ನವದೆಹಲಿ(ಜೂ.24): ಪಾಕಿಸ್ತಾನದ ರಾಯಭಾರ ಕಚೇರಿ ಸಿಬ್ಬಂದಿ ಭಾರತದ ವಿರುದ್ಧ ಗೂಢಚರ್ಯೆ ನಡೆಸುತ್ತಿರುವ ಮತ್ತು ಭಯೋತ್ಪಾಕದ ಸಂಘಟನೆಗಳ ಜೊತೆ ಶಾಮೀಲಾಗಿರುವ ಆರೋಪದ ಬೆನ್ನಲ್ಲೇ, ದೆಹಲಿಯಲ್ಲಿರುವ ಪಾಕಿಸ್ತಾನ ಹೈ ಕಮಿಷನ್‌ನ ಸಿಬ್ಬಂದಿ ಬಲವನ್ನು ಮುಂದಿನ ಏಳು ದಿನಗಳ ಒಳಗಾಗಿ ಅರ್ಧದಷ್ಟುಇಳಿಕೆ ಮಾಡಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಮಂಗಳವಾರ ಸೂಚನೆ ನೀಡಿದೆ.

ಗಡಿಯಲ್ಲಿ ಮತ್ತೆ ಪಾಕಿಸ್ತಾನ ದಾಳಿ: ಯೋಧ ಹುತಾತ್ಮ!

ಅಲ್ಲದೇ ಇಸ್ಲಾಮಾಬಾದ್‌ನಲ್ಲಿರುವ ಕಚೇರಿಯಿಂದ ತನ್ನ ಸಿಬ್ಬಂದಿ ಬಲವನ್ನು ಕಡಿತಗೊಳಿಸುತ್ತಿರುವುದಾಗಿಯೂ ಭಾರತ ಪ್ರಕಟಿಸಿದೆ. ಪಾಕಿಸ್ತಾನ ಹೈಕಮಿಷನ್‌ ಕಚೇರಿಯ ಅಧಿಕಾರಿಯನ್ನು ಕರೆಸಿಕೊಂಡು ಈ ನಿರ್ಧಾರವನ್ನು ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪಾಕ್‌ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಗಡೀಪಾರು!

ಇತ್ತೀಚೆಗೆ ಇಸ್ಲಾಮಾಬಾದ್‌ ಭಾರತೀಯ ಹೈಕಮಿಷನ್‌ನಿಂದ ಇಬ್ಬರು ಭಾರತೀಯ ಅಧಿಕಾರಿಗಳನ್ನು ಅಪಹರಿಸಿ ಕಿರುಕುಳ ನೀಡಲಾಗಿತ್ತು. ಅಲ್ಲದೇ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ವೇಳೆ ಪಾಕಿಸ್ತಾನ ಹೈಕಮಿಷನ್‌ ಕಚೇರಿಯ ಇಬ್ಬರು ಅಧಿಕಾರಿಗಳು ಸಿಕ್ಕಿ ಬಿದ್ದಿದ್ದರು.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"