ನವದೆಹಲಿ(ಮೇ.29): ಕೊರೋನಾ ವೈರಸ್ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಪ್ರತಿ ದಿನ ಸೋಂಕಿತರ ಸಂಖ್ಯೆಯಲ್ಲಿ ಅನಗತ್ಯ ದಾಖಲೆ ಬರೆಯುತ್ತಿದೆ. ಒಂದೇ ದಿನ 7,000 ಪ್ರಕರಣಗಳು ವರದಿಯಾಗಿದೆ. ಇದೀಗ ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 1.65 ಲಕ್ಷ ದಾಟಿದೆ. ಈ ಸಂಖ್ಯೆಯಲ್ಲಿ ಮಹಾರಾಷ್ಟ್ರ ಹಾಗೂ ತಮಿಳುನಾಡು ಕೊಡುಗೆ ಅತೀಯಾಗಿದೆ.

ನೆಕ್ಸ್ಟ್ ಲಾಕ್‌ಡೌನ್ ಹೇಗಿರುತ್ತೆ? ಮೋದಿ ಬದಲು ಸಿಎಂಗಳ ಸಭೆ ಮಾಡಿದ ಶಾ!

ದೆಹಲಿ, ಪಶ್ಚಿಮ ಬಂಗಾಳ, ಹರಿಯಾಣ, ಕೇರಳ, ಆಂಧ್ರ ಪ್ರದೇಶ ರಾಜ್ಯಗಳಲ್ಲೂ ಕೊರೋನಾ ವೈರಸ್ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಕೊರೋನಾ ಭೀಕರತೆ ಸೃಷ್ಟಿಸಿದ ದೇಶಗಳ ಪೈಕಿ 10ನೇ ಸ್ಥಾನದಲ್ಲಿದ್ದ ಭಾರತ ಇದೀಗ ಟರ್ಕಿ ಹಿಂದಿಕ್ಕಿ 9ನೇ ಸ್ಥಾನಕ್ಕೇರಿದೆ. ಜಾನ್ ಹಾಪ್‌ಕಿನ್ಸ್ ಯುನಿವರ್ಸಿಟಿ ಬಿಡುಗಡೆ ಮಾಡಿರುವ ನೂತನ ಪಟ್ಟಿಯಲ್ಲಿ ಭಾರತ 9ನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಭಾರತ ಅಪಾಯದ ಮಟ್ಟಕ್ಕೆ ತಲುಪುತ್ತಿದೆ ಅನ್ನೋ ಸೂಚನೆ ನೀಡಿದೆ.

ಮಳೆಗಾಲದಲ್ಲಿ ಕೊರೋನಾ ವೈರಸ್ ಶಕ್ತಿ ಹೆಚ್ಚಾಗುತ್ತಾ? ಬೆಚ್ಚಿ ಬೀಳಿಸುತ್ತಿದೆ ಅಧ್ಯಯನ ವರದಿ!

ಚೀನಾದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ  4,569ಕ್ಕೆ ಏರಿಕೆಯಾಗಿದೆ. ವುಹಾನ್‌ನಲ್ಲಿ ಫೆಬ್ರವರಿ, ಮಾರ್ಚ್‌ನಲ್ಲಿ ಹೆಚ್ಚು ಸಾವು ಸಂಭಿಸಿತ್ತು.ಇದೀಗ ಚೀನಾದಲ್ಲಿ ಕೊರೋನಾ ಬಹುತೇಕ ಶಾಂತವಾಗಿದ್ದು, ನಿಯಂತ್ರಣದಲ್ಲಿದೆ. ಆದರೆ ಭಾರತದಲ್ಲಿ ದಿನದಿಂದ  ದಿನಕ್ಕೆ ಹೆಚ್ಚಾಗುತ್ತಿದೆ. ಗುರುವಾರ(ಮೇ.28) ಒಂದೇ ದಿನ ಮಹಾರಾಷ್ಟ್ರದಲ್ಲಿ 85 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದರೆ, ದೆಹಲಿ 13, ತಮಿಳುನಾಡಿನಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 60,000 ಗಡಿ ಸನಿಹದಲ್ಲಿದೆ. ಗುರವಾರ(ಮೇ.28) ಒಂದೇ ದಿನ 2,598 ಕೊರೋನಾ ಪ್ರಕರಣಗಳು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 1,982 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಮುಂಬೈ ನಗರದಲ್ಲೇ 1,000 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಬಳಿಕ ತಮಿಳುನಾಡಿನಲ್ಲಿ ಗರಿಷ್ಠ ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ 19,372 ಪ್ರಕರಣಗಳು ದಾಖಲಾಗಿದೆ. ದೆಹಲಿಯಲ್ಲಿ 18,281 ಕೇಸ್ ಪತ್ತೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ 4,536 ಕೇಸ್ ದಾಖಲಾಗಿದೆ.

ಕೊರೋನಾ ಸೋಂಕಿತರ ಗುಣಮುಖರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕೊಂಚ ಸಮಾಧಾನ ತಂದಿದೆ. ಭಾರತದಲ್ಲಿ ಕೊರೋನಾ ಸೋಂಕಿತರ ಗುಣಮುಖರ ಸರಾಸರಿ 42.8%. ಇಲ್ಲೀವರೆಗೆ 71,106 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.  ಪಂಜಾಬ್‌ ಸೋಂಕಿತರ ಪೈಕಿ ಶೇಕಡಾ 90 ರಷ್ಟು ಮಂದಿ ಗುಮುಖರಾಗಿದ್ದಾರೆ. 2,158 ಸೋಂಕಿತರ ಪೈಕಿ 1,946 ಮಂದಿ ಗುಣಮುಖರಾಗಿದ್ದಾರೆ.