ದೇಶದಲ್ಲಿ 5,00,000 ಕೇಸ್‌: ಐದೇ ದಿನದಲ್ಲಿ 4ರಿಂದ 5 ಲಕ್ಷಕ್ಕೇರಿದ ಸೋಂಕಿತರು!

ದೇಶದಲ್ಲಿ 500000 ಕೇಸ್‌!| ಕೇವಲ 5 ದಿನಗಳಲ್ಲಿ 4ರಿಂದ 5 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ| ನಿನ್ನೆ ಒಂದೇ ದಿನ 18661 ಹೊಸ ಪ್ರಕರಣ, 380 ಮಂದಿ ಸಾವು|

India Crosses 5 Lakh Coronavirus Cases jump of 1 lakh in 6 days

ನವದೆಹಲಿ(ಜೂ.27): ಭಾರೀ ಅನಾಹುತ ಸೃಷ್ಟಿಸುತ್ತಿರುವ ಕೊರೋನಾ ಸೋಂಕು ಶುಕ್ರವಾರ ಮತ್ತೆ 18661 ಜನರಿಗೆ ವ್ಯಾಪಿಸಿದೆ. ಇದರೊಂದಿಗೆ ಜ.30ರಂದು ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಸೋಂಕು ಇದೀಗ, 5 ಲಕ್ಷದ ಗಡಿ ದಾಟಿದೆ. ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳ ಕೊರೋನಾ ಸೋಂಕಿನ ಆಗುಹೋಗುಗಳ ಮಾಹಿತಿ ಇಡುವ ವಲ್ಡೋರ್‍ಮೀಟರ್‌ ಅನ್ವಯ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5.01 ಲಕ್ಷಕ್ಕೆ ತಲುಪಿದೆ. ಈ ಪೈಕಿ ಜೂನ್‌ 1ರಿಂದ ಜೂ.26ರವರೆಗೆ 3 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಅಂದರೆ ಒಟ್ಟು ಪ್ರಕರಣದಲ್ಲಿ ಶೇ.60ರಷ್ಟುಪಾಲು ಜೂನ್‌ ತಿಂಗಳೊಂದರಲ್ಲೇ ದಾಖಲಾಗಿದೆ.

ಇದೀಗ ಸಾಗುತ್ತಿರುವ ವೇಗದಲ್ಲೇ ಸಾಗಿದರೆ ಹಾಲಿ ವಿಶ್ವದಲ್ಲಿ 4ನೇ ಸ್ಥಾನದಲ್ಲಿರುವ ಭಾರತ, ಇನ್ನು 10 ದಿನದಲ್ಲಿ ರಷ್ಯಾವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಪ್ರಸಕ್ತ ಅಮೆರಿಕ ನಂ.1 (25 ಲಕ್ಷ ಸೋಂಕಿತರು), ಬ್ರೆಜಿಲ್‌ ನಂ. 2 ( 12.33 ಲಕ್ಷ) ಮತ್ತು ರಷ್ಯಾ 3ನೇ (6.13 ಲಕ್ಷ ) ಸ್ಥಾನದಲ್ಲಿದೆ.

ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಕೊರೋನ ಸೋಂಕು!

ಹೈಜಂಪ್‌:

ಶುಕ್ರವಾರ ಮಹಾರಾಷ್ಟ್ರದಲ್ಲಿ 5,024 ಸೋಂಕು, ತಮಿಳುನಾಡಿನಲ್ಲಿ 3645, ದೆಹಲಿಯಲ್ಲಿ 3460 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ 175 ಮಂದಿ, ದಿಲ್ಲಿ 63, ತಮಿಳುನಾಡಿನಲ್ಲಿ 43, ಗುಜರಾತ್‌ನಲ್ಲಿ 18, ಹರಾರ‍ಯಣದಲ್ಲಿ 13 ಮಂದಿ ಬಲಿಯಾಗುವುದರೊಂದಿಗೆ ಶುಕ್ರವಾರ ದೇಶದ ವಿವಿಧ ರಾಜ್ಯಗಳಲ್ಲಿ 380 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಈವರೆಗೆ ಬಲಿಯಾದವರ ಸಂಖ್ಯೆ 15674ಕ್ಕೆ ತಲುಪಿದೆ. ಇನ್ನು ಒಟ್ಟು ಸೋಂಕಿತರ ಪೈಕಿ ಈವರೆಗೆ 2,85,637 ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಕೊರೋನಾ ವೈರಸ್ ದೃಢಪಟ್ಟ ಬೆನ್ನಲ್ಲೇ 17 ಮಾರುತಿ ಸುಜುಕಿ ನೌಕರರು ನಾಪತ್ತೆ!

ದಿಲ್ಲಿ, ಚೆನ್ನೈ, ಠಾಣೆ, ಪಾಲ್ಘಾರ್‌, ಪುಣೆ, ಹೈದರಾಬಾದ್‌, ರಂಗರೆಡ್ಡಿ, ಅಹಮದಾಬಾದ್‌ ಮತ್ತು ಫರಿದಾಬಾದ್‌ ಸೇರಿ 10 ನಗರಗಳಲ್ಲಿ ಶೇ.54.47ರಷ್ಟುಸೋಂಕು ಪ್ರಕರಣಗಳು ದಾಖಲಾಗಿವೆ.

Latest Videos
Follow Us:
Download App:
  • android
  • ios