ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಭಾರತವೇ ಆಧಾರ, ಫ್ರಾನ್ಸ್ ಭೇಟಿ ಬೆನ್ನಲ್ಲೇ ಮೋದಿ ಮನದ ಮಾತು!
ಭಾರತಕ್ಕೆ ವಿಶ್ವನಾಯಕ ಅನ್ನೋ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿಲ್ಲ. ಭಾರತ ಯಾವುದೇ ಸ್ಥಾನವನ್ನು ಅಹಂಕಾರದಿಂದ ತೆಗುದುಕೊಳ್ಳುವುದಿಲ್ಲ.ಆದರೆ ಭಾರತ ಸಾಮೂಹಿಕ ವಿಶ್ವನಾಯಕತ್ವದಲ್ಲಿ ವಿಶ್ವಾಸವಿಟ್ಟಿದೆ. ವಿಶ್ವದ ದಕ್ಷಿಣ ರಾಷ್ಟ್ರಗಳಿಗೆ ಭಾರತವೇ ಆಧಾರವಾಗಿದೆ ಎಂದು ಮೋದಿ ಹೇಳಿದ್ದಾರೆ. ಫ್ರಾನ್ಸ್ ಭೇಟಿ ಬೆನ್ನಲ್ಲೇ ಮೋದಿ ಭಾರತ, ಫ್ರಾನ್ಸ್, ಅಮೆರಿಕ ದ್ವಪಕ್ಷೀಯ ಸಂಬಂಧ, ಭಾರತದ ಯುವ ಶಕ್ತಿ, ಜಾಗತಿಕವಾಗಿ ಭಾರತದ ಪರಿಶ್ರಮ ಕುರಿತು ಮೋದಿ ಮನಬಿಚ್ಚಿ ಮಾತನಾಡಿದ್ದಾರೆ.
ನವದೆಹಲಿ(ಜು.13) ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಹಾಗೂ ಯುಎಇ ಪ್ರವಾಸ ಆರಂಭಗೊಂಡಿದೆ. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಗೆ ವಿಶೇಷ ಅತಿಥಿಯಾಗಿ ಮೋದಿ ಪಾಲ್ಗೊಳ್ಳಲಿದ್ದಾರೆ. ಮೋದಿ ಭೇಟಿಯಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳು, ರಕ್ಷಣಾ ಒಪ್ಪಂದ, ವ್ಯಾಪರ ವ್ಯಹಾರ ಸೇರಿದಂತೆ ಹಲವು ಮಹತ್ವದ ಮಾತುಕತೆಗಳು ನಡೆಯಲಿದೆ. ಮೋದಿ ಫ್ರಾನ್ಸ್ ಭೇಟಿ ಹಲವು ಕಾರಣಗಳಿಂದ ಮಹತ್ವದ ಪಡೆದುಕೊಂಡಿದೆ. ಈ ಭೇಟಿ ಬೆನ್ನಲ್ಲೇ ಮೋದಿ, ವಿಶೇಷ ಸಂದರ್ಶನದಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿರುವ ಕುರಿತು ಹಲವು ಮಾಹಿತಿಗಳನ್ನು ನೀಡಿದ್ದಾರೆ. ಇದೇ ವೇಳೆ ಭಾರತ ಯಾವತ್ತೂ ವಿಶ್ವ ನಾಯಕನ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿಲ್ಲ ಎಂದಿದ್ದಾರೆ. ಭಾರತ ಯಾವತ್ತೂ ಸಾಮೂಹಿಕ ನಾಯಕತ್ವ, ಸಾಮೂಹಿಕ ಶಕ್ತಿ ಮೇಲೆ ನಂಬಿಕೆ ಇಟ್ಟಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಜೊತಗೆ ತಂತ್ರಜ್ಞಾನದ ಬಳಕೆ, ಆರ್ಥಿಕತೆಯಲ್ಲಿ ಪ್ರಗತಿಯಿಂದ ಜಾಗತಿಕ ಮಟ್ಟದ ಸವಾಲುಗಳನ್ನು ಮೆಟ್ಟಿನಿಲ್ಲಲು ಭಾರತ ಶಕ್ತವಾಗಿದೆ. ಹೀಗಾಗಿ ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಭಾರತವೇ ಆಧಾರ ಎಂದು ಮೋದಿ ಹೇಳಿದ್ದಾರೆ.
ಗ್ಲೋಬಲ್ ಸೌತ್ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಭಾರತ ಸೇತುವೆಯಾಗಿದೆ. ಗ್ಲೋಬಲ್ ಸೌತ್ ಅಭಿವೃದ್ಧಿಯಲ್ಲಿ ಭಾರತವೇ ಆಧಾರ. ಈ ಮೂಲಕ ಗ್ಲೋಬಲ್ ನಾರ್ತ್ ರಾಷ್ಟ್ರಗಳಿಗೆ ಸಂಪರ್ಕ ಸಾಧಿಸಲು ಸುಲಭವಾಗಿದೆ. ಭಾರತದ ಪ್ರಯತ್ನದಿಂದ ಉತ್ತರ ಹಾಗೂ ದಕ್ಷಿಣ ಜಾಗತಿಕ ರಾಷ್ಟ್ರಗಳ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ವಸುದೈವ ಕುಟುಂಬ ತತ್ವದಡಿ ಭಾರತ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಮೋದಿಯಿಂದ ಧರ್ಮಾತೀತ ಸಮಗ್ರ ಅಭಿವೃದ್ಧಿ: ಪ್ರಧಾನಿ ಬಗ್ಗೆ ಸೌದಿ ಇಸ್ಲಾಮಿಕ್ ಮುಖಂಡ ಅಲ್ ಇಸ್ಸಾ ಪ್ರಶಂಸೆ
ಗ್ಲೋಬಲ್ ಸೌತ್ ಧ್ವನಿ ಜಾಗತಿಕ ಮಟ್ಟದಲ್ಲಿ ಕ್ಷೀಣಿಸಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗ್ಲೋಬಲ್ ಸೌತ್ ಧ್ವನಿ ಕೇಳಿಸುತ್ತಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಮೋದಿ, 2023ರ ಜನವರಿಯಲ್ಲಿ ಭಾರತ ಜಿ20 ಅಧ್ಯಕ್ಷತೆ ವಹಿಸಿಕೊಂಡಿತು.ಜಿ20 ಜಾಗತಿಕ ಶೃಂಗಸಭೆಯಲ್ಲಿ 125 ರಾಷ್ಟ್ರಗಳು ಭಾಗವಹಿಸಿದೆ.ಈ ಸಭೆಯಲ್ಲಿ ಗ್ಲೋಬಲ್ ಸೌತ್ ಕುರಿತ ಭಾರತದ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದೆ. ಭಾರತ ಗ್ಲೋಬಲ್ ಸೌತ್ ಮುನ್ನಡೆಸಲು ಶಕ್ತವಾಗಿ ಎಂಬ ಅಭಿಪ್ರಾಯ ಭಾಗವಹಿಸಿದ ರಾಷ್ಟ್ರಗಳಿಂದ ವ್ಯಕ್ತವಾಗಿತ್ತು ಎಂದು ಮೋದಿ ಹೇಳಿದ್ದಾರೆ.
ಜಿ20 ಶೃಂಗಸಭೆಯಲ್ಲಿ ಭಾರತ ಒಂದು ಭೂಮಿ, ಒಂದು ಕುುಟುಂಬ, ಒಂದೇ ಭವಿಷ್ಯ ಅನ್ನೋ ಪರಿಕಲ್ಪನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೇ ವೇಳೆ ಆಫ್ರಿಕನ್ ಯೂನಿಯನ್‌ಗೆ ಜಿ20ಯಲ್ಲಿ ಖಾಯಂ ಸದಸ್ಯತ್ವ ನೀಡಲು ಪ್ರಸ್ತಾಪ ಮಾಡಿದ್ದೇನೆ ಎಂದು ಮೋದಿ ಹೇಳಿದ್ದಾರೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವ ಕುರಿತು ಮೋದಿ ಖಡಕ್ ಉತ್ತರ ನೀಡಿದ್ದಾರೆ. ಎಡನೆ ಮಹಾಯುದ್ಧದ ಬಳಿಕ ಭಾರತವನ್ನ ಕಟ್ಟಲಾಗಿದೆ. ಸುಮಾರು 8 ದಶಕಗಳಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ಜಗತ್ತು ಪರಿವರ್ತನೆಗೊಂಡಿತು. ಕೆಲ ರಾಷ್ಟ್ರಗಳು 4 ರಷ್ಟು ಅಭಿವೃದ್ಧಿಯಾಗಿದೆ. ಹೊಸ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಂಡಿದ್ದೇವೆ. ಬದಲಾದ ಹಾಗೂ ಪರಿವರ್ತನಾ ಜಗತ್ತಿನಲ್ಲಿ ಭಾರತ ಶಕ್ತವಾಗಿ ಮುನ್ನಗುತ್ತಿದೆ. ಈ ವೇಳೆ ಎದುರಾಗಿರುವ ಹಲವು ಸವಾಲುಗಳನ್ನು ಎದುರಿಸುತ್ತಾ ಭಾರತ ಮುನ್ನಡೆಯುತ್ತಿದೆ. ಪ್ರಮುಖವಾಗಿ ಭಯೋತ್ಪಾದನೆ, ಸೈಬರ್ ಸೆಕ್ಯೂರಿಟಿ, ಹವಾಮಾನ ವೈಪರಿತ್ಯ, ಸಾಂಕ್ರಾಮಿಕ ರೋಗ, ಬಾಹ್ಯಾಕಾಶ ಭದ್ರತೆ ಸೇರಿದಂತೆ ಹಲವು ಸವಾಲುಗಳು ನಮ್ಮ ಮುಂದಿದೆ ಎಂದು ಮೋದಿ ಹೇಳಿದ್ದಾರೆ.
ಭಾರತದ ಗಡಿ ರಕ್ಷಣೆಗೆ ಆನೆ ಬಲ, ಆಗಸ್ಟ್‌ನಲ್ಲಿ ಮೊದಲ ಇಂಟಿಗ್ರೇಡೆಟ್ ಥಿಯೆಟರ್ ಕಮಾಂಡ್ ಘೋಷಣೆ!
2047ರ ಭಾರತ ಹೇಗಿರಲಿದೆ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ನಮ್ಮ ಗುರಿ ಸ್ಪಷ್ಟವಾಗಿದೆ. 2047 ಭಾರತಕ್ಕೆ ಸ್ವಾತಂತ್ರ ಸಿಕ್ಕಿ 100 ವರ್ಷವಾಗಲಿದೆ. ಈ ವೇಳೆ ಭಾರತ ಅಭಿವದ್ಧಿ ರಾಷ್ಟ್ರದ ಸಾಲಿನಲ್ಲಿ ಇರಬೇಕು. ಇದೇ ಗುರಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲಾ ನಾಗರೀಕರನ್ನೊಳಗೊಂಡ ಅಬಿವೃದ್ಧಿ ಆರ್ಥಿಕತೆಯ ಭಾರತವಾಗಲಿದೆ. ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಹಾಗೂ ಅವಕಾಶಗಳಿಂದ ಭಾರತ ಕಂಗೊಳಿಸಬೇಕು. ಇದೇ ವೇಳೆ ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಇರಲಿದೆ. ಭಾರತದ ವಿಶ್ವದಲ್ಲೇ ಪ್ರಬಲ ಶಕ್ತಿಯಾಗಿ ಬೆಳೆಯಲಿದೆ ಎಂದು ಮೋದಿ ಹೇಳಿದ್ದಾರೆ.