Asianet Suvarna News Asianet Suvarna News

ಭಾರತದ ಕೊರೋನಾ ನಿಯಂತ್ರಣಕ್ಕೆ US ಮೆಡಿಕಲ್ ಮಹತ್ವದ ಸಲಹೆ!

ಕೊರೋನಾ ವೈರಸ್ ಭಾರತದಲ್ಲಿ ಎಬ್ಬಿಸಿರುವ ಸುಂಟರಗಾಳಿಗೆ ಸಂಪೂರ್ಣ ವ್ಯವಸ್ಥೆ ಬುಡಮೇಲಾಗಿದೆ. ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದೀಗ ಅಮೆರಿಕ ಮೆಡಿಕಲ್ ಸಲಹೆಗಾರ ಭಾರತದ ಕೊರೋನಾ ನಿಯಂತ್ರಣಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. 

America medical advisers suggest few weeks lockdown help India to control covid 19 ckm
Author
Bengaluru, First Published May 1, 2021, 3:01 PM IST

ನವದೆಹಲಿ(ಮೇ.01): ಕೊರೋನಾ ವೈರಸ್ 2ನೇ ಅಲೆ ನಿಯಂತ್ರಿಸಲು ಭಾರತ ಸರ್ಕಾರ ಎಲ್ಲಾ ಪ್ರಯತ್ನಗಳು ಮಾಡುತ್ತಿದೆ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆಸ್ಪತ್ರೆ, ಬೆಡ್, ಆಕ್ಸಿಜನ್, ವೆಂಟಿಲೇಟರ್, ಲಸಿಕೆ, ಔಷಧಿ ಸೇರಿದಂತೆ ಹಲವು ಕೊರತೆಗಳು ತೀವ್ರವಾಗಿ ಕಾಡುತ್ತಿದೆ. ತಕ್ಷಣವೇ ಕೊರೋನಾ ಅಲೆ ನಿಯಂತ್ರಿಸಲು ಅಮೆರಿಕ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆ್ಯಂಥೋನಿ ಫೌಸಿ ಸಂಪೂರ್ಣ ಲಾಕ್‌ಡೌನ್ ಸಲಹೆ ನೀಡಿದ್ದಾರೆ.

"

ಗುಣಮುಖರಾದರೂ ಆಕ್ಸಿಜನ್ ಸಿಲಿಂಡರ್‌ ಮರಳಿಸುತ್ತಿಲ್ಲ ಜನ!.

ಭಾರತದಲ್ಲಿ ತಕ್ಷಣ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಪೂರ್ಣ ಲಾಕ್‌ಡೌನ್ ಅನಿವಾರ್ಯವಾಗಿದೆ. ಕೆಲ ವಾರಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಬೇಕು. ಇದರಿಂದ ಸೋಂಕು ಹರಡುವ ವೇಗವವನ್ನು ತಕ್ಷಣವೇ ಕಡಿಮೆ ಮಾಡಬಹುದು ಎಂದು ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರ ವೈದ್ಯಕೀಯ ಸಲಹೆಗಾರ ಆ್ಯಂಥೋನಿ ಫೌಸಿ ಸಲಹೆ ನೀಡಿದ್ದಾರೆ.

ಭಾರತದ ಇಂಗ್ಲೀಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಫೌಸಿ ಈ ಮಹತ್ವದ ಸಲಹೆ ನೀಡಿದ್ದಾರೆ. ಮೊದಲ ಕೊರೋನಾ ವೈರಸ್ ಅಲೆಗೆ ಭಾರತ ಲೌಕ್‌ಡೌನ್ ಮಾಡೋ ಮೂಲಕ ಆರಂಭದಲ್ಲೇ ವೈರಸ್ ಹರಡುವುದನ್ನು ತಡೆಯಲಾಗಿತ್ತು. ಹೀಗಾಗಿ ಸೋಂಕಿತರ ಚಿಕಿತ್ಸೆ ಸೇರಿದಂತೆ ಯಾವ ಸಮಸ್ಯೆಯೂ ಭಾರತಕ್ಕೆ ಎದುರಾಗಿರಲಿಲ್ಲ. ಆದರೆ 2ನೇ ಅಲೆ ಈಗಾಗಲೇ ದೇಶದೆಲ್ಲೆಡೆ ಪಸರಿಸುತ್ತಿದೆ. ಮತ್ತಷ್ಟು ಆವಾಂತರಗಳನ್ನು  ಮಾಡುವ ಮುನ್ನ ಲಾಕ್‌ಡೌನ್ ಅನಿವಾರ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.

ಕೇಂದ್ರದಿಂದ ರಾಜ್ಯಗಳಿಗೆ 8873 ಕೋಟಿ SDRF ರಿಲೀಫ್ ಫಂಡ್

ದೇಶದಲ್ಲಿನ ಆಕ್ಸಿಜನ್ ಸಮಸ್ಯೆ ಬಗೆ ಹರಿಸುವುದು. ಔಷಧಿ, ಲಸಿಕೆ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲೂ ಕೆಲ ವಾರಗಳ ಲಾಕ್‌ಡೌನ್ ಅನಿವಾರ್ಯವಾಗಿದೆ ಎಂದ ಆ್ಯಂಥೋನಿ ಹೇಳಿದ್ದಾರೆ.

Follow Us:
Download App:
  • android
  • ios