ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು 15 ದಿನದ ಮಗುವನ್ನು ಫ್ರಿಡ್ಜ್‌ನಲ್ಲಿ ಇಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
15 ದಿನಗಳ ಮಗುವನ್ನು ಫ್ರಿಡ್ಜ್‌ನಲ್ಲಿಟ್ಟ ತಾಯಿ
ಮಗುವನ್ನು ಹೆತ್ತ ನಂತರ ಅಥವಾ ಹೆರಿಗೆಯ ನಂತರ ಸಂಭವಿಸುವ ಮಾನಸಿಕ ಖಿನ್ನತೆಯಿಂದ ಅಥವಾ ಮನೋರೋಗದಿಂದ ಬಳಲುತ್ತಿದ್ದ ತಾಯಿಯೊಬ್ಬಳು ಮಗು ನಿದ್ದೆ ಮಾಡದೇ ಅಳುತ್ತಿದೆ ಎಂದು ಮಗುವನ್ನು ಪ್ರಿಡ್ಜ್‌ನೊಳಗೆ ಇಟ್ಟಂತಹ ಭಯಾನಕ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. 23ರ ಹರೆಯದ ಬಾಣಂತಿ ತಾಯಿ ಪ್ರಸವಾನಂತರದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು ಅಳುತ್ತಿದ್ದ ಕೇವಲ 15 ದಿನಗಳ ಹಿಂದಷ್ಟೇ ಜನಿಸಿದ್ದ ತನ್ನ ಮಗುವನ್ನು ಮನೆಯ ಫ್ರಿಡ್ಜ್‌ನೊಳಗೆ ಇಟ್ಟಿದ್ದಾರೆ. ಈ ವೇಳೆ ಮಗುವಿನ ಅಳು ಕೇಳಿ ಅಲ್ಲಿಗೆ ಮಗುವಿನ ಅಜ್ಜಿ ಓಡಿ ಬಂದಿದ್ದರಿಂದ ಮಗುವಿನ ಪ್ರಾಣ ಸಕಾಲದಲ್ಲಿ ಉಳಿಸಿದೆ. ಘಟನೆಯ ನಂತರ ಮಗುವನ್ನು ತಪಾಸಣೆ ನಡೆಸಿದ ವೈದ್ಯರು ಮಗು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ಪ್ರಸವಾನಂತರದ ಮಾನಸಿಕ ರೋಗದಿಂದ ಬಳಲುತ್ತಿದ್ದ ಬಾಣಂತಿ
ಹೀಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಸಿ ಬಾಣಂತಿ ಮೊರಾದಾಬಾದ್‌ನ ಜಬ್ಬರ್ ಕಾಲೋನಿಯಲ್ಲಿ ತನ್ನ ಪತಿ ಮತ್ತು ಅತ್ತೆಯೊಂದಿಗೆ ವಾಸಿಸುತ್ತಿದ್ದಳು. ಈಕೆಯ ಪತಿ ಹಿತ್ತಾಳೆ ಕೆಲಸಗಾರರಾಗಿದ್ದರು. ಸೆಪ್ಟೆಂಬರ್ 5ರಂದು ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮಗುವೂ ನಿದ್ದೆ ಮಾಡದೇ ಹೋಗಿದ್ದರಿಂದ ಈ ತಾಯಿಗೂ ನಿದ್ದೆ ಸರಿ ಇರಲಿಲ್ಲ, ಮೊದಲೇ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ತನ್ನ 15 ದಿನಗಳ ಮಗುವನ್ನು ತೆಗೆದುಕೊಂಡು ಹೋಗಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದಾಳೆ. ನಂತರ ಹೋಗಿ ಆಕೆ ತನ್ನ ಕೋಣೆಯಲ್ಲಿ ಮಲಗಿದ್ದಾಳೆ. ಇತ್ತ ಮಗುವಿನ ಅಳು ಕೇಳಿ ಆಕೆಯ ಅತ್ತೆ ಓಡಿ ಬಂದು ನೋಡಿದಾಗ ಮಗು ಫ್ರಿಡ್ಜ್‌ನೊಳಗೆ ಇರುವುದು ಬೆಳಕಿಗೆ ಬಂದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಮಗುವಿಗೆ ಚಿಕಿತ್ಸೆ ನೀಡಿದ್ದರಿಂದ ಮಗುವಿನ ಜೀವ ಉಳಿದಿದೆ. ಮಗುವಿಗೆ ಏನೂ ಹಾನಿಯಾಗಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಬಾಣಂತಿ ವರ್ತನೆ ನೋಡಿ ಮಂತ್ರವಾದಿಗಳ ಬಳಿ ಕರೆದೊಯ್ದಿದ್ದ ಕುಟುಂಬ
ಇತ್ತ ಮಗುವನ್ನೇಕೆ ಪ್ರಿಡ್ಜ್‌ನಲ್ಲಿ ಇಟ್ಟೆ ಎಂದು ಆಕೆಯ ಪತಿ ಹಾಗೂ ಅತ್ತೆ ಆಕೆಯ ಬಳಿ ಕೇಳಿದಾಗ, ಆಕೆ ಯಾವುದೇ ಭಯವಿಲ್ಲದೇ ಶಾಂತಚಿತ್ತದಿಂದ ಅವನು ನಿದ್ದೆ ಮಾಡುತ್ತಿರಲಿಲ್ಲ, ಹೀಗಾಗಿ ಅವನನ್ನು ಫ್ರಿಡ್ಜ್‌ನಲ್ಲಿ ಇಟ್ಟೆ ಎಂದು ಹೇಳಿದ್ದಾರೆ. ಇದರಿಂದ ಭಯಗೊಂಡ ಮನೆಯವರು ಈಕೆಗೇನೋ ಸೋಂಕು ಆಗಿದೆ ಎಂದು ಭಯಗೊಂಡಿದ್ದು, ಭೂತ್ತೋಚ್ಚಾಟಕರ ಬಳಿ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಆಕೆಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣದಿದ್ದಾಗ ಅವರ ಸಂಬಂಧಿಕರೊಬ್ಬರು ಆಕೆಗೆ ಮನೋವೈದ್ಯರಿಂದ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದ್ದಾರೆ. ನಂತರ ಆಕೆಯನ್ನು ಮನೋವೈದ್ಯರ ಬಳಿ ಕುಟುಂಬದವರು ಕರೆದೊಯ್ದಿದ್ದು, ಅಲ್ಲಿ ವೈದ್ಯರು ಆಕೆಗೆ ಹೆರಿಗೆ ನಂತರ ಸಂಭವಿಸಬಹುದಾದ ಆದರೆ ತೀವ್ರವಾದ ಮಾನಸಿಕ ಅಸ್ವಸ್ಥತೆ ಉಂಟಾಗಿದೆ ಎಂದು ಹೇಳಿದ್ದಾರೆ.
ಏನಿದು ಹೆರಿಗೆ ನಂತರದ ಮಾನಸಿಕ ಸಮಸ್ಯೆ
ಅನೇಕರು ಬಾಣಂತಿಯರು ಈ ಹೆರಿಗೆ ನಂತರದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರಿಗೆ ತಾನು ಹೆತ್ತ ಮಗುವಿನ ಬಗ್ಗೆ ದುಃಖ, ಆತಂಕ ನಿರಾಸಕ್ತಿ ಉಂಟಾಗುತ್ತದೆ. ಈ ಮಾನಸಿಕ ಸಮಸ್ಯೆಯನ್ನು ಬೇಬಿಬ್ಲೂಸ್ ಹಾಗೂ ಸೈಕೋಸಿಸ್ ಎಂದು ವಿಂಗಡಿಸಲಾಗಿದೆ. ಇದರಿಂದ ಮಾನಸಿಕ ಸ್ಥಿತಿಯಲ್ಲಿ ಹಲವು ಬದಲಾವಣೆಗಳಾಗುತ್ತದೆ. ದುಃಖ ಭಯ, ನೋವು ಮನಸ್ಸನ್ನು ಆವರಿಸುತ್ತದೆ. ಹಾಗೆಯೇ ಈಗ ಮೊರದಾಬಾದ್‌ನಲ್ಲಿ ನಡೆದ ಪ್ರಕರಣದಲ್ಲಿ ತಾಯಿ ವಾಸ್ತವದೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುತ್ತಾಳೆ. ಭ್ರಮೆಗಳು, ಗೊಂದಲದ ಜೊತೆ ಆಕೆ ಆಘಾತಕಾರಿ ನಿರ್ಣಯವನ್ನು ತೆಗೆದುಕೊಳ್ಳುತ್ತಾಳೆ. ಇದು ತಾಯಿ ಮತ್ತು ಮಗು ಇಬ್ಬರನ್ನೂ ಅಪಾಯಕ್ಕೆ ಸಿಲುಕಿಸುತ್ತದೆ.
ಈ ಸಮಸ್ಯೆಗೆ ಒಳಗಾದ ತಾಯಂದಿರಿಗೆ ತಮ್ಮ ಆಲೋಚನೆಗಳ ಮೇಲೆ ನಿಯಂತ್ರಣವಿರುವುದಿಲ್ಲ ಅವರು ಅರಿವಿಲ್ಲದೆಯೇ ತಮ್ಮನ್ನು ಅಥವಾ ತಮ್ಮ ಶಿಶುಗಳಿಗೆ ಹಾನಿ ಮಾಡಿಕೊಳ್ಳಬಹುದು ಎಂದು ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ಮನೋವೈದ್ಯ ಡಾ. ಕಾರ್ತಿಕೇಯ ಗುಪ್ತಾ ವಿವರಿಸಿದ್ದಾರೆ. ಇಲ್ಲಿ ರೋಗಿಯು ವಾಸ್ತವದ ಪ್ರಜ್ಞೆಯನ್ನು ಕಳೆದುಕೊಂಡಿದ್ದಳು ಮತ್ತು ತೀವ್ರವಾದ ನಿದ್ರೆಯಿಂದ ವಂಚಿತಳಾಗಿದ್ದಳು, ಈ ಎರಡೂ ಲಕ್ಷಣಗಳು ಪ್ರಸವಾನಂತರದ ಮನೋರೋಗದಲ್ಲಿ ಸಾಮಾನ್ಯವಾಗಿದೆ.
ಇದನ್ನೂ ಓದಿ: ಸಂಜಯ್ ಕಪೂರ್ ಬಿಟ್ಟು ಹೋದ 30,000 ಕೋಟಿ ಮೊತ್ತದ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ ಅಮ್ಮ ಸೊಸೆ, ಮಕ್ಕಳು
ಇದನ್ನೂ ಓದಿ: ಹೊಸ ಮಹೀಂದ್ರ ಥಾರ್ ಗಾಡಿಯ ನಿಂಬೆ ಮೇಲೆ ಓಡಿಸಲು ಹೋಗಿ ಶೋರೂಮ್ ಮೊದಲ ಮಹಡಿಯಿಂದ ಕೆಳಗೆ ಬೀಳಿಸಿದ ಮಹಿಳೆ
ಇದನ್ನೂ ಓದಿ: ಮೊದಲ ಬಾರಿ ಐಸ್‌ಕ್ರೀಂ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ: ವೈರಲ್ ವೀಡಿಯೋ
ಇದನ್ನೂ ಓದಿ: ನನ್ನ ಆತ್ಮೀಯ ಗೆಳೆಯ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಡೋನಾಲ್ಡ್ ಟ್ರಂಪ್
ಇದನ್ನೂ ಓದಿ: ನೇಪಾಳ: ದೇಶದ ಸಂಸತ್‌ಗೆ ಬೆಂಕಿ ಇಟ್ಟು ಉರಿಯುವ ಬೆಂಕಿ ಮುಂದೆ ಡಾನ್ಸ್ ರೀಲ್ ಮಾಡಿದ ಸೋಶಿಯಲ್ ಮೀಡಿಯಾ ಸ್ಟಾರ್
