ಕ್ಯಾಲಿಫೋರ್ನಿಯಾ(ಮೇ.29):  ಚೀನಾದ ವುಹಾನ್‌ನಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿರುವಾಗ ಭಾರತೀಯರು ನಿರಾಳರಾಗಿದ್ದರು. ಕಾರಣ ಬಹುತೇಕರು ಇಲ್ಲಿನ ಉಷ್ಣ ವಾತಾವರಣಕ್ಕೆ ನಾವಲ್ಲ, ಕೊರೋನಾ ವೈರಸ್ ಸತ್ತು ಹೋಗುತ್ತೆ ಎಂದಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಸಂದೇಶಗಳು ಹರಿದಾಡಿತ್ತು. ಇದನ್ನೇ ಹಲವರು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸೂಚನೆಗಿಂತ ಹೆಚ್ಚಾಗಿ ಪಾಲಿಸಿದ್ದಾರೆ. ಆದರೆ ಅತೀ ಹೆಚ್ಚು ಉಷ್ಣತೆ ಇರುವ ದೆಹಲಿ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಕಡೆ ಕೊರೋನಾ ದಾಳಿ ಇಟ್ಟಿದೆ. ಇದೀಗ ಸಂಶೋಧಕರು ಮಳೆಗಾಲ ಆರಂಭಕ್ಕೂ ಮುನ್ನ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ: ಆಸ್ಟ್ರೇಲಿಯಾ ಮಹಿಳೆ ಪರದಾಟ, ಸ್ವದೇಶಕ್ಕೆ ಕಳುಹಿಸಿ ಮಾನವೀಯತೆ ಮೆರೆದ SP ಕಟಿಯಾರ್

ಕೊರೋನಾ ವೈರಸ್ ಹರಡಂತೆ ತಡೆಯಲು ಸಾಮಾಜಿಕ ಅಂತರ ಅಗತ್ಯ.  ಒಬ್ಬರಿಂದ ಒಬ್ಬರಿಗೆ ಕನಿಷ್ಠ 6 ಅಡಿ ಅಂತರ ಕಾಪಾಡಿಕೊಳ್ಳಬೇಕು. ಆದರೆ ಈ ಸೂಚನೆಯನ್ನು ಹೆಚ್ಚಿನವರು ಪಾಲಿಸುತ್ತಿಲ್ಲ ಬಿಡಿ. ಕ್ಯಾಲಿಫೋರ್ನಿಯಾ ಯನಿವರ್ಸಿಟಿಯಲ್ಲಿನ ಸಂಶೋಧಕರು ನಡೆಸಿದ ಅಧ್ಯಯನ ವರದಿ ಬಹಿರಂಗವಾಗಿದ್ದು, ಇದೀಗ ಜನರು ಮತ್ತಷ್ಟು ಜಾಗೃತೆ ವಹಿಸಬೇಕಿದೆ. ಕಾರಣ ಪ್ರತಿ ವಾತಾವರಣದಲ್ಲಿ ಕೊರೋನಾ ವೈರಸ್ ಭಿನ್ನವಾಗಿ ವರ್ತಿಸುತ್ತದೆ ಎಂದಿದೆ.

ಜಾವಾ ಮೀಟರ್, ಬೊಲೆರೋ ಕನ್ಸೋಲ್; ಮಹೀಂದ್ರ ವೆಂಟಿಲೇಟರ್ ಹಿಂದಿದೆ ರೋಚಕ ಕತೆ!

ಮಳೆಗಾಲ ಅಥವಾ ತಂಪಾಗಿರುವ ವಾತಾವರಣದಲ್ಲಿ ಒಬ್ಬರಿದ ಒಬ್ಬರಿಗಿರುವ ಸಾಮಾಜಿಕ ಅಂತರ 6 ಅಡಿ ಸಾಕಾಗಲ್ಲ. ಕನಿಷ್ಠ 20 ಅಡಿ ಬೇಕು ಎಂದು ಸಂಶೋಧಕರು ಹೇಳಿದ್ದಾರೆ. ಕಾರಣ ಕೊರೋನಾ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಆಕಳಿಸಿದಾಗ, ಉಗುಳಿದಾಗ ಈ ಸೋಂಕಿತನಿಂದ ಹೊರಬರುವ ಕೊರೋನಾ ವೈರಸ್ ಅಡಿ ದೂರದವರಗೆ ಚಲಿಸಬಲ್ಲದು. 20 ಅಡಿ ದೂರದ ಚಲನೆವರೆಗೆ ಕೊರೋನಾ ವೈರಸ್ ಜೀವಂತವಾಗಿರಲಿದೆ ಎಂದು ಅಧ್ಯಯನ ಹೇಳುತ್ತಿದೆ.

ಆರಂಭಿಕ ದಿನದಲ್ಲಿ ಕೊರೋನಾ ವೈರಸ್ ಚಲನೆ ವೇಗ ಪ್ರತಿ ಸೆಕೆಂಡಿಗೆ ಕೆಲ ಮೀಟರ್ ಮಾತ್ರಇತ್ತ. ಆದರೆ ತಂಪಾಗಿರುವ ವಾತಾವರಣದಲ್ಲಿ ಪ್ರತಿ ಸೆಕೆಂಡಿಗೆ 100 ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಂದರೆ ಗಾಳಿಯ ಆಧಾರದಲ್ಲಿ ಸೋಂಕಿತನಿಂದ ಹೊರಬರುವ ವೈರಸ್‌ಗಳು ಈ ವೇಗದಲ್ಲೂ ಚಲಿಸುತ್ತದೆ ಎಂದಿದ್ದಾರೆ.

ಮಾಸ್ಕ್ ಧರಿಸುವುದು ಉತ್ತಮ. ಆದರೆ ಪ್ರತಿ ದಿನ ಮಾಸ್ಕ್ ಬದಲಾಯಿಸಬೇಕು. ಇಷ್ಟೇ ಅಲ್ಲ  ಮಾಸ್ಕ್‌ ಬದಲಾಯಿಸುವಾಗಲೂ ಅಷ್ಟೇ ಎಚ್ಚರ ಅಗತ್ಯ ಎಂದು ಸಂಶೋಧಕರು ಹೇಳಿದ್ದಾರೆ. ವಾತಾವರಣಕ್ಕೆ ತಕ್ಕಂತೆ ಕೊರೋನಾ ವೈರಸ್ ಚಲನ ವಲನಗಳು ಬದಲಾಗುತ್ತಿದೆ. ಇದು ಆತಂಕಕಾರಿಯಾಗಿದೆ. ಸಾಮಾಜಿಕ ಅಂತರ ಜೊತೆಗೆ ಶುಚಿತ್ವದ ನಿಯಮ ಕೂಡ ಪಾಲಿಸಬೇಕು ಎಂದು ಸಂಶೋಧಕರು ಹೇಳಿದ್ದಾರೆ.