ತಮಿಳುನಾಡು ಕೇರಳದಲ್ಲಿ ಸರ್ಕಾರ, ರಾಜ್ಯಪಾಲರ ಮಧ್ಯೆ ಜಟಾಪಟಿ ತೀವ್ರ

ರಾಜ್ಯದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳ ಕುಲಾಧಿಪತಿ ಸ್ಥಾನದಿಂದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರನ್ನು ತೆಗದು ಹಾಕುವುದಕ್ಕಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಲು ಕೇರಳ ಸಚಿವ ಸಂಪುಟ ನಿರ್ಧಾರ ಮಾಡಿದೆ. ಈ ಮೂಲಕ ರಾಜ್ಯಪಾಲರು ಮತ್ತು ಸರ್ಕಾರ ನಡುವಿನ ಬಿಕ್ಕಟ್ಟು ಮುಂದುವರೆದಿದಿದೆ.

In Tamil Nadu and Kerala, the tussle between the government and the governor is intense akb

ಕೊಚ್ಚಿ: ರಾಜ್ಯದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳ ಕುಲಾಧಿಪತಿ ಸ್ಥಾನದಿಂದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರನ್ನು ತೆಗದು ಹಾಕುವುದಕ್ಕಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಲು ಕೇರಳ ಸಚಿವ ಸಂಪುಟ ನಿರ್ಧಾರ ಮಾಡಿದೆ. ಈ ಮೂಲಕ ರಾಜ್ಯಪಾಲರು ಮತ್ತು ಸರ್ಕಾರ ನಡುವಿನ ಬಿಕ್ಕಟ್ಟು ಮುಂದುವರೆದಿದಿದೆ.

ಬುಧವಾರ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯಪಾಲರ ಬದಲಾಗಿ ಶಿಕ್ಷಣ ತಜ್ಞರೊಬ್ಬರನ್ನು ಕುಲಾಧಿಪತಿ ಸ್ಥಾನದಲ್ಲಿ ಕೂರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಈ ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ (Arif Mohammad Khan) ಅವರೇ ಅಂಕಿತ ಹಾಕಬೇಕು. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ನಿರ್ಮಿಸಿದೆ. ಆದರೆ ರಾಜ್ಯಪಾಲರು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಸರ್ಕಾರ ಹೇಳಿದೆ.

ಸಂಘರ್ಷ ಏಕೆ?:

ರಾಜ್ಯದಲ್ಲಿರುವ ವಿವಿಗಳಿಗೆ ರಾಜ್ಯ ಸರ್ಕಾರ (state government) ಕುಲಪತಿಗಳನ್ನು (VV chancellors) ನೇಮಕ ಮಾಡಿದೆ. ಇದು ಯುಜಿಸಿ ನಿಯಮಕ್ಕೆ (UGC rules) ವಿರುದ್ಧ ಎಂಬ ಕಾರಣ ನೀಡಿ 11 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ರಾಜ್ಯಪಾಲ ಖಾನ್‌ ಇತ್ತೀಚೆಗೆ ರಾಜೀನಾಮೆಗೆ ಸೂಚಿಸಿದ್ದರು. ಇದನ್ನು ವಿರೋಧಿಸಿ ಕುಲಪತಿಗಳು ಕೋರ್ಟ್‌ ಮೆಟ್ಟಿಲೇರಿದ್ದರು. ಸರ್ಕಾರವೂ ಸಹ ಇದನ್ನು ಖಂಡಿಸಿತ್ತು. ಈಗ ಇದರ ಮುಂದುವರೆದ ಭಾಗವಾಗಿ ರಾಜ್ಯಪಾಲರನ್ನೇ ಕುಲಾಧಿಪತಿ ಹುದ್ದೆಯಿಂದ ತೆಗೆದುಹಾಕುವ ನಿರ್ಣಯವನ್ನು ಸಂಪುಟ ಕೈಗೊಂಡಿದೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲೂ ರಾಜ್ಯಪಾಲರಿಗೆ ಇರುವ ವಿವಿ ಕುಲಾಧಪತಿ ಅಧಿಕಾರವನ್ನು ಕಿತ್ತುಕೊಳ್ಳಲಾಗಿತ್ತು.

ವಿದೇಶದ ಕಮ್ಯುನಿಸಂನ ಒಪ್ಕೋತೀರಿ, ಆರೆಸ್ಸೆಸ್‌ ಸಿದ್ಧಾಂತ ಯಾಕೆ ಬೇಡ: ಕೇರಳ ರಾಜ್ಯಪಾಲ ಅರಿಫ್‌ ಮೊಹಮದ್‌ ಪ್ರಶ್ನೆ!

 ಕೇರಳದಲ್ಲಿ ಸಿಎಂ ಹಾಗೂ ಗವರ್ನರ್‌ ನಡುವಿನ ಜಟಾಪಟಿ ಮತ್ತೊಂದು ಹಂತ ತಲುಪಿದೆ. ಕೆಲದಿನಗಳ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಸಿಪಿಎಂ, ನ.15 ರಂದು ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಾತನಾಡಿದ ಖಾನ್‌, ‘ನೀವು ಸಾಂವಿಧಾನಿಕ ಯಂತ್ರದ ಪತನವನ್ನು ಆರಂಭಿಸಿದ್ದೀರಿ. ಮುಂದೆ ಹೋಗಿ ಇನ್ನಷ್ಟುಸಮಸ್ಯೆಗಳನ್ನು ಸೃಷ್ಟಿಸಿ. ನಿಮಗೆ ಧೈರ್ಯವಿದ್ದರೆ ರಾಜಭವನಕ್ಕೆ ನುಗ್ಗಿ, ರಸ್ತೆ ಮೇಲೆ ನನ್ನನ್ನು ಅಟ್ಯಾಕ್‌ ಮಾಡಿ’ ಎಂದು ಸಿಪಿಎಂ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದರು. ಅಲ್ಲದೇ ‘ನ.15 ರಂದು ನಾನು ರಾಜಭವನದಲ್ಲಿ ಇರುವುದಿಲ್ಲ. ನನ್ನ ಅನುಪಸ್ಥಿತಿಯಲ್ಲಿ ಪ್ರತಿಭಟನೆ ನಡೆಸಬೇಡಿ. ನಾನು ರಾಜಭವನದಲ್ಲಿದ್ದಾಗ ಪ್ರತಿಭಟನೆ ಮಾಡಿ. ನಾನೂ ಅಲ್ಲಿಗೆ ಬರುತ್ತೇನೆ. ಸಾರ್ವಜನಿಕವಾಗಿ ಚರ್ಚಿಸೋಣ’ ಎಂದಿದ್ದಾರೆ.

 
ತಮಿಳ್ನಾಡು ರಾಜ್ಯಪಾಲರ ವಜಾಕ್ಕೆ ರಾಷ್ಟ್ರಪತಿಗೆ ಡಿಎಂಕೆ ಪತ್ರ

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ, ರಾಜ್ಯಪಾಲ (Tamil Nadu Governor) ರವಿ ಅವರನ್ನು ಪದಚ್ಯುತಿಗೊಳಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ‘20 ವಿಧೇಯಕಗಳನ್ನು ಅಂಗೀಕರಿಸಿ ರಾಷ್ಟ್ರಪತಿಗಳಿಗೆ ರವಾನಿಸುವ ಬದಲು ಅವುಗಳನ್ನು ಹಿಂದಿರುಗಿಸುವ ಮೂಲಕ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರಕ್ಕೆ ಜನರ ಸೇವೆ ಮಾಡಲು ಅಡ್ಡಿಪಡಿಸಿದ್ದಾರೆ ಹಾಗೂ ಸಂವಿಧಾನ ಮತ್ತು ಕಾನೂನುಗಳನ್ನು ರಕ್ಷಿಸುವ ಪ್ರತಿಜ್ಞೆಯನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ’ ಎಂದು ಮನವಿಯಲ್ಲಿ ಉಲ್ಲೇಖಿಸಿದೆ.

Kerala Governor VS CM Vijayan: ತಮ್ಮ ಹತ್ಯೆ ದಾಳಿ ವೀಡಿಯೋ ಬಹಿರಂಗಗೊಳಿಸಿದ ಅರಿಫ್ ಮೊಹಮದ್!

ಅಲ್ಲದೇ, ‘ರಾಷ್ಟ್ರವು ಒಂದು ಧರ್ಮದ ಮೇಲೆ ಅವಲಂಬಿತವಾಗಿದೆ’ ಎಂಬ ರಾಜ್ಯಪಾಲರ ಇತ್ತೀಚಿನ ಹೇಳಿಕೆ ದ್ರಾವಿಡ ಹಾಗೂ ತಮಿಳು ಸಂಸ್ಕೃತಿಯ (Dravidian and Tamil culture) ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸದ್ಯ ಪ್ರತಿಕ್ರಿಯೆ ನೀಡಿದ ರಾಜ್ಯಪಾಲ ಆರ್‌.ಎನ್‌ ರವಿ (Governor Ravi) ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದಾಗ ‘ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕಾನೂನಿನಲ್ಲಿ ಯಾವುದೇ ತಡೆ ಇಲ್ಲ. ನಾನು ಆ ಮಸೂದೆಗಳನ್ನು ಅಂಗೀಕರಿಸುವುದಿಲ್ಲ. ಅಗತ್ಯವಿದ್ದಲ್ಲಿ ನ್ಯಾಯಾಲಯ ಅವುಗಳನ್ನು ಪರಿಶೀಲಿಸಲಿ’ ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios