MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಮಾರುಕಟ್ಟೆಗೆ ಲಗ್ಗೆ ಇಟ್ಟ ಚೀನಾದ ಡೇಂಜರಸ್​ ಬೆಳ್ಳುಳ್ಳಿ: ಗುರುತಿಸೋದು ಹೇಗೆ? ಡಿಟೇಲ್ಸ್​ ಇಲ್ಲಿದೆ..

ಮಾರುಕಟ್ಟೆಗೆ ಲಗ್ಗೆ ಇಟ್ಟ ಚೀನಾದ ಡೇಂಜರಸ್​ ಬೆಳ್ಳುಳ್ಳಿ: ಗುರುತಿಸೋದು ಹೇಗೆ? ಡಿಟೇಲ್ಸ್​ ಇಲ್ಲಿದೆ..

ಭಾರತದ ಮಾರುಕಟ್ಟೆಗೆ ಚೀನಾದ ಬೆಳ್ಳುಳ್ಳಿ ಆಗಾಗ್ಗೆ ಲಗ್ಗೆ ಇಟ್ಟು ಸದ್ದು ಮಾಡುತ್ತಲೇ ಇರುತ್ತದೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ಬೆಳ್ಳುಳ್ಳಿ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. 

2 Min read
Suchethana D
Published : Sep 10 2025, 05:45 PM IST
Share this Photo Gallery
  • FB
  • TW
  • Linkdin
  • Whatsapp
17
ಚೀನಾದ ಬೆಳ್ಳುಳ್ಳಿ ಕಿತಾಪತಿ!
Image Credit : Google

ಚೀನಾದ ಬೆಳ್ಳುಳ್ಳಿ ಕಿತಾಪತಿ!

ಇಡೀ ವಿಶ್ವಕ್ಕೆ ಕರೋನಾ ಕೊಟ್ಟಿರುವ ಚೀನಾ ಮಾಡುತ್ತಿರುವ ಕಿತಾಪತಿ ಒಂದಲ್ಲ, ಎರಡಲ್ಲ. ಚೀನಾದ ಮಾಲ್​ ಎಂದರೆ ಅದು ಡೇಂಜರಸ್ಸೇ ಎನ್ನುವುದು ಗೊತ್ತಿರುವ ವಿಷಯವೇ. ಇದೀಗ ಚೀನಾದ ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಲಗ್ಗೆ ಇಟ್ಟಿದೆ. ಈ ಹಿಂದೆಯೇ ಇದೇ ರೀತಿ ಮಾರುಕಟ್ಟೆಗೆ ಬಂದಿದ್ದ ಬೆಳ್ಳುಳ್ಳಿ ಕುರಿತು ಸಾಕಷ್ಟು ಜಾಗೃತಿ ಮೂಡಿಸಲಾಗಿತ್ತು. ಅದರ ಹೊರತಾಗಿಯೂ ಮತ್ತೊಮ್ಮೆ ಈಗ ಚೀನಾ ಬೆಳ್ಳುಳ್ಳಿ (Chienes Garlic) ಕಾಲಿಟ್ಟಿದೆ. ಅಷ್ಟಕ್ಕೂ ಚೀನಾ ವಿಶ್ವದ ಅತಿ ದೊಡ್ಡ ಬೆಳ್ಳುಳ್ಳಿ ಉತ್ಪಾದಕ ರಾಷ್ಟ್ರವಾಗಿದ್ದು, ವಿಶ್ವದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯಲ್ಲಿ 80% ನಷ್ಟು ಪಾಲು ಹೊಂದಿದೆ. ಇದರ ದೊಡ್ಡ ಪ್ರಮಾಣದ ಉತ್ಪಾದನೆಯಿಂದಾಗಿ, ಭಾರತದಲ್ಲಿ 2014ರಿಂದ ಚೀನಿ ಬೆಳ್ಳುಳ್ಳಿ ಆಮದನ್ನು ನಿಷೇಧಿಸಲಾಗಿದೆ.

27
ಏಕೀ ನಿಷೇಧ?
Image Credit : Google

ಏಕೀ ನಿಷೇಧ?

ಮೊದಲೇ ಹೇಳಿದಂತೆ ವಿಶ್ವದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯಲ್ಲಿ 80% ನಷ್ಟು ಪಾಲು ಹೊಂದಿದೆ. ಅಲ್ಲಿ ಆಧುನಿಕ ಕೃಷಿ ತಂತ್ರಗಳನ್ನು ಬಳಸಿಕೊಂಡು ಇವುಗಳನ್ನು ಬೆಳೆಯಲಾಗುತ್ತದೆ. ಆದರೆ, ವಿಪರೀತ ಪ್ರಮಾಣದಲ್ಲಿ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಸಿಂಪಡಣೆ ಮಾಡಲಾಗುತ್ತದೆ. ಇದೇ ಕಾರಣಕ್ಕೆ, ಇದು 2014 ರಲ್ಲಿಯೇ ಭಾರತ ಇದರ ಆಮದನ್ನು ನಿಷೇಧಿಸಿತ್ತು. ಇದರ ಹೊರತಾಗಿಯೂ, ವಿವಿಧ ದೇಶಗಳ ಮೂಲಕ ಅರ್ಥಾತ್​ ನೇಪಾಳ, ಮ್ಯಾನ್ಮಾರ್, ಭೂತಾನ್ ಕಳ್ಳ ಮಾರ್ಗವಾಗಿ ದೇಶ ಮತ್ತು ರಾಜ್ಯಕ್ಕೆ ಚೀನಾ ಬೆಳ್ಳುಳ್ಳಿ ಬರುತ್ತಿದೆ.

Related Articles

Related image1
ಕಿಚನ್​- ಬಾತ್​ರೂಮ್​ನಿಂದ ಈ 6 ವಸ್ತು ಬದಲಾದರೆ ಆರೋಗ್ಯ ಜಿಂಗಾಲಾಲಾ- ವೈದ್ಯರ ಮಾತು ಕೇಳಿ...
Related image2
ಸೀಬೆ ಎಲೆ- ನೆಲ್ಲಿಕಾಯಿ: ​ಬಿಪಿ, ಶುಗರ್​ ಸೇರಿದಂತೆ ಈ ಸಮಸ್ಯೆಗಳಿಗೆ ಗುಡ್​ಬೈ: ವೈದ್ಯೆ ಮಾತು ಕೇಳಿ...
37
ಭೀಕರ ಕಾಯಿಲೆಗಳಿಗೆ ದಾರಿ ಚೀನಾ ಬೆಳ್ಳುಳ್ಳಿ:
Image Credit : Google

ಭೀಕರ ಕಾಯಿಲೆಗಳಿಗೆ ದಾರಿ ಚೀನಾ ಬೆಳ್ಳುಳ್ಳಿ:

ಸಾಮಾನ್ಯವಾಗಿ ಬೆಳ್ಳುಳ್ಳಿ ಖರೀದಿ ಮಾಡುವಾಗ ಅದರ ಬಗ್ಗೆ ಗಮನ ಕೊಡಲು ಹೋಗುವುದಿಲ್ಲ. ಕೆಲವೊಮ್ಮೆ ಕಡಿಮೇ ರೇಟ್​ನಲ್ಲಿ ಸಿಕ್ಕಿಬಿಟ್ಟಿತು ಎನ್ನುವ ಕಾರಣಕ್ಕೆ ಅದನ್ನು ಖರೀದಿ ಮಾಡುವುದು ಇದೆ. ಅಷ್ಟಕ್ಕೂ ಬೆಳ್ಳುಳ್ಳಿಯಿಂದ ಅಪಾರ ಪ್ರಯೋಜನಗಳಿವೆ. ಹೃದಯ ರೋಗದ ಸಮಸ್ಯೆಯಿಂದ ಹಿಡಿದು ಹಲವು ಕಾಯಿಲೆಗಳಿಗೆ ಬೆಳ್ಳುಳ್ಳಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಹಾಗೆಂದು ಅದು ಭಾರತದ ಬೆಳ್ಳುಳ್ಳಿ ಮಾತ್ರ. ಆದರೆ ಚೀನಾದ ಬೆಳ್ಳುಳ್ಳಿ ತಿಂದರೆ, ಕ್ಯಾನ್ಸರ್​ನಂಥ ಮಹಾಮಾರಿಯೂ ಬರಬಹುದು ಎಂದು ಎಚ್ಚರಿಸುತ್ತಾರೆ ತಜ್ಞರು.

47
ಹಾನಿಕಾರಕ ಅಂಶ
Image Credit : Asianet News

ಹಾನಿಕಾರಕ ಅಂಶ

ಕಳೆದ ವರ್ಷ ಚೀನಾದ ಬೆಳ್ಳುಳ್ಳಿಯಲ್ಲಿ ಹಾನಿಕಾರಕ ಅಂಶಗಳು ಪತ್ತೆಯಾಗಿದ್ದು, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಯಕೃತ್ತಿನ ಹಾನಿ, ಜಠರಗರುಳಿನ ಸಮಸ್ಯೆ, ರೋಗನಿರೋಧಕ ಶಕ್ತಿ ಕುಗ್ಗುವ ಸಮಸ್ಯೆಗಳು ಕಂಡು ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು.

57
ಶಿಲೀಂಧ್ರಗಳ ಬೆಳವಣಿಗೆ
Image Credit : Google

ಶಿಲೀಂಧ್ರಗಳ ಬೆಳವಣಿಗೆ

ದೀರ್ಘಕಾಲದ ವರೆಗೆ ಈ ರೀತಿಯ ಬೆಳ್ಳುಳ್ಳಿ ಬಳಸಿದ್ದೇ ಆದಲ್ಲಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಸಂಶೋಧನೆಗಳಿಂದಲೂ ದೃಢ ಪಟ್ಟಿದೆ. ಚೀನಾದ ಬೆಳ್ಳುಳ್ಳಿಯನ್ನು ಆರು ತಿಂಗಳವರೆಗೆ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಲು ಮೀಥೈಲ್ ಬ್ರೋಮೈಡ್ ಹೊಂದಿರುವ ಶಿಲೀಂಧ್ರನಾಶಕದೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಚೀನೀ ಬೆಳ್ಳುಳ್ಳಿಯನ್ನು ಹಾನಿಕಾರಕ ಕ್ಲೋರಿನ್ ಬಳಸಿ ಬಿಳುಪುಗೊಳಿಸಲಾಗುತ್ತದೆ ಎನ್ನಲಾಗಿದೆ. ಹಾಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

67
ಹಾಗಿದ್ದರೆ ಅವುಗಳ ವ್ಯತ್ಯಾಸ ಗುರುತಿಸುವುದು ಹೇಗೆ?
Image Credit : Google

ಹಾಗಿದ್ದರೆ ಅವುಗಳ ವ್ಯತ್ಯಾಸ ಗುರುತಿಸುವುದು ಹೇಗೆ?

ಭಾರತ ಮತ್ತು ಚೀನಾದ ಬೆಳ್ಳುಳ್ಳಿಗಳಲ್ಲಿ ಕೆಲವೊಂದು ವ್ಯತ್ಯಾಸಗಳು ಇವೆ.

ಚಿತ್ರದಲ್ಲಿ ತೋರಿಸಿರುವಂತೆ, ಚೀನಾದ ಗಾತ್ರ ಮತ್ತು ಬಣ್ಣ: ಚೀನಾದ ಬೆಳ್ಳುಳ್ಳಿ ಚಿಕ್ಕದಾಗಿರುತ್ತದೆ, ತಿಳಿ ಬಿಳಿ ಮತ್ತು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಹೊಳೆಯುವ ರೀತಿ ಇದು ಇರುತ್ತದೆ. ಇದನ್ನು ನಾಟಿ ಬೆಳ್ಳುಳ್ಳಿ ಎಂದು ಕೆಲವೊಮ್ಮೆ ಮಾರಾಟಗಾರರು ನೀಡುವುದು ಇದೆ. ಭಾರತದ ಬೆಳ್ಳುಳ್ಳಿ ದೊಡ್ಡದಾಗಿರುತ್ತದೆ. ಇದು ಹಳದಿ ಅಥವಾ ಕೆನೆ ಬಣ್ಣದ ಛಾಯೆ ಮತ್ತು ದಪ್ಪವಾದ ಚರ್ಮವನ್ನು ಹೊಂದಿರುತ್ತದೆ. ಆದ್ದರಿಂದ ಖರೀದಿ ಮಾಡುವಾಗ ಇದನ್ನು ನೋಡಬೇಕಿದೆ.

77
ಪರಿಮಳದಲ್ಲಿ ವ್ಯತ್ಯಾಸ
Image Credit : Google

ಪರಿಮಳದಲ್ಲಿ ವ್ಯತ್ಯಾಸ

ಭಾರತೀಯ ಬೆಳ್ಳುಳ್ಳಿ ಬಲವಾದ ಸುವಾಸನೆಯನ್ನು ಹೊಂದಿರುತ್ತದೆ. ಆದರೆ ಚೀನಾದ ಬೆಳ್ಳುಳ್ಳಿ ಹೆಚ್ಚು ಸೌಮ್ಯವಾದ ಪರಿಮಳವನ್ನು ಹೊಂದಿರುತ್ತದೆ. ಭಾರತದ ಬೆಳ್ಳುಳ್ಳಿಯಲ್ಲಿ ಗಡ್ಡೆ ಇರುತ್ತದೆ, ಚೀನಾದ ಬೆಳ್ಳುಳ್ಳಿಯಲ್ಲಿ ಅದು ಕಾಣಸಿಗುವುದಿಲ್ಲ (ಈ ಚಿತ್ರದಲ್ಲಿ ನೋಡಿ)  ಸಂಪೂರ್ಣ ಡಿಟೇಲ್ಸ್ ಈ ವಿಡಿಯೋದಲ್ಲಿದೆ ನೋಡಿ…
 

 
 
 
 
View this post on Instagram
 
 
 
 
 
 
 
 
 
 
 

A post shared by Mayank Kushwaha (@mr.highthink.show)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆರೋಗ್ಯ
ಆಹಾರ
ಆರೋಗ್ಯ ಸಮಸ್ಯೆಗಳು
ಚೀನಾ
ಮಾರುಕಟ್ಟೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved