ಕೊರೋನಾ ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ದಕ್ಷಿಣ ಕೊರಿಯಾ!

* ಕೊರೋನಾ ಕಾಲದಲ್ಲಿ ಭಾರತದ ನೆರವಿಗೆ ಬಂದ ವಿವಿಧ ರಾಷ್ಟ್ರಗಳು

* ಭಾರತಕ್ಕೆ ಕೊರಿಯಾದಿಂದ ಹರಿದು ಬಂದ ನೆರವು

* ವೈದ್ಯಕೀಯ ಸಲಕರಣೆ ಕಳುಹಿಸಿಕೊಟ್ಟ ಕೊರಿಯಾ ಸರ್ಕಾರ

India Fights Corona Medical supplies from the Korean government arrived at IGI Airport pod

ನವದೆಹಲಿ(ಮೇ.10): ಕೊರೋನಾ ಎರಡನೇ ಅಲೆ ಭಾರತವನ್ನು ತೀವ್ರವಾಗಿ ಕಾಡಿದೆ. ಇದರ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದ್ದರೂ ಸೋಂಕು ಕಡಿಮೆಯಾಗಿಲ್ಲ. ಈ ನಡುವೆ ದೇಶಾದ್ಯಂತ ಆಕ್ಸಿಜನ್, ವೆಂಟಿಲೇಟರ್, ಔಷಧಿ ಹೀಗೆ ಆರೋಗ್ಯ ಸೌಲಭ್ಯಗಳ ಕೊರತೆಯೂ ತೀವ್ರ ಪ್ರಮಾಣದಲ್ಲಿ ಕಂಡು ಬಂದಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಮೆರಿಕ, ಬ್ರೆಜಿಲ್, ರಷ್ಯಾ, ಜಪಾನ್ ಹೀಗೆ ವಿಶ್ವದ ನಾನಾ ರಾಷ್ಟ್ರಗಳು ಭಾರತ ನೆರವಿಗೆ ಧಾವಿಸಿದ್ದವು. ಸದ್ಯ ದಕ್ಷಿಣ ಕೊರಿಯಾ ದೇಶ ಈ ಪಟ್ಟಿಗೆ ಸೇರ್ಪಪಡೆಯಾಗಿದೆ.

ಭಾರತದ ಕೊರೋನಾ ನಿಯಂತ್ರಣಕ್ಕೆ US ಮೆಡಿಕಲ್ ಮಹತ್ವದ ಸಲಹೆ!

ಹೌದು ಕೊರೋನಾ ಬಿಕ್ಕಟ್ಟಿನ ಮಧ್ಯೆ ಕೊರಿಯನ್ ಸರ್ಕಾರ ಭಾರತದೆಡೆ ಸಹಾಯಹಸ್ತ ಚಾಚಿದೆ. ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಸರಬರಾಜು ಮಾಡಿರುವ ಕೊರಿಯನ್ ಸರ್ಕಾರ ಈ ಮೂಲಕ ಕೊರೋನಾ ಹೋರಾಟದಲ್ಲಿ ಭಾರತಕ್ಕೆ ಧೈರ್ಯ ತುಂಬಿದೆ. 

ಹಾಗಾದ್ರೆ ಈ ರಾಷ್ಟ್ರ ಕಳುಹಿಸಿಕೊಟ್ಟ ಸಹಾಯವೇನು? ಏನೇನಿದೆ? 

* 230 ಆಮ್ಲಜನಕ ಸಾಂದ್ರಕಗಳು

* 200 ರೆಗ್ಯುಲೇಟರ್‌ಗಳಿರುವ ಆಕ್ಸಿಜನ್ ಸಿಲಿಂಡರ್‌ಗಳು

* 100 ನೆಗೆಟಿವ್ ಪ್ರಷರ್ ಐಸೋಲೇಷನ್ ಸ್ಟ್ರೆಚರ್ಸ್

ಕೊರೋನಾ ಅಟ್ಟಹಾಸ : ಭಾರತದ ನೆರವಿಗೆ ನಿಂತ 40 ದೇಶಗಳು!

ಇವಿಷ್ಟು ವೈದ್ಯಕೀಯ ಸಲಕರಣೆಗಳನ್ನು ಹೊತ್ತ ಎರಡು ವಿಮಾನಗಳು ಮೇ 9(ಭಾನುವಾರ) ಹಾಗೂ 12ರಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿವೆ. ನಿನ್ನೆ ಸಂಜೆ ಸುಮಾರು 04.30ಕ್ಕೆ ಮೊದಲ ವಿಮಾನ ತಲುಪಿದೆ. ಇನ್ನು ಇದರಲ್ಲಿ ಬಂದ ವೈದ್ಯಕೀಯ ಸರಕುಗಳನ್ನು ಇಂಡಿಯನ್ ರೆಡ್‌ ಕ್ರಾಸ್‌ ಸೊಸೈಟಿಗೆ ರವಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ಕೊರಿಯನ್ ಸರ್ಕಾರ ಇನ್ನೂ ಇಂತಹ ವೈದ್ಯಕೀಯ ಸಹಾಯವನ್ನು ನೀಡುವ ಭರವಸೆ ನೀಡಿದೆ. ವಿಮಾನಗಳ ಲಭ್ಯತೆ ಗಮನಿಸಿ ಈ ಸಹಾಯ ಕಳುಹಿಸುವುದಾಗಿ ತಿಳಿಸಿದೆ.

"

ಇನ್ನು ದಕ್ಷಿಣ ಕೊರಿಯಾದ ಭಾರತದ ರಾಯಭಾರಿ ಎಚ್.ಇ. ಶಿನ್ ಬೊಂಗ್ಕಿಲ್ ಈ ವೈದ್ಯಕೀಯ ಸವಲತ್ತುಗಳು ತಲುಪಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದು, 'ಕೊರೋನಾದಿಮದಾಗಿ ಭಾರತದಲ್ಲಿ ನಿರ್ಮಾಣವಾಗಿರುವ ತುರ್ತು ಪರಿಸ್ಥಿತಿ ಎದುರಿಸಲು ಈ ವೈದ್ಯಕೀಯ ಸಲಕರಣೆಗಳಿಂದ ಸಹಾಯ ಆಗಲಿದೆ. ಕೊರಿಯನ್ ಸರ್ಕಾರ ಕೊರೋನಾ ಎದುರಿಸಲು ಭಾರತ ಸರ್ಕಾರದ ಜೊತೆ ನಿಕಟವಾಗಿ ಕಾರ್ಯ ನಿರ್ವಹಿಸಲಿದೆ' ಎಂದಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios