ಭಾರತದ ಗಡಿ ರಕ್ಷಣೆಗೆ ಆನೆ ಬಲ, ಆಗಸ್ಟ್‌ನಲ್ಲಿ ಮೊದಲ ಇಂಟಿಗ್ರೇಡೆಟ್ ಥಿಯೆಟರ್ ಕಮಾಂಡ್ ಘೋಷಣೆ!

ಭಾರತದ ಗಡಿ ರಕ್ಷಣೆಗೆ ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ. ಇದರ ಜೊತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ, ಮಿಸೈಲ್ ಸೇರಿದಂತೆ ಶಸ್ತ್ರಾಸ್ತ್ರಗಳ ಸ್ವದೇಶಿ ಉತ್ಪಾನೆ ಸೇರದಂತ ಹಲವು ಸುಧಾರಣೆ ಮಾಡಲಾಗಿದೆ. ಇದೀಗ ಗಡಿ ರಕ್ಷಣೆಗೆ ಸಶಸ್ತ್ರ ಪಡೆಗಳ ಭಾರತದ ಮೊದಲ ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ಆಗಸ್ಟ್ ತಿಂಗಳಲ್ಲಿ ಆರಂಭಗೊಳ್ಳಲಿದೆ.
 

Indian armed forces first Integrated Theatre Command likely to be announced in August says report ckm

ನವದೆಹಲಿ(ಜು.12) ವಿಶ್ವದ ಬಲಿಷ್ಠ ಹಾಗೂ ಅತೀ ದೊಡ್ಡ ಸೇನಾ ವ್ಯವಸ್ಥೆಯಲ್ಲಿ ಭಾರತ ಕೂಡ ಒಂದು. ಭಾರತದ ತನ್ನ ರಕ್ಷಣಾ ವ್ಯವಸ್ಥೆಯನ್ನೇ ಬದಲಿಸಿದೆ. ಸಶಸ್ತ್ರಗಳ ಉತ್ಪಾದನೆ ಹಾಗೂ ರಫ್ತು, ಯೋಧರಿಗೆ ಅತ್ಯಾಧುನಿಕ ಆಯುಧ ಸೇರಿದಂತೆ ಹಲವು ಬದಲಾವಣೆ ಮಾಡಲಾಗಿದೆ. ಇದರ ಜೊತೆಗೆ ಭಾರತ ಅಭಿವೃದ್ಧಿ ಪಡಿಸಿದ ಅತ್ಯಂತ ಶಕ್ತಿ ಶಾಲಿ ಮಿಸೈಲ್ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಯಶಸ್ವಿ ಪರೀಕ್ಷೆ ನಡೆಸಿ ಬತ್ತಳಿಕೆಗೆ ಸೇರಿಸಿಕೊಂಡಿದೆ. ಇದೀಗ ಭಾರತದ ಗಡಿಗಳ ರಕ್ಷಣೆಗೆ ಇದೇ ಮೊದಲ ಬಾರಿಗೆ ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ (ITC) ಸಶಸ್ತ್ರ ಪಡೆ ಆರಂಭಗೊಳ್ಳುತ್ತಿದೆ. ಆಗಸ್ಟ್ ತಿಂಗಳಲ್ಲಿ ಆಚರಿಸಲಿರುವ 77ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ITC ಸಶಸ್ತ್ರ ಪಡೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಭಾರತೀಯ ಸೇನೆಯ ಸಶಸ್ತ್ರ ಪಡೆಗಳ ಜೊತೆಗಿನ ಹೊಂದಾಣಿಕೆ, ಜಂಟಿ ನಿರ್ವಹಣೆ, ಗಡಿಗಳ ರಕ್ಷಣೆ ಸೇರಿದಂತೆ ಭಾರತೀಯ ರಕ್ಷಣಾ ವ್ಯವಸ್ಥೆಗೆ ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ಆನೆ ಬಲ ನೀಡಲಿದೆ. ರಕ್ಷಣಾ ಮೂಲಗಳ ಪ್ರಕಾರ ಸೌತ್ ವೆಸ್ಟರ್ನ್ ಕಮಾಂಡ್ ಭಾರತದ ಮೊದಲ ಥಿಯೇಟರ್ ಕಮಾಂಡ್ ಆಗಿರಲಿದೆ. ಇನ್ನು ಹೊಸ  ITC ನಿಯೋಜನೆಯಿಂದ ಎದುರಾಗುವ ಸವಾಲುಗಳು, ನ್ಯೂನತೆಗಳನ್ನು ಪರಿಹರಿಸಲು ಟೆಸ್ಟ್ ಬೆಡ್ ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ಕಾರ್ಯನಿರ್ವಹಿಸಲಿದೆ.

 

ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌

ಸೌತ್ ವೆಸ್ಟರ್ನ್ ಇಂಟಿಗ್ರೇಟೆಡ್ ಕಮಾಂಡ್ ಸ್ಥಾಪನೆಯಾದ ಬಳಿಕ ಲಖನೌ ಮೂಲವಾಗಿಟ್ಟುಕೊಂಡು ನಾರ್ದರ್ನ್ ಥಿಯೇಟರ್ ಕಮಾಂಡ್ ಆರಂಭಗೊಳ್ಳಲಿದೆ. ಬಳಿಕ ನೌಕಾಪಡೆ ಥಿಯೇಟರ್ ಕಮಾಂಡ್ ಹೆಡ್‌ಕ್ವಾರ್ಟರ್  ಕರ್ನಾಟಕ ಕಾರವಾರದಲ್ಲಿ ಆರಂಭಗೊಳ್ಳಲಿದೆ. ನೌಕಾಪಡೆ ಥಿಯೇಟರ್ ಕಮಾಂಡ್ ಸಶಸ್ತ್ರ ಪಡೆ ಭಾರತದ ಸಮುದ್ರದ ಗಡಿಗಳನ್ನು ಕಾಯಲಿದೆ.

ನೂತನ ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ಒಂದು ಗಡಿ ಒಂದು ಸೇನೆ ಪರಿಕಲ್ಪನೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಮೂಲಕ ಮೂರು ಸೇನಾ ಸೇವೆಗಳು ಒಂದೇ ಕಮಾಂಡರ್ ಅಡಿಯಲ್ಲಿ ಕಾರ್ಯಗತಗೊಳ್ಳಲಿದೆ. ಇದರಿಂದ ಗಡಿ ಭಾಗದಲ್ಲಿ ಅಥವಾ ಸಮುದ್ರದಲ್ಲಿ ಮೂರು ಸೇವೆಗಳು ಕ್ಷಿಪ್ರಗತಿಯಲ್ಲಿ ಜಂಟಿಯಾಗಿ ಕಾರ್ಯಾಚರಣೆಗೆ ಇಳಿಯಲು ನೆರವಾಗಲಿದೆ.

2000 ಕಿಮೀ. ಸಾಗ​ಬಲ್ಲ ‘ಅಗ್ನಿ ಪ್ರೈಮ್‌’ ಕ್ಷಿಪ​ಣಿ ಯಶಸ್ವಿ ಉಡಾವಣೆ

ವೆಸ್ಟರ್ನ್ ಇಂಟಿಗ್ರೆಟೆಡ್ ಥಿಯೇಟರ್ ಕಮಾಂಡ್ ಭಾರತ ಹಾಗೂ ಪಾಕಿಸ್ತಾನದ ನಡುವಿನ ಗಡಿ ಭಾಗದ ರಕ್ಷಣೆ ಮಾಡಲಿದೆ. ಲಖನೌ ಹೆಡ್‌ಕ್ವಾರ್ಟರ್ ಹೊಂದಿರುವ ನಾರ್ದರ್ನ್ ಇಂಟಿಗ್ರೇಟೆಡ್ ಕಮಾಂಡ್ ಚೀನಾ ಗಡಿ ಭಾಗದ ರಕ್ಷಣೆ ಮಾಡಲಿದೆ. ಇನ್ನು ಸದ್ಯ ಈ ಗಡಿ ಭಾಗಗಳನ್ನು ಸೆಂಟ್ರಲ್ ಕಮಾಂಡ್ ಕಾಯುತ್ತಿದೆ. ನೂತನ ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ಪಡೆ ಯಾವುದೇ ಹೆಚ್ಚುವರಿ ಹುದ್ದೆ ಅಥವಾ ರ್ಯಾಂಕ್ ಹೊಂದಿರುವುದಿಲ್ಲ.  ಭಾರತದ ಭೂಸೇನೆಯಲ್ಲಿ 17 ಕಮಾಂಡ್ ಹಾಗೂ ವಾಯುಸೇನೆಯಲ್ಲಿ 7 ಕಮಾಂಡ್‌ಗಳನ್ನು ಹೊಂದಿದೆ. 

Latest Videos
Follow Us:
Download App:
  • android
  • ios