ದೇಶದಲ್ಲಿ ಭರದಿಂದ ಸಾಗಿದ ಕೊರೋನಾ ಲಸಿಕೆ ಅಭಿಯಾನದೇಶದ 6 ರಾಜ್ಯಗಳ ಎಲ್ಲಾ ಪ್ರಜೆಗಳಿಗೆ ಮೊದಲ ಡೋಸ್‌

ನವದೆಹಲಿ(ಸೆ.13): ದೇಶದ 6 ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ಪಡೆಯಲು ಅರ್ಹರಾದ ಶೇ.100ರಷ್ಟುಮಂದಿಗೆ ಮೊದಲ ಡೋಸ್‌ ನೀಡಿಕೆ ಪೂರ್ಣವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹಿಮಾಚಲ ಪ್ರದೇಶ(55.74 ಲಕ್ಷ) ಸಿಕ್ಕಿಂ(5.10 ಲಕ್ಷ), ಗೋವಾ(11.83 ಲಕ್ಷ) ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್‌ ಹವೇಲಿ(6.26 ಲಕ್ಷ), ಲಡಾಖ್‌(1.97 ಲಕ್ಷ) ಮತ್ತು ಲಕ್ಷದ್ವೀಪ(53,499) ಸೇರಿದಂತೆ 6 ರಾಜ್ಯಗಳಲ್ಲಿ ಪ್ರತಿಯೊಬ್ಬ ನಾಗರಿಕ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ.

ಇಂದು 75 ಕೋಟಿ ಲಸಿಕೆ ಮೈಲುಗಲ್ಲು

ನವದೆಹಲಿ: ದೇಶದಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಭಾನುವಾರ 74 ಕೋಟಿ ಗಡಿಯನ್ನು ದಾಟಿದೆ. ಕೋವಿನ್‌ ಪೋರ್ಟಲ್‌ನ ಪ್ರಕಾರ ಭಾನುವಾರ ರಾತ್ರಿ 8 ಗಂಟೆಯವರೆಗೆ ಸುಮಾರು 50.25 ಲಕ್ಷ ಡೋಸ್‌ಗಳನ್ನು ವಿತರಿಸಲಾಗಿದೆ. ಹೀಗಾಗಿ ಸೋಮವಾರ ಲಸಿಕೆ ವಿತರಣೆಯಲ್ಲಿ 75 ಕೋಟಿ ಮೈಲುಗಲ್ಲು ದಾಟುವುದು ಖಚಿತವಾಗಿದೆ. 2021ರ ಜ.16ರಂದು ದೇಶದಲ್ಲಿ ಲಸಿಕೆ ನೀಡಿಕೆ ಆರಂಭವಾಗಿತ್ತು.