Asianet Suvarna News Asianet Suvarna News

ಆರ್ಥಿಕತೆ ನಿರ್ವಹಣೆಯಲ್ಲಿ ಭಾರತವೇ ಬೆಸ್ಟ್‌

2022ರಲ್ಲಿ ವಿಶ್ವದ ಇತರೆ ಯಾವುದೇ ದೇಶಕ್ಕಿಂತ ಭಾರತ ಸರ್ಕಾರ, ಆರ್ಥಿಕತೆಯನ್ನು ಅತ್ಯಂತ ಹೆಚ್ಚು ಸಮರ್ಥವಾಗಿ ನಿರ್ವಹಿಸಿದೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ.

India is the best in managing the economy 62% of peoples opinion in the Axis My India survey akb
Author
First Published Jan 5, 2023, 10:22 AM IST

ನವದೆಹಲಿ: 2022ರಲ್ಲಿ ವಿಶ್ವದ ಇತರೆ ಯಾವುದೇ ದೇಶಕ್ಕಿಂತ ಭಾರತ ಸರ್ಕಾರ, ಆರ್ಥಿಕತೆಯನ್ನು ಅತ್ಯಂತ ಹೆಚ್ಚು ಸಮರ್ಥವಾಗಿ ನಿರ್ವಹಿಸಿದೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. 'ಆ್ಯಕ್ಸಿಸ್‌ ಮೈ ಇಂಡಿಯಾ' ಕಳೆದ ತಿಂಗಳು ದೇಶದ 36 ರಾಜ್ಯ/ಕೇಂದ್ರಾಡಳಿತಗಳ 10019 ಜನರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿದ್ದು ಅದರಲ್ಲಿ ಶೇ.62ರಷ್ಟು ಜನರು, ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ, ಆರ್ಥಿಕತೆಯನ್ನು ಇತರೆ ಯಾವುದೇ ದೇಶಗಳಿಗಿಂತ ಹೆಚ್ಚು ಸಮರ್ಥವಾಗಿ ನಿರ್ವಹಿಸಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಳಿದಂತೆ ಶೇ.29ರಷ್ಟು ಜನರು ಈ ವರ್ಷ ತಮಗೆ ಉತ್ತಮ ಉದ್ಯೋಗಾವಕಾಶದ (job opportunities) ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಶೇ.73ರಷ್ಟು ಜನರು ಕಳೆದ ವರ್ಷಕ್ಕಿಂತ ಈ ವರ್ಷ ಮನೆ ನಿರ್ವಹಣೆ ವೆಚ್ಚದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಶೇ.50ರಷ್ಟುಜನರು ಈ ಹೆಚ್ಚಳಕ್ಕೆ ಹಣದುಬ್ಬರವೇ (inflation) ಕಾರಣ ಎಂದಿದ್ದಾರೆ.  ಶೇ.41ರಷ್ಟುಜನರು ವೈಯಕ್ತಿಕ ಆರೈಕೆ ಉತ್ಪನ್ನಗಳ ಬಳಕೆಯಲ್ಲಿ ಹೆಚ್ಚಳವಾಗಿದೆ ಎಂದು, ಶೇ.41ರಷ್ಟು ಜನರು ತಮ್ಮ ಗೃಹ ಬಳಕೆ ವಸ್ತುಗಳ ಬಳಕೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಎ.ಸಿ., ಕಾರು, ಫ್ರಿಜ್‌ ಮೊದಲಾದ ವಸ್ತುಗಳ ಖರೀದಿಯಲ್ಲಿ ಶೇ.7ರಷ್ಟುಏರಿಕೆ ದಾಖಲಾಗಿದೆ ಎಂದು ಸಮೀಕ್ಷೆ ಹೇಳಿದೆ.

ಭಾರತದ ಆರ್ಥಿಕತೆಗೆ ಡಿಜಿಟಲ್‌ ಕ್ರಾಂತಿಯ ಬಲ

ಮೋದಿ ನಾಯಕತ್ವ: ವಸಾಹತುಶಾಹಿ ಕರಿನೆರಳಿನಿಂದ ವಿಶ್ವ ಗುರುವಾದ ಭಾರತ

ರೆಪೋ ದರ ಏರಿಸಿದ ಆರ್‌ಬಿಐ: ಗೃಹ, ವಾಹನ ವಾಣಿಜ್ಯ ಸಾಲದ ಬಡ್ಡಿ ಏರಿಕೆ

Follow Us:
Download App:
  • android
  • ios