Asianet Suvarna News Asianet Suvarna News

ಸ್ವತಂತ್ರ್ಯ ಭಾರತದಲ್ಲಿ ಅವಿಸ್ಮರಣೀಯ 75 ಹೆಜ್ಜೆ, ಶೂನ್ಯದಿಂದ ವಿಶ್ವಗುರುವಾದ ಹಿಂದುಸ್ಥಾನ!

75 ವರ್ಷಗಳ ಹಿಂದೆ ಭಾರತ ಬ್ರಿಟಿಷ್ ಆಡಳಿತದಿಂದ ಮುಕ್ತಿಪಡೆದುಕೊಂಡು ಸ್ವತಂತ್ರಗೊಂಡಿತು. ಆದರೆ ಭಾರತ ಬರೀದಾಗಿತ್ತು. ಸಂಪತ್ತು ಕೊಳ್ಳೆ ಹೊಡೆಯಲಾಗಿತ್ತು. ಆಹಾರ, ಕಚ್ಚಾವಸ್ತುಗಳು ಇಂಗ್ಲೆಂಡ್ ಸೇರಿತ್ತು. ಕೈಗಾರಿಗೆ ಒಡೆದು ಹೋಗಿತ್ತು. ಕೃಷಿ ನೆಲಕಚ್ಚಿತ್ತು. ಭಾರತದಲ್ಲಿ ಉಳಿದುಕೊಂಡಿದ್ದು, ಬಡತನ, ಮಲೆರಿಯಾ, ಪೊಲಿಯೋ ಸೇರಿದಂತೆ ಹಲವು ಪಿಡುಗುಳು ಮಾತ್ರ. ಆದರೆ ಕಳೆದ 75 ವರ್ಷದಲ್ಲಿ ಭಾರತ ಅದ್ವಿತೀಯ ಸಾಧನೆ ಮೂಲಕ ಇದೀಗ ವಿಶ್ವ ಗುರುವಾಗಿದೆ. ಭಾರತದ 75 ಚಿನ್ನದ ಹೆಜ್ಜೆಗಳ ವಿವರ ಇಲ್ಲಿದೆ

India Independence day celebration biggest success stories over last 75 years from zero to World leader ckm
Author
Bengaluru, First Published Aug 14, 2022, 9:19 PM IST

ಬೆಂಗಳೂರು(ಆ.14): ಭಾರತ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಬ್ರಿಟೀಷರಿಗೆ ಈ ದೇಶ ನಮ್ಮ ಕೈಯಲ್ಲಿ ಇರುವುದಿಲ್ಲ ಅನ್ನೋದು ಸ್ಪಷ್ಟವಾಗಿತ್ತು. ಹೀಗಾಗಿ ಭಾರತದಿಂದ ಸಂಪತ್ತು ದೋಚುವ, ಆಹಾರ ಪದಾರ್ಥಗಳನ್ನು ಸಾಗಿಸುವ, ಕೃಷಿ ಉತ್ಪನ್ನಗಳನ್ನು ಸಮುದ್ರ ದಾಟಿಸುವ ಕೆಲಸ ಎಗ್ಗಿಲ್ಲದೆ ನಡೆಯಿತು.  ಆಗಸ್ಟ್ 15, 1947ರಲ್ಲಿ ಭಾರತ ಸ್ವತಂತ್ರ್ಯಗೊಂಡಿತ್ತು. ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಬ್ರಿಟೀಷರು ಒಳಗೊಳಗೆ ನಕ್ಕಿದ್ದರು. ಈ ದೇಶ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ. ಇದ್ದರೂ ಏಕ ಭಾರತವಾಗಿ ಇರಲು ಸಾಧ್ಯವೇ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ 1947ರಿಂದ ಇಲ್ಲೀವರೆಗೆ ಅಂದರೆ ಕಳದ 75 ವರ್ಷದಲ್ಲಿ ಭಾರತ ಇತರ ಎಲ್ಲಾ ದೇಶಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆದು ನಿಂತಿದೆ. ಶಿಕ್ಷಣ, ಆರ್ಥಿಕತೆ, ಕೃಷಿ, ಉತ್ಪನ್ನ, ರಫ್ತು, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಇತರ ದೇಶಗಳಿಗೆ ಸಾಧಿಸಲಾಗದ ಸಾಧನೆಯನ್ನೂ ಮಾಡಿದೆ. ಕಳೆದ 75 ವರ್ಷದಲ್ಲಿ ಭಾರತ ಚರಿಷ್ಮ ಯಾವ ರೀತಿ ಬದಲಾಗಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ರಿಟೀಷರು ಸರಿಸುಮಾರು 45 ಟ್ರಿಲಿಯನ್ ಡಾಲರ್ ಮೌಲ್ಯದಷ್ಟು ಸಂಪತನ್ನು ಭಾರತದಿಂದ ದೋಚಿದ್ದಾರೆ. ಕಚ್ಚಾವಸ್ತುಗಳು, ಚಿನ್ನಾಭರಣ, ಕೊಹಿನೂರು ವಜ್ರ ಸೇರಿದಂತೆ ಲೆಕ್ಕಕ್ಕೆ ಸಿಗದಷ್ಟು ದೋಚಿದ್ದಾರೆ. ಭಾರತದ ಕೈಗಾರಿಕೆಯನ್ನು ಹಳ್ಳಿ ಹಿಡಿಸಿದ್ದರು. ಕೃಷಿ, ಆಹಾರ ಉತ್ಪನ್ನ, ಸಂಬಾರಾ ಪದಾರ್ಥ ಸೇರಿದಂತೆ ಒಂದು ಎಲೆಯನ್ನೂ ಬಿಡದೆ ದೋಚಿದ್ದಾರೆ. 1947ರಲ್ಲಿ ಭಾರತೀಯರ ತಲಾ ಆದಾಯ ಕೇವಲ 230 ರೂಪಾಯಿ.  ಅದರೆ ಕೇವಲ 3 ಡಾಲರ್ ಮಾತ್ರ.  ಬಡತನ, ಆಹಾರ ಕೊರತೆ, ಹಸಿವು, ಆರೋಗ್ಯ ಸಮಸ್ಯೆ ಸೇರಿ ಹಲವು ಬಿಕ್ಕಟ್ಟುಗಳೇ ಹೆಚ್ಚಾಗಿತ್ತು. ಆದರೆ 1960ರಲ್ಲಿ ಹಸಿರು ಕ್ರಾಂತಿ, 1970ರಲ್ಲಿ ಬಿಳಿ ಕ್ರಾಂತಿ(ಹಾಲು ಉತ್ಪಾದಕತೆ), ಬ್ಲೂ ರೆವಲ್ಯೂಶನ್ ಭಾರತದ ದಿಕ್ಕನ್ನು ಬದಲಿಸಿತು. ಬ್ಯಾಂಕ್ ಖಾಸಗೀಕರಣಗೊಂಂಡಿತು. ಹಲವು ಕ್ಷೇತ್ರಗಳು ಖಾಸಗೀಕರಣಗೊಂಡಿತು. ಉತ್ಪಾದಕತೆ ಹೆಚ್ಚಾಯ್ತು. ರಫ್ತು ಪ್ರಮಾಣ ಅಧಿಕಗೊಂಡಿತು. 75 ವರ್ಷಗಳ ಬಳಿಕ ಭಾರತ ಜಗತ್ತಿನ ಮುಂಚೂಣಿಯಲ್ಲಿರುವ ಹಾಗೂ ಅತೀವೇಗವಾಗಿ ಪ್ರಗತಿ ಕಾಣುತ್ತಿರುವ ಆರ್ಥಿಕತೆಯಾಗಿ ಬೆಳೆದು ನಿಂತಿದೆ. 3 ಡಾಲರ್ ತಲಾ ಆದಾಯವಿದ್ದ ಭಾರತದಲ್ಲಿ ಇದೀಗ ತಲಾ ಆದಾಯ 1,980ಕ್ಕೆ ಏರಿಕೆಯಾಗಿದೆ.

ಮೊದಲ ಭಾಷಣದಲ್ಲಿ ಕುವೆಂಪು ನವ ಭಾರತ ಲೀಲೆ ಕವನ ಉಲ್ಲೇಖಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

1947ರಲ್ಲಿ ಭಾರತದ ಜಿಡಿಪಿ ಶೇಕಡಾ 3.28 ರಷ್ಟಿತ್ತು. ಭಾರತ ಎಲ್ಲವೂ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇದೀಗ ವಿದೇಶಿ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಿದ್ದು ಮಾತ್ರವಲ್ಲ, ಭಾರತೀಯ ಕಂಪನಿಗಳೇ ವಿದೇಶಕ್ಕೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.  ಭಾರತ ರಾಜಕೀಯವಾಗಿ ಬಲಿಷ್ಠಗೊಂಡಿತು. ಮಿಲಿಟರಿ ಶಕ್ತಿಯಲ್ಲೂ ಬಲಾಢ್ಯಗೊಂಡಿತು. ಬ್ರಿಟಿಷರ ವಸಾಹತುಶಾಹಿ ಆಡಳಿತ ಅಂತ್ಯಗೊಳಿಸದ ಬಳಿಕ ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಮುಕ್ತಿಗೊಳಿಸಿತು. ಆದರೆ ಕೆಲ ತಪ್ಪು ನಿರ್ಧಾರಗಳಿಂದ ಭಾರತ ಅನಿವಾರ್ಯವಾಗಿ ಯುದ್ಧಕ್ಕೆ ಸಜ್ಜಾಗಬೇಕಾಯಿತು. 1948ರಲ್ಲಿ ಕಾಶ್ಮೀರಕ್ಕಾಗಿ ಭಾರತ ಪಾಕಿಸ್ತಾನ ಯುದ್ಧ, 1962ರಲ್ಲಿ ಚೀನಾ ವಿರುದ್ದ ಹೋರಾಟ, 1999ರಲ್ಲಿ ಕಾರ್ಗಿಲ್ ವಾಲ್, ಲಡಾಖ್ ಸಂಘರ್ಷ ಸೇರಿದಂತೆ ಕೆಲ ಮಹತ್ವದ ಘಟ್ಟಗಳನ್ನು ಸಾಗಿದೆ. ಆದರೆ ಪ್ರತಿ ಹೋರಾಟದಲ್ಲಿ ಭಾರತ ತನ್ನ ನೆಲವನ್ನು ಉಳಿಸಿಕೊಳ್ಳಲು, ಎದುರಾಳಿಗಳು ಕಾಲು ಕೆರೆದು ಬಂದಾಗ ದಿಟ್ಟವಾಗಿ ಹೋರಾಡುವ ಶಕ್ತಿಯನ್ನು ಬೆಳೆಸಿಕೊಂಡಿದೆ ಎನ್ನವುದನ್ನು ಭಾರತ ತೋರಿಸಿಕೊಟ್ಟಿತು.

ಸ್ವಾತಂತ್ರ್ಯದ ಸಂದರ್ಭದಲ್ಲಿ ಅಂದಿನ ಬ್ರಿಟೀಷ್ ಪ್ರಧಾನಿ ವಿಂನ್ಸ್ಟೆಂಟ್ ಚರ್ಚಿಲ್ ಹೇಳಿಕೆ ಭಾರತವನ್ನು ಒಂದು ಕ್ಷಣ ಅಲುಗಾಡಿಸಿತ್ತು. 22ಕ್ಕೂ ಹೆಚ್ಚು ಭಾಷೆ, ಹಲವು ಧರ್ಮ, ಪ್ರಾಂತ್ಯ, ಆಚಾರ ವಿಚಾರ, ಸಂಪ್ರದಾಯಗಳಿಂಕೂಡಿರುವ ಭಾರತ ಯಾವತ್ತೂ ಒಂದು ದೇಶವಾಗಿ ಮುನ್ನಡೆಯಲು ಸಾಧ್ಯವಾಗಲ್ಲ ಎಂದಿದ್ದರು. ಸ್ವತಂತ್ರ ಭಾರತ ಹರಿದು ಹೋಗಲಿದೆ ಎಂದಿದ್ದರು. ಆದರೆ ಭಾರತ ಇಂದಿಗೂ ಒಗ್ಗಟ್ಟಿನಿಂದ ಮುನ್ನುಗ್ಗುತ್ತಿದೆ. ಆದರೆ ಹಲವು ಏರಿಳಿತಗಳನ್ನು ಭಾರತ ಕಂಡಿದೆ. 1947ರಲ್ಲಿ ದೇಶ ವಿಭಜನೆ, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ, 1984ರಲ್ಲಿ ಆಪರೇಷನ್ ಬ್ಲೂ ಸ್ಟಾರ್, 2022ರ ಗುಜರಾತ್ ಗಲಭೆ ಹಲವು ಘಟನೆಗಳನ್ನು ಎದುರಿಸಿದೆ. ಆದರೆ ಇದೆಲ್ಲವನ್ನು ಮೆಟ್ಟಿನಿಂತು ಭಾರತ ಅಭಿವೃದ್ಧಿಯತ್ತ ಸಾಗಿದೆ.

ಭಾರತೀಯರ ಹೃದಯ ಜೋಡಿಸಿದ ಹರ್‌ ಘರ್‌ ತಿರಂಗಾ, ಹುಲ್ಲಿನ ಮನೆ ಮೇಲೆ ಅರಳಿದ ರಾಷ್ಟ್ರಧ್ವಜ!

ಆರೋಗ್ಯದಲ್ಲಿ ಭಾರತದ ಸಾಧನೆ
1947ರಲ್ಲಿ ಭಾರತೀಯರ ಸರಾಸರಿ ಜೀವಿತಾವದಿ ವಯಸ್ಸು 32 ವರ್ಷ. ಮಲೆರಿಯಾ ಸೇರಿದಂತೆ ಹಲವು ತೀವ್ರವಾದ ಆರೋಗ್ಯ ಸಮಸ್ಯೆಗಳು ತಾಂಡವವಾಡುತ್ತಿತ್ತು. 1947ರಲ್ಲಿ 33 ಕೋಟಿ ಜನಸಂಖ್ಯೆಯಲ್ಲಿ  75 ಮಿಲಿಯನ್ ಮೆಲೆರಿಯಾ ಪ್ರಕರಣ ಪತ್ತೆಯಾಗಿತ್ತು. 1990ರ ಆರಂಭದಲ್ಲಿ ಪೊಲಿಯೋ ಪ್ರತಿ ದಿನ 500ಕ್ಕೂ ಹೆಚ್ಚು ಮಕ್ಕಳು ಪೊಲಿಯೋ ಪೀಡಿತರಾಗಿದ್ದರು. 2014ರಲ್ಲಿ ಭಾರತ ಸಂಪೂರ್ಣ ಪೊಲಿಯೋ ಮುಕ್ತ ದೇಶ ಎಂದು ಘೋಷಿಸಲಾಯಿತು. ಇದೀಗ ವಿಶ್ವವೇ ಭಾರತದ ಪೊಲಿಯೋ ಮುಕ್ತ ಮಾದರಿಯನ್ನು ಅಧ್ಯಯನ ವಿಷಯಾವಾಗಿ ಮಾಡಿದೆ. ಅತೀ ದೊಡ್ಡ ಲಸಿಕಾ ಅಭಿಯಾನ ಆರಂಭಿಸಿ ಭಾರತ ಯಶಸ್ವಿಯಾಗಿದೆ. ಆರೋಗ್ಯ ಮೂಲ ಸೌಕರ್ಯದಲ್ಲಿ ಮಹತ್ತರ ಬದಲಾವಣೆಯಾಗಿದೆ. 1947ರಲ್ಲಿ 1 ಲಕ್ಷ ಮಕ್ಕಳ ಜನನದಲ್ಲಿ 2,000 ತಾಯಂದಿರು ಸಾವನ್ನಪ್ಪುತ್ತಿದ್ದರು. ಇದೀಗ ಈ ಸಾವನ್ನಪ್ಪುವ ತಾಯಂದಿರ ಸಂಖ್ಯೆ 103ಕ್ಕೆ ಇಳಿಕೆಯಾಗಿದೆ. ಇನ್ನು ಜೀವಿತಾವದಿ ಸರಾಸರಿ ವರ್ಷ ಇದೀಗ 70.19ಕ್ಕೆ ಏರಿಕೆಯಾಗಿದೆ.  ಭಾರತ ಔಷಧಿಗಳನ್ನು ರಫ್ತು ಮಾಡುವ ಅತೀ ದೊಡ್ಡದೇಶವಾಗಿದೆ. ಸುಮಾರು 200 ದೇಶಗಳಿಗೆ ಭಾರತ ಔಷಧಿ ರಫ್ತು ಮಾಡುತ್ತಿದೆ.

ತಂತ್ರಜ್ಞಾನ
1962ರಲ್ಲಿ ಬಾಹ್ಯಾಕಾಶ ಸಂಸ್ಥೆ ಆರಂಭಗೊಂಡಿತು. 1963ರಲ್ಲಿ ಮೊದಲ ರಾಕೆಡ್ ಉಡಾವಣೆ ಮಾಡಲಾಗಿತ್ತು. ಸೈಕಲ್, ಎತ್ತಿನ ಗಾಡಿ ಮೂಲಕ ರಾಕೆಟ್ ಬಿಡಿ ಭಾಗಗಳನ್ನು ಸಾಗಿಸಲಾಗಿತ್ತು. ಆದರೆ ಇಂದು ಚಂದ್ರಯಾನ ಕೈಗೊಂಡ ದೇಶಗಳ ಸಾಲಿನಲ್ಲಿ ಭಾರತ ನಿಂತಿದೆ. 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ಬಾಹ್ಯಾಕಾಶದಲ್ಲಿ ತಿರಂಗ ಹಾರಿಸಿದ ಸಾಧನೆ ಮಾಡಿದೆ. ಭಾರತ ಯುಎನ್ಎಸ್‌ಸಿಯ ಸದಸ್ಯ ರಾಷ್ಟ್ರವಲ್ಲದ ಭಾರತ ನ್ಯೂಕ್ಲಿಯರ್ ಬಾಂಬ್ ಪರೀಕ್ಷಿಸಿದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕ ಸೇರಿದಂತೆ ವಿಶ್ವದ ಯಾವುದೇ ತಂತ್ರಜ್ಞಾನಕ್ಕೆ ತಿಳಿಯದಂತೆ ಪರೀಕ್ಷೆ ನಡೆಸಲಾಗಿತ್ತು. 

ಪ್ರಜಾಪ್ರಭುತ್ವ, ಸಾಕ್ಷರತೆ ಮೂಲಕ ಭಾರತ ಪ್ರಗತಿ ಸಾಧಿಸಿದೆ. 1947ರ ಸ್ವಾತಂತ್ರ್ಯ ದಿನಾಚರಣೆಯಿಂದ ಭಾರತದಲ್ಲಿ ಪ್ರಜಾಪ್ರಭುತ್ವ ಸಕ್ರಿಯಾವಾಗಿ ನಡೆಯುತ್ತಿದೆ. ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತವಾಗಿದೆ. ಪ್ರತಿಯೊಬ್ಬರು ಮತದಾನ ಹಕ್ಕು ಪಡೆದಿದ್ದಾರೆ ಹಾಗೂ ಮತ ಚಲಾಯಿಸುತ್ತಿದ್ದಾರೆ. 370 ಮಿಲಿಯನ್ ಇದ್ದ ಜನಸಂಖ್ಯೆ ಇದೀೀಗ 1.4 ಬಿಲಿಯನ್ ಆಗಿದೆ. ಹೊಸ ರಾಜ್ಯ, ಪಟ್ಟಣ, ಜಿಲ್ಲೆಗಳ ಉದಯವಾಗಿದೆ. ಆದರೆ ಮತದಾನ ಬದಲಾಗಿಲ್ಲ. ಆದರೆ ಇದರಲ್ಲಿ ಕೆಲ ಕಪ್ಪು ಚುಕ್ಕೆಗಳಿವೆ. 1975ರ ತುರ್ತು ಪರಿಸ್ಥಿತಿ ಹೇರಿದ ಘಟನೆ ಕಪ್ಪು ಚುಕ್ಕೆಯಾಗಿದೆ. 

ಸ್ವಾತಂತ್ರ್ಯ ಸಿಕ್ಕ ಸಂದರ್ಬದಲ್ಲಿ ಐವರಲ್ಲಿ ನಾಲ್ಕು ಮಂದ ಅನಕ್ಷರಸ್ಥರಾಗಿದ್ದರು. ಶೇಕಡಾ 12ರಷ್ಟು ಸಾಕ್ಷರತೆ ಹೊಂದಿದ್ದ ಭಾರತದಲ್ಲಿ ಇದೀಗ ಸಾಕ್ಷರತೆ ಪ್ರಮಾಣ ಶೇಕಡಾ 77.7. ಶಿಕ್ಷಣ ಮೂಲಭೂತ ಹಕ್ಕಾಗಿದೆ. ಭಾರತದ ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಶಿಕ್ಷಣ ಸಂಸ್ಥೆಗಳಿವೆ. 
 

Follow Us:
Download App:
  • android
  • ios