Asianet Suvarna News Asianet Suvarna News

ನ್ಯಾನೋ ಯೂರಿಯಾ ಉತ್ಪಾದನೆ ಆರಂಭಿಸಿದ ಮೊದಲ ದೇಶ ಭಾರತ, ಡ್ರೋನ್ ಸಿಂಪಡಣೆ ಯಶಸ್ವಿ!

  • ನ್ಯಾನೋ ಯೂರಿಯಾ ಡ್ರೋನ್ ಸಿಂಪಡಣೆ ಪ್ರಯೋಗ ಯಸಸ್ವಿ
  • ನ್ಯಾನೋ ಯೂರಿಯಾ ಉತ್ಪಾದನೆ ಆರಂಭಿಸಿದ ಭಾರತ
  • ಮಹತ್ವದ ಮೈಲಿಗಲ್ಲು ನಿರ್ಮಿಸಿದ IFFCO 
India conducts spraying of nano urea by drone become first country start commercial production of Nano Urea ckm
Author
Bengaluru, First Published Oct 1, 2021, 10:17 PM IST

ನವದೆಹಲಿ(ಅ.01): ಕೃಷಿ ಕ್ಷೇತ್ರದ(Agriculture) ಸುಧಾರಣೆ ಹಾಗೂ ಅಭಿವೃದ್ಧಿಗಾಗಿ ಭಾರತ(India) ಹಲವು ಮಹತ್ವದ ಹೆಜ್ಜೆ ಇಟ್ಟಿದೆ. ತಂತ್ರಜ್ಞಾನ(Technlogy) ಬಳಕೆ ಮೂಲಕ ಕೃಷಿ ಚಟುವಟಿಕೆಯನ್ನು ಸುಲಭ ಹಾಗೂ ಪರಿಣಾಮಕಾರಿಯಾಗಿ ಭಾರತ ಬಳಸುತ್ತಿದೆ. ಇದೀಗ ನ್ಯಾನೂ ದ್ರವ ಯೂರಿಯಾವನ್ನು(nano urea) ಡ್ರೋನ್(Drone) ಮೂಲಕ ಸಿಂಪಡಿಸುವ ಪ್ರಯೋಗದಲ್ಲೂ ಭಾರತ ಯಶಸ್ವಿಯಾಗಿದೆ.

ಇನ್ಮುಂದೆ ಯೂರಿಯಾ ಗೊಬ್ಬರ ಕೊಳ್ಳಲು ಆಧಾರ್‌ ಕಾರ್ಡ್‌, ಪಹಣಿ ಕಡ್ಡಾಯ..!

ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋಆಪರೇಟಿವ್ ಲಿಮಿಟೆಡ್(IFFCO) ಗುಜರಾತ್‌ನ ಬಾವನಗರದಲ್ಲಿ  ನ್ಯಾನೋ ದ್ರವ ಯೂರಿಯಾ ಸಂಪಡಣೆ ಪ್ರಯೋಗ ಮಾಡಲಾಗಿದೆ. ಪ್ರಯೋಗ ಯಶಸ್ವಿಯಾಗಿದ್ದು, ರೈತರ ಕೆಲಸ ಮತ್ತಷ್ಟು ಸುಲಭ ಹಾಗೂ ಉತ್ತಮ ಇಳುವರಿಗೆ ಸಹಕಾರಿಯಾಗಿದೆ ಎಂದು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಮನ್ಸೂಕ್ ಮಾಂಡವಿಯಾ(Mansukh Mandaviya) ಹೇಳಿದ್ದಾರೆ.

 

ಇಫ್ಕೋ ನ್ಯಾನೋ ಯೂರಿಯಾ ಮಾರುಕಟ್ಟೆಗೆ : ಕೃಷಿಯಲ್ಲಿ ಹೊಸ ಕ್ರಾಂತಿ

ಡ್ರೋನ್ ಮೂಲಕ ಯೂರಿಯಾ ಸಿಂಪಡಣೆ ಮಾಡುವುದರಿಂದ ಪ್ರತಿ ಬೆಳೆಗ ಯೂರಿಯಾ ಅಂಶ ಸಿಗಲಿದೆ. ಇದರಿಂದ ಬೆಳೆಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಜೊತೆಗೆ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಿದೆ. ರೈತನ ಅರ್ಧ ಕೆಲಸವೂ ಕಡಿಮೆಯಾಗಲಿದೆ ಎಂದು IFFCO ಅಧ್ಯಯನ ವರದಿ ಹೇಳಿದೆ.

ರಾಜ್ಯಕ್ಕೆ ಬರಲಿದೆ 51000 ಟನ್‌ ಯೂರಿಯಾ: ಸಚಿವ

ಇದೇ ವೇಳೆ ಮಾತನಾಡಿದ ಮಾನ್ಸುಕ್ ಮಾಂಡವಿಯಾ ಭಾರತದ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ನ್ಯಾನೋ ಯೂರಿಯಾದ ವಾಣಿಜ್ಯ ಉತ್ಪಾದನೆ ಆರಂಭಿಸಿದ ವಿಶ್ವದ ಮೊದಲ ದೇಶ ಭಾರತ. ದೊಡ್ಡ ಪ್ರಮಾಣದಲ್ಲಿ ಯೂರಿಯಾ ಉತ್ಪಾದಿಸಲಾಗುತ್ತಿದೆ. ರೈತರು ಕೂಡ ಹೆಚ್ಚು ಗೆಚ್ಚು ನ್ಯಾನೋ ಯೂರಿಯವನ್ನು ಬಳಕೆ ಮಾಡುತ್ತಿದ್ದಾರೆ. ಜೂನ್ ತಿಂಗಲ್ಲಿ ಭಾರತದ ನ್ಯಾನೋ ಯೂರಿಯಾ ವಾಣಿಜ್ಯ ಉತ್ಪಾದನೆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದುವರೆಗೆ 5 ದಶಲಕ್ಷಕ್ಕೂ ಹೆಚ್ಚು ನ್ಯಾನೋ ಯೂರಿಯಾ ಉತ್ಪಾದಿಸಲಾಗಿದೆ. ಸರಾಸರಿ ಲೆಕ್ಕದಲ್ಲಿ ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ನ್ಯಾನೋ ಯೂರಿಯಾ ಬಾಟಲಿ ಉತ್ಪಾದಿಸಲಾಗುತ್ತಿದೆ ಎಂದು ಮನ್ಸುಕ್ ಮಾಂಡವಿಯಾ ಹೇಳಿದ್ದಾರೆ.

ಸುವರ್ಣ ನ್ಯೂಸ್‌ನಿಂದ ಯೂರಿಯಾ ರಸಗೊಬ್ಬರ ದಂಧೆ ರಿಯಾಲಿಟಿ ಚೆಕ್

Follow Us:
Download App:
  • android
  • ios