ಇತ್ತೀಚೆಗಷ್ಟೇ ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಇದೀಗ ತಮ್ಮ ಮೊದಲ ಭಾಷಣಕ್ಕೆ ಸಜ್ಜಾಗಿದ್ದಾರೆ. ಇಂದು ಸಂಜೆ 7 ಗಂಟೆಗೆ ಮುರ್ಮು ರಾಷ್ಟ್ರಪತಿಯಾಗಿ ಮೊದಲ ಭಾಷಣ ಮಾಡಲಿದ್ದಾರೆ. ಇದೀಗ ದ್ರೌಪದಿ ಭಾಷಣಕ್ಕೆ ಕಾತರ ಹೆಚ್ಚಾಗಿದೆ. 

ನವದೆಹಲಿ(ಆ.14): ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರದಲ್ಲಿದೆ. ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಲಿದ್ದಾರೆ. ಇದಕ್ಕೂ ಮುನ್ನ ದೇಶದ ಜನತೆಯನ್ನುದ್ದೇಶಿ ಭಾರತದ ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಭಾರತದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ತಮ್ಮ ಮೊದಲ ಭಾಷಣಕ್ಕೆ ಸಜ್ಜಾಗಿದ್ದಾರೆ. ಇಂದು(ಆ.14) ಸಂಜೆ 7 ಗಂಟೆಗೆ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ. ಭರ್ಜರಿ ಗೆಲುವಿನೊಂದಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾದ ಆದಿವಾಸಿ ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಭಾಷಣಕ್ಕೆ ಜನರು ಕಾತರಗೊಂಡಿದ್ದಾರೆ. ಸಂಜೆ 7 ಗಂಟೆಗೆ ಮುರ್ಮು ಭಾಷಣ ದೂರದರ್ಶನ, ಆಲ್ ಇಂಡಿಯಾ ರೇಡಿಯೋಗಳಲ್ಲಿ ನೇರಪ್ರಸಾರವಾಗಲಿದೆ. 

ಭಾರತದ ಸ್ವಾತಂತ್ರ್ಯ ದಿನಾಚರಣೆ ಮೊದಲು ಅಂದರೆ ಆಗಸ್ಟ್ 14ರ ಸಂಜೆ 7 ಗಂಟೆಗೆ ಪ್ರತಿ ವರ್ಷ ಭಾರತದ ರಾಷ್ಟ್ರಪತಿಗಳು ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಭರ್ಜರಿ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ದಿ ಯಶವಂತ್ ಸಿನ್ಹ ವಿರುದ್ಧ ಗೆಲುವು ಸಾಧಿಸಿ ಭಾರತದ ನೂತನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬಾರಿ ದ್ರೌಪದಿ ಮುರ್ಮು ಭಾಷಣದಲ್ಲಿ ಹಲವು ವಿಶೇಷತೆಗಳಿವೆ. ಅಜಾದಿಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಈಗಾಗಲೇ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಇದರಲ್ಲಿ ಹರ್ ಘರ್ ತಿರಂಗ ಅಭಿಯಾನ ಕೂಡ ಒಂದಾಗಿದೆ. ಈ ಎಲ್ಲಾ ಅಂಶಗಳನ್ನು ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಉಲ್ಲೇಖಿಸುವ ಸಾಧ್ಯತೆ ಇದೆ.

ರಾಷ್ಟ್ರಪತ್ನಿ ಹೇಳಿಕೆ, ದ್ರೌಪದಿ ಮುರ್ಮು ಬಳಿ ಕ್ಷಮೆ ಕೇಳಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್!

ದ್ರೌಪದಿ ಮುರ್ಮು ಆಯ್ಕೆ ದೇಶದ ಇತಿಹಾಸದಲ್ಲೇ ಐತಿಹಾಸಿಕ ಎಂದು ಬಣ್ಣಿಸಲಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು. ಇಷ್ಟೇ ಅಲ್ಲ ಭಾರತ ರಾಷ್ಟ್ರಪತಿಯಾದ ಎರಡನೇ ಮಹಿಳೆ ಅನ್ನೋ ಹೆಗ್ಗಳಿಕೆಗೂ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮುರ್ಮು ಆಯ್ಕೆಯನ್ನು ಮಹತ್ವದ ಕ್ಷಣ ಎಂದು ಬಣ್ಣಿಸಿದ್ದರು. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭವು ಒಂದು ಮಹತ್ವದ ತಿರುವಿನ ಕ್ಷಣ. ವಿಶೇಷವಾಗಿ ತುಳಿತಕ್ಕೆ ಒಳಗಾದವರು, ಹಿಂದುಳಿದವರು ಹಾಗೂ ಬಡವರ ಪಾಲಿಗೆ ಇದು ತಿರುವಿನ ಸಂದರ್ಭ. ಇಡೀ ದೇಶವೇ ಇಂದು ಅವರ ಪ್ರಮಾಣವಚನವನ್ನು ನೋಡಿದೆ. ದ್ರೌಪದಿ ತಮ್ಮ ಮೊದಲ ಭಾಷಣದಲ್ಲಿ ಭರವಸೆ ಮತ್ತು ಸಹಾನುಭೂತಿಯ ಸಂದೇಶವನ್ನು ನೀಡಿದರು. ಭಾರತವು ಇಂದು ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಆಚರಿಸುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರು ಭಾರತದ ಸಾಧನೆಗಳಿಗೆ ಒತ್ತು ನೀಡಿದರು ಹಾಗೂ ಭವಿಷ್ಯದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು. ಅವರ ಅಧ್ಯಕ್ಷ ಅವಧಿ ಫಲಪ್ರದವಾಗಲಿ ಎಂದು ಹಾರೈಸುವೆ. 

Droupadi Murmu: ಒಡಿಶಾ ಆದಿವಾಸಿ ಮಹಿಳೆ ಈಗ 'ಮಹಾಭಾರತ' ದ 15ನೇ ರಾಷ್ಟ್ರಪತಿ

ದ್ರೌಪದಿ ಎಂಬ ಹೆಸರು ಕೊಟ್ಟಿದ್ದು ಶಾಲಾ ಶಿಕ್ಷಕಿ
ದೇಶದ ಮೊದಲ ಬುಡಕಟ್ಟು ಸಮುದಾಯದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಹಾಭಾರತದ ಪಾತ್ರವಾದ ದ್ರೌಪದಿ ಹೆಸರನ್ನು ಇಟ್ಟಿದ್ದು ಓರ್ವ ಶಾಲಾ ಶಿಕ್ಷಕಿ. ಈ ವಿಷಯವನ್ನು ಸ್ವತಃ ಮುರ್ಮು ಅವರೇ ಕೆಲವು ದಿನಗಳ ಹಿಂದೆ ಒಡಿಯಾದ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ದ್ರೌಪದಿ ಎಂಬುದು ನನ್ನ ನಿಜವಾದ ಹೆಸರಲ್ಲ. ನನ್ನ ಹೆಸರು ಸಂತಾಲಿ ಭಾಷೆಯ ಪುಟಿ ಎಂದಾಗಿತ್ತು. ಹೊರಗಿನಿಂದ ಬಂದ ಶಾಲಾ ಶಿಕ್ಷಕಿಯೊಬ್ಬರು ನನ್ನ ಹೆಸರನ್ನು ದ್ರೌಪದಿ ಎಂದು ಬದಲಾಯಿಸಿದರು ಎಂದು ಹೇಳಿದ್ದಾರೆ. ಅಲ್ಲದೇ ಅವರ ಹೆಸರು ‘ದುರ್ಪದಿ’, ‘ದೋರ್ಪದಿ’ ಎಂದೆಲ್ಲಾ ಬದಲೂ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.