ಖೆರೇಶ್ವರ್ ಮಹಾದೇವ ದೇವಸ್ಥಾನದಲ್ಲಿ ರಷ್ಯನ್ ಯುವತಿಯೊಬ್ಬರು ಅಶ್ಲೀಲ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ದೇವಸ್ಥಾನದ ಆಡಳಿತ ಮಂಡಳಿಯೇ ಈ ಕಾರ್ಯಕ್ರಮ ಆಯೋಜಿಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಅಲಿಗಢ: ದೇವಸ್ಥಾನದ ಆವರಣದಲ್ಲಿ ರಷ್ಯಿಯನ್ ಯುವತಿ ಅಶ್ಲೀಲವಾಗಿ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಪ್ರಸಿದ್ದ ಖೆರೇಶ್ವರ್ ಮಹಾದೇವ ದೇವಸ್ಥಾನದ ಆವರಣದಲ್ಲಿ ಯುವತಿಯು ಡ್ಯಾನ್ಸ್ ಕಾರ್ಯಕ್ರಮ ನಡೆದಿದೆ. ದೇವಸ್ಥಾನ ಆಡಳಿತ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಅಶ್ಲೀಲ ನೃತ್ಯ ಮಾಡಿಸಿರೋದು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಲಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ಆಯೋಜಕರು ಬಾರ್ ಡ್ಯಾನ್ಸರ್ ಆಗಿರುವ ರಷ್ಯಿಯನ್ ಯುವತಿಯನ್ನು ಆಹ್ವಾನಿಸಿದ್ದರು. ವೇದಿಕೆ ಮೇಲೆ ಯುವತಿ ಅಶ್ಲೀಲ ಸನ್ನೆ ಮಾಡುತ್ತಾ, ದೇಹದ ಭಾಗಗಳನ್ನು ಎಕ್ಸ್‌ಪೋಸ್ ಮಾಡುತ್ತಾ ಡ್ಯಾನ್ಸ್ ಮಾಡುತ್ತಿದ್ರೆ, ಮುಂಭಾಗದಲ್ಲಿದ್ದ ಪುರುಷರು ಕೇಕೆ ಹಾಕಿದ್ದಾರೆ. ವೇದಿಕೆ ಮುಂಭಾಗದಲ್ಲಿ ಇಬ್ಬರು ಮಹಿಳೆಯರು ನಿಂತಿರೋದನ್ನು ಕಾಣಬಹುದಾಗಿದೆ. ಯುವತಿಯ ಡ್ಯಾನ್ಸ್ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂದು ವರದಿಯಾಗಿದೆ.
ಯಾಕೆ ಈ ಕಾರ್ಯಕ್ರಮ ಆಯೋಜನೆ?
ಲೋಧಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಖೆರೇಶ್ವರ್ ಮಹಾದೇವ ದೇವಸ್ಥಾನದ ಛಟ್ ಮೇಳ (ಜಾತ್ರೆ) ಹಿನ್ನೆಲೆ ಆಡಳಿತ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತ್ತು. ಆದ್ರೆ ಧಾರ್ಮಿಕ ಕಾರ್ಯಕ್ರಮ ಬದಲಾಗಿ ಯುವತಿಯ ನಂಗಾನಾಚ್ ನಡೆದಿತ್ತು. ಪ್ರತಿವರ್ಷವೂ ಛಠ್ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಆದ್ರೆ ಈ ಬಾರಿ ಬಾರ್ ಡ್ಯಾನ್ಸರ್ ಆಹ್ವಾನಿಸಿರೋದು ತೀವ್ರ ಚರ್ಚಗೆ ಗ್ರಾಸವಾಗಿದೆ.
ಸದ್ಯ ರಷ್ಯಿಯನ್ ಯುವತಿಯ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮುನ್ನಲೆಗೆ ಬಂದಿದೆ. ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದೇವಸ್ಥಾನ ಆಡಳಿತ ಮಂಡಳಿ ತಾವು ತೆಗೆದುಕೊಂಡ ನಿರ್ಧಾರದ ಕುರಿತು ಅವಲೋಕನ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಅಡಳಿತ ಮಂಡಳಿ ನಿರ್ಧಾರ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಆಗಿದೆ. ಆಯೋಜಕರ ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಇಂತಹ ಡ್ಯಾನ್ಸ್ ಮಾಡಿಸುತ್ತಾರೆ ಎಂಬವುದೇ ನಮಗೆ ತಿಳಿದಿರಲಿಲ್ಲ. ದೇವಸ್ಥಾನದ ಆವರಣದಲ್ಲಿ ವೇದಿಕೆ ನಿರ್ಮಿಸಲಾಗಿತ್ತು. ಡ್ಯಾನ್ಸರ್ ಯುವತಿ ತುಂಬಾನೇ ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದಾರೆ. ಆಕೆ ತನ್ನ ಕೆಲಸ ಮಾಡಿದ್ದಾಳೆ. ಇಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಯಾರನ್ನು ಕರೆಸಬೇಕು? ಯಾವ ರೀತಿಯ ಮನರಂಜನಾ ಕಾರ್ಯಕ್ರಮ ಆಯೋಜಿಸಬೇಕು ಅನ್ನೋದರ ಬಗ್ಗೆ ಆಡಳಿತ ಮಂಡಳಿಗೆ ತಿಳುವಳಿಕೆ ಇರಬೇಕಿತ್ತು ಎಂದು ದೇವಸ್ಥಾನದ ಭಕ್ತರು ಹೇಳುತ್ತಾರೆ.
ದೀಪಿಕಾ ನಾರಾಯಣ್ ಭಾರಧ್ವಜ್ ಎಂಬವರು ರಷ್ಯಿಯನ್ ಯುವತಿಯ ಡ್ಯಾನ್ಸ್ ವಿಡಿಯೋವನ್ನು ಎಕ್ಸ್ (@DeepikaBhardwaj) ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲಿಘಢ್‌ನ ಪ್ರಾಚೀನ ಶ್ರೀಖರೇಶ್ವರ ಮಹಾದೇವ ದೇವಸ್ಥಾನದಲ್ಲಿ ರಷ್ಯನ್ ಮುಜ್ರಾ. ಈ ವಿಡಿಯೋ ನೋಡಿದ ನಂತರ ನನಗೆ ನಗಬೇಕೋ ಅಳಬೇಕೋ ಅರ್ಥವಾಗುತ್ತಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ವಿಡಿಯೋಗೆ ಈವರೆಗೆ 13 ಸಾವಿರಕ್ಕೂ ಅಧಿಕ ವ್ಯೂವ್ ಬಂದಿದೆ.
ಇದನ್ನೂ ಓದಿ: ಸಂಕಷ್ಟದ ಸಮಯದಲ್ಲೂ ಬಾಲಕನ ದೊಡ್ಡತನ: ಪ್ರವಾಹ ಪೀಡಿತ ಪಂಜಾಬ್‌ನ ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: 18 ಸಾವಿರ ಸಂಬಳಕ್ಕೆ ಕೆಲಸ ಆರಂಭ, 23ನೇ ವಯಸ್ಸಿಗೆ ಮನೆ ಖರೀದಿ; ಯುವಕನ ಹೋರಾಟದ ಕಥೆ ವೈರಲ್
