ಹೂಡಿಕೆದಾರರಿಗೆ 2323% ಲಾಭ ನೀಡಿದ ಷೇರು; 1 ಲಕ್ಷ ಇದೀಗ 24 ಲಕ್ಷ, 6 ತಿಂಗಳಲ್ಲಿ 172% ಪ್ರಚಂಡ ಲಾಭ
ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ 2323% ರಷ್ಟು ಲಾಭ ತಂದುಕೊಟ್ಟಿದೆ. ₹11 ರಿಂದ ₹290 ಕ್ಕೆ ಏರಿಕೆಯಾಗಿರುವ ಈ ಷೇರು, ಕೇವಲ ಆರು ತಿಂಗಳಲ್ಲಿ 172% ಲಾಭ ನೀಡಿದೆ.

ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಮಾರುಕಟ್ಟೆ ಅಪಾಯವನ್ನು ಒಳಗೊಂಡಿರುತ್ತದೆ. ಆದ್ರೆ ಸರಿಯಾದ ಸಮಯದಲ್ಲಿ, ಉತ್ತಮ ಷೇರುಗಳ ಮೇಲಿನ ಹೂಡಿಕೆ ಹೆಚ್ಚು ಲಾಭವನ್ನು ತಂದುಕೊಡುತ್ತದೆ. ಜಾಣತನದಿಂದ ಮಾಡಿದ ಹೂಡಿಕೆ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
ಇಂದು ನಾವು ಹೇಳುತ್ತಿರುವ ಹೂಡಿಕೆ ಐದು ವರ್ಷಗಳಲ್ಲಿ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. ಕೇವಲ ಐದು ವರ್ಷದಲ್ಲಿ ಹೂಡಿಕೆದಾರರಿಗೆ ಸುಮಾರು ಎರಡು ಸಾವಿರ ಪ್ರತಿಶತದಷ್ಟು ಪ್ರಚಂಡ ಲಾಭವನ್ನು ನೀಡಿದೆ. ಕಳೆದ 6 ತಿಂಗಳಲ್ಲಿ ಹಣವನ್ನು ಡಬಲ್ ಮಾಡಿಕೊಟ್ಟಿದೆ. ಯಾವುದು ಆ ಸ್ಟಾಕ್ ಎಂದು ನೋಡೋಣ ಬನ್ನಿ.
ಅಪೊಲೊ ಮೈಕ್ರೋ ಸಿಸ್ಟಮ್ಸ್ ಹೆಸರಿನ ಸ್ಟಾಕ್ ತನ್ನ ಹೂಡಿಕೆದಾರರಿಗೆ ಪ್ರಚಂಡ ಲಾಭವನ್ನು ನೀಡಿದೆ. ಈ ಕಂಪನಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರೋಮೆಕಾನಿಕಲ್ ಸಿಸ್ಟಮ್‌ಗಳ ಪೂರೈಸುವ ಕೆಲಸವನ್ನು ಮಾಡುತ್ತದೆ. ಕಳೆದ ಐದು ವರ್ಷಗಳಲ್ಲಿ ಅಪೊಲೊ ಮೈಕ್ರೋ ಸಿಸ್ಟಮ್ಸ್ ಸ್ಟಾಕ್ ಮಲ್ಟಿಬ್ಯಾಗರ್ ಆಗಿ ಮಾರ್ಪಟ್ಟಿದ್ದು, ಹೂಡಿಕೆದಾರರನ್ನು ಶ್ರೀಮಂತ ಮಾಡಿದೆ.
ಐದು ವರ್ಷಗಳ ಹಿಂದೆ ಅಪೊಲೊ ಮೈಕ್ರೋ ಸಿಸ್ಟಮ್ಸ್ ಷೇರು ಬೆಲೆ 11 ರೂಪಾಯಿ ಆಗಿತ್ತು. ಈಗ ಮಾರುಕಟ್ಟೆಯಲ್ಲಿ ಈ ಷೇರು ಬೆಲೆ 290 ರೂಪಾಯಿ ಆಗಿದೆ. ಐದು ವರ್ಷದಲ್ಲಿ ಹೂಡಿಕೆದಾರರಿಗೆ ಸುಮಾರು ಶೇ. 2323 ರಷ್ಟು ಅದ್ಭುತ ಲಾಭ ನೀಡಿದೆ. 5 ವರ್ಷಗಳ ಹಿಂದೆ ಈ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು ಈ ಮೊತ್ತ 24 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರುತ್ತಿತ್ತು. ಕೇವಲ ಆರು ತಿಂಗಳಲ್ಲಿ ಶೇ.172ರಷ್ಟು ಲಾಭವನ್ನು ನೀಡಿದೆ.
ಇದನ್ನೂ ಓದಿ: ಅದಾನಿ ಗ್ರೂಪ್ 6 ಕಂಪನಿಗಳಲ್ಲಿ ಭಾರೀ ಪ್ರಮಾಣದಲ್ಲಿ ತಮ್ಮ ಪಾಲು ಕಡಿಮೆ ಮಾಡಿದ ವಿದೇಶ ಹೂಡಿಕೆದಾರರು
ಷೇರು ಬೆಲೆ ಏರಿಕೆಗೆ ಕಾರಣ ಏನು?
ಮಂಗಳವಾರ ಮಾರುಕಟ್ಟೆ ಆರಂಭಕ್ಕೆ ಅಪೊಲೊ ಮೈಕ್ರೋ ಸಿಸ್ಟಮ್ಸ್ ಷೇರು ₹275.25 ಕ್ಕೆ ವಹಿವಾಟು ಆರಂಭಿಸಿತ್ತು. ಏರಿಕೆಯಾಗಿ ₹290.80 ಮಟ್ಟವನ್ನು ತಲುಪಿತ್ತು. ಕಂಪನಿಯ ಷೇರುಗಳ ಈ ಏರಿಕೆಯಿಂದಾಗಿ ಮಾರುಕಟ್ಟೆ ಬಂಡವಾಳೀಕರಣ ₹9240 ಕೋಟಿಗೆ ತಲುಪಿದೆ.
ಇದನ್ನೂ ಓದಿ: ತನ್ನ 23,000 ಉದ್ಯೋಗಿಗಳಿಗೆ 400-500 ಕೋಟಿ ರೂಪಾಯಿ ಷೇರು ಗಿಫ್ಟ್ ನೀಡಲಿರುವ ಮಹೀಂದ್ರಾ!
ಅಪೊಲೊ ಮೈಕ್ರೋ ಸಿಸ್ಟಮ್ಸ್ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಹಲವು ಪ್ರಮುಖ ತಂತ್ರಜ್ಞಾನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕಂಪನಿಯು ನೀರೊಳಗಿನ ಕ್ಷಿಪಣಿ ಕಾರ್ಯಕ್ರಮಗಳು, ಜಲಾಂತರ್ಗಾಮಿ ವ್ಯವಸ್ಥೆಗಳು, ಏವಿಯಾನಿಕ್ ವ್ಯವಸ್ಥೆಗಳು ಮತ್ತು ಸಂಬಂಧಿತ ಉತ್ಪನ್ನಗಳ ವಿನ್ಯಾಸ, ವಿತರಣೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

