ಹೊತ್ತಿ ಉರಿದ ನೇಪಾಳದಲ್ಲಿ ಪ್ರಧಾನಿಯಾದ ಸುಶೀಲಾ ಕರ್ಕಿ ಯಾರು, ಭಾರತದ ಜೊತೆಗಿದೆ ಸಂಬಂಧ.  ನೇಪಾಳದ ಜೆನ್‌ಜಿ ಪ್ರತಿಭಟನಕಾರರು ನೇಪಾಳ ಸರ್ಕಾರ ಮುನ್ನಡೆಸಲು ಸುಶೀಲ್ ಕರ್ಕಿ ಹೆಸರು ಸೂಚಿಸಿದ್ದರು. ಇದರಂತೆ ಸುಶೀ ಕರ್ಕಿ ನೂತನ ಪ್ರಧಾನಿಯಾಗಿದ್ದಾರೆ.   

ಕಾಠ್ಮಂಡು (ಸೆ.10) ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಕ್ಕೆ ದೇಶ ಹೊತ್ತಿ ಉರಿಯುತ್ತಿದೆ. ಪ್ರದಾನಿ ಮನೆ, ಸಚಿವರ ಮನೆ, ಸಂಸತ್ತು ಭವನ ಸೇರಿದಂತೆ ಬಹುತೇಕ ಹೊಟೆಲ್, ಕಟ್ಟಡಗಳು ಹೊತ್ತಿ ಉರಿದಿದೆ. ಕಳೆದ ಎರಡು ದಿನದಲ್ಲಿ ನೇಪಾಳ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಪ್ರಧಾನಿ ರಾಜೀನಾಮೆ ನೀಡಿ ಪಲಾಯನ ಮಾಡಿದ್ದಾರೆ. ಪ್ರತಿಭಟನಾಕಾರರ ದಾಳಿಯಿಂದ ತಪ್ಪಿಸಿಕೊಳ್ಳಲು ನಾಯಕರು ಪಲಾಯನ ಮಾಡುತ್ತಿದ್ದಾರೆ. ಇತ್ತ ಚುನಾವಣೆ ನಡೆದು ಮತ್ತೊಂದು ಸರ್ಕಾರ ಬರುವವರೆಗೆ, ಸದ್ಯದ ಪರಿಸ್ಥಿತಿ ನಿಯಂತ್ರಿಸಲು ಜೆನ್ ಜಿ ಪ್ರತಿಭಟನಕಾರರು ಹೆಸರು ಸೂಚಿಸಿದ್ದಾರೆ. ನೇಪಾಳ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಶೀಲ್ ಕರ್ಕಿ ಹೆಸರನ್ನು ಸೂಚಿಸಿದ್ದರು. ಇದರಂತೆ ಸುಶೀಲಾ ಕರ್ಕಿ ನೇಪಾಳದ ನೂತ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. 

ನೇಪಾಳ ಸರ್ಕಾರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಇದೀಗ ಪ್ರತಿಭಟನಕಾರರು ಹಾಗೂ ಸರ್ಕಾರಿ ಅಧಿಕಾರಿಗಳು, ಸಚಿವರ ಪತ್ನಿ ಸೇರಿದಂತೆ ಒಟ್ಟು 22 ಮಂದಿ ಮೃತಪಟ್ಟಿದ್ದಾರೆ. ಸದ್ಯ ನೇಪಾಳ ಸೇನೆ ಪರಿಸ್ಥಿತಿ ನಿಯಂತ್ರಕ್ಕೆ ತೆಗೆದುಕೊಳ್ಳುತ್ತಿದೆ. ಪ್ರತಿಭಟನಕಾರರ ಜೊತೆ ಸೇನೆ ಮಾತುಕತೆ ನಡೆಸುತ್ತಿದೆ. ಅವರ ಬೇಡಿಕೆಗಳನ್ನು ಆಲಿಸಿದೆ. ಈ ವೇಳೆ ಪ್ರತಿಭಟನಾಗಾರರು ಹಂಗಾಮಿ ಪ್ರಧಾನಿಯಾಗಿ ಸುಶೀಳಾ ಕರ್ಕಿಯನ್ನು ಆಯ್ಕೆ ಮಾಡುವಂತೆ ಸೇನೆಗೆ ಸೂಚಿಸಿದೆ. ಇಷ್ಟೇ ಅಲ್ಲ 19 ಹೋರಾಟಾಗರರ ಪ್ರಾಣಕ್ಕೆ ಕುತ್ತು ತಂದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ.

ಯಾರು ಈ ಸುಶೀಲಾ ಕಕ್ರಿ?

ನೇಪಾಳ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವ ಸುಶೀಲಾ ಕರ್ಕಿ 2016ರಿಂದ 2017ರಲ್ಲಿ ಸೇವೆ ಸಲ್ಲಿಸಿದ್ದರು. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗದ ಪ್ರಾಮುಖ್ಯತೆಯನ್ನು ತೋರಿದ ದಿಟ್ಟ ಮಹಿಳೆ ಈ ಸುಶೀಲಾ ಕರ್ಕಿ. ಸರ್ಕಾರದ ಹಲವು ನಿರ್ಧಾರಗಳ ವಿರುದ್ಧ ನ್ಯಾಯಸಮ್ಮತ ತೀರ್ಪು ನೀಡಿದ್ದಾರೆ. ಇದರ ಪರಿಣಾಮ ಸರ್ಕಾರ ಸುಶೀಲಾ ವಿರುದ್ದ ಇಂಪೀಚ್‌ಮೆಂಟ್ ಮಂಡಿಸಿತ್ತು. ಆದರೆ ನೇಪಾಳದ ಜನತೆ ಭಾರಿ ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಸರ್ಕಾರ ನಿರ್ಧಾರದಿಂದ ಹಿಂದೆ ಸರಿದಿತ್ತು.

2 ವರ್ಷ ಮೊದಲೇ ನೇಪಾಳ ಪರಿಸ್ಥಿತಿ ಸ್ಫೋಟಕ ಭವಿಷ್ಯ ನುಡಿದಿದ್ದ ಭಾರತೀಯ ಜ್ಯೋತಿಷಿ

ಮೋದಿ ಬಗ್ಗೆ ಅಪಾರ ಗೌರವ

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸುಶೀಲಾ ಕರ್ಕಿ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಮೋದಿ ನಾಯಕತ್ವ, ಆಡಳಿತ ಮೆಚ್ಚಿಕೊಂಡಿರುವ ಸುಶೀಲಾ ಕರ್ಕಿ, ಅಂತಾರಾಷ್ಟ್ರೀಯ ವಿಚಾರಗಳು ಬಂದಾಗ ಭಾರತದ ಜೊತೆ ಕುಳಿತು ಚರ್ಚಿಸಬೇಕು ಎಂದಿದ್ದಾರೆ. ಸದ್ಯ ನೇಪಾಳ ಸರ್ಕಾರ ನೇಪಾಳ ಜನರ ಜೊತೆಗೆ ಭಾರತೀಯರು ಜೊತೆ ಉತ್ತಮ ಸಂಬಂಧ ಹೊಂದಿರಬೇಕು. ಆದರೆ ಈ ಸರ್ಕಾರ ಮಾಡಿಲ್ಲ. ಭಾರತೀಯ ನಾಯಕರನ್ನು ನಾವು ಸಹೋದರರಂತೆ ಕಾಣುತ್ತೇವೆ ಎಂದಿದ್ದಾರೆ. ವಿಶೇಷ ಅಂದರೆ ಸುಶೀಲಾ ಕರ್ಕಿ ತಮ್ಮ ಸ್ನಾತಕೋತ್ತರ ಪದವಿಯನ್ನು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ. ಇದೇ ವೇಳೆ ಗಂಗಾ ತಟದಲ್ಲಿರುವ ಹಾಸ್ಟೆಲ್, ವಿದ್ಯಾರ್ಥಿ ಜೀವನವನ್ನು ನೆನೆದಿದ್ದಾರೆ.

ಭಾರತದ ಗಡಿ ಭಾಗದಲ್ಲಿರುವ ನೇಪಾಳದ ಬಿರಾತ್‌ನಗರದಲ್ಲಿ ಹುಟ್ಟಿದ ಸುಶೀಲಾ ಕರ್ಕಿಗೆ ಹಿಂದಿ ಮಾತನಾಡುತ್ತಾರೆ. ಸುಶೀಲಾ ಕರ್ಕಿ ಮನೆಯಿಂದ ಭಾರತದ ಗಡಿಯಲ್ಲಿರುವ ಹಳ್ಳಿಗೆ ಕೇವಲ 25 ಮೈಲಿ ದೂರ ಮಾತ್ರ. ಹೀಗಾಗಿ ಹಿಂದಿ ಮಾತನಾಡುತ್ತೇನೆ ಎಂದಿದ್ದಾರೆ. ಭಾರತ ಹಲವು ಬಾರಿ ನೇಪಾಳಕ್ಕೆ ನೆರವು ನೀಡಿದೆ. ಭಾರತದ ಜೊತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕು ಎಂದು ಸುಶೀಲಾ ಕರ್ಕಿ ಹೇಳಿದ್ದಾರೆ.

ನೇಪಾಳದ ಹೋಟೆಲ್‌ಗಳು ಜೆನ್‌ಝೀ ಸಿಟ್ಟಿಗೆ ಭಸ್ಮ: ₹2500 ಕೋಟಿ ನಷ್ಟ!