Indian Independence Day Live News : ಆಗಸ್ಟ್ 15ರ ಹೈಲೈಟ್ಸ್

india celebrates azadi ka amrit mahotsav live updates

ಭಾರತ ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಮೋದಿ ದೇಶದ ಸಾಧನೆಗಳ ಬಗ್ಗೆ ಮಾತನಾಡಿದರು. ಇಡೀ ದೇಶವೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದು, ಇಲ್ಲಿದೆ ಹೈಲೈಟ್ಸ್‌..

5:01 PM IST

72 ಲಕ್ಷ ರೂಪಾಯಿ ಜಾಗ್ವಾರ್ ಕಾರಿಗೆ ತಿರಂಗ ಪೈಂಟ್, ಯುವಕನ ಕಾರ್ಯಕ್ಕೆ ಮೆಚ್ಚುಗೆ!

ಜಾಗ್ವಾರ್ ಕಾರಿಗೆ 2 ಲಕ್ಷ ರೂಪಾಯಿ ನೀಡಿ ತಿರಂಗ ಕಲರ್ ಪೈಂಟ್ಸ್ ಮಾಡಿಸಲಾಗಿದೆ. ಯವಕನ  ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

4:59 PM IST

ಸ್ಯಾಂಡಲ್‌ವುಡ್ ತಾರೆಯರ ಸ್ವಾತಂತ್ರ್ಯೋತ್ಸವ

ದೇಶದಾದ್ಯಂತ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ ಮನದಲ್ಲೂ ತ್ರಿವರ್ಣ ಧ್ವಜ ಹಾರುತ್ತಿದೆ. 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಘಳಿಗೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. 

ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

4:25 PM IST

ಸಚಿನ್, ರೋಹಿತ್ ಶರ್ಮಾ ಸೇರಿ ಟೀಂ ಇಂಡಿಯಾ ಕ್ರಿಕೆಟಿಗರ ಸ್ವಾತಂತ್ರ್ಯ ದಿನಾಚರಣೆ ಹೇಗಿತ್ತು?

ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಇಂದು ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಿಸಿದೆ.  ಕೆಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ ಜಿಂಬಾಬ್ವೆಯಲ್ಲಿ ಸ್ವಾತಂತ್ಯ ದಿನಾಚರಣೆ ಮಾಡಿದರೆ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಸೇರಿದಂತೆ ಕ್ರಿಕೆಟಿಗರು ವಿವಿಧೆಡೆ ಧ್ವಜಾರೋಹಣ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ.

ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

3:58 PM IST

ಧ್ವಜಾರೋಹಣ ಮಾಡಿ ಡಾನ್ಸ್‌ ಮಾಡಿದ ಮಮತಾ ಬ್ಯಾನರ್ಜಿ!

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮವನ್ನು ಉತ್ಸಾಹದಿಂದ ಆಚರಣೆ ಮಾಎಲಾಗಿದೆ. ಕೆಂಪುಕೋಟೆಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದ ಬಳಿಕ, ದೇಶದ ಇತರ ಕಡೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಧ್ವಜ ಹಾರಿಸಿದ ಬಳಿಕ ಸ್ಥಳೀಯ ಯುವಕರು ವಂದೇ ಮಾತರಂ ಹಾಗೂ ಭಾರತ್‌ ಮಾತಾ ಕಿ ಜೈ ಎನ್ನುವ ಘೋಷಣೆಯನ್ನು ಕೂಗಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

3:27 PM IST

Mandya: ಕೆರೆ ಮದ್ಯೆ ಮೀನುಗಾರರಿಂದ ಧ್ವಜಾರೋಹಣ

ಮಂಡ್ಯ: 75ನೇ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೆರೆ ಮಧ್ಯೆ ಧ್ವಜಾರೋಹಣ ನಡೆಸಿ ದೇಶಾಭಿಮಾನ ಮೆರೆದ ಮೀನುಗಾರರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ದೇವೀರಮ್ಮಣ್ಣಿ ಕೆರೆಯಲ್ಲಿ ಧ್ವಜಾರೋಹಣ. ತೆಪ್ಪದಲ್ಲಿ ಕೆರೆ ಮಧ್ಯಕ್ಕೆ ತೆರಳಿ ಧ್ವಜಾರೋಹಣ. ಕೆರೆಯಲ್ಲೇ ರಾಷ್ಟ್ರ ಗೀತೆ ಹಾಡಿ ವಿಶೇಷ ನಮನ. ಗಂಗಾಪರಮೇಶ್ವರಿ ಮೀನುಗಾರರ ಸಂಘದ ವತಿಯಿಂದ ವಿಶೇಷ ಆಚರಣೆ.
ತಹಶೀಲ್ದಾರ್ ರೂಪ ಪ್ರಶಂಸೆ. ಮೀನುಗಾರರ ವಿಶೇಷ ದೇಶಾಭಿಮಾನ ಕಂಡು ಮೆಚ್ಚುಗೆ.

3:01 PM IST

ಕಾಂಗ್ರೆಸ್ ಫ್ರೀಡಂ ಮಾರ್ಚ್‌ಗೆ ಜನಸಾಗರ

'ಜನ ಸಾಗರವೇ ಹರಿದು ಬರುತ್ತಿದೆ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಗೆ. ಡೋಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ನೃತ್ಯಗಳ ಸಂಭ್ರಮ ಶುರುವಾಗಿದ್ದು ನಮ್ಮ ಐತಿಹಾಸಿಕ ಸ್ವಾತಂತ್ರ್ಯ ನಡಿಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಹೊಸ ಇತಿಹಾಸ ಸೃಷ್ಟಿಯಾಗಲಿದೆ' ಪಕ್ಷ ಕೂ ಮಾಡಿದೆ. 

2:45 PM IST

Dharawad: 9 ಕಿಮೀ ಉದ್ದ ಹಾಗೂ 9 ಅಡಿ ಅಗಲದ ರಾಷ್ಟ್ರಧ್ವಜ ಮೆರವಣಿಗೆ

ಧಾರವಾಡ: ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಕಲಘಟಗಿಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ 9 ಕಿಮೀ ಉದ್ದ ಹಾಗೂ 9 ಅಡಿ ಅಗಲದ ರಾಷ್ಟ್ರಧ್ವಜ ಮೆರವಣಿಗೆ ನಡೆಯಿತು. ಸಾವಿರಾರು ಜನ ಸೇರಿದ್ದರು.

2:09 PM IST

ಬೊಮ್ಮಾಯಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕೆಲಸ ಮಾಡುತ್ತಿದ್ದಾರೆ: ಕೆ.ಗೋಪಾಲಯ್ಯ

ಸಚಿವ ಮಾಧುಸ್ವಾಮಿ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದು,  ಅದು ಮಾಧುಸ್ವಾಮಿಯವರ ವೈಯುಕ್ತಿಕ ಹೇಳಿಕೆ. ಕೊರೊನ ಸಂದರ್ಭವನ್ನು  ಸಮರ್ಥವಾಗಿ ಎದುರಿಸಿದ್ದೇವೆ. ಬಸವರಾಜ ಬೊಮ್ಮಾಯಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕೆಲಸ ಮಾಡುತ್ತಿದ್ದಾರೆ. ಮಾಧುಸ್ವಾಮಿ ಅವರು ಆ ರೀತಿ ಹೇಳಿಕೆ ಕೊಡಬಾರದಿತ್ತು. ಬಿಜೆಪಿ ಸರ್ಕಾರದ ಕ್ಯಾಬಿನೆಟ್‌ನಲ್ಲಿರುವ ನಾವೆಲ್ಲ ಒಂದೇ. ಏನಾದ್ರು ಇದ್ದರೆ ಮುಖ್ಯಮಂತ್ರಿ ಅವರಿಗೆ ಹೇಳಬಹುದಿತ್ತು. ಬಹಿರಂಗವಾಗಿ ಹೇಳುವುದು ಸರಿಯಲ್ಲ.ಸಚಿವ ಸಂಪುಟದಲ್ಲಿ ಏನೇನು ಜವಾಬ್ದಾರಿ ವಹಿಸಿದ್ದಾರೆ, ಅದನ್ನು ಅರಿತು ಆಯಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದೆ ಪಕ್ಷ ಅಧಿಕಾರಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಪ್ರಮಾಣಿಕವಾಗಿ ಈ‌ ರಾಜ್ಯಕ್ಕೆ ಏನೇನು ಮಾಡಬಹುದು, ಹಗಲಿರುಳು ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಮುಖ್ಯಮಂತ್ರಿಗಳ ಜೊತೆ ಇದ್ದೇವೆ. ಸಿಎಂ ಬದಲಾವಣೆ ಆಗುತ್ತಾರೆ ಎಂಬ ವಿಪಕ್ಷ ನಾಯಕರ ಹೇಳಿಕೆ ವಿಚಾರ. ವಿರೋಧ ಪಕ್ಷದಲ್ಲಿ ದಿನೇ ದಿನೇ ಏನು ಗೊಂದಲ ಆಗುತ್ತಿದೆ ಮೊದಲು ಅದನ್ನು ಸರಿಮಾಡಿಕೊಳ್ಳಲಿ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ, ಹಿರಿಯರಾದ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ನಾವೇ ಅಧಿಕಾರಕ್ಕೆ ಬರ್ತಿವಿ ಅನ್ನುವ ವಿಶ್ವಾಸ ನಮ್ಮಲ್ಲಿ ಇದೆ. ಕಾಂಗ್ರೆಸ್ ಒಂದು ಭ್ರಮೆಯಲ್ಲಿ ಹೇಳ್ತಾ ಇದೆ.

ಬಿಜೆಪಿ ಮೂರು ಹೋಳು ಆದಾಗ  120 ಸೀಟ್ ತೆಗೆದುಕೊಂಡಿದ್ದೇವೆ

ಕಾಂಗ್ರೆಸ್ ಐದು ವರ್ಷ ಅಧಿಕಾರ ಮಾಡಿ ಯಾಕೆ ಮತ್ತೆ ಅಧಿಕಾರಕ್ಕೆ ಬರಲಿಲ್ಲ, ಎಷ್ಟು ಸೀಟ್ ಗೆದ್ದರು

ಅತ್ಯುತ್ತಮವಾಗಿ ಕೆಲಸ ಮಾಡಿದೆವು,  ಅನ್ನಭಾಗ್ಯ, ಶಾದಿಭಾಗ್ಯ ಜಾರಿಗೆ ತಂದಿದ್ದೇವೆ ಎನ್ನುವವರನ್ನು ಯಾಕೆ ಈ ರಾಜ್ಯದ ಜನ ತಿರಸ್ಕಾರ ಮಾಡಿದರು

ಕಾಂಗ್ರೆಸ್ ಏಕೆ 79 ಸೀಟ್ ತೆಗೆದುಕೊಂಡರು, ಇದಕ್ಕೆ ಉತ್ತರ ಕೊಡಬೇಕು

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ

ಬಸವರಾಜ ಬೊಮ್ಮಾಯಿ ಅವರೇ ಸಂಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಿರುತ್ತಾರೆ

ಈಗಾಗಲೇ ಮಾಜಿಶಾಸಕ ಸುರೇಶ್‌ಗೌಡ ಅವರಿಗೆ ರಾಜ್ಯದ ಅಧ್ಯಕ್ಷರು ಅವರಿಗೆ ಸೂಚನೆ ಕೊಟ್ಟಿದ್ದಾರೆ

ಮತ್ತೆ ಅವರು ಎಲ್ಲಿಯೂ ಹೇಳಿಕೆ ನೀಡಿಲ್ಲ

ನಾವೆಲ್ಲರೂ ಸರ್ಕಾರದ ಇಂದು ಭಾಗವಾಗಿ ಕೆಲಸ ಮಾಡುತ್ತಿದ್ದೇವೆ

ನಮ್ಮಲ್ಲಿ ಏನಾದ್ರು ಸಣ್ಣಪುಟ್ಟ ಸಮಸ್ಯೆ ಇದ್ದರೆ ನಾಲ್ಕು ಗೋಡೆ ಮಧ್ಯೆ ಕುಳಿತು ಬಗೆಹರಿಸಿಕೊಳ್ಳುತ್ತೇವೆ

ಬಿಜೆಪಿ ಪಕ್ಷ ಇಡೀ ರಾಷ್ಟ್ರದಲ್ಲೇ ಒಂದು ದೊಡ್ಡ ಪಕ್ಷ

ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವನ್ನು ಇಡೀ ವಿಶ್ವ ನೋಡುತ್ತಿದೆ

ನಾವು ಅವರ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ

ನಮಗೆ ವಿಶ್ವಾಸವಿದೆ, ಮತ್ತೆ ನಾವೇ ಅಧಿಕಾರಕ್ಕೆ ಬಂದೇ ಬರುತ್ತೇವೆ

12:58 PM IST

ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನೇಕೆ ಉಲ್ಲೇಖಿಸಿಲ್ಲ?: ಸಿಎಂ ಬೊಮ್ಮಾಯಿ

 75 ವರ್ಷದಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡಿದ ಇತಿಹಾಸವನ್ನು ಬದಲಾವಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಕರ್ನಾಟಕದಲ್ಲೇ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಯಾಕೆ ಅವರ ಹೆಸರು ಉಲ್ಲೇಖ ಇಲ್ಲ. ಮೊದಲು ಸ್ವಾತಂತ್ರ್ಯಕ್ಕೆ ದಂಗೆ ಎದ್ದವರು ರೈತರು. ಜಲಿಯನ್ ವಾಲಾ ಬಾಗ್‌ನಲ್ಲಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ರು. ಅವರ ಹೆಸರು ಇತಿಹಾಸದಲ್ಲಿ ಬರುತ್ತದಾ?
ಯಾಕೆ ಇತಿಹಾಸಕಾರರು ಬರೆಯಲಿಲ್ಲ ಅಂಕೋಲಾದ ಉಪ್ಪಿನ ಸತ್ಯಾಗ್ರಹ, ಈಸೂರು ಸತ್ಯಾಗ್ರಹ, ಅದ್ಯಾವುದೂ ಇತಿಹಾಸದಲ್ಲಿ ಸೇರಿಸಲ್ಲ ಯಾಕೆ? ಸಾವಿರಾರು ಅನeಮದೇಯ ಹೋರಾಟಗಾರಿಗೆ ಈ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ದೇಶ ಸ್ವಾತಂತ್ರ್ಯ ಬಂದ ದಿನವೇ ದೇಶ ವಿಭಜನೆ ಆಯ್ತು. ದೇಶ ವಿಭಜನೆ ತಡೆಯಲು ಸಾವರ್ಕರ್, ಅಬ್ದುಲ್ ಗಫಾರ್ ಖಾನ್ ಪ್ರಯತ್ನ ಮಾಡಿದರು. ಆದ್ರೆ ಆಗ್ಲಿಲ್ಲ .ಹತ್ತು ಲಕ್ಷ ಜನ ನಿರಾಶ್ರಿತರಾದರು. ಸ್ವಾತಂತ್ರ್ಯ ಬಂದಾಗ 33 ಕೋಟಿ ಜನಸಂಖ್ಯೆ ಇತ್ತು. ಆಗ ಆಹಾರ ಸುರಕ್ಷತೆ ಇರಲಿಲ್ಲ. ಈಗ 133 ಕೋಟಿ ಜನಸಂಖ್ಯೆ ಇದೆ. ಆದ್ರೆ ಈಗ ಆಹಾರ ಸುರಕ್ಷತೆ ಇದೆ. ಈ ನಾಡಿನ ರೈತನಿಗೆ ಮೊದಲ ನಮನ. ಭಾರತ ಎಂದೂ ಬಗ್ಗಿಲ್ಲ. ಚೀನಾದ ಹಿನ್ನಡೆ ಒಂದನ್ನು ಬಿಟ್ರೆ ಭಾರತ ಎಂದು ಹಿನ್ನಡೆ ಆಯ್ತು
ಅದಕ್ಕೆ ಕಾರಣ ಅಂದಿನ ನಾಯಕತ್ವ ಸೈನಿಕರಿಗೆ ಶಕ್ತಿ ತುಂಬಿದ್ರೆ ನಾವು ಹಿನ್ನಡೆ ಅನುಭವಿಸ್ತಾ ಇರಲಿಲ್ಲಿ, ಎಂದು ಕಂಠೀರವ ಸ್ಟೇಡಿಯಂನಲ್ಲಿ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ.

12:35 PM IST

ಜಗತ್ತಿಗೆ ಸ್ವಾತಂತ್ರ್ಯೋತ್ಸವ ಸಂಭ್ರಮ ತೋರಿಸಿದವರು ಮೋದಿ: ಆರ್.ಅಶೋಕ

25ನೇ 50 ವರ್ಷದ ಸ್ವಾತಂತ್ರ್ಯ ಆಚರಣೆ ಹೇಗೆ ಮಾಡಿದ್ರು ಗೊತ್ತಿಲ್ಲ. ಆದ್ರೆ ನಮ್ಮ‌ ಮೋದಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೋದಿ ಜಗತ್ತಿಗೆ ತೋರಿಸಿದರು. ಸ್ವಾತಂತ್ರ್ಯ ತಂದವರು ನಾವು ಎಂದು ಕಾಂಗ್ರೆಸ್ ಹೇಳತ್ತೆ. ಸಿದ್ದರಾಮಯ್ಯ ಏನು ಸ್ವಾತಂತ್ರ್ಯ ತಂದವರಲ್ಲ‌ ಬಿಡಿ. ಅವರಿಗೆ ಇದು ಮೂರನೇ ಪಾರ್ಟಿ. ಅವರು ಬೆನಿಫಿಶಿಯರ್ ಅಷ್ಟೇ. ಸಂವಿಧಾನ ಬರೆದ ಅಂಬೇಡ್ಕರ್ ರನ್‌ ಪಾರ್ಲಿಮೆಂಟ್ ಗೆ ಹೋಗೊಕೆ ಬಿಟ್ಟಿಲ್ಲ ಕಾಂಗ್ರೆಸ್. ಅಂಬೇಡ್ಕರ್ ಹೆಸರು ಹೆಳಲು ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲ. ಕೆಲವರು ಕೈಯಲ್ಲಿ ಧ್ವಜ ಹಾರಿಸ್ತಾರೆ. ಆದರೆ ಮನಸಲ್ಲಿ ಬೇರೆ ಇರ್ತದೆ. ದೇಶ ಮೊದಲು ಎಂದ ಪಕ್ಷ ಬಿಜೆಪಿ, ಎಂದ ಕಂದಾಯ ಸಚಿವ ಆರ್.ಅಶೋಕ.

12:25 PM IST

Mysore: ಸ್ವಾತಂತ್ರ್ಯ ದಿನದಲ್ಲೂ ಪುನೀತ್ ರಾಜ್ ಕುಮಾರ್ ನೆನಪು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ. ಸ್ವಾತಂತ್ರ್ಯ ದಿನದಲ್ಲೂ ಪುನೀತ್ ರಾಜ್ ಕುಮಾರ್ ನೆನಪು. ಪುನೀತ್ ರಾಜ್ ಕುಮಾರ್ ಮುಖವಾಡ ಧರಿಸಿ ನೃತ್ಯ ಮಾಡಿದ ಶಾಲಾ ಮಕ್ಕಳು.
ಟಿ.ನರಸೀಪುರ ಪಟ್ಟಣ‌ ಸರ್ಕಾರಿ ವಿದ್ಯಾರ್ಥಿನಿಯರ ಶಾಲಾ ಮಕ್ಕಳಿಂದ ನೃತ್ಯ. ಅಪ್ಪು ಮುಖವಾಡ ಧರಿಸಿ ಮಾಡಿದ ನೃತ್ಯಕ್ಕೆ ಪ್ರೇಕ್ಷಕರ ಚಪ್ಪಾಳೆ. ಸ್ವಾತಂತ್ರ್ಯ ಸಂದೇಶ ಸಾರುವ ಗೀತೆಗಳಿಗೆ ನೃತ್ಯ ಮಾಡಿದ ಶಾಲಾ ಮಕ್ಕಳು.

12:24 PM IST

ಸಾಮಾನ್ಯ ಜನರಿಗೊಂದು ನ್ಯಾಯ, ಕಾಂಗ್ರೆಸ್ ಗೊಂದು ನ್ಯಾಯ

ಸಾಮಾನ್ಯ ಜನರಿಗೊಂದು ನ್ಯಾಯ, ಕಾಂಗ್ರೆಸ್ ಗೊಂದು ನ್ಯಾಯ. ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡ್ಬೇಕಾದ್ರೆ ಮಾಸ್ಕ್ ಕಡ್ಡಾಯ. ಮಾಸ್ಕ್ ಇಲ್ಲಂದ್ರೆ ನೋ ಎಂಟ್ರಿ ಅನ್ನೋ BMRCL. ಚೆಕಿಂಗ್ ವೇಳೆ ಮಾಸ್ಕ್ ಇಲ್ಲದೆ ಒಳಗಡೆ ಬಿಡದ ಮೆಟ್ರೋ ಸಿಬ್ಬಂದಿ. ಆದ್ರೆ ಇಂದಿನ ಕಾಂಗ್ರೆಸ್ ನಡಿಗೆ ರ್ಯಾಲಿಗೆ ಆಗಮಿಸೋ ಕಾರ್ಯಕರ್ತರ ಬಳಿ ಇಲ್ಲ ಮಾಸ್ಕ್. ಮೆಟ್ರೋದಲ್ಲಿ ಸಂಚಾರ ಮಾಡಲು 50 ಸಾವಿರ ಟಿಕೆಟ್ ಖರೀದಿ ಮಾಡಿದ ಕಾಂಗ್ರೆಸ್. ಟಿಕೆಟ್ ಪಡೆದು ಮೆಜೆಸ್ಟಿಕ್‌ಗೆ ಮೆಟ್ರೋ ಪ್ರಯಾಣ ಮಾಡ್ತಿರುವ ಕಾರ್ಯಕರ್ತರು. ಆದ್ರೆ ಕಾರ್ಯಕರ್ತರಿಗೆ ಯಾವುದೇ ಚೆಕಿಂಗ್ ಇಲ್ಲ,  ಮಾಸ್ಕ್ ಕೂಡ ಇಲ್ಲದೆ ಪ್ರಯಾಣ.ಸಾಮಾನ್ಯ ಜನರಿಗೆ ಮಾಸ್ಕ್ ಇಲ್ಲದೆ ಒಳಪ್ರವೇಶಕ್ಕೆ ನಿರಾಕರಣೆ. ಸಂಪೂರ್ಣವಾಗಿ ಕೋವಿಡ್ ನಿಯಮ ಗಾಳಿಗೆ ತೂರಿದ BMRCL.

12:14 PM IST

India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌

ಸ್ವಾತಂತ್ರ್ಯ ದಿನದಂದು ತಿರಂಗಾ ಧ್ವಜಕ್ಕೆ ಗೌರವ ಸಲ್ಲಿಸಲು ಐಟಿಬಿಪಿ ಕಾನ್‌ಸ್ಟೇಬಲ್‌ ಕೊಳಲು ನುಡಿಸಿದ್ದಾರೆ. ಕೊಳಲು ನುಡಿಸುತ್ತಿರುವ ಈ ವಿಡಿಯೋ ವೈರಲ್‌ ಆಗುತ್ತಿದೆ.

11:44 AM IST

Mangalore: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಸಾವು

ಮಂಗಳೂರು: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಸಾವು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಘಟನೆ ನಿವೃತ ಸೈನಿಕ ಗಂಗಾಧರ ಗೌಡ ಕುಸಿದು ಬಿದ್ದು ಸಾವು. ಕುಟ್ರುಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದ್ವಜಾರೋಹಣ. ಹಳೆ ಸ್ಷೇಷನ್ ಅಮೃತ ಸರೋವರ ಬಳಿ ನಡೆದ ಕಾರ್ಯಕ್ರಮ. ದ್ವಜಾರೋಹಣ ವೇಳೆ ಧ್ವಜ ವಂದನೆಯ ಮಾಹಿತಿ ನೀಡುತ್ತಿದ್ದರು. ಈ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾದ ಮಾಜಿ ಸೈನಿಕ. ತಕ್ಷಣ ಆಸ್ಪತ್ರಗೆ ರವಾನಿಸಿದ್ರೂ ದಾರಿ ಮಧ್ಯೆ ಮಾಜಿ ಸೈನಿಕ ಸಾವು.

11:07 AM IST

ದೇಶಬಾಂಧವರ ಎದುರು ನನ್ನ ನೋವು ತೋಡಿಕೊಳ್ಳದೆ, ಇನ್ಯಾರ ಮುಂದೆ ಹೇಳಿಕೊಳ್ಳಲಿ?

ಇತ್ತೀಚೆಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದು ವಿವಾದವಾಗಿತ್ತು. ಇದರ ಕುರಿತಾಗಿ ಕೆಂಪುಕೋಟೆಯಲ್ಲಿ ಸೂಚ್ಯವಾಗಿ ತಿಳಿಸಿದ ಪ್ರಧಾನಿ ಮೋದಿ, ಮಹಿಳೆಯರಿಗೆ ಅಗೌರವ ತೋರದೇ ಇರುವ ಪ್ರತಿಜ್ಞೆಯನ್ನು ಮಾಡಬೇಕಿದೆ ಎಂದು ಹೇಳಿದರು.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

11:05 AM IST

Tumakuru: 76ನೇ ಸ್ವಾತಂತ್ರ ದಿನಾಚರಣೆಯಲ್ಲಿ ಗೃಹಸಚಿವರ ಯಡವಟ್ಟು

ತುಮಕೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಪೋಟೋಕ್ಕೆ ಅಗೌರವ ತೋರಿದ ಗೃಹ ಸಚಿವ ಅರಗ ಜ್ಞಾನೇಂದ್ರ.. ಗಾಂಧಿಜೀ ಪೋಟೋದ ಆಸರೆಯಿಂದ ಕಾಲಿಗೆ ಶೂ ಧರಿಸಿದ ಗೃಹ ಸಚಿವ. ಗಾಂಧಿ ಪೋಟೋ ಹಿಡಿದು ಶೂ ಧರಿಸಿದ ಅರಗ ಜ್ಞಾನೇಂದ್ರ.. ಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳಿಂದ ಗೌರವ ವಂಧನೆ ಸ್ವೀಕಾರ ಮಾಡಿದ ಗೃಹ ಸಚಿವ. ಬಳಿಕ ಗಾಂಧಿಜೀ ಭಾವಚಿತ್ರಕ್ಕೆ ಪುಪ್ಷ ನಮನ ಸಲ್ಲಿಸುವ ವೇಳೆ ಅವಾಂತರ. ಶೂ ತೆಗೆದು ಗಾಂಧಿಜೀ ಪೋಟೋಗೆ ಪುಷ್ಪ ನಮನ ಸಲ್ಲಿಕೆ.‌ ಬಳಿಕ ಗಾಂಧಿಜೀ ಪೋಟೋವನ್ನು ಹಿಡಿದುಕೊಂಡೇ ಶೂ ಧರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ.  ತುಮಕೂರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ ದಿನಾಚರಣೆ. ದೇವರ ಪೋಟೊವನ್ನು ಹಿಡಿದುಕೊಂಡು ಕಾಲಿಗೆ ಶೂ ಧರಿಸುವವರೇ ಗೃಹ ಸಚಿವರು? ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಪಿತಾಮಹಾನಿಗೆ ಅಗೌರವ ತೋರಿದ ಗೃಹ ಸಚಿವ ಅರಗ ಜ್ಞಾನೇಂದ್ರ.

10:47 AM IST

Chikkamgaluru: ಪೌರಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ

ಚಿಕ್ಕಮಗಳೂರು: ತಾನೇ ನಿಂತು ಪೌರ ಕಾರ್ಮಿಕ ಮಹಿಳೆ ಧ್ವಜಾರೋಹಣ ಮಾಡಿಸಿದ ಶಾಸಕ ಸಿ.ಟಿ.ರವಿ. ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ನಲ್ಲಿ ಧ್ವಜಾರೋಹಣ. ಪೌರ ಕಾರ್ಮಿಕ ಮಹಿಳೆ ನಾಗಮ್ಮ ಎಂಬುವರಿಂದ ಧ್ವಜಾರೋಹಣ. ಕಾಫಿನಾಡಲ್ಲಿ ಅದ್ಧೂರಿ  ಸ್ವಾತಂತ್ರ್ಯ ಅಮೃತ ಮಹೋತ್ಸವ. ಧ್ವಜಾರೋಹಣದಲ್ಲಿ 2000ಕ್ಕೂ ಅಧಿಕ ಮಂದಿ ಭಾಗಿ. ನಗರದ ಮುಖ್ಯ ಬೀದಿಗಳಲ್ಲಿ ಬೃಹತ್ ತಿರಂಗ ಯಾತ್ರೆ ನಡೆಸಿ ಧ್ವಜಾರೋಹಣ.

10:34 AM IST

Hubballi: ನೆಹರು ಮೈದಾನದಲ್ಲಿ ಹಾರಿದ ತಿರಂಗ

ಹುಬ್ಬಳ್ಳಿ: ನೆಹರು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ. ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಭಾಗಿ.

10:32 AM IST

Raichuru: ​ ಧ್ವಜಾರೋಹಣ ಮಾಡಿದ ಶಂಕರ್ ಪಾಟೀಲ್ ಮುನೇನಕೊಪ್ಪ

ರಾಯಚೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಂದ ರಾಷ್ಟ್ರ ಧ್ವಜಾರೋಹಣ. ಜನಪ್ರತಿನಿಧಿ, ಅಧಿಕಾರಿ,ಸಿಬ್ಬಂದಿ, ವಿದ್ಯಾರ್ಥಿಗಳು, ಜನರು ಭಾಗಿ.

10:30 AM IST

ಚಿಕ್ಕಮಗಳೂರು: ಡಿಸಿ ರಮೇಶ್‌ರಿಂದ ಧ್ವಜಾರೋಹಣ

ಚಿಕ್ಕಮಗಳೂರು: ಜಿಲ್ಲಾಧಿಕಾರಿ ರಮೇಶ್ ಅವರಿಂದ ಧ್ವಜಾರೋಹಣ. ಜಿಲ್ಲಾ ಆಟದ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಭಾಗವಹಿಸಿದ್ದರು.

10:27 AM IST

ವೇದ, ಪುರಾಣ ಓದುವ ಮೊದಲು ಇತಿಹಾಸ ಓದಬೇಕು: ಡಿಕೆಶಿ

ಯಾವಾ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೋ, ಅದನ್ನ ಆಡಳಿತಾರೂಢದಲ್ಲಿರುವರು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ‌ಪಕ್ಷ ಅದನ್ನ ರಕ್ಷಿಸಬೇಕಿದೆ. ಧರ್ಮ ಧರ್ಮದ ನಡುವೆ, ಜಾತಿ ಜಾತಿ ನಡುವೆ ವೈಮನಸ್ಸನ್ನು ಬಿತ್ತಿದ್ದಾರೆ. ಜಾತಿ ಧರ್ಮ ವೈಮನಸ್ಸನ್ನ ತೊಡೆದು ಹಾಕುವ ಸಂಕಲ್ಪವನ್ನ ಕಾಂಗ್ರೆಸ್ ‌ಪಕ್ಷ ಮಾಡಬೇಕಿದೆ. ಸ್ವಾತಂತ್ರ್ಯದ ಮೂಲಕ ಪ್ರಜಾಪ್ರಭುತ್ವದ ದೊಡ್ಡ ದೇಶವಾಗಿದೆ. ತ್ರಿವರ್ಣ  ಧ್ವಜವನ್ನು ನಮ್ಮ ದೇಶ ಧ್ವಜವನ್ನಾಗಿ ನಮ್ಮ ಹಿರಿಯರು ಕೊಟ್ಟಿದ್ದರು. ಹಾಗಾಗಿ ಇದನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದೇವೆ. ವೇದ, ಪುರಾಣ ಓದುವ ಮೊದಲು ಇತಿಹಾಸ ಓದಬೇಕು. ಟಿಪ್ಪು ಸುಲ್ತಾನ್, ಹೈದರಾಲಿ ಹೋರಾಟ ಮರೆಯಲು ಸಾಧ್ಯವಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ರಿಗೆ ನಡುಕ ಹುಟ್ಟಿಸಿದ್ದರು. ಸೂರಪುರದ ವೆಂಕಟಪ್ಪ ನಾಯಕರ ಹೋರಾಟ ನೆನಪು ಮಾಡಿಕೊಳ್ಳಬೇಕು. ಸ್ವರಾಜ್ ಜನ್ಮ ಸಿದ್ದಹಕ್ಕು ಎಂದಿದ್ದನ್ನು ಸ್ಮರಿಸಬೇಕು. ದೇಶದಲ್ಲಿ ಒಂದೇ ಒಂದೇ ಬಂಡಾಯ ಧ್ವನಿ ಏಳುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಹೊಸ ನಾಯಕತ್ವ ಕೊಟ್ಟಿದ್ದು ಹೊಸ ತಿರುವು. ಗಾಂಧೀಜಿ ಜೊತೆಯಲ್ಲಿ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ಹೋರಾಟ ನಡೆಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ, ಗಾಂಧಿ ಅವರ ನಾಯಕತ್ವದಲ್ಲಿ ಬ್ರಿಟಿಷ್ ವಿರುದ್ಧ ಹೋರಾಟ ಮಾಡಿದ ಫಲವಾಗಿ ಸ್ವಾತಂತ್ರ್ಯ ಸಿಕ್ತು. ಹಿರಿಯರನ್ನ ನೆನಪಿಸುವ ದಿನ ಇದು,  ಎಂದ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್

10:20 AM IST

ಸ್ವಾತಂತ್ರೋತ್ಸವ ಭಾಷಣದಲ್ಲೂ ವಿಪಕ್ಷಗಳನ್ನ ಕೆಣಕಿದ ಸಿಎಂ ಬೊಮ್ಮಾಯಿ

ಕೆಲವರನ್ನ ಬಿಂಬಿಸುವ ನೆಪದಲ್ಲಿ ಅಂಬೇಡ್ಕರ್ ಅವರನ್ನ ಮರೆಸುವ ಪ್ರಯತ್ನ ಆಗ್ತಿದೆ ಎಂದು ಪ್ರಸ್ತಾಪ ಮಾಡಿದ ಸಿಎಂ ಬೊಮ್ಮಾಯಿ.ನೆಹರು ಫೋಟೋ ಜಾಹಿರಾತಿನಲ್ಲಿ ಹಾಕಿಲ್ಲ ಎಂದು ಸಿಎಂ ಹಾಗು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿತ್ತು ಕಾಂಗ್ರೆಸ್.

10:13 AM IST

Independence Day: ಸ್ವಾತಂತ್ರ್ಯ ಹೋರಾಟಕ್ಕೆ ಹೆಗಲಾಗಿದ್ದ ಹುಬ್ಬಳ್ಳಿ-ಧಾರವಾಡ

 ಆ. 15, ಹುಬ್ಬಳ್ಳಿಯ ಗುಳ್ಳವ್ವನ ಕೆರೆ (ನೆಹರು ಮೈದಾನ). ಸುತ್ತಲ ಊರುಗಳಿಂದ ಚಕ್ಕಡಿ, ಗಾಡಿಯಲ್ಲಿ ಬಂದಿದ್ದ ಜನ ಅವತ್ತು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದರು. ಅದರಂತೆ ನಗರದ ಹಲವೆಡೆ ಸ್ವಾತಂತ್ರ್ಯ ಸಡಗರ ಮನೆ ಮಾಡಿತ್ತು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:08 AM IST

ಜೈ ಜವಾನ್‌, ಜೈ ಕಿಸಾನ್‌ ಘೋಷಣೆಗೆ ಹೊಸ ಸ್ಲೋಗನ್‌ ಸೇರಿಸಿದ ಪ್ರಧಾನಿ ಮೋದಿ!

ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಜೈ ಜವಾನ್‌, ಜೈ ಕಿಸಾನ್‌ ಎನ್ನುವ ಘೋಷಣೆಯನ್ನು ನೀಡಿದ್ದರು. ಇದಾದ ಬಳಿಕ ಅಟಲ್‌ ಬಿಹಾರ ವಾಜಪೇಯಿ ಈ ಸ್ಲೋಗನ್‌ಗೆ ಜೈ ವಿಜ್ಞಾನ್‌ ಅನ್ನೂ ಸೇರಿದ್ದರು. ಈಗ ಈ ಸ್ಲೋಗನ್‌ಗೆ ಜೈ ಅನುಸಂಧಾನ್‌ ಅನ್ನು ಸೇರಿಸುವ ಸಮಯ ಎಂದು ಕೆಂಪುಕೋಟೆಯ ಮೇಲೆ ನಿಂತು ಮಾಡಿದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

10:06 AM IST

ನಿಮ್ಮ ಪ್ರೀತಿಪಾತ್ರರಿಗೆ ಹಂಚಿಕೊಳ್ಳಲು ಶುಭಾಶಯಗಳು ಇಲ್ಲಿದೆ..

ದೇಶ ಇಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಸ್ವಾತಂತ್ರ್ಯ ದಿನವನ್ನು (Independence Day) ಆಚರಿಸಲು ಫೇಸ್‌ಬುಕ್‌ (Facebook), ವಾಟ್ಸಾಪ್‌ (WhatsApp) ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲು ಕೆಲವು ಶುಭಾಶಯಗಳು ಇಲ್ಲಿವೆ.

ಇಲ್ಲಿ ಕ್ಲಿಕ್ಕಿಸಿ

10:05 AM IST

ದೇಶವನ್ನು ಕೊಳ್ಳೆ ಹೊಡೆದರ ಬಿಡೋಲ್ಲ, ಕುಟುಂಬ ರಾಜಕಾರಣದ ಗುಡುಗಿದ ಮೋದಿ

ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ದೇಶದ ದೊಡ್ಡ ಸವಾಲುಗಳು. ದೇಶವನ್ನು ಕೊಳ್ಳೆ ಹೊಡೆಯುವವರನ್ನು ಬಿಡೋಲ್ಲವೆಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡದ ಮೋದಿ ಗುಡುಗಿದರು. 

10:03 AM IST

ಮೃತ ಸೈನಿಕ ಕುಟುಂಬಕ್ಕೆ ಸರ್ಕಾರಿ ಹುದ್ದೆ ಜೊತೆ 25 ಲಕ್ಷ ಘೋಷಣೆ

ಸ್ವಾತಂತ್ರ್ಯೋತ್ಸದ ಸಂದರ್ಭದಲ್ಲಿ ಮಾಜಿ‌ ಸಿಎಂ ಯಡಿಯೂರಪ್ಪರನ್ನ ನೆನೆದ ಸಿಎಂ ಬೊಮ್ಮಾಯಿ, ನಮ್ಮ ನಾಯಕರು, ಯಡಿಯೂರಪ್ಪ ನವರು,ಅವರ ದಕ್ಷ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ಕೊವೀಡ್ ನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಮೃತ ಸೈನಿಕ ಕುಟುಂಬಕ್ಕೆ ಸರ್ಕಾರಿ ಹುದ್ದೆ ಜೊತೆ 25 ಲಕ್ಷ ಘೋಷಣೆ ಸೇರಿ ಅಮೃತಮಹೋತ್ಸವ ಪ್ರಯುಕ್ತ ಒಟ್ಟು ಐದು ಹೊಸ ಯೋಜನೆ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ‌.

9:50 AM IST

ನಾಡಿನ ಜನತೆಗೆ 76 ನೇ ಸ್ವಂತ್ರೋತ್ಸವ ಶುಭಾಶಯ ಕೊರಿದ ಸಿಎಂ

- ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷಾಚರಣೆಯ ಈ ಸಂಭ್ರಮದಲ್ಲಿ ದೇಶವನ್ನು ಪರಕೀಯರ ದಾಸ್ಯದಿಂದ ಬಿಡುಗಡೆಗೊಳಿಸಲು ಹೋರಾಡಿದ ಮಹನೀಯರನ್ನು ನೆನೆಯುವುದು ನಮ್ಮ ಮೊದಲ ಕರ್ತವ್ಯವಾಗಿದೆ.

- ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಸಂಖ್ಯಾತರು ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ವಲ್ಲಭವಾಯಿ ಪಟೇಲ್, ಭಗತ್ ಸಿಂಗ್, ಅಬುಲ್ ಕಲಾಂ ಆಜಾದ್‌, ಜವಾಹರ್ ಲಾಲ್ ನೆಹರೂ ಮೊದಲಾದ ಮಹನೀಯರ ಹೋರಾಟ ಚರಿತ್ರಾರ್ಹವಾದುದು. ಕನ್ನಡ ನಾಡಿನಲ್ಲಿ ಕಿತ್ತೂರು ವೀರರಾಣಿ ಚೆನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣ ಮೊದಲಾದವರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಸಾಮ್ರಾಜ್ಯಶಾಹಿ ಬ್ರಿಟೀಷರ ವಿರುದ್ಧ ನಡೆಸಿದ ಹೋರಾಟ ಮೈ ನವಿರೇಳಿಸುತ್ತದೆ. ಇವರೆಲ್ಲರ ತ್ಯಾಗದ ಫಲವಾಗಿ ದೊರೆತ ಸ್ವಾತಂತ್ರ್ಯದ ಸವಿಯುಣ್ಣುವ ಜೊತೆಗೆ ದೇಶದ ಉನ್ನತಿಗಾಗಿ ನಮ್ಮ ಕರ್ತವ್ಯವನ್ನು ಅರಿತು ನಿರ್ವಹಿಸುವುದೇ ಆ ಮಹನೀಯರ ತ್ಯಾಗಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ, ಎಂದ ಸಿಎಂ ಬೊಮ್ಮಾಯಿ.

9:32 AM IST

ಶ್ರೀನಗರದ ಲಾಲ್ ಚೌಕದಲ್ಲಿ ವಂದೇ ಮಾತರಂ ಘೋಷಣೆ

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಯುವಕರ ಗುಪೊಂದು ರಾಷ್ಟ್ರ ಧ್ವಜ ಪ್ರದರ್ಶಿಸಿ, ವಂದೇ ಮಾತರಂ ಘೋಷಣೆ ಕೂಗಿದರು. 

9:17 AM IST

2047ರ ಸ್ವಾತಂತ್ರ್ಯೋತ್ಸವ ಶತಮಾನೋತ್ಸವಕ್ಕೆ ಹೋರಾಟಗಾರರ ಕನಸು ನನಸಾಗಿಸುವ ಪಣ ತೊಡೋಣ: ಮೋದಿ

ಭಾರತದಲ್ಲಿ ಇಂದು ರಾಜಕೀಯ ಸ್ಥಿರತೆ ಇದೆ. ಭಾರತವನ್ನು ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. 2047ರ ಸ್ವಾತಂತ್ರ್ಯೋತ್ಸವ ಶತಮಾನೋತ್ಸವಕ್ಕೆ ಎಲ್ಲ ಹೋರಾಟಗಾರರ ಕನಸು ನನಸಾಗಿಸುವ ಪಣ ತೊಡೋಣ. ಗುಲಾಮಿತನದ ಒಂದೇ ಒಂದು ಅಂಶವಿದ್ದರೂ ಅದನ್ನು ಕಿತ್ತೊಗೆಯೋಣ ಎಂದೂ ಮೋದಿ ಹೇಳಿದರು. 

8:45 AM IST

75 ವರ್ಷದಲ್ಲಿ ಅನೇಕ ಏಳು- ಬೀಳು, ಕಷ್ಟಗಳನ್ನು ಎದುರಿಸಿದ್ದೇವೆ

75 ವರ್ಷದಲ್ಲಿ ಅನೇಕ ಏಳು- ಬೀಳು, ಕಷ್ಟಗಳನ್ನು ಎದುರಿಸಿದ್ದೇವೆ. ಇವೆಲ್ಲದರ ಮಧ್ಯೆ, 75 ವರ್ಷದಲ್ಲಿ ದೇಶದ ಸಂಕಲ್ಪ ಈಡೇರಿಸಲು ಶ್ರಮಿಸಿದ ಸೈನಿಕರು, ಕಾರ್ಮಿಕರು, ಪೊಲೀಸರು, ಜನಪ್ರತಿನಿಧಿಗಳು ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳುವ ದಿನವಿದು ಎಂದು ಪ್ರಧಾನಿ ಮೋದಿ ಹೇಳಿದರು.

8:40 AM IST

ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌, ಜೈ ಅನುಸಂಧಾನ್: ಪ್ರಧಾನಿ ಮೋದಿ

ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯದ ಹೋರಾಟದ ಬಗ್ಗೆ ಭಾರತದ ಸಾಧನೆಗಳ ಬಗ್ಗೆ ಹಾಗೂ ಕನಸಿನ ಬಗ್ಗೆ ಮಾತನಾಡಿದರು. ದಂಡಿಯಾತ್ರೆ ಮೂಲಕ ಆರಂಭವಾದ ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶದ ಮೂಲೆ, ಮೂಲೆಗೂ ಹಬ್ಬಿತು. ಆದಿವಾಸಿ ನಾಯಕರು ಅರಣ್ಯದಲ್ಲಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸ್ವಾತಂತ್ರ್ಯ ಹೋರಾಟದ ಎಲ್ಲ ಬಗೆಯಲ್ಲೂ ಇಡೀ ದೇಶ ಪಾಲ್ಗೊಂಡಿದ್ದು ನಮ್ಮ ಸೌಭಾಗ್ಯ ಎಂದು ತಮ್ಮ ಭಾಷಣದಲ್ಲಿ ಹೇಳಿದರು. 

ನೆಹರೂ, ವಲ್ಲಭಬಾಯ್‌ ಪಟೇಲ್, ಶಾಸ್ತ್ರಿ, ಶ್ಯಾಮ್ ಪ್ರಸಾದ್ ಮುಖರ್ಜಿ, ಲೋಹಿಯ ಉಪಾಧ್ಯ, ವಿನೋಬಾ ಭಾವೆ ಸೇರಿ ಮಹಾ ಪುರುಷರಿಗೆ ನಮನ ಸಲ್ಲಿಸುವ ದಿನ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್, ಅಂಬೇಡ್ಕರ್, ವೀರ್ ಸಾವರ್ಕರ್‌ ಅವರಿಗೆ ದೇಶದ ಜನರು ಕೃತಜ್ಞರಾಗಿದೆ.

ಮಂಗಲ ಪಾಂಡೆ, ತಾತ್ಯಾ ಟೋಪಿ, ಭಗತ್ ಸಿಂಗ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾಹ್ ಖಾನ್ ಮುಂತಾದ ಕ್ರಾಂತಿವೀರರಿಗೆ ದೇಶದ ಜನರು ಕೃತಜ್ಞತೆಯಿಂದ ಇದ್ದಾರೆ. 

ಬ್ರಿಟಿಷರ ವಿರುದ್ಧ ಹೋರಾಡಿದ ಈ ಎಲ್ಲ ಕ್ರಾಂತಿವೀರರಿಗೆ ದೇಶ ಋಣಿಯಾಗಿದೆ. ರಾಣೀ ಲಕ್ಷ್ಮೀಬಾಯಿ, ದುರ್ಗಾಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಝರತ್  ಭಾರತೀಯ ನಾರೀ ಶಕ್ತಿ , ಸ್ವಾತಂತ್ರ್ಯಕ್ಕಾಗಿ ಸಮಾನವಾಗಿ ಹೋರಾಡಿತು. ಈ ಎಲ್ಲ ಹೋರಾಟಗಾರರನ್ನು ಸ್ಮರಿಸುತ್ತಾ, ಗೌರವ ಸಲ್ಲಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

‘ನಮ್ಮ ತಿರಂಗ’ ಇಂದು ಸಂಭ್ರಮದಿಂದ  ಹಾರಾಡುತ್ತಿದೆ. ಇದು ಐತಿಹಾಸಿಕ ದಿನ, ಹೊಸ ಸಂಕಲ್ಪ, ಹೊಸ ಸಾಮರ್ಥ್ಯದಿಂದ ಹೊಸ ಹೆಜ್ಜೆ ಇಡುವ ದಿನ.ಸ್ವಾತಂತ್ರ್ಯ ಹೋರಾಟದ ಮೂಲದ ಗುಲಾಮಗಿರಿಯಿಂದ ಹೊರಬಂದಿದ್ದೇವೆ.

ದೇಶದ ಮೂಲೆ, ಮೂಲೆಯಲ್ಲೂ ಗುಲಾಮಗಿರಿಯ ವಿರುದ್ಧ ಹೋರಾಟ ನಡೆಯಿತು. ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಭಾರತೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರಿಗೆ ನಮನ ಸಲ್ಲಿಸುವ ದಿನ. ತ್ಯಾಗ, ಬಲಿದಾನ ಮಾಡಿದವರ ಆಸೆ, ಕನಸುಗಳನ್ನು ಈಡೇರಿಸುವ ಸಂಕಲ್ಪ ತೊಡಬೇಕಿದೆ ಎಂದೂ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಹೇಳಿದರು. 

8:24 AM IST

ಕೆಂಪು ಕೋಟೆಯಿಂದ ಪ್ರಧಾನಿ ಭಾಷಣ

8:16 AM IST

LIVE TV

  •  
  •  

5:01 PM IST:

ಜಾಗ್ವಾರ್ ಕಾರಿಗೆ 2 ಲಕ್ಷ ರೂಪಾಯಿ ನೀಡಿ ತಿರಂಗ ಕಲರ್ ಪೈಂಟ್ಸ್ ಮಾಡಿಸಲಾಗಿದೆ. ಯವಕನ  ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

4:59 PM IST:

ದೇಶದಾದ್ಯಂತ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ ಮನದಲ್ಲೂ ತ್ರಿವರ್ಣ ಧ್ವಜ ಹಾರುತ್ತಿದೆ. 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಘಳಿಗೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. 

ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

4:26 PM IST:

ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಇಂದು ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಿಸಿದೆ.  ಕೆಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ ಜಿಂಬಾಬ್ವೆಯಲ್ಲಿ ಸ್ವಾತಂತ್ಯ ದಿನಾಚರಣೆ ಮಾಡಿದರೆ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಸೇರಿದಂತೆ ಕ್ರಿಕೆಟಿಗರು ವಿವಿಧೆಡೆ ಧ್ವಜಾರೋಹಣ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ.

ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

3:58 PM IST:

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮವನ್ನು ಉತ್ಸಾಹದಿಂದ ಆಚರಣೆ ಮಾಎಲಾಗಿದೆ. ಕೆಂಪುಕೋಟೆಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದ ಬಳಿಕ, ದೇಶದ ಇತರ ಕಡೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಧ್ವಜ ಹಾರಿಸಿದ ಬಳಿಕ ಸ್ಥಳೀಯ ಯುವಕರು ವಂದೇ ಮಾತರಂ ಹಾಗೂ ಭಾರತ್‌ ಮಾತಾ ಕಿ ಜೈ ಎನ್ನುವ ಘೋಷಣೆಯನ್ನು ಕೂಗಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

3:27 PM IST:

ಮಂಡ್ಯ: 75ನೇ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೆರೆ ಮಧ್ಯೆ ಧ್ವಜಾರೋಹಣ ನಡೆಸಿ ದೇಶಾಭಿಮಾನ ಮೆರೆದ ಮೀನುಗಾರರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ದೇವೀರಮ್ಮಣ್ಣಿ ಕೆರೆಯಲ್ಲಿ ಧ್ವಜಾರೋಹಣ. ತೆಪ್ಪದಲ್ಲಿ ಕೆರೆ ಮಧ್ಯಕ್ಕೆ ತೆರಳಿ ಧ್ವಜಾರೋಹಣ. ಕೆರೆಯಲ್ಲೇ ರಾಷ್ಟ್ರ ಗೀತೆ ಹಾಡಿ ವಿಶೇಷ ನಮನ. ಗಂಗಾಪರಮೇಶ್ವರಿ ಮೀನುಗಾರರ ಸಂಘದ ವತಿಯಿಂದ ವಿಶೇಷ ಆಚರಣೆ.
ತಹಶೀಲ್ದಾರ್ ರೂಪ ಪ್ರಶಂಸೆ. ಮೀನುಗಾರರ ವಿಶೇಷ ದೇಶಾಭಿಮಾನ ಕಂಡು ಮೆಚ್ಚುಗೆ.

3:01 PM IST:

'ಜನ ಸಾಗರವೇ ಹರಿದು ಬರುತ್ತಿದೆ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಗೆ. ಡೋಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ನೃತ್ಯಗಳ ಸಂಭ್ರಮ ಶುರುವಾಗಿದ್ದು ನಮ್ಮ ಐತಿಹಾಸಿಕ ಸ್ವಾತಂತ್ರ್ಯ ನಡಿಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಹೊಸ ಇತಿಹಾಸ ಸೃಷ್ಟಿಯಾಗಲಿದೆ' ಪಕ್ಷ ಕೂ ಮಾಡಿದೆ. 

2:45 PM IST:

ಧಾರವಾಡ: ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಕಲಘಟಗಿಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ 9 ಕಿಮೀ ಉದ್ದ ಹಾಗೂ 9 ಅಡಿ ಅಗಲದ ರಾಷ್ಟ್ರಧ್ವಜ ಮೆರವಣಿಗೆ ನಡೆಯಿತು. ಸಾವಿರಾರು ಜನ ಸೇರಿದ್ದರು.

2:09 PM IST:

ಸಚಿವ ಮಾಧುಸ್ವಾಮಿ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದು,  ಅದು ಮಾಧುಸ್ವಾಮಿಯವರ ವೈಯುಕ್ತಿಕ ಹೇಳಿಕೆ. ಕೊರೊನ ಸಂದರ್ಭವನ್ನು  ಸಮರ್ಥವಾಗಿ ಎದುರಿಸಿದ್ದೇವೆ. ಬಸವರಾಜ ಬೊಮ್ಮಾಯಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕೆಲಸ ಮಾಡುತ್ತಿದ್ದಾರೆ. ಮಾಧುಸ್ವಾಮಿ ಅವರು ಆ ರೀತಿ ಹೇಳಿಕೆ ಕೊಡಬಾರದಿತ್ತು. ಬಿಜೆಪಿ ಸರ್ಕಾರದ ಕ್ಯಾಬಿನೆಟ್‌ನಲ್ಲಿರುವ ನಾವೆಲ್ಲ ಒಂದೇ. ಏನಾದ್ರು ಇದ್ದರೆ ಮುಖ್ಯಮಂತ್ರಿ ಅವರಿಗೆ ಹೇಳಬಹುದಿತ್ತು. ಬಹಿರಂಗವಾಗಿ ಹೇಳುವುದು ಸರಿಯಲ್ಲ.ಸಚಿವ ಸಂಪುಟದಲ್ಲಿ ಏನೇನು ಜವಾಬ್ದಾರಿ ವಹಿಸಿದ್ದಾರೆ, ಅದನ್ನು ಅರಿತು ಆಯಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದೆ ಪಕ್ಷ ಅಧಿಕಾರಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಪ್ರಮಾಣಿಕವಾಗಿ ಈ‌ ರಾಜ್ಯಕ್ಕೆ ಏನೇನು ಮಾಡಬಹುದು, ಹಗಲಿರುಳು ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಮುಖ್ಯಮಂತ್ರಿಗಳ ಜೊತೆ ಇದ್ದೇವೆ. ಸಿಎಂ ಬದಲಾವಣೆ ಆಗುತ್ತಾರೆ ಎಂಬ ವಿಪಕ್ಷ ನಾಯಕರ ಹೇಳಿಕೆ ವಿಚಾರ. ವಿರೋಧ ಪಕ್ಷದಲ್ಲಿ ದಿನೇ ದಿನೇ ಏನು ಗೊಂದಲ ಆಗುತ್ತಿದೆ ಮೊದಲು ಅದನ್ನು ಸರಿಮಾಡಿಕೊಳ್ಳಲಿ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ, ಹಿರಿಯರಾದ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ನಾವೇ ಅಧಿಕಾರಕ್ಕೆ ಬರ್ತಿವಿ ಅನ್ನುವ ವಿಶ್ವಾಸ ನಮ್ಮಲ್ಲಿ ಇದೆ. ಕಾಂಗ್ರೆಸ್ ಒಂದು ಭ್ರಮೆಯಲ್ಲಿ ಹೇಳ್ತಾ ಇದೆ.

ಬಿಜೆಪಿ ಮೂರು ಹೋಳು ಆದಾಗ  120 ಸೀಟ್ ತೆಗೆದುಕೊಂಡಿದ್ದೇವೆ

ಕಾಂಗ್ರೆಸ್ ಐದು ವರ್ಷ ಅಧಿಕಾರ ಮಾಡಿ ಯಾಕೆ ಮತ್ತೆ ಅಧಿಕಾರಕ್ಕೆ ಬರಲಿಲ್ಲ, ಎಷ್ಟು ಸೀಟ್ ಗೆದ್ದರು

ಅತ್ಯುತ್ತಮವಾಗಿ ಕೆಲಸ ಮಾಡಿದೆವು,  ಅನ್ನಭಾಗ್ಯ, ಶಾದಿಭಾಗ್ಯ ಜಾರಿಗೆ ತಂದಿದ್ದೇವೆ ಎನ್ನುವವರನ್ನು ಯಾಕೆ ಈ ರಾಜ್ಯದ ಜನ ತಿರಸ್ಕಾರ ಮಾಡಿದರು

ಕಾಂಗ್ರೆಸ್ ಏಕೆ 79 ಸೀಟ್ ತೆಗೆದುಕೊಂಡರು, ಇದಕ್ಕೆ ಉತ್ತರ ಕೊಡಬೇಕು

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ

ಬಸವರಾಜ ಬೊಮ್ಮಾಯಿ ಅವರೇ ಸಂಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಿರುತ್ತಾರೆ

ಈಗಾಗಲೇ ಮಾಜಿಶಾಸಕ ಸುರೇಶ್‌ಗೌಡ ಅವರಿಗೆ ರಾಜ್ಯದ ಅಧ್ಯಕ್ಷರು ಅವರಿಗೆ ಸೂಚನೆ ಕೊಟ್ಟಿದ್ದಾರೆ

ಮತ್ತೆ ಅವರು ಎಲ್ಲಿಯೂ ಹೇಳಿಕೆ ನೀಡಿಲ್ಲ

ನಾವೆಲ್ಲರೂ ಸರ್ಕಾರದ ಇಂದು ಭಾಗವಾಗಿ ಕೆಲಸ ಮಾಡುತ್ತಿದ್ದೇವೆ

ನಮ್ಮಲ್ಲಿ ಏನಾದ್ರು ಸಣ್ಣಪುಟ್ಟ ಸಮಸ್ಯೆ ಇದ್ದರೆ ನಾಲ್ಕು ಗೋಡೆ ಮಧ್ಯೆ ಕುಳಿತು ಬಗೆಹರಿಸಿಕೊಳ್ಳುತ್ತೇವೆ

ಬಿಜೆಪಿ ಪಕ್ಷ ಇಡೀ ರಾಷ್ಟ್ರದಲ್ಲೇ ಒಂದು ದೊಡ್ಡ ಪಕ್ಷ

ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವನ್ನು ಇಡೀ ವಿಶ್ವ ನೋಡುತ್ತಿದೆ

ನಾವು ಅವರ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ

ನಮಗೆ ವಿಶ್ವಾಸವಿದೆ, ಮತ್ತೆ ನಾವೇ ಅಧಿಕಾರಕ್ಕೆ ಬಂದೇ ಬರುತ್ತೇವೆ

12:58 PM IST:

 75 ವರ್ಷದಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡಿದ ಇತಿಹಾಸವನ್ನು ಬದಲಾವಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಕರ್ನಾಟಕದಲ್ಲೇ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಯಾಕೆ ಅವರ ಹೆಸರು ಉಲ್ಲೇಖ ಇಲ್ಲ. ಮೊದಲು ಸ್ವಾತಂತ್ರ್ಯಕ್ಕೆ ದಂಗೆ ಎದ್ದವರು ರೈತರು. ಜಲಿಯನ್ ವಾಲಾ ಬಾಗ್‌ನಲ್ಲಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ರು. ಅವರ ಹೆಸರು ಇತಿಹಾಸದಲ್ಲಿ ಬರುತ್ತದಾ?
ಯಾಕೆ ಇತಿಹಾಸಕಾರರು ಬರೆಯಲಿಲ್ಲ ಅಂಕೋಲಾದ ಉಪ್ಪಿನ ಸತ್ಯಾಗ್ರಹ, ಈಸೂರು ಸತ್ಯಾಗ್ರಹ, ಅದ್ಯಾವುದೂ ಇತಿಹಾಸದಲ್ಲಿ ಸೇರಿಸಲ್ಲ ಯಾಕೆ? ಸಾವಿರಾರು ಅನeಮದೇಯ ಹೋರಾಟಗಾರಿಗೆ ಈ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ದೇಶ ಸ್ವಾತಂತ್ರ್ಯ ಬಂದ ದಿನವೇ ದೇಶ ವಿಭಜನೆ ಆಯ್ತು. ದೇಶ ವಿಭಜನೆ ತಡೆಯಲು ಸಾವರ್ಕರ್, ಅಬ್ದುಲ್ ಗಫಾರ್ ಖಾನ್ ಪ್ರಯತ್ನ ಮಾಡಿದರು. ಆದ್ರೆ ಆಗ್ಲಿಲ್ಲ .ಹತ್ತು ಲಕ್ಷ ಜನ ನಿರಾಶ್ರಿತರಾದರು. ಸ್ವಾತಂತ್ರ್ಯ ಬಂದಾಗ 33 ಕೋಟಿ ಜನಸಂಖ್ಯೆ ಇತ್ತು. ಆಗ ಆಹಾರ ಸುರಕ್ಷತೆ ಇರಲಿಲ್ಲ. ಈಗ 133 ಕೋಟಿ ಜನಸಂಖ್ಯೆ ಇದೆ. ಆದ್ರೆ ಈಗ ಆಹಾರ ಸುರಕ್ಷತೆ ಇದೆ. ಈ ನಾಡಿನ ರೈತನಿಗೆ ಮೊದಲ ನಮನ. ಭಾರತ ಎಂದೂ ಬಗ್ಗಿಲ್ಲ. ಚೀನಾದ ಹಿನ್ನಡೆ ಒಂದನ್ನು ಬಿಟ್ರೆ ಭಾರತ ಎಂದು ಹಿನ್ನಡೆ ಆಯ್ತು
ಅದಕ್ಕೆ ಕಾರಣ ಅಂದಿನ ನಾಯಕತ್ವ ಸೈನಿಕರಿಗೆ ಶಕ್ತಿ ತುಂಬಿದ್ರೆ ನಾವು ಹಿನ್ನಡೆ ಅನುಭವಿಸ್ತಾ ಇರಲಿಲ್ಲಿ, ಎಂದು ಕಂಠೀರವ ಸ್ಟೇಡಿಯಂನಲ್ಲಿ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ.

12:35 PM IST:

25ನೇ 50 ವರ್ಷದ ಸ್ವಾತಂತ್ರ್ಯ ಆಚರಣೆ ಹೇಗೆ ಮಾಡಿದ್ರು ಗೊತ್ತಿಲ್ಲ. ಆದ್ರೆ ನಮ್ಮ‌ ಮೋದಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೋದಿ ಜಗತ್ತಿಗೆ ತೋರಿಸಿದರು. ಸ್ವಾತಂತ್ರ್ಯ ತಂದವರು ನಾವು ಎಂದು ಕಾಂಗ್ರೆಸ್ ಹೇಳತ್ತೆ. ಸಿದ್ದರಾಮಯ್ಯ ಏನು ಸ್ವಾತಂತ್ರ್ಯ ತಂದವರಲ್ಲ‌ ಬಿಡಿ. ಅವರಿಗೆ ಇದು ಮೂರನೇ ಪಾರ್ಟಿ. ಅವರು ಬೆನಿಫಿಶಿಯರ್ ಅಷ್ಟೇ. ಸಂವಿಧಾನ ಬರೆದ ಅಂಬೇಡ್ಕರ್ ರನ್‌ ಪಾರ್ಲಿಮೆಂಟ್ ಗೆ ಹೋಗೊಕೆ ಬಿಟ್ಟಿಲ್ಲ ಕಾಂಗ್ರೆಸ್. ಅಂಬೇಡ್ಕರ್ ಹೆಸರು ಹೆಳಲು ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲ. ಕೆಲವರು ಕೈಯಲ್ಲಿ ಧ್ವಜ ಹಾರಿಸ್ತಾರೆ. ಆದರೆ ಮನಸಲ್ಲಿ ಬೇರೆ ಇರ್ತದೆ. ದೇಶ ಮೊದಲು ಎಂದ ಪಕ್ಷ ಬಿಜೆಪಿ, ಎಂದ ಕಂದಾಯ ಸಚಿವ ಆರ್.ಅಶೋಕ.

12:25 PM IST:

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ. ಸ್ವಾತಂತ್ರ್ಯ ದಿನದಲ್ಲೂ ಪುನೀತ್ ರಾಜ್ ಕುಮಾರ್ ನೆನಪು. ಪುನೀತ್ ರಾಜ್ ಕುಮಾರ್ ಮುಖವಾಡ ಧರಿಸಿ ನೃತ್ಯ ಮಾಡಿದ ಶಾಲಾ ಮಕ್ಕಳು.
ಟಿ.ನರಸೀಪುರ ಪಟ್ಟಣ‌ ಸರ್ಕಾರಿ ವಿದ್ಯಾರ್ಥಿನಿಯರ ಶಾಲಾ ಮಕ್ಕಳಿಂದ ನೃತ್ಯ. ಅಪ್ಪು ಮುಖವಾಡ ಧರಿಸಿ ಮಾಡಿದ ನೃತ್ಯಕ್ಕೆ ಪ್ರೇಕ್ಷಕರ ಚಪ್ಪಾಳೆ. ಸ್ವಾತಂತ್ರ್ಯ ಸಂದೇಶ ಸಾರುವ ಗೀತೆಗಳಿಗೆ ನೃತ್ಯ ಮಾಡಿದ ಶಾಲಾ ಮಕ್ಕಳು.

12:24 PM IST:

ಸಾಮಾನ್ಯ ಜನರಿಗೊಂದು ನ್ಯಾಯ, ಕಾಂಗ್ರೆಸ್ ಗೊಂದು ನ್ಯಾಯ. ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡ್ಬೇಕಾದ್ರೆ ಮಾಸ್ಕ್ ಕಡ್ಡಾಯ. ಮಾಸ್ಕ್ ಇಲ್ಲಂದ್ರೆ ನೋ ಎಂಟ್ರಿ ಅನ್ನೋ BMRCL. ಚೆಕಿಂಗ್ ವೇಳೆ ಮಾಸ್ಕ್ ಇಲ್ಲದೆ ಒಳಗಡೆ ಬಿಡದ ಮೆಟ್ರೋ ಸಿಬ್ಬಂದಿ. ಆದ್ರೆ ಇಂದಿನ ಕಾಂಗ್ರೆಸ್ ನಡಿಗೆ ರ್ಯಾಲಿಗೆ ಆಗಮಿಸೋ ಕಾರ್ಯಕರ್ತರ ಬಳಿ ಇಲ್ಲ ಮಾಸ್ಕ್. ಮೆಟ್ರೋದಲ್ಲಿ ಸಂಚಾರ ಮಾಡಲು 50 ಸಾವಿರ ಟಿಕೆಟ್ ಖರೀದಿ ಮಾಡಿದ ಕಾಂಗ್ರೆಸ್. ಟಿಕೆಟ್ ಪಡೆದು ಮೆಜೆಸ್ಟಿಕ್‌ಗೆ ಮೆಟ್ರೋ ಪ್ರಯಾಣ ಮಾಡ್ತಿರುವ ಕಾರ್ಯಕರ್ತರು. ಆದ್ರೆ ಕಾರ್ಯಕರ್ತರಿಗೆ ಯಾವುದೇ ಚೆಕಿಂಗ್ ಇಲ್ಲ,  ಮಾಸ್ಕ್ ಕೂಡ ಇಲ್ಲದೆ ಪ್ರಯಾಣ.ಸಾಮಾನ್ಯ ಜನರಿಗೆ ಮಾಸ್ಕ್ ಇಲ್ಲದೆ ಒಳಪ್ರವೇಶಕ್ಕೆ ನಿರಾಕರಣೆ. ಸಂಪೂರ್ಣವಾಗಿ ಕೋವಿಡ್ ನಿಯಮ ಗಾಳಿಗೆ ತೂರಿದ BMRCL.

12:14 PM IST:

ಸ್ವಾತಂತ್ರ್ಯ ದಿನದಂದು ತಿರಂಗಾ ಧ್ವಜಕ್ಕೆ ಗೌರವ ಸಲ್ಲಿಸಲು ಐಟಿಬಿಪಿ ಕಾನ್‌ಸ್ಟೇಬಲ್‌ ಕೊಳಲು ನುಡಿಸಿದ್ದಾರೆ. ಕೊಳಲು ನುಡಿಸುತ್ತಿರುವ ಈ ವಿಡಿಯೋ ವೈರಲ್‌ ಆಗುತ್ತಿದೆ.

11:44 AM IST:

ಮಂಗಳೂರು: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಸಾವು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಘಟನೆ ನಿವೃತ ಸೈನಿಕ ಗಂಗಾಧರ ಗೌಡ ಕುಸಿದು ಬಿದ್ದು ಸಾವು. ಕುಟ್ರುಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದ್ವಜಾರೋಹಣ. ಹಳೆ ಸ್ಷೇಷನ್ ಅಮೃತ ಸರೋವರ ಬಳಿ ನಡೆದ ಕಾರ್ಯಕ್ರಮ. ದ್ವಜಾರೋಹಣ ವೇಳೆ ಧ್ವಜ ವಂದನೆಯ ಮಾಹಿತಿ ನೀಡುತ್ತಿದ್ದರು. ಈ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾದ ಮಾಜಿ ಸೈನಿಕ. ತಕ್ಷಣ ಆಸ್ಪತ್ರಗೆ ರವಾನಿಸಿದ್ರೂ ದಾರಿ ಮಧ್ಯೆ ಮಾಜಿ ಸೈನಿಕ ಸಾವು.

11:07 AM IST:

ಇತ್ತೀಚೆಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದು ವಿವಾದವಾಗಿತ್ತು. ಇದರ ಕುರಿತಾಗಿ ಕೆಂಪುಕೋಟೆಯಲ್ಲಿ ಸೂಚ್ಯವಾಗಿ ತಿಳಿಸಿದ ಪ್ರಧಾನಿ ಮೋದಿ, ಮಹಿಳೆಯರಿಗೆ ಅಗೌರವ ತೋರದೇ ಇರುವ ಪ್ರತಿಜ್ಞೆಯನ್ನು ಮಾಡಬೇಕಿದೆ ಎಂದು ಹೇಳಿದರು.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

11:05 AM IST:

ತುಮಕೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಪೋಟೋಕ್ಕೆ ಅಗೌರವ ತೋರಿದ ಗೃಹ ಸಚಿವ ಅರಗ ಜ್ಞಾನೇಂದ್ರ.. ಗಾಂಧಿಜೀ ಪೋಟೋದ ಆಸರೆಯಿಂದ ಕಾಲಿಗೆ ಶೂ ಧರಿಸಿದ ಗೃಹ ಸಚಿವ. ಗಾಂಧಿ ಪೋಟೋ ಹಿಡಿದು ಶೂ ಧರಿಸಿದ ಅರಗ ಜ್ಞಾನೇಂದ್ರ.. ಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳಿಂದ ಗೌರವ ವಂಧನೆ ಸ್ವೀಕಾರ ಮಾಡಿದ ಗೃಹ ಸಚಿವ. ಬಳಿಕ ಗಾಂಧಿಜೀ ಭಾವಚಿತ್ರಕ್ಕೆ ಪುಪ್ಷ ನಮನ ಸಲ್ಲಿಸುವ ವೇಳೆ ಅವಾಂತರ. ಶೂ ತೆಗೆದು ಗಾಂಧಿಜೀ ಪೋಟೋಗೆ ಪುಷ್ಪ ನಮನ ಸಲ್ಲಿಕೆ.‌ ಬಳಿಕ ಗಾಂಧಿಜೀ ಪೋಟೋವನ್ನು ಹಿಡಿದುಕೊಂಡೇ ಶೂ ಧರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ.  ತುಮಕೂರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ ದಿನಾಚರಣೆ. ದೇವರ ಪೋಟೊವನ್ನು ಹಿಡಿದುಕೊಂಡು ಕಾಲಿಗೆ ಶೂ ಧರಿಸುವವರೇ ಗೃಹ ಸಚಿವರು? ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಪಿತಾಮಹಾನಿಗೆ ಅಗೌರವ ತೋರಿದ ಗೃಹ ಸಚಿವ ಅರಗ ಜ್ಞಾನೇಂದ್ರ.

10:47 AM IST:

ಚಿಕ್ಕಮಗಳೂರು: ತಾನೇ ನಿಂತು ಪೌರ ಕಾರ್ಮಿಕ ಮಹಿಳೆ ಧ್ವಜಾರೋಹಣ ಮಾಡಿಸಿದ ಶಾಸಕ ಸಿ.ಟಿ.ರವಿ. ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ನಲ್ಲಿ ಧ್ವಜಾರೋಹಣ. ಪೌರ ಕಾರ್ಮಿಕ ಮಹಿಳೆ ನಾಗಮ್ಮ ಎಂಬುವರಿಂದ ಧ್ವಜಾರೋಹಣ. ಕಾಫಿನಾಡಲ್ಲಿ ಅದ್ಧೂರಿ  ಸ್ವಾತಂತ್ರ್ಯ ಅಮೃತ ಮಹೋತ್ಸವ. ಧ್ವಜಾರೋಹಣದಲ್ಲಿ 2000ಕ್ಕೂ ಅಧಿಕ ಮಂದಿ ಭಾಗಿ. ನಗರದ ಮುಖ್ಯ ಬೀದಿಗಳಲ್ಲಿ ಬೃಹತ್ ತಿರಂಗ ಯಾತ್ರೆ ನಡೆಸಿ ಧ್ವಜಾರೋಹಣ.

10:34 AM IST:

ಹುಬ್ಬಳ್ಳಿ: ನೆಹರು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ. ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಭಾಗಿ.

10:32 AM IST:

ರಾಯಚೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಂದ ರಾಷ್ಟ್ರ ಧ್ವಜಾರೋಹಣ. ಜನಪ್ರತಿನಿಧಿ, ಅಧಿಕಾರಿ,ಸಿಬ್ಬಂದಿ, ವಿದ್ಯಾರ್ಥಿಗಳು, ಜನರು ಭಾಗಿ.

10:30 AM IST:

ಚಿಕ್ಕಮಗಳೂರು: ಜಿಲ್ಲಾಧಿಕಾರಿ ರಮೇಶ್ ಅವರಿಂದ ಧ್ವಜಾರೋಹಣ. ಜಿಲ್ಲಾ ಆಟದ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಭಾಗವಹಿಸಿದ್ದರು.

10:27 AM IST:

ಯಾವಾ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೋ, ಅದನ್ನ ಆಡಳಿತಾರೂಢದಲ್ಲಿರುವರು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ‌ಪಕ್ಷ ಅದನ್ನ ರಕ್ಷಿಸಬೇಕಿದೆ. ಧರ್ಮ ಧರ್ಮದ ನಡುವೆ, ಜಾತಿ ಜಾತಿ ನಡುವೆ ವೈಮನಸ್ಸನ್ನು ಬಿತ್ತಿದ್ದಾರೆ. ಜಾತಿ ಧರ್ಮ ವೈಮನಸ್ಸನ್ನ ತೊಡೆದು ಹಾಕುವ ಸಂಕಲ್ಪವನ್ನ ಕಾಂಗ್ರೆಸ್ ‌ಪಕ್ಷ ಮಾಡಬೇಕಿದೆ. ಸ್ವಾತಂತ್ರ್ಯದ ಮೂಲಕ ಪ್ರಜಾಪ್ರಭುತ್ವದ ದೊಡ್ಡ ದೇಶವಾಗಿದೆ. ತ್ರಿವರ್ಣ  ಧ್ವಜವನ್ನು ನಮ್ಮ ದೇಶ ಧ್ವಜವನ್ನಾಗಿ ನಮ್ಮ ಹಿರಿಯರು ಕೊಟ್ಟಿದ್ದರು. ಹಾಗಾಗಿ ಇದನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದೇವೆ. ವೇದ, ಪುರಾಣ ಓದುವ ಮೊದಲು ಇತಿಹಾಸ ಓದಬೇಕು. ಟಿಪ್ಪು ಸುಲ್ತಾನ್, ಹೈದರಾಲಿ ಹೋರಾಟ ಮರೆಯಲು ಸಾಧ್ಯವಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ರಿಗೆ ನಡುಕ ಹುಟ್ಟಿಸಿದ್ದರು. ಸೂರಪುರದ ವೆಂಕಟಪ್ಪ ನಾಯಕರ ಹೋರಾಟ ನೆನಪು ಮಾಡಿಕೊಳ್ಳಬೇಕು. ಸ್ವರಾಜ್ ಜನ್ಮ ಸಿದ್ದಹಕ್ಕು ಎಂದಿದ್ದನ್ನು ಸ್ಮರಿಸಬೇಕು. ದೇಶದಲ್ಲಿ ಒಂದೇ ಒಂದೇ ಬಂಡಾಯ ಧ್ವನಿ ಏಳುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಹೊಸ ನಾಯಕತ್ವ ಕೊಟ್ಟಿದ್ದು ಹೊಸ ತಿರುವು. ಗಾಂಧೀಜಿ ಜೊತೆಯಲ್ಲಿ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ಹೋರಾಟ ನಡೆಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ, ಗಾಂಧಿ ಅವರ ನಾಯಕತ್ವದಲ್ಲಿ ಬ್ರಿಟಿಷ್ ವಿರುದ್ಧ ಹೋರಾಟ ಮಾಡಿದ ಫಲವಾಗಿ ಸ್ವಾತಂತ್ರ್ಯ ಸಿಕ್ತು. ಹಿರಿಯರನ್ನ ನೆನಪಿಸುವ ದಿನ ಇದು,  ಎಂದ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್

10:20 AM IST:

ಕೆಲವರನ್ನ ಬಿಂಬಿಸುವ ನೆಪದಲ್ಲಿ ಅಂಬೇಡ್ಕರ್ ಅವರನ್ನ ಮರೆಸುವ ಪ್ರಯತ್ನ ಆಗ್ತಿದೆ ಎಂದು ಪ್ರಸ್ತಾಪ ಮಾಡಿದ ಸಿಎಂ ಬೊಮ್ಮಾಯಿ.ನೆಹರು ಫೋಟೋ ಜಾಹಿರಾತಿನಲ್ಲಿ ಹಾಕಿಲ್ಲ ಎಂದು ಸಿಎಂ ಹಾಗು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿತ್ತು ಕಾಂಗ್ರೆಸ್.

10:13 AM IST:

 ಆ. 15, ಹುಬ್ಬಳ್ಳಿಯ ಗುಳ್ಳವ್ವನ ಕೆರೆ (ನೆಹರು ಮೈದಾನ). ಸುತ್ತಲ ಊರುಗಳಿಂದ ಚಕ್ಕಡಿ, ಗಾಡಿಯಲ್ಲಿ ಬಂದಿದ್ದ ಜನ ಅವತ್ತು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದರು. ಅದರಂತೆ ನಗರದ ಹಲವೆಡೆ ಸ್ವಾತಂತ್ರ್ಯ ಸಡಗರ ಮನೆ ಮಾಡಿತ್ತು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:08 AM IST:

ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಜೈ ಜವಾನ್‌, ಜೈ ಕಿಸಾನ್‌ ಎನ್ನುವ ಘೋಷಣೆಯನ್ನು ನೀಡಿದ್ದರು. ಇದಾದ ಬಳಿಕ ಅಟಲ್‌ ಬಿಹಾರ ವಾಜಪೇಯಿ ಈ ಸ್ಲೋಗನ್‌ಗೆ ಜೈ ವಿಜ್ಞಾನ್‌ ಅನ್ನೂ ಸೇರಿದ್ದರು. ಈಗ ಈ ಸ್ಲೋಗನ್‌ಗೆ ಜೈ ಅನುಸಂಧಾನ್‌ ಅನ್ನು ಸೇರಿಸುವ ಸಮಯ ಎಂದು ಕೆಂಪುಕೋಟೆಯ ಮೇಲೆ ನಿಂತು ಮಾಡಿದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

10:06 AM IST:

ದೇಶ ಇಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಸ್ವಾತಂತ್ರ್ಯ ದಿನವನ್ನು (Independence Day) ಆಚರಿಸಲು ಫೇಸ್‌ಬುಕ್‌ (Facebook), ವಾಟ್ಸಾಪ್‌ (WhatsApp) ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲು ಕೆಲವು ಶುಭಾಶಯಗಳು ಇಲ್ಲಿವೆ.

ಇಲ್ಲಿ ಕ್ಲಿಕ್ಕಿಸಿ

10:05 AM IST:

ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ದೇಶದ ದೊಡ್ಡ ಸವಾಲುಗಳು. ದೇಶವನ್ನು ಕೊಳ್ಳೆ ಹೊಡೆಯುವವರನ್ನು ಬಿಡೋಲ್ಲವೆಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡದ ಮೋದಿ ಗುಡುಗಿದರು. 

10:03 AM IST:

ಸ್ವಾತಂತ್ರ್ಯೋತ್ಸದ ಸಂದರ್ಭದಲ್ಲಿ ಮಾಜಿ‌ ಸಿಎಂ ಯಡಿಯೂರಪ್ಪರನ್ನ ನೆನೆದ ಸಿಎಂ ಬೊಮ್ಮಾಯಿ, ನಮ್ಮ ನಾಯಕರು, ಯಡಿಯೂರಪ್ಪ ನವರು,ಅವರ ದಕ್ಷ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ಕೊವೀಡ್ ನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಮೃತ ಸೈನಿಕ ಕುಟುಂಬಕ್ಕೆ ಸರ್ಕಾರಿ ಹುದ್ದೆ ಜೊತೆ 25 ಲಕ್ಷ ಘೋಷಣೆ ಸೇರಿ ಅಮೃತಮಹೋತ್ಸವ ಪ್ರಯುಕ್ತ ಒಟ್ಟು ಐದು ಹೊಸ ಯೋಜನೆ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ‌.

9:49 AM IST:

- ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷಾಚರಣೆಯ ಈ ಸಂಭ್ರಮದಲ್ಲಿ ದೇಶವನ್ನು ಪರಕೀಯರ ದಾಸ್ಯದಿಂದ ಬಿಡುಗಡೆಗೊಳಿಸಲು ಹೋರಾಡಿದ ಮಹನೀಯರನ್ನು ನೆನೆಯುವುದು ನಮ್ಮ ಮೊದಲ ಕರ್ತವ್ಯವಾಗಿದೆ.

- ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಸಂಖ್ಯಾತರು ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ವಲ್ಲಭವಾಯಿ ಪಟೇಲ್, ಭಗತ್ ಸಿಂಗ್, ಅಬುಲ್ ಕಲಾಂ ಆಜಾದ್‌, ಜವಾಹರ್ ಲಾಲ್ ನೆಹರೂ ಮೊದಲಾದ ಮಹನೀಯರ ಹೋರಾಟ ಚರಿತ್ರಾರ್ಹವಾದುದು. ಕನ್ನಡ ನಾಡಿನಲ್ಲಿ ಕಿತ್ತೂರು ವೀರರಾಣಿ ಚೆನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣ ಮೊದಲಾದವರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಸಾಮ್ರಾಜ್ಯಶಾಹಿ ಬ್ರಿಟೀಷರ ವಿರುದ್ಧ ನಡೆಸಿದ ಹೋರಾಟ ಮೈ ನವಿರೇಳಿಸುತ್ತದೆ. ಇವರೆಲ್ಲರ ತ್ಯಾಗದ ಫಲವಾಗಿ ದೊರೆತ ಸ್ವಾತಂತ್ರ್ಯದ ಸವಿಯುಣ್ಣುವ ಜೊತೆಗೆ ದೇಶದ ಉನ್ನತಿಗಾಗಿ ನಮ್ಮ ಕರ್ತವ್ಯವನ್ನು ಅರಿತು ನಿರ್ವಹಿಸುವುದೇ ಆ ಮಹನೀಯರ ತ್ಯಾಗಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ, ಎಂದ ಸಿಎಂ ಬೊಮ್ಮಾಯಿ.

9:32 AM IST:

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಯುವಕರ ಗುಪೊಂದು ರಾಷ್ಟ್ರ ಧ್ವಜ ಪ್ರದರ್ಶಿಸಿ, ವಂದೇ ಮಾತರಂ ಘೋಷಣೆ ಕೂಗಿದರು. 

9:17 AM IST:

ಭಾರತದಲ್ಲಿ ಇಂದು ರಾಜಕೀಯ ಸ್ಥಿರತೆ ಇದೆ. ಭಾರತವನ್ನು ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. 2047ರ ಸ್ವಾತಂತ್ರ್ಯೋತ್ಸವ ಶತಮಾನೋತ್ಸವಕ್ಕೆ ಎಲ್ಲ ಹೋರಾಟಗಾರರ ಕನಸು ನನಸಾಗಿಸುವ ಪಣ ತೊಡೋಣ. ಗುಲಾಮಿತನದ ಒಂದೇ ಒಂದು ಅಂಶವಿದ್ದರೂ ಅದನ್ನು ಕಿತ್ತೊಗೆಯೋಣ ಎಂದೂ ಮೋದಿ ಹೇಳಿದರು. 

8:45 AM IST:

75 ವರ್ಷದಲ್ಲಿ ಅನೇಕ ಏಳು- ಬೀಳು, ಕಷ್ಟಗಳನ್ನು ಎದುರಿಸಿದ್ದೇವೆ. ಇವೆಲ್ಲದರ ಮಧ್ಯೆ, 75 ವರ್ಷದಲ್ಲಿ ದೇಶದ ಸಂಕಲ್ಪ ಈಡೇರಿಸಲು ಶ್ರಮಿಸಿದ ಸೈನಿಕರು, ಕಾರ್ಮಿಕರು, ಪೊಲೀಸರು, ಜನಪ್ರತಿನಿಧಿಗಳು ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳುವ ದಿನವಿದು ಎಂದು ಪ್ರಧಾನಿ ಮೋದಿ ಹೇಳಿದರು.

8:40 AM IST:

ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯದ ಹೋರಾಟದ ಬಗ್ಗೆ ಭಾರತದ ಸಾಧನೆಗಳ ಬಗ್ಗೆ ಹಾಗೂ ಕನಸಿನ ಬಗ್ಗೆ ಮಾತನಾಡಿದರು. ದಂಡಿಯಾತ್ರೆ ಮೂಲಕ ಆರಂಭವಾದ ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶದ ಮೂಲೆ, ಮೂಲೆಗೂ ಹಬ್ಬಿತು. ಆದಿವಾಸಿ ನಾಯಕರು ಅರಣ್ಯದಲ್ಲಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸ್ವಾತಂತ್ರ್ಯ ಹೋರಾಟದ ಎಲ್ಲ ಬಗೆಯಲ್ಲೂ ಇಡೀ ದೇಶ ಪಾಲ್ಗೊಂಡಿದ್ದು ನಮ್ಮ ಸೌಭಾಗ್ಯ ಎಂದು ತಮ್ಮ ಭಾಷಣದಲ್ಲಿ ಹೇಳಿದರು. 

ನೆಹರೂ, ವಲ್ಲಭಬಾಯ್‌ ಪಟೇಲ್, ಶಾಸ್ತ್ರಿ, ಶ್ಯಾಮ್ ಪ್ರಸಾದ್ ಮುಖರ್ಜಿ, ಲೋಹಿಯ ಉಪಾಧ್ಯ, ವಿನೋಬಾ ಭಾವೆ ಸೇರಿ ಮಹಾ ಪುರುಷರಿಗೆ ನಮನ ಸಲ್ಲಿಸುವ ದಿನ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್, ಅಂಬೇಡ್ಕರ್, ವೀರ್ ಸಾವರ್ಕರ್‌ ಅವರಿಗೆ ದೇಶದ ಜನರು ಕೃತಜ್ಞರಾಗಿದೆ.

ಮಂಗಲ ಪಾಂಡೆ, ತಾತ್ಯಾ ಟೋಪಿ, ಭಗತ್ ಸಿಂಗ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾಹ್ ಖಾನ್ ಮುಂತಾದ ಕ್ರಾಂತಿವೀರರಿಗೆ ದೇಶದ ಜನರು ಕೃತಜ್ಞತೆಯಿಂದ ಇದ್ದಾರೆ. 

ಬ್ರಿಟಿಷರ ವಿರುದ್ಧ ಹೋರಾಡಿದ ಈ ಎಲ್ಲ ಕ್ರಾಂತಿವೀರರಿಗೆ ದೇಶ ಋಣಿಯಾಗಿದೆ. ರಾಣೀ ಲಕ್ಷ್ಮೀಬಾಯಿ, ದುರ್ಗಾಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಝರತ್  ಭಾರತೀಯ ನಾರೀ ಶಕ್ತಿ , ಸ್ವಾತಂತ್ರ್ಯಕ್ಕಾಗಿ ಸಮಾನವಾಗಿ ಹೋರಾಡಿತು. ಈ ಎಲ್ಲ ಹೋರಾಟಗಾರರನ್ನು ಸ್ಮರಿಸುತ್ತಾ, ಗೌರವ ಸಲ್ಲಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

‘ನಮ್ಮ ತಿರಂಗ’ ಇಂದು ಸಂಭ್ರಮದಿಂದ  ಹಾರಾಡುತ್ತಿದೆ. ಇದು ಐತಿಹಾಸಿಕ ದಿನ, ಹೊಸ ಸಂಕಲ್ಪ, ಹೊಸ ಸಾಮರ್ಥ್ಯದಿಂದ ಹೊಸ ಹೆಜ್ಜೆ ಇಡುವ ದಿನ.ಸ್ವಾತಂತ್ರ್ಯ ಹೋರಾಟದ ಮೂಲದ ಗುಲಾಮಗಿರಿಯಿಂದ ಹೊರಬಂದಿದ್ದೇವೆ.

ದೇಶದ ಮೂಲೆ, ಮೂಲೆಯಲ್ಲೂ ಗುಲಾಮಗಿರಿಯ ವಿರುದ್ಧ ಹೋರಾಟ ನಡೆಯಿತು. ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಭಾರತೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರಿಗೆ ನಮನ ಸಲ್ಲಿಸುವ ದಿನ. ತ್ಯಾಗ, ಬಲಿದಾನ ಮಾಡಿದವರ ಆಸೆ, ಕನಸುಗಳನ್ನು ಈಡೇರಿಸುವ ಸಂಕಲ್ಪ ತೊಡಬೇಕಿದೆ ಎಂದೂ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಹೇಳಿದರು. 

8:24 AM IST:

8:16 AM IST:
LIVE TV

  •  
  •