2023ರಲ್ಲೇ ಭಾರತದ ಜ್ಯೋತಿಷಿ ನೇಪಾಳ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದರು. ಇದೀಗ ಈ ಜ್ಯೋತಿಷಿ ನುಡಿದಂತೆ ನೇಪಾಳದಲ್ಲಿ ಸರ್ಕಾರದ ಪತನದ ಅಂಚಿನಲ್ಲಿದೆ.  ಇದೇ ಜ್ಯೋತಿಷಿ ನೇಪಾಳದಲ್ಲಿನ ಮಹತ್ತರ ಬದಲಾವಣೆ ಕುರಿತು ಭವಿಷ್ಯ ನುಡಿದಿದ್ದಾರೆ. ಇದು ಶೀಘ್ರದಲ್ಲೇ ಆಗುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.

ನವದೆಹಲಿ (ಸೆ.10) ನೇಪಾಳದಲ್ಲಿ ಜೆನ್‌ಜಿ ಸಮೂಹ ನಡೆಸಿದ ಪ್ರತಿಭಟನೆಯಿಂದ ಇಡೀ ದೇಶ ಹೊತ್ತಿ ಉರಿದಿದೆ. ನೇಪಾಳ ಸಂಸತ್ತು, ಪ್ರಧಾನಿ ಮನೆ, ಸಚಿವರು, ಶಾಸಕರು ಮನೆಗಳು ಬೆಂಕಿಗೆ ಆಹುತಿಯಾಗಿದೆ. ಉದ್ಯಮಿಗಳ ಮನೆಗೆ ದಾಳಿ ಇಟ್ಟು ಆಸ್ತಿ ಪಾಸ್ತಿ ನಾಶ ಮಾಡಲಾಗಿದೆ. ಸೋಶಿಯಲ್ ಮೀಡಿಯಾ ನಿಷೇಧ ನಿರ್ಧಾರದಿಂದ ಆರಂಭಗೊಂಡ ಪ್ರತಿಭಟನೆ ಕೊನೆಗೆ ನಿರ್ಧಾರ ವಾಪಸ್ ಪಡೆದಿದ್ದು ಮಾತ್ರವಲ್ಲ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ ನೀಡಿದ್ದಾರೆ. ಇದೀಗ ನೇಪಾಳ ಸೇನೆ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹರಸಾಹಸ ಮಾಡುತ್ತಿದೆ. ನೇಪಾಳದಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಎರಡು ವರ್ಷ ಮೊದಲೇ ಭಾರತದ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು. ಇದೀಗ ಪ್ರಶಾಂತ್ ಕಿಣಿ ನುಡಿದ ಭವಿಷ್ಯದ ರೀತಿಯಲ್ಲೇ ನೇಪಾಳದ ಪರಿಸ್ಥಿತಿಯಾಗಿದೆ. ಇದರ ಜೊತೆಗೆ ಜ್ಯೋತಿಷಿ ಹೇಳಿದ ಮತ್ತೊಂದು ಮಾತು ಇದೀಗ ಜಗತ್ತೇ ಕುತೂಹಲ ಕಣ್ಣಿನಿಂದ ನೋಡುವಂತಾಗಿದೆ.

ಪ್ರಶಾಂತ್ ಕಿಣಿ ನುಡಿದ ಭವಿಷ್ಯವೇನು

ನೇಪಾಳ ಪರಿಸ್ಥಿತಿ ಕುರಿತು ಜ್ಯೋತಿಷಿ ಪ್ರಶಾಂತ್ ಕಿಣಿ ಅಕ್ಟೋಬರ್ 2023ರಲ್ಲಿ ಟ್ವೀಟ್ ಮಾಡಿದ್ದರು. 2025ರಲ್ಲಿ ನೇಪಾಳದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಪತನಗೊಳ್ಳಲಿದೆ. ನೇಪಾಳದಲ್ಲಿ ರಾಜಪ್ರಭುತ್ವ ಪುನರ್ ಸ್ಥಾಪನೆಯಾಗಲಿದೆ ಎಂದು ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು. ನೇಪಾಳ ಕುರಿತು ನನ್ನ ಭವಿಷ್ಯ. ನೇಪಾಳದಲ್ಲಿ ಪ್ರಜಾಪ್ರಭುತ್ವ ಕೊನೆಗೊಳ್ಳಲಿದೆ. 2025ರ ವೇಳೆ ರಾಜ ಪ್ರಭುತ್ವ ಪುನರ್ ಆರಂಭಗೊಳ್ಳಲಿದೆ ಎಂದು ಪ್ರಶಾಂತ್ ಕಿಣಿ ಟ್ವೀಟ್ ಮಾಡಿದ್ದರು.

ಪ್ರಶಾಂತ್ ಕಿಣಿ ಹೇಳಿದಂತೆ ನೇಪಾಳದ ಪರಿಸ್ಥಿತಿ ಉತ್ತಮವಾಗಿಲ್ಲ. ಪ್ರಧಾನನಿ ಕೆಪಿ ಶರ್ಮಾ ಒಲಿ, ಗೃಹ ಸಚಿವರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಪತನದ ಅಂಚಿನಲ್ಲಿದೆ. ಇತ್ತ ನೇಪಾಳ ಸೇನೆ ರಂಗ ಪ್ರವೇಶ ಮಾಡಿದೆ. ಇನ್ನು ರಾಜಪ್ರಭುತ್ವ ಮರುಸ್ಥಾಪನೆಯಾಗಲಿದೆ ಎಂದು ಪ್ರಶಾಂತಿ ಕಿಣಿ ಹೇಳಿದ್ದಾರೆ. ಇದಕ್ಕೆ ತಕ್ಕಂತೆ ಬೆಳವಣಿಗೆ ನಡೆಯುತ್ತಿದೆ. ನೇಪಾಳದಲ್ಲಿ ಇದೀಗ ಗ್ಯಾನೇಂದ್ರ ಕುಮಾರ್ ಶಾ ಕಾಣಿಸಿಕೊಂಡಿದ್ದಾರೆ. 2008ರಲ್ಲಿ ರಾಜರ ಆಡಳಿತ ಕೊನೆಗೊಂಡಾ ರಾಜನಾಗಿದ್ದ ಗ್ಯಾನೇಂದ್ರ ಕುಮಾರ್ ಶಾ ಸಕ್ರಿಯವಾಗಿದ್ದಾರೆ. ರಾಜರ ಆಡಳಿತಕ್ಕೆ ನೇಪಾಳದಲ್ಲಿ ಕೂಗು ಹೆಚ್ಚಾಗುತ್ತಿದೆ. ಇತ್ತ ಹಲವರು ಸಮುದಾಯಗಳು, ಹಿಂದೂ ಬಲಪಂಥೀಯ ಗುಂಪುಗಳು ರಾಜರ ಆಡಳಿತಕ್ಕೆ ಒತ್ತಾಯ ಮಾಡಿದೆ. ಹೀಗಾಗಿ ಪ್ರಶಾಂತ್ ಕಿಣಿ ಮಾತುಗಳು ಒಂದೊಂದೆ ನಿಜವಾಗುತ್ತಿದೆ.

ನೇಪಾಳ ಪ್ರಧಾನಿ ರಾಜೀನಾಮೆ ಬಳಿಕ ಮಹತ್ವದ ಬೆಳವಣಿಗೆ, ಹಿಂದೂ ರಾಜ್ಯ ಮರುಸ್ಥಾಪಿಸಿ ರಾಜರ ಆಡಳಿತ?

ನೇಪಾಳದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದೆ. ನೇಪಾಳ ಸೇನೆ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆ. ಆದರೆ ಜೆನ್‌ಜಿ ಪ್ರತಿಭಟನಾಕಾರರು ಹಲವು ನಿವಾಸ, ಹೊಟೆಲ್‌ಗೆ ಬೆಂಕಿ ಹಚ್ಚಿದ್ದಾರೆ. ಎಲ್ಲೆಡೆ ಬೆಂಕಿ ಕೆನ್ನಾಲಗೆ ಹರಡಿಕೊಂಡಿದೆ. ನೇಪಾಳದಲ್ಲಿ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ.

Scroll to load tweet…

ಶೇಕ್ ಹಸೀನಾ ಕುರಿತು ನುಡಿದಿದ್ದ ಭವಿಷ್ಯ ನಿಜ

ಪ್ರಶಾಂತ್ ಕಿಣಿ ನುಡಿದ ಭವಿಷ್ಯದಲ್ಲಿ ಹಲವು ನಿಜವಾಗಿದೆ. ಈ ಪೈಕಿ ಬಾಂಗ್ಲಾದೇಶ ಕೂಡ ಒಂದು, 2023ರಲ್ಲಿ ಪ್ರಶಾಂತ್ ಕಿಣಿ ಬಾಂಗ್ಲಾದೇಶ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದರು. ಈ ವೇಳೆ 2024ರ ಮೇ ತಿಂಗಳಿನಿಂದ ಆಗಸ್ಟ್ ತಿಂಗಳ ವರೆಗೆ ಶೇಕ್ ಹಸೀನಾ ತೀವ್ರ ಎಚ್ಚರವಾಗಿರಬೇಕು. ಶೇಕ್ ಹಸೀನಾ ಹತ್ಯೆ ಪ್ರಯತ್ನಗಳು ನಡೆಯಲಿದೆ ಎಂದು ಎಚ್ಚರಿಸಿದ್ದರು. ಇದರಂತೆ ಬಾಂಗ್ಲಾದೇಶದಲ್ಲಿ ದಂಗೆ ಶುರುವಾಗಿತ್ತು. ಪ್ರಧಾನಿ ನಿವಾಸಕ್ಕೆ ದಾಳಿ ಮಾಡಿದ್ದರು. ಈ ವೇಳೆ ಶೇಕ್ ಹಸೀನಾ ದೇಶದಿಂದ ಪಲಾಯನ ಮಾಡಬೇಕಾಯಿತು.