Asianet Suvarna News Asianet Suvarna News

ಜೈ ಜವಾನ್‌, ಜೈ ಕಿಸಾನ್‌ ಘೋಷಣೆಗೆ ಹೊಸ ಸ್ಲೋಗನ್‌ ಸೇರಿಸಿದ ಪ್ರಧಾನಿ ಮೋದಿ!

ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಜೈ ಜವಾನ್‌, ಜೈ ಕಿಸಾನ್‌ ಎನ್ನುವ ಘೋಷಣೆಯನ್ನು ನೀಡಿದ್ದರು. ಇದಾದ ಬಳಿಕ ಅಟಲ್‌ ಬಿಹಾರ ವಾಜಪೇಯಿ ಈ ಸ್ಲೋಗನ್‌ಗೆ ಜೈ ವಿಜ್ಞಾನ್‌ ಅನ್ನೂ ಸೇರಿದ್ದರು. ಈಗ ಈ ಸ್ಲೋಗನ್‌ಗೆ ಜೈ ಅನುಸಂಧಾನ್‌ ಅನ್ನು ಸೇರಿಸುವ ಸಮಯ ಎಂದು ಕೆಂಪುಕೋಟೆಯ ಮೇಲೆ ನಿಂತು ಮಾಡಿದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Independence day Jai Anusandhan added to Jai jawan Jai kisan and Jai Vigyan in PM Narendra Modi Speech in Red fort san
Author
Bengaluru, First Published Aug 15, 2022, 9:25 AM IST

ನವದೆಹಲಿ (ಆ.15): ದೇಶದ 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಅತ್ಯಂತ ಪ್ರಮುಖ ಸ್ಲೋಗನ್‌ ಎನಿಸಿಕೊಂಡಿರುವ ಜೈ ಜವಾನ್‌, ಜೈ ಕಿಸಾನ್‌ ಹಾಗೂ ಜೈ ವಿಜ್ಞಾನ್‌ಗೆ ಜೈ ಅನುಸಂಧಾನ್‌ ಎನ್ನುವ ಘೋಷಣೆಯನ್ನು ಸೇರಿಸಿದರು. ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ, ದೇಶದ ಸೈನಿಕರು ಹಾಗೂ ದೇಶದ ರೈತರ ಸೇವೆಗಾಗಿ ಜೈ ಜವಾನ್‌, ಜೈ ಕಿಸಾನ್‌ ಘೋಷಣೆಯನ್ನು ನೀಡಿದ್ದರು. ಬಳಿಕ ಅಟಲ್‌ ಬಿಹಾರಿ ವಾಜಪೇಯಿ ಈ ಘೋಷಣೆಗೆ ಜೈ ವಿಜ್ಞಾನ್‌ ಘೋಷಣೆಯನ್ನು ಸೇರಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದಲೇ ಈ ಘೋಷಣೆಗೆ ಜೈ ಅನುಸಂಧಾನ್‌ ಘೋಷಣೆಯನ್ನು ಸೇರಿಸಿದ್ದಾರೆ. ಅನುಸಂಧಾನ್‌ ಎಂದರೆ ತಂತ್ರಜ್ಞಾನ ಎಂದರ್ಥ. 2019ರಲ್ಲಿ ಜಲಂಧರ್‌ನಲ್ಲಿ ನಡೆದ ಇಂಡಿಯನ್‌ ಸೈನ್ಸ್ ಕಾಂಗ್ರೆಸ್‌ನಲ್ಲಿ ಮೋದಿ ಮೊದಲ ಬಾರಿಗೆ ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌ ಘೋಷಣೆಯನ್ನು ಜೈ ಅನುಸಂಧಾನ್‌ ಸೇರಿಸುವ ಅಗತ್ಯವಿದೆ ಎಂದು ಹೇಳಿದ್ದರು. ದೇಶದ ಅಭಿವೃದ್ಧಿಗೆ ಈಗ ಇವೆಲ್ಲರದರೊಂದಿಗೆ ತಂತ್ರಜ್ಞಾನದ ಪಾತ್ರವೂ ಬಹಳ ಮುಖ್ಯವಾಗಿದೆ ಎಂದು ಮಾತನಾಡಿದ್ದರು. ಭಾರತೀಯ ವಿಜ್ಞಾನಿಗಳ ಜೀವನ ಮತ್ತು ಕೆಲಸಗಳು ತಂತ್ರಜ್ಞಾನ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದೊಂದಿಗೆ ಆಳವಾದ ಮೂಲಭೂತ ಒಳನೋಟಗಳ ಏಕೀಕರಣದ ಬಲವಾದ ಪುರಾವೆಯಾಗಿದೆ ಎಂದು ಪ್ರಧಾನಿ ಆ ವೇಳೆ ಹೇಳಿದ್ದರು.

ಹೊಸ ಭಾರತಕ್ಕೆ ಖಂಡಿತವಾಗಿ ಜೈ ಅನುಸಂಧಾನ್‌ ಎನ್ನುವ ಘೋಷಣೆಯ ಅಗತ್ಯವಿದೆ ಎಂದು ಸ್ವಾತಂತ್ರ್ಯದಿನದ ಭಾಷಣದ ವೇಳೆ ಒತ್ತಿ ಹೇಳಿದ ಪ್ರಧಾನಿ ಮೋದಿ, ಸಂಶೋಧನೆ ಹಾಗೂ ತಂತ್ರಜ್ಞಾನ ಭಾರತವನ್ನು ಮುಂದಿನ ಯುಗದಲ್ಲಿ ಇನ್ನಷ್ಟು ಶಕ್ತ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ವಿಜ್ಞಾನದ ಮೂಲಕ ಭಾರತವು ತನ್ನ ವರ್ತಮಾನವನ್ನು ಪರಿವರ್ತಿಸುತ್ತಿದೆ ಮತ್ತು ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

Indian Independence Day: ನಮ್ಮ ತಿರಂಗಕ್ಕೆ ಇರುವ ಶಕ್ತಿ, ಅಮೃತ ಮಹೋತ್ಸವದಲ್ಲಿ ಅನಾವರಣಗೊಂಡಿದೆ

ಬ್ಯಾಹಾಕಾಶ ಹಾಗೂ ಡೀಪ್‌ ಓಷನ್‌ ಮಿಷನ್‌ಗೆ ನಮ್ಮ ಬೆಂಬಲ: ಯುವಕರು ಬಾಹ್ಯಾಕಾಶದಿಂದ ಸಾಗರದವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಂಶೋಧನೆಗಳನ್ನು ಕೈಗೊಳ್ಳಲು ಸಾಕಷ್ಟು ಬೆಂಬಲವನ್ನು ಪಡೆಯಲು ಸರ್ಕಾರವು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶದ ಯುವಕರು ಬಾಹ್ಯಾಕಾಶದಿಂದ ಸಮುದ್ರದ ಆಳದವರೆಗಿನ ಎಲ್ಲಾ ಕ್ಷೇತ್ರಗಳಲ್ಲಿ ಸಂಶೋಧನೆಗೆ ಎಲ್ಲಾ ಬೆಂಬಲವನ್ನು ಪಡೆಯುವುದು ನಮ್ಮ ಪ್ರಯತ್ನವಾಗಿದೆ. ಅದಕ್ಕಾಗಿಯೇ ನಾವು ನಮ್ಮ ಬಾಹ್ಯಾಕಾಶ ಮಿಷನ್ ಮತ್ತು ಡೀಪ್ ಓಷನ್ ಮಿಷನ್ ಅನ್ನು ವಿಸ್ತರಿಸುತ್ತಿದ್ದೇವೆ. ನಮ್ಮ ಭವಿಷ್ಯಕ್ಕೆ ಪರಿಹಾರವು ಬಾಹ್ಯಾಕಾಶ ಮತ್ತು ಸಾಗರದ ಆಳದಲ್ಲಿದೆ ಎಂದು ಪ್ರಧಾನಿ ಇದೇ ವೇಳೆ ಹೇಳಿದರು.

ಪಂಚ ಪ್ರಾಣಗಳ ಈಡೇರಿಕೆಗೆ ಸಂಕಲ್ಪ ತೊಡೋಣ: ಪ್ರಧಾನಿ ಮೋದಿ

ಈ ಡಿಕೇಡ್‌ ಭಾರತಕ್ಕೆ ಟೆಕೇಡ್‌: ಇದಲ್ಲದೆ, ಭಾರತದ ಡಿಜಿಟಲ್‌ ಇಂಡಿಯಾ ಚಳವಳಿಯನ್ನೂ ಶ್ಲಾಘನೆ ಮಾಡಿದ ಪ್ರಧಾನಿ ಮೋದಿ, ದೇಶದ  2 ಹಾಗೂ ಮೂರನೇ ಸ್ಥರದ ನಗರಗಳ ಯುವಕರು ಕೂಡ ಸ್ಟಾರ್ಟ್‌ಅಪ್‌ಗಳ ಕನಸು ಕಾಣುವುದು ಈಗ ಸಾಧ್ಯವಾಗುತ್ತಿದೆ. ಇದಕ್ಕೆ ಡಿಜಿಟಲ್‌ ಇಂಡಿಯಾ ಕಾರಣ ಎಂದರು.  ಸೆಮಿಕಂಡಕ್ಟರ್‌ಗಳು, 5G ಮತ್ತು ಆಪ್ಟಿಕಲ್ ಫೈಬರ್ ಉತ್ಪಾದನೆಯೊಂದಿಗೆ ಡಿಜಿಟಲ್ ಚಲನೆಯು ಶಿಕ್ಷಣ, ಆರೋಗ್ಯ, ಸಾಮಾನ್ಯ ಮನುಷ್ಯನ ಜೀವನದಲ್ಲಿ ಬದಲಾವಣೆಯನ್ನು ತೋರಿಸುತ್ತದೆ. ಈ ಡಿಕೇಡ್‌ ಭಾರತದ ಪಾಲಿಗೆ ಟೆಕೇಡ್‌ ಆಗಿದೆ. 5G, ಚಿಪ್ ತಯಾರಿಕೆಯೊಂದಿಗೆ, ನಾವು ಡಿಜಿಟಲ್ ಇಂಡಿಯಾದ ಮೂಲಕ ತಳಮಟ್ಟದಲ್ಲಿ ಕ್ರಾಂತಿಯನ್ನು ತರುತ್ತಿದ್ದೇವೆ ಎಂದು ಅವರು ಹೇಳಿದರು. ಡಿಜಿಟಲ್ ತಂತ್ರಜ್ಞಾನದ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬರುತ್ತಿವೆ ಎಂದು ಅವರು ಹೇಳಿದರು.
 

Follow Us:
Download App:
  • android
  • ios