ಚಿನ್ನದ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಖರೀದಿದಾರರಿಗೆ ತಜ್ಞರ ಸಲಹೆ. ಚಿನ್ನದ ದರ ಏರಿಕೆಗೆ ಕಾರಣಗಳೇನು? ಭವಿಷ್ಯದಲ್ಲಿ ಚಿನ್ನ ಖರೀದಿಸಲು ಸೂಕ್ತ ಸಮಯ ಯಾವುದು ಎಂಬ ಮಾಹಿತಿ ಇಲ್ಲಿದೆ.

ನವದೆಹಲಿ: ಕಳೆದ 15 ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. MCXನಲ್ಲಿ 10 ಗ್ರಾಂ ಚಿನ್ನದ ಬೆಲೆ 1.09 ಲಕ್ಷ ರೂ.ಗೂ ಅಧಿಕವಾಗಿದೆ. ದೆಹಲಿಯ ಸರಾಫ್ ಬಜಾರ್‌ನಲ್ಲಿ ಚಿನ್ನದ ಬೆಲೆ 1.12 ಲಕ್ಷ ರೂಪಾಯಿಯ ಗಡಿ ದಾಟಿದ್ದು, ಪ್ರತಿದಿನವೂ ದಾಖಲೆಯನ್ನು ಬರೆಯುತ್ತಿದೆ. ಮಾರುಕಟ್ಟೆ ತಜ್ಞರು, ಚಿನ್ನದ ಏರಿಕೆ ಎಲ್ಲಿಗೆ ನಿಂತುಕೊಳ್ಳುತ್ತೆ? ಭವಿಷ್ಯದಲ್ಲಿ ಚಿನ್ನ ಯಾವ ಸಮಯದಲ್ಲಿ ಖರೀದಿಸಬೇಕು ಮತ್ತು ದರ ಇಳಿಕೆ ಕುರಿತು ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆನಂದ್ ರಾಠಿ ಶೇರಸ್‌ ಆಂಡ್ ಸ್ಟಾಕ್ ಬ್ರೋಕರ್ಸ್‌ನ AVP (ಕಮೋಡಿಟಿಸ್ ಆಂಡ್ ಕರೆನ್ಸಿಸ್) ಮನೀಶ್ ವರ್ಮಾ, ಚಿನ್ನದ ಖರೀದಿದಾರರಗೆ ಕೆಲವೊಂದು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ಈ ವಾರದ ಮೊದಲ ದಿನದಿಂದಲೂ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ. ಸ್ಪಾಟ್ ಮಾರ್ಕೆಟ್‌ನಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 3, 650 ಡಾಲರ್‌ಗಿಂತಲೂ ಹೆಚ್ಚಳವಾಗಿದೆ. ಇದು ಈವರೆಗಿನ ಅತ್ಯಧಿಕ ದರವಾಗಿದೆ. ಫೆಡರಲ್ ರಿಸರ್ವ್ (ಫೆಡ್ ರಿಸರ್ವ್) ಸೆಪ್ಟೆಂಬರ್ ಸಭೆಯಲ್ಲಿ ಬಡ್ಡಿದರ ಕಡಿಮೆ ಮಾಡುವ ಸಾಧ್ಯತೆಗಳಿವೆ. ಅಮೆರಿಕ ಲೇಬರ್ ಮಾರುಕಟ್ಟೆ ಅಂಕಿ ಅಂಶಗಳು ಕುಸಿಯುವ ಎಲ್ಲಾ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.

ಚಿನ್ನದ ದರ ಏರಿಕೆಗೆ ನಿಖರ ಕಾರಣ ಏನು?

ಅಮೆರಿಕದ ನಾನ್‌ಫಾರ್ಮ್ ಪರೋಲ್ಸ್ (NFP) ವರದಿ ಪ್ರಕಾರ, ಆಗಸ್ಟ್‌ನಲ್ಲಿ ಉದ್ಯೋಗದ ಸಂಖ್ಯೆ ಇಳಿಕೆಯಾಗಿದೆ. ನಿರುದ್ಯೋಗದ ಪ್ರಮಾಣ 2021ಕ್ಕಿಂತ ಅಧಿಕವಾಗಿದೆ. ಈ ಅಂಕಿಅಂಶಗಳಿಂದಾಗಿ ವಿಶ್ವದ ಅತಿದೊಡ್ಡ ಅರ್ಥವ್ಯವಸ್ಥೆಯಾಗಿರುವ ಅಮೆರಿಕಾದಲ್ಲಿ ಲೇಬರ್ ಮಾರುಕಟ್ಟೆ ಅನಿಶ್ವಿತತೆಯನ್ನು ಹೊಂದಿದೆ. ಇಷ್ಟು ಮಾತ್ರವಲ್ಲ ಜಪಾನ್ ಮತ್ತು ಫ್ರಾನ್ಸ್ ರಾಜಕಾರಣದಲ್ಲಿ ಏರಿಳಿತಗಳು ಕಂಡು ಬರುತ್ತಿವೆ. ಇದೇ ರೀತಿ ಪ್ರಪಂಚದ ಮಾರುಕಟ್ಟೆಯಲ್ಲಿ ವ್ಯತಿರಿಕ್ತ ಸ್ಥಿತಿ ನಿರ್ಮಾಣವಾಗುತ್ತಿರೋದರಿಂದ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ವಿಶ್ವದ ಅತಿದೊಡ್ಡ ಬ್ಯಾಂಕ್‌ಗಳು ನಿರಂತರವಾಗಿ ಚಿನ್ನವನ್ನು ಖರೀದಿಸೋತ್ತಿರೋದರಿಂದ ಬೇಡಿಕೆ ಹೆಚ್ಚಳವಾಗಿದೆ. ಚೀನಾದ ಸೆಂಟ್ರಲ್ ಬ್ಯಾಂಕ್, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (PBoC) ಆಗಸ್ಟ್‌ನಲ್ಲಿ ಅತ್ಯಧಿಕ ಚಿನ್ನ ಖರೀದಿ ಮಾಡಿರೋದು ವರದಿಯಾಗಿದೆ. ಚೀನಾದ ಈ ಖರೀದಿ 10 ತಿಂಗಳಲ್ಲಿಯೇ ಅಧಿಕವಾಗಿದೆ. ಕಳೆದ ಕೆಲವು ದಿನಗಳಿಂದ ಬೆಲೆ ಏರಿಕೆಯಾದ ಹಿನ್ನೆಲೆ ಚಿನ್ನ ಖರೀದಿ ಪ್ರಮಾಣ ಚೀನಾ ತಗ್ಗಿಸಿದೆ.

ಭವಿಷ್ಯದಲ್ಲಿ ದರ ಏರಿಕೆನಾ? ಇಳಿಕೆನಾ?

ಇದೀಗ ಜಾಗತೀಕ ಮಾರುಕಟ್ಟೆಯ ಕಣ್ಣು ಅಮೆರಿಕಾದ ಪ್ರೊಡ್ಯುಸರ್ ಪ್ರೈಸ್ ಇಂಡೆಕ್ಸ್ (PPI) ಮತ್ತು ಕನ್ಸೂಮರ್ ಪ್ರೈಸ್ ಇಂಡೆಕ್ಸ್ (CPI) ಮೇಲಿದೆ. ಈ ಅಂಕಿಅಂಶಗಳು ಇಂದು ಅಥವಾ ನಾಳೆ ಪ್ರಕಟವಾಗುವ ಸಾಧ್ಯತೆಗಳಿದ್ದು, ಇದರಿಂದ ಚಿನ್ನದ ಬೆಲೆ ಏರಿಕೆನಾ ಅಥವಾ ಇಳಿಕೆನಾ ಎಂಬುವುದು ತಿಳಿಯಲಿದೆ.

ಕೆಲ ವರದಿಗಳ ಪ್ರಕಾರ, PPI ಮತ್ತು CPI ಉತ್ತಮವಾಗಿರಲಿದೆ. ಇದರಿಂದಾಗಿ ಅಮೆರಿಕದ ಡಾಲರ್ ಮತ್ತಷ್ಟು ಪ್ರಬಲವಾಗಲಿದೆ. ಇದರಿಂದಾಗಿ ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಜನರು ಚಿನ್ನ ಮಾರಾಟ ಮಾಡಲು ಮುಂದಾಗಬಹುದು. ಮತ್ತಷ್ಟು ದರ ಕುಸಿಯುವ ಆತಂಕದಿಂದ ಚಿನ್ನ ಹರಿವು ಮಾರುಕಟ್ಟೆಯಲ್ಲಿ ಹೆಚ್ಚಳವಾಗುತ್ತೆ ಎಂದು ಊಹಿಸಲಾಗಿದೆ. ಎಕ್ಸ್‌ಪೋರ್ಟ್ ತಜ್ಞರು ಚಿನ್ನದ ದರ ಹೆಚ್ಚಳವಾಗುವ ನಿರೀಕ್ಷೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: 9 to 5 ಜಾಬ್ ಬಿಟ್ಟು ಬ್ಯುಸಿನೆಸ್ ಆರಂಭಿಸೋ ಮುನ್ನ 5 ಪ್ರಶ್ನೆಗೆ ಉತ್ತರ ಕಂಡುಕೊಳ್ಳಿ

ಎಷ್ಟು ಆಗಬಹುದು ಚಿನ್ನದ ಬೆಲೆ?

ಕಳೆದ ಮೂರ್ನಾಲ್ಕು ವಾರಗಳ ಅಂಕಿ ಅಂಶಗಳನ್ನು ಗಮನಿಸಿದ್ರೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ. ಸ್ಪಾಟ್ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 3720 ರಿಂದ 3750 ಡಾಲರ್ ಆಸುಪಾಸಿನಲ್ಲಿದೆ. ಎಂಸಿಎಕ್ಸ್ ಫ್ಯೂಚರ್ಸ್ ಒಪ್ಪಂದ ಪ್ರಕಾರ, 10 ಗ್ರಾಂ ಚಿನ್ನದ ಬೆಲೆ ₹1,12,000 ರಿಂದ ₹1,12,500 ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಚಿನ್ನ ಖರೀದಿಗೆ ಬೆಸ್ಟ್ ಟೈಮ್ ಯಾವುದು?

ಟೆಕ್ನಿಕಲ್ ಚಾರ್ಟ್ ಗಮನಿಸಿದ್ರೆ ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ RSI 70.0 ಕ್ಕಿಂತ ಮೇಲಿದೆ. ಹಾಗಾಗಿ ಚಿನ್ನ ಖರೀದಿ ಪ್ಲಾನ್ ಹೊಂದಿದ್ದರೆ ಸದ್ಯ ಮುಂದೂಡಿಕೆ ಮಾಡೋದು ಉತ್ತಮವಾಗಿದೆ. ಖರೀದಿದಾರರು ಚಿನ್ನದ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಸೂಕ್ಷ್ಮವಾಗಿ ಗಮನಿಸಬೇಕು. ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ ಸುಮಾರು $ 3,600 ರಿಂದ $ 3540 ವರೆಗೆ ಬಂದ್ರೆ ಖರೀದಿಗೆ ಇದು ಉತ್ತಮ ಸಮಯವಾಗಿರಲಿದೆ.

ಇದನ್ನೂ ಓದಿ: DMart Business: ಡಿ-ಮಾರ್ಟ್ ಮುಚ್ಚುವಂತೆ ಆಗ್ರಹ; ವ್ಯಾಪಾರಿಗಳ ಹೋರಾಟಕ್ಕೆ ಶಾಸಕರ ಬೆಂಬಲ