Asianet Suvarna News Asianet Suvarna News

ಮೊದಲ ಭಾಷಣದಲ್ಲಿ ಕುವೆಂಪು ನವ ಭಾರತ ಲೀಲೆ ಕವನ ಉಲ್ಲೇಖಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿ ಚೊಚ್ಚಲ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ದ್ರೌಪದಿ ಮುರ್ಮು ರಾಷ್ಟ್ರಕವಿ ಕುವೆಂಪು ಅವರ ನಾನಳಿವೆ ನಿನಳಿವೆ ಕವನದ ಸಾಲುಗಳನ್ನು ಹೇಳಿ ಜೊತೆಗೆ ಅರ್ಥವನ್ನೂ ತಿಳಿಸಿದ್ದಾರೆ. ರಾಷ್ಟ್ರಪತಿಯ ಭಾಷಣದಲ್ಲಿನ ಕನ್ನಡ ಮಾತು ಇಲ್ಲಿದೆ.

President Droupadi Murmu mention kannada poet kuvempu poem on his independence day address to nation ckm
Author
Bengaluru, First Published Aug 14, 2022, 7:39 PM IST

ನವದೆಹಲಿ(ಆ.14): ಭಾರತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಇದರ ಹಿನ್ನಲೆಯಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿ ತಮ್ಮ ಮೊದಲ ಭಾಷಣ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ತ್ಯಾಗ ಬಲಿದಾನ, ಇಂದಿನ ಭಾರತದ ಸಾಧನೆ ಕುರಿತು ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ಕನ್ನಡದ ರಾಷ್ಟ್ರಕವಿ ಕುವೆಂಪು ಅವರ ನವ ಭಾರತ ಲೀಲೆ ಕವನದ ಸಾಲುಗಳನ್ನು ಕನ್ನಡದಲ್ಲೇ ಹೇಳಿದ್ದಾರೆ. ಈ ಮೂಲಕ ಕನ್ನಡಿಗರಲ್ಲಿ ರೋಮಾಂಚನ ತರಿಸಿದ್ದಾರೆ. ಶ್ರೇಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರೀಕ ತನ್ನ ಕೈಲಾದ ಕೊಡುಗೆ ನೀಡಬೇಕು. ಎಲ್ಲರು ಜೊತೆಗೂಡಿದರೆ ನವಭಾರತ ನಿರ್ಮಾಣವಾಗಲಿದೆ ಎಂದಿದ್ದಾರೆ. ನವ ಭಾರತ ನಿರ್ಮಾಣದ ಕುರಿತು ಹೇಳುವ ವೇಳೆ ದ್ರೌಪದಿ ಮುರ್ಮು ಕನ್ನಡದ ಶ್ರೇಷ್ಠ ಹಾಗೂ ರಾಷ್ಟ್ರಕವಿ ಕುವೆಂಪು ಅವರ ನಾನಳಿವೆ ನಿನಳಿವೆ ನಮ್ಮೆಲುವುಗಳ ಮೇಲೆ ಮೂಡುವುದು ಮೂಡುವುದು ನವ ಭಾರತ ಲೀಲೆ ಕವನವನ್ನು ಕನ್ನಡದಲ್ಲೇ ಉಲ್ಲೇಖಿಸಿದ್ದಾರೆ ಬಳಿಕ ಇದರ ಅರ್ಥವನ್ನು ಹೇಳಿದ್ದಾರೆ. ದ್ರೌಪದಿ ಮುರ್ಮು ತಮ್ಮ ಮೊದಲ ಭಾಷಣದಲ್ಲಿ ಕನ್ನಡ ಕವಿ ಹಾಗೂ ಕನ್ನಡ ಕವನದ ಸಾಲುಗಳನ್ನು ಹೇಳಿರುವುದು ಕನ್ನಡಿಗರ ಸಂತಸ ಇಮ್ಮಡಿಗೊಳಿಸಿದೆ.

 

 

ರಾಷ್ಟ್ರಕವಿ ಕುವೆಂಪು ಅವರು ಸ್ವಾತಂತ್ರ್ಯ ಹೋರಾಟದ ಕುರಿತು ರಚಿಸಿದ ಕವನ ಇದಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾನು ಅಳಿಯುತ್ತೇನೆ, ನೀನು ಅಳಿಸಿ ಹೋಗುತ್ತಿಯಾ. ಆದರೆ ನಾವು ಪಡೆದ ಗೆಲುವು ಹೊಸ ಭಾರತ ನಿರ್ಮಿಸಲಿದೆ. ನಮ್ಮ ಹೋರಾಟದಿಂದ ಭಾರತದ ಅಸ್ಥಿತ್ವ ಇರಲಿದೆ ಎಂದು ಕುವೆಂಪು ಅರ್ಥಪೂರ್ಣವಾಗಿ ನಾನಳಿವೆ ನಿನಳಿವೆ ನಮ್ಮೆಲುವುಗಳ ಮೇಲೆ ಮೂಡುವುದು ಮೂಡುವುದು ನವ ಭಾರತ ಲೀಲೆ ಕವನದಲ್ಲಿ ಹೇಳಿದ್ದಾರೆ. ದೇಶಕ್ಕಾಗಿ ಕೊಡುಗೆ ನೀಡುವುದು, ದೇಶಕ್ಕಾಗಿ ಜೀವವನ್ನೇ ಮುಡಿಪಾಗಿಡುವುದು ನಮ್ಮ ಆದರ್ಶವಾಗಬೇಕು ಎಂಬುದನ್ನು ಕುವೆಂಪು ಸೂಚ್ಯವಾಗಿ ಹೇಳಿದ್ದಾರೆ. ಈ ಕುವೆಂಪಪು ಸಾಲಿನ ಅರ್ಥವನ್ನೂ ದ್ರೌಪದಿ ಮುರ್ಮು ತಮ್ಮಭಾಷಣದಲ್ಲಿ ಹೇಳಿದ್ದಾರೆ.

ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಪ್ರಧಾನಿ ಮೋದಿ ಸಂತಸ!

ಕುವೆಂಪು ಕವನದ ಸಾಲುಗಳನ್ನು ಉಲ್ಲೇಖಿಸಿದ ದ್ರೌಪದಿ ಮುರ್ಮು ಬಳಿಕ ಭಾರತೀಯ ಯುವ ಸಮೂಹಕ್ಕೆ ಮಹತ್ವದ ಕರೆ ನೀಡಿದ್ದಾರೆ. ಹೊಸ ಭಾರತ ನಿರ್ಮಾಣಕ್ಕೆ ಕೈಜೋಡಿರುವಂತೆ ಕರೆ ನೀಡಿದ್ದಾರೆ. ಇದೇ ವೇಳೆ ಭಾರತ ನದಿ, ಬೆಟ್ಟ ಗಡ್ಡ, ಬಯಲು, ಕಾಡು, ಕೃಷಿ ಸೇರಿದಂತೆ ಪ್ರಾಕೃತಿ ಸೌಂದರ್ಯದಿಂದ ಕೂಡಿದ ದೇಶವಾಗಿದೆ. ಈ ಸಂಪತ್‌ಭರಿತ ದೇಶವನ್ನು ಮುಂದಿನ ಪೀಳಿಗೆ ನೀಡುವ ಅತೀ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.

ಭಾರತೀಯ ಕ್ರೀಡಾಪಡುಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗರಿಮೆ ಹೆಚ್ಚಿಸಿದ್ದಾರೆ. ಪದಕಗಳನ್ನು ಗಳಿಸುವ ಮೂಲಕ ಭಾರತದ ಕೀರ್ತಿಯನ್ನು ಪಸರಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಅತ್ಯುತ್ತಮ ಸಾಧನೆಯೊಂದಿಗೆ ಮುನ್ನುಗ್ಗುತ್ತಿದೆ. ಇನ್ನು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೂಲಕ ಮುನ್ನುಗ್ಗುತ್ತಿದ್ದಾರೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ. 
 

Follow Us:
Download App:
  • android
  • ios