Asianet Suvarna News Asianet Suvarna News

ರಾಜ್ಯಕ್ಕೆ ಬರಲಿದೆ 51000 ಟನ್‌ ಯೂರಿಯಾ: ಸಚಿವ

ಕರ್ನಾಟಕಕ್ಕೆ 51 ಸಾವಿರ ಟನ್ ಯೂರಿಯಾ ಪೂರೈಕೆಯಾಗಲಿದ್ದು, ಈ ಬಗ್ಗೆ ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Karnataka Will Get 51000 Tone Urea Says Minister BC Patil
Author
Bengaluru, First Published Aug 21, 2020, 7:23 AM IST

 ಬೆಂಗಳೂರು (ಆ.21) : ಶುಕ್ರವಾರ ಕೇಂದ್ರದಿಂದ 51,600 ಟನ್‌ ಯೂರಿಯಾ ಗೊಬ್ಬರ ಪೂರೈಕೆಯಾಗಲಿರುವ ಹಿನ್ನೆಲೆಯಲ್ಲಿ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ.ಅಲ್ಲದೇ ಯಾವುದೇ ಕಾರಣಕ್ಕೂ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟವಾಗದಂತೆ ಪರಿವೀಕ್ಷಕರು ಕ್ರಮ ಕೈಗೊಳ್ಳುತ್ತಿದ್ದಾರೆ. ರಾಜ್ಯದ ಹಲವೆಡೆ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಚಿಲ್ಲರೆ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ 40ಕ್ಕೂ ಹೆಚ್ಚು ಚಿಲ್ಲರೆ ಮಾರಾಟಗಾರರ ಪರವಾನಗಿ ರದ್ದುಪಡಿಸಲಾಗಿದೆ ಎಂದು ಹೇಳಿದರು.
 
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಗಸ್ಟ್‌ ತಿಂಗಳಲ್ಲಿ 1.77 ಲಕ್ಷ ಟನ್‌ ಪ್ರಮಾಣದ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆಯಿದ್ದು ಈವರೆಗೆ 1.14 ಲಕ್ಷ ಟನ್‌ ಮಾತ್ರ ಸರಬರಾಜು ಆಗಿದೆ. ಇನ್ನೂ 62,806 ಟನ್‌ ಪೂರೈಕೆಯಾಗಿಲ್ಲ. ಇದರಲ್ಲಿ ಆ.21ರಂದು ಶುಕ್ರವಾರ ಕೇಂದ್ರದಿಂದ 51,600 ಟನ ಗೊಬ್ಬರ ಕರ್ನಾಟಕಕ್ಕೆ ಪೂರೈಸುವುದಾಗಿ ಕೇಂದ್ರದ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ ಎಂದರು.

ಯೂರಿಯಾ ಗೊಬ್ಬರ ದಂಧೆ: ರೈತರು ಕಂಗಾಲು..!...

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 73 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು, ಜೂನ್‌ 1ರಿಂದ ಆ.19ರವರೆಗೆ 68.26 ಲಕ್ಷ (ಶೇ.95) ಹೆಕ್ಟೇರ್‌ ಬಿತ್ತನೆಯಾಗಿದೆ. ಹೀಗಾಗಿ ಏಪ್ರಿಲ್‌ 1ರಿಂದ ಆಗಸ್ಟ್‌ 20ರವರೆಗೆ 6.78 ಲಕ್ಷ ಟನ್‌ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇತ್ತು. ಆದರೆ 4.88 ಲಕ್ಷ ಟನ್‌ ಪೂರೈಕೆಯಾಗಿದೆ. ಏಪ್ರಿಲ್‌ನಿಂದ ಆಗಸ್ಟ್‌ ಅಂತ್ಯದವರೆಗೆ ವಿವಿಧ ಗ್ರೇಡ್‌ಗಳ 18.23 ಲಕ್ಷ ಟನ್‌ ರಸಗೊಬ್ಬರಕ್ಕೆ ಬೇಡಿಕೆ ಇದ್ದು ಆಗಸ್ಟ್‌ 20ರ ವೇಳೆಗೆ 17.96 ಲಕ್ಷ ಟನ್‌ ಸರಬರಾಜು ಆಗಿದೆ ಎಂದು ಮಾಹಿತಿ ನೀಡಿದರು.

ಧಾರವಾಡ: ನವಲಗುಂದದಲ್ಲಿ ಯೂರಿಯಾ ಪಡೆಯಲು ರೈತರ ಮಾರಾಮಾರಿ..

ಪ್ರತಿ ಜಿಲ್ಲೆಯಲ್ಲಿ ಜಾಗೃತ ದಳ:

ಕಳಪೆ ಗುಣಮಟ್ಟದ ಗೊಬ್ಬರ ಪೂರೈಕೆ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಪ್ಪಿಸಲು ಪ್ರತಿ ಜಿಲ್ಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ರಚಿಸಿರುವ ಜಾಗೃತ ದಳದ ಸದಸ್ಯರು ಹಾಗೂ ರಸಗೊಬ್ಬರ ಪರಿವೀಕ್ಷಕರು ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಾರೆ ಎಂದರು.

Follow Us:
Download App:
  • android
  • ios