Asianet Suvarna News Asianet Suvarna News

ಲಸಿಕೆ ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು; 75 ಕೋಟಿ ಡೋಸ್ ದಾಟಿದ ಭಾರತ!

  • ಕೋವಿಡ್ ವಿರುದ್ಧ ಭಾರತದ ಶಕ್ತ ಹೋರಾಟ 
  • 75 ಕೋಟಿ ದಾಟಿತು ಭಾರತದ ಲಸಿಕಾ ಅಭಿಯಾನ
  • ಭಾರತದ ಸಾಧನೆಗೆ ಎಲ್ಲೆಡೆಗಳಿಂದ ಶುಭಾಶಯ
India crossed landmark of administering 75 crore Covid vaccine doses WHO Congratulate ckm
Author
Bengaluru, First Published Sep 13, 2021, 9:11 PM IST

ನವದೆಹಲಿ(ಸೆ.13): ಕೊರೋನಾ ವಿರುದ್ಧ ಭಾರತದ ಹೋರಾಟ ಮುಂದುವರಿದಿದೆ. ಲಸಿಕೆ ಮೂಲಕ ಕೊರೋನಾ ನಿಯಂತ್ರಣಕ್ಕೆ ಪಣತೊಟ್ಟಿರುವ ಭಾರತ, ಮಿಂಚಿನ ವೇಗದಲ್ಲಿ ಲಸಿಕೆ ನೀಡುತ್ತಿದೆ. ಇದೀಗ ಲಸಿಕಾ ಅಭಿಯಾನದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ದಾಟಿದೆ. 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಭಾರತ ಇದೀಗ 75 ಕೋಟಿ ಡೋಸ್ ದಾಟಿದ ಸಾಧನೆ ಮಾಡಿದೆ.

ದೇಶದ 6 ರಾಜ್ಯಗಳ ಎಲ್ಲಾ ಪ್ರಜೆಗಳಿಗೆ ಮೊದಲ ಡೋಸ್‌!

ಜನವರಿ 16 ರಿಂದ ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ ಆರಭಿಸಿದೆ. ಜೂನ್ ತಿಂಗಳಲ್ಲಿ ಲಸಿಕಾ ಅಭಿಯಾನಕ್ಕೆ ಹೊಸ ರೂಪ ಹಾಗೂ ಮತ್ತಷ್ಟು ವೇಗ ನೀಡಲಾಗಿದೆ. ಪರಿಣಾಮ ದೇಶದ ಲಸಿಕೆ ನೀಡುವಿಕೆ ಪ್ರತಿ ದಿನ ದಾಖಲೆ ಬರೆಯುತ್ತಿದೆ. ಇದೀಗ 75 ಕೋಟಿ ಡೋಸ್ ದಾಟುವ ಮೂಲಕ ಭಾರತ ತನ್ನ ಗುರಿಯನ್ನು ನಿಗದಿತ ಸಮಯಕ್ಕಿಂತ ಮೊದಲೇ ತಲುಪುತ್ತಿದೆ.

 

ಕೇಂದ್ರ ಸರ್ಕಾರದ ಕೋವಿನ್ ವರದಿ ಪ್ರಕಾರ 75,02,84569 ಡೋಸ್ ಹಾಕಲಾಗಿದೆ.  ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಸಂತಸ ಹಂಚಿಕೊಂಡಿದ್ದಾರೆ. ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನ ಎಲ್ಲರ ಜೊತೆ, ಎಲ್ಲರ ಪ್ರಯತ್ನದೊಂದಿಗೆ ಹೊಸ ದಾಖಲೆ ಸೃಷ್ಟಿಸುತ್ತಿದೆ ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ to ಯುಪಿ; ರಾಜ್ಯಗಳ ಲಸಿಕೆ ಅಭಿಯಾನ ಇತರ ರಾಷ್ಟ್ರಗಳಿಗಿಂತ ವೇಗ!

ಭಾರತದ ಈ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಭಾರತ ಆರಂಭಿಕ 100 ಮಿಲಿಯನ್ ಡೋಸ್‌ಗೆ 83 ದಿನ ತೆಗೆದುಕೊಂಡಿತ್ತು. ಆಧರೆ 650 ಮಿಲಿಯನ್ ಡೋಸ್‌ನಿಂದ 750 ಮಿಲಿಯನ್ ಡೋಸ್‌ ತಲುಪಲು ಕೇವಲ 13 ದಿನ ತೆಗೆದುಕೊಂಡಿದೆ. ಭಾರತದ ಸಾಧನೆಗೆ ಅಭಿನಂದನೆಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್ ಸಿಂಗ್ ಹೇಳಿದರು.

 

ಇದೀಗ ಭಾರತದ ಸಾಧನೆಗೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವರು 75 ಕೋಟಿ ಮೈಲಿಗಲ್ಲಿಗೆ ಆರೋಗ್ಯ ಕಾರ್ಯಕರ್ತರು ಹಾಗೂ ಲಸಿಕೆ ಹಾಕಿಸಿಕೊಂಡ ಪ್ರಜೆಗಳನ್ನು ಅಭಿನಂದಿಸಿದ್ದಾರೆ.

Follow Us:
Download App:
  • android
  • ios