ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಭಾರತದತ್ತ ದೃಷ್ಟಿ ಹರಿಸಿದ್ದಕ್ಕೆ ಕಾರಣವಾದದ್ದು ಆಪರೇಷನ್​ ಸಿಂದೂರ್​. ಯುದ್ಧ ಮಾಡದೇ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದ ಈ ಕಾರ್ಯಾಚರಣೆಯ ಕುತೂಹಲದ ಸ್ಟೋರಿ ಹಂಚಿಕೊಂಡಿದೆ ಇಸ್ರೊ. ಏನದು? 

ಹಿಂದೂಗಳನ್ನು ಗುರಿಯಾಗಿಸಿಕೊಂಡು ಕಾಶ್ಮೀರದ ಪೆಹಲ್ಗಾಮ್​ನಲ್ಲಿ ನಡೆದ 26 ಮಂದಿಯ ಬರ್ಬರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ನಡೆದ ಆಪರೇಷನ್​ ಸಿಂದೂರ (Operation Sindoor) ಹೇಗೆ ಕೆಲಸ ಮಾಡಿತು ಎನ್ನುವುದು ತಿಳಿದೇ ಇದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ದಾಳಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಕೊನೆಗೆ ಅದಕ್ಕೆ ವಿಶಿಷ್ಟ ರೀತಿಯಲ್ಲಿ ಭಾರತ ಪ್ರತೀಕಾರ ತೀರಿಸಿಕೊಂಡಿರುವುದು ಕೂಡ ಇಡೀ ವಿಶ್ವದ ಗಮನ ಸೆಳೆದಿತ್ತು. ಪಾಕಿಸ್ತಾನದ ಒಬ್ಬರೇ ಒಬ್ಬರು ನಾಗರಿಕರಿಗೆ ತೊಂದರೆಯಾಗದ ರೀತಿಯಲ್ಲಿ ಉಗ್ರರ ನೆಲೆಯನ್ನು ನಾಶ ಮಾಡಲಾಗಿತ್ತು. ಆದರೆ, ಇದೀಗ ತಿಂಗಳುಗಳು ಕಳೆದ ಬಳಿಕ ಶಾಕಿಂಗ್​ ವಿಷಯವೊಂದನ್ನು ಇಸ್ರೋ ರಿವೀಲ್​ ಮಾಡಿದೆ.

ಭೂ ವೀಕ್ಷಣೆ ಮತ್ತು ಸಂವಹನ ಉಪಗ್ರಹಗಳನ್ನು ಬಳಸಿಕೊಂಡು ಆಪರೇಷನ್ ಸಿಂದೂರ್​ ನಡೆಸಲಾಗಿತ್ತು. ಈ ಸಮಯದಲ್ಲಿ ಬೆಂಬಲ ನೀಡಲು 400 ಕ್ಕೂ ಹೆಚ್ಚು ವಿಜ್ಞಾನಿಗಳು ಹಗಲಿರುಳು ಶ್ರಮಿಸಿದರು. 24/7 ಅಂದರೆ ನಿದ್ದೆಗೆಟ್ಟು ಹಗಲು ರಾತ್ರಿ ಶ್ರಮಿಸಿರುವುದಾಗಿ ಇಸ್ರೋ ಅಧ್ಯಕ್ಷ ವಿ ನಾರಾಯಣನ್ ತಿಳಿಸಿದ್ದಾರೆ. ಅಖಿಲ ಭಾರತ ನಿರ್ವಹಣಾ ಸಂಘದ (AIMA) 52 ನೇ ರಾಷ್ಟ್ರೀಯ ನಿರ್ವಹಣಾ ಸಮಾವೇಶದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಬಾಹ್ಯಾಕಾಶ ಸಂಸ್ಥೆಯು ಕಾರ್ಯಾಚರಣೆಯ ಸಮಯದಲ್ಲಿ ರಾಷ್ಟ್ರೀಯ ಭದ್ರತಾ ಅಗತ್ಯಗಳಿಗಾಗಿ ಉಪಗ್ರಹ ಡೇಟಾವನ್ನು ಒದಗಿಸಿದೆ. ಎಲ್ಲಾ ಉಪಗ್ರಹಗಳು ಕಾರ್ಯಾಚರಣೆಯ ಉದ್ದಕ್ಕೂ 24/7 ಪರಿಪೂರ್ಣವಾಗಿ ಕಾರ್ಯನಿರ್ವಹಿಸಿದವು, ಎಲ್ಲಾ ಮಿಷನ್ ಅವಶ್ಯಕತೆಗಳನ್ನು ಸಕ್ರಿಯಗೊಳಿಸಿದವು ಎಂದು ಅವರು ವಿವರಿಸಿದ್ದಾರೆ.

ಆತ್ಮನಿರ್ಭರ ಭಾರತದ ಶಸ್ತ್ರಾಸ್ತ್ರ

ಡ್ರೋನ್‌ಗಳು ಮತ್ತು ಯುದ್ಧಸಾಮಗ್ರಿಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಯಿತು. ಆತ್ಮನಿರ್ಭರ ಭಾರತ್​ ಅಡಿ ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಿದ ಆಕಾಶ್ ಟೀರ್‌ನಂತಹ ವಾಯು ರಕ್ಷಣಾ ವ್ಯವಸ್ಥೆಗಳ ಸಾಮರ್ಥ್ಯಗಳು ಕೂಡ ಇಡೀ ವಿಶ್ವದ ಕುತೂಹಲ ಕೆರಳಿಸಿದವು. ಈ ಸಮಯದಲ್ಲಿ ಇಸ್ರೋದ ಟೀಮ್​ ಕೂಡ ಹಗಲಿರುಳು ಶ್ರಮಿಸಿರುವುದಅಗಿ ಅವರ ಹೇಳಿದರು. ಇದೇ ವೇಳೆ, 2027 ರ ವೇಳೆಗೆ ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟವನ್ನು ಸಾಧಿಸುವ ಗುರಿಯನ್ನು ಹೊಂದಿರುವ ಗಗನ್​ಯಾನ್​ ಯೋಜನೆಗೆ ಸಂಬಂಧಿಸಿದಂತೆ, ಇಸ್ರೋ 7,700 ಭೂ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ ಎಂದು ನಾರಾಯಣನ್ ಹೇಳಿದರು. ಮಾನವ ಬಾಹ್ಯಾಕಾಶ ಹಾರಾಟ ನಡೆಸುವ ಮೊದಲು ಹೆಚ್ಚುವರಿಯಾಗಿ 2,300 ಪರೀಕ್ಷೆಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ: Operation Sindhu: ಇರಾನ್​ಗೂ- ಚಿಕ್ಕಬಳ್ಳಾಪುರಕ್ಕೂ ಅಬ್ಬಾ ಇದೆಂಥ ನಂಟು? ಅಂದು ಬಂದಿದ್ದ ನಾಯಕ ಖಮೇನಿ: ರೋಚಕ ಸ್ಟೋರಿ ಇಲ್ಲಿದೆ

ಈ ಯೋಜನೆಯಡಿಯಲ್ಲಿ, ಇಸ್ರೋ ಮೂರು ಸಿಬ್ಬಂದಿರಹಿತ ಕಾರ್ಯಾಚರಣೆಗಳನ್ನು ನಡೆಸಲು ಯೋಜಿಸಿದೆ, ಮೊದಲನೆಯದು ಡಿಸೆಂಬರ್‌ನಲ್ಲಿ ನಿರೀಕ್ಷಿಸಲಾಗಿದೆ. ಬಾಹ್ಯಾಕಾಶ ಸಂಸ್ಥೆ ಇಬ್ಬರು ಸಿಬ್ಬಂದಿ ಕಾರ್ಯಾಚರಣೆಗಳಿಗೆ ಅನುಮೋದನೆಗಳನ್ನು ಸಹ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2035 ರ ವೇಳೆಗೆ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಮತ್ತು 2040 ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವ ಕಾರ್ಯವನ್ನು ISRO ಗೆ ವಹಿಸಿದ್ದಾರೆ.

ಇದನ್ನೂ ಓದಿ: KBC 17: ಪಾಕಿಗಳಲ್ಲಿ ನಡುಕ ಹುಟ್ಟಿಸಿದ 'ಆಪರೇಷನ್​ ಸಿಂದೂರ' ನಾಯಕಿಯರು ಕೌನ್​ ಬನೇಗಾ ಕರೋಡ್​​ಪತಿಯಲ್ಲಿ