Asianet Suvarna News Asianet Suvarna News

ರೆಪೋ ದರ ಏರಿಸಿದ ಆರ್‌ಬಿಐ: ಗೃಹ, ವಾಹನ ವಾಣಿಜ್ಯ ಸಾಲದ ಬಡ್ಡಿ ಏರಿಕೆ

ಬೆಲೆ ಏರಿಕೆಯಿಂದ ಕಂಗೆಟ್ಟಿರುವ ದೇಶದ ಮಧ್ಯಮ ವರ್ಗದ ಜನರಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಇಂದು ಮತ್ತೆ ಬಿಸಿ ಮುಟ್ಟಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋದರವನ್ನು 35 ಮೂಲಾಂಕ ಏರಿಸಿದೆ.

RBI interest rate may hike again today akb
Author
First Published Dec 7, 2022, 10:41 AM IST

ನವದೆಹಲಿ: ಬೆಲೆ ಏರಿಕೆಯಿಂದ ಕಂಗೆಟ್ಟಿರುವ ದೇಶದ ಮಧ್ಯಮ ವರ್ಗದ ಜನರಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಇಂದು ಮತ್ತೆ ಬಿಸಿ ಮುಟ್ಟಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋದರವನ್ನು 35 ಮೂಲಾಂಕ ಏರಿಸಿದೆ. ಇದರಿಂದ ರೆಪೋ ರೇಟ್ 6.25ಕ್ಕೆ ಏರಿದೆ. ಇದರಿಂದ ಗೃಹ, ವಾಹನ, ವಾಣಿಜ್ಯ ಸಾಲದ ಬಡ್ಡಿ ದರ ದುಬಾರಿ ಆಗಲಿವೆ. ಕಳೆದ ಮೂರು ಹಣಕಾಸು ನೀತಿಗಳಲ್ಲೂ ಬಡ್ಡಿದರ ಏರಿಕೆ ಪ್ರಮಾಣ ಕ್ರಮವಾಗಿ ಶೇ.0.50 ರಷ್ಟಿತ್ತು. ಪ್ರಸಕ್ತ ಹಣದುಬ್ಬರ ಅಲ್ಪ ಇಳಿಕೆಯಾಗಿದ್ದರೂ, ಇನ್ನೂ ಶೇ.6ಕ್ಕಿಂತಲೇ ಮೇಲೇ ಇರುವ ಕಾರಣ, ಬಡ್ಡಿದರ ಏರಿಕೆ ಮಾಡಲಾಗಿದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರೆಪೋದರ ಏರಿಕೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ 40 ಮೂಲಾಂಕ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು.

ರೆಪೋ ದರ ಎಂದರೆ ಆರ್‌ಬಿಐ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಡಿಸೆಂಬರ್‌ 5 ರಿಂದ 7ರವರೆಗೆ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆ ನಡೆದಿದ್ದು ಈ ಸಭೆಯ ಅಂತ್ಯದಲ್ಲಿ ಅಂದರೆ ಡಿಸೆಂಬರ್ 7ರಂದು ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡಿದೆ. ವಿಶ್ವದ ಬಹುತೇಕ ದೇಶಗಳು ತೀವ್ರವಾದ ಹಣದುಬ್ಬರದಿಂದ ಕಂಗಾಲಾಗಿವೆ. 

Ground Report; ಚಿಕ್ಕಮಗಳೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಹಣಾಹಣಿ: 'ಕೈ' ಹಿಡಿತಾರ ದತ್ತ?

ಚುನಾವಣೋತ್ತರ ಸಮೀಕ್ಷೆ; ಗುಜರಾತ್, ಹಿಮಾಚಲ ಗೆದ್ದು MCD ಅಧಿಕಾರ ಕಳೆದುಕೊಂಡ ಮೋದಿ!


 

Follow Us:
Download App:
  • android
  • ios