Asianet Suvarna News Asianet Suvarna News

ಕರ್ನಾಟಕ to ಯುಪಿ; ರಾಜ್ಯಗಳ ಲಸಿಕೆ ಅಭಿಯಾನ ಇತರ ರಾಷ್ಟ್ರಗಳಿಗಿಂತ ವೇಗ!

  • ಕರ್ನಾಟಕ, ಉತ್ತರ ಪ್ರದೇಶ ಸೇರಿ ರಾಜ್ಯಗಳಲ್ಲಿ ಮಿಂಚಿನ ಲಸಿಕೆ ಅಭಿಯಾನ
  • ಭಾರತದ ರಾಜ್ಯಗಳಿಗೆ ಹೋಲಿಸಿದರೆ ಇತರ ರಾಷ್ಟ್ರಗಳು ಅಭಿಯಾನದಲ್ಲಿ ಹಿಂದೆ
  • ಜನಸಂಖ್ಯೆ ಆಧಾರದಲ್ಲಿ ಇತರ ರಾಷ್ಟ್ರಗಳಿಗೆ ಹೋಲಿಕೆ, ಇಲ್ಲಿದೆ ಅಂಕಿ ಅಂಶ
     
Indian states covid vaccination faster than foreign nations pace stats reveals ckm
Author
Bengaluru, First Published Sep 10, 2021, 5:53 PM IST

ನವದೆಹಲಿ(ಸೆ.10): ಕೊರೋನಾ ವೈರಸ್ ವಿರುದ್ಧ ಭಾರತ ಶಕ್ತವಾಗಿ ಹೋರಾಡುತ್ತಿದೆ. ಇದಕ್ಕೆ ಕಾರಣ ಜನವರಿಯಿಂದ ಭಾರತ ದೇಶದಲ್ಲಿ ಲಸಿಕೆ ಅಭಿಯಾನ ಆರಂಭಿಸಿದೆ. ಇದರ ಜೊತೆಗೆ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯ ಹೆಚ್ಚಿಸಿದೆ. ವೈದ್ಯಕೀಯ ಸೌಲಭ್ಯ ಹಾಗೂ ಸಲಕರಣೆಗಳು ಹಾಗೂ ಸೇವೆಯನ್ನು ಮೇಲ್ದರ್ಜೆಗೆ ಏರಿಸಿದೆ. ಭಾರತ ಲಸಿಕಾ ಅಭಿಯಾನದಲ್ಲಿ ದಾಖಲೆ ಬರೆದಿದೆ.ಭಾರತದಲ್ಲಿನ ರಾಜ್ಯಗಳ ಲಸಿಕೆ ಅಭಿಯಾನ ವಿದೇಶಕ್ಕಿಂತ ಮುಂದಿದೆ.

ನಿತ್ಯ ದಾಖ​ಲೆಯ 1.25 ಕೋಟಿ ಡೋಸ್‌ ಲಸಿ​ಕೆ ನೀಡಿ​ಕೆ: ಮೋದಿ

ಭಾರತ ಲಸಿಕೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದೆ. ಇದರಿಂದ ಈಗಾಗಲೇ 71 ಕೋಟಿಗೂ ಅಧಿಕ ಡೋಸ್ ಹಾಕಲಲಾಗಿದೆ. ಇದರಲ್ಲಿ ರಾಜ್ಯಗಳು ಪ್ರತಿ ದಿನ ದಾಖಲೆ ಪ್ರಮಾಣದಲ್ಲಿ ಲಸಿಕೆ ವಿತರಣೆ ಮಾಡುತ್ತಿದೆ. ರಾಜ್ಯಗಳು ಪ್ರತಿ ದಿನ ನೀಡುವ ಲಸಿಕೆ ಪ್ರಮಾಣ ಇತರ ರಾಷ್ಟ್ರಗಳ ಪ್ರತಿ ದಿನದ ಲಸಿಕೆ ಅಭಿಯಾನಕ್ಕಿಂತ ಹೆಚ್ಚಿದೆ.

Indian states covid vaccination faster than foreign nations pace stats reveals ckm

ಸರಿಸುಮಾರು ಹೋಲಿಕೆಯಾಗುವ ಜನಸಂಖ್ಯೆ ಅಧಾರದಲ್ಲಿ ಭಾರತದ ರಾಜ್ಯಗಳು ಹಾಗೂ ಇತರ ರಾಷ್ಟ್ರಗಳ ಹೋಲಿಕೆ ಮಾಡಲಾಗಿದೆ. ಈ ಅಂಕಿ ಅಂಶದಲ್ಲಿ ಉತ್ತರ ಪ್ರದೇಶ ಪ್ರತಿ ದಿನ ಸರಾಸರಿ 11.73 ಲಕ್ಷ ಡೋಸ್ ನೀಡುತ್ತಿದೆ. ಇನ್ನು ಸರಿಸುಮಾರು ಇಷ್ಟೆ ಜನಂಖ್ಯೆ ಇರುವ ಅಮರಿಕದಲ್ಲಿ ಪ್ರತಿ ದಿನ ನೀಡುವ ಡೋಸ್ ಪ್ರಮಾಣ 8.07 ಲಕ್ಷ.

ಕೋವಿಶೀಲ್ಡ್ 2ನೇ ಡೋಸ್ ಅಂತರವನ್ನು 84 ದಿನದಿಂದ 1 ತಿಂಗಳಿಗೆ ಇಳಿಸಿದ ಕೇರಳ ಹೈಕೋರ್ಟ್!

ಗುಜರಾತ್ ಪ್ರತಿ ದಿನ ಸರಾಸರಿ 4.80 ಲಕ್ಷ ಡೋಸ್ ನೀಡುತ್ತಿದೆ. ಇನ್ನು ಮೆಕ್ಸಿಕೋ ಪ್ರತಿ ದಿನ 4.56 ಲಕ್ಷ ಡೋಸ್ ನೀಡುತ್ತಿದೆ. ಇನ್ನು ಕರ್ನಾಟಕ ಪ್ರತಿ ದಿನ ಸರಾಸರಿ 3.83 ಲಕ್ಷ ಡೋಸ್ ನೀಡುತ್ತಿದೆ. ಇನ್ನು ರಷ್ಯಾ 3.68 ಲಕ್ಷ ಡೋಸ್ ನೀಡುತ್ತಿದೆ. ಮಧ್ಯ ಪ್ರದೇಶ 3.71 ಲಕ್ಷ ಡೋಸ್ ನೀಡಿದರೆ ಫ್ರಾನ್ಸ್ ಪ್ರತಿ ದಿನ ಸರಾಸರಿ 2.84 ಲಕ್ಷ ಡೋಸ್ ಲಸಿಕೆ ನೀಡುತ್ತಿದೆ. ಹರ್ಯಾಣ ಪ್ರತಿ ದಿನ 1.52 ಲಕ್ಷ ಲಸಿಕೆ ನೀಡುತ್ತಿದ್ದರೆ, ಕೆನಡ 82 ಸಾವಿರ ಲಸಿಕೆ ನೀಡುತ್ತಿದೆ.  

ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಪ್ರತಿ ದಿನ ಭಾರತದಲ್ಲಿ ರಾಜ್ಯಗಳು ನೀಡುತ್ತಿರುವ ಲಸಿಕೆ ಪ್ರಮಾಣ ಹೆಚ್ಚಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಇತರ ರಾಷ್ಟ್ರಗಳಿಗಿಂತ ಹೆಚ್ಚಿನ ಮುತುವರ್ಜಿಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಕೊರೋನಾ ಲಸಿಕೆ ಅಂಕಿ ಅಂಶಗಳೇ ಸಾಕ್ಷಿ. 

Follow Us:
Download App:
  • android
  • ios