್ಷ, ಕತಾರ್ ಮೇಲೆ ಇಸ್ರೇಲ್ ದಾಳಿ,100ರಲ್ಲಿ 63 ಜನ ಲಂಚ ಕೊಟ್ಟೇ ಕೆಲಸ
ಕರ್ನಾಟಕದ ಟಾಪ್ ಸುದ್ದಿಗಳು, ಅಕ್ರಮ ಅದಿರು ಸಾಗಣೆ ಪ್ರಕರಣ, ಚಿನ್ನದ ಬೆಲೆ ಏರಿಕೆ, ಜಾಗತಿಕ ರಾಜಕೀಯ ಬದಲಾವಣೆಗಳು ಸೇರಿದಂತೆ ಹಲವು ಮಹತ್ವದ ಸುದ್ದಿಗಳು ಇಲ್ಲಿವೆ.