Kerala Governor VS CM Vijayan: ತಮ್ಮ ಹತ್ಯೆ ದಾಳಿ ವೀಡಿಯೋ ಬಹಿರಂಗಗೊಳಿಸಿದ ಅರಿಫ್ ಮೊಹಮದ್!

ಕೇರಳದಲ್ಲಿ ರಾಜ್ಯಪಾಲರ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿರುವ ಕುರಿತಾಗಿ ಸ್ವತಃ ರಾಜ್ಯಪಾಲ ಅರಿಫ್‌ ಮೊಹಮದ್‌ ಖಾನ್‌ ವಿಡಿಯೋ ದಾಖಲೆಯ ಮೂಲಕ ಬಹಿರಂಗಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಹಾಲಿ ರಾಜ್ಯಪಾಲರು ತಮ್ಮ ಮೇಲೆ ಹತ್ಯೆ ದಾಳಿ ನಡೆದಿರುವ ಬಗ್ಗೆ ಸುದ್ದಿಗೋಷ್ಠಿಯನ್ನು ನಡೆಸಿ ದಾಖಲೆಯನ್ನು ಬಿಡುಗಡೆ ಮಾಡಿರುವುದು ಇದೇ ಮೊದಲಾಗಿದೆ.
 

Kerala Governor Arif Mohammed Khan shares assassination attempt at Kannur University event in 2019 san

ತಿರುವನಂತಪುರ (ಸೆ.19): ಮೂರು ವರ್ಷಗಳ ಹಿಂದೆ ಕಣ್ಣೂರು ಹಿಸ್ಟರಿ ಕಾಂಗ್ರೆಸ್‌ ಸಮಾರಂಭದಲ್ಲಿ ತಮ್ಮ ಮೇಲೆ ಸಾರ್ವಜನಿಕವಾಗಿ ನಡೆದ ಹತ್ಯೆ ದಾಳಿಯ ವಿಡಿಯೋ ದಾಖಲೆಯನ್ನು ಸುದ್ದಿಗೋಷ್ಠಿ ನಡೆಸುವ ಮೂಲಕ ಬಹಿರಂಗಪಡಿಸಿದ್ದಾರೆ. ತಮ್ಮ ಅಧಿಕೃತ ನಿವಾಸ ರಾಜಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಸಮಾರಂಭದಲ್ಲಿ ತಮ್ಮ ಮೇಲೆ ನಡೆಸಲಾದ ದಾಳಿಯ ಬಗ್ಗೆ ಮಾತನಾಡಿದರು. ವಿಡಿಯೋ ದಾಖಲೆ ಬಿಡುಗಡೆ ಮಾಡುವ ಮುನ್ನ ರಾಜ್ಯಪಾಲರ ಮೇಲೆ ದಾಳಿ ಮಾಡುವುದು ಅಪರಾಧ ಎನ್ನುವ ಮೂಲಕ ಐಪಿಸಿ ಸೆಕ್ಷನ್‌ನ ನಿಯಮಗಳನ್ನು ತಿಳಿಸಿದರು. ಹಿಸ್ಟರಿ ಕಾಂಗ್ರೆಸ್‌ನಲ್ಲಿ ನಡೆದ ಪ್ರತಿಭಟನೆ ಸಹಜ ರೀತಿಯದ್ದಾಗಿರಲಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಅಧಿಕಾರಿ ಕೆ.ಕೆ.ರಾಗೇಶ್ ಸಮಾರಂಭದ ವೇದಿಕೆಯಿಂದ ಕೆಳಗಿಳಿದು ಪೊಲೀಸರನ್ನು ತಡೆದರು ಎಂದು ಆರಿಫ್ ಮೊಹಮದ್‌ ಖಾನ್‌ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಶಾಸಕ ಕೆ.ಟಿ.ಜಲೀಲ್ ವಿರುದ್ಧವೂ ವಾಗ್ದಾಳಿ ನಡೆಸಿದ ರಾಜ್ಯಪಾಲರು, ಈತ ಅಖಂಡ ಭಾರತದ ಬಗ್ಗೆ ಪ್ರಶ್ನೆ ಮಾಡುವ ವ್ಯಕ್ತಿ ಎಂದಿದ್ದಾರೆ. ಆ ಬಳಿಕ ಸಮಾರಂಭದಲ್ಲಿ ಆದ ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಅವರು ತೋರಿದಿದ್ದು, ಇವೆಲ್ಲವೂ ಪೊಲೀಸರ ಸಮ್ಮುಖದಲ್ಲಿಯೇ ನಡೆದಿದೆ ಇದೆಲ್ಲವೂ ದೊಡ್ಡ ಅಪರಾಧ ಎಂದಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ, ಹಿಸ್ಟರಿ ಕಾಂಗ್ರೆಸ್‌ನಲ್ಲಿ ರಾಜ್ಯಪಾಲರ ಭಾಷಣ ಮತ್ತು ನಂತರದ ಸಂಘರ್ಷದ ದೃಶ್ಯಗಳನ್ನು ಪಿಆರ್‌ಡಿ ಸೆರೆಹಿಡಿದಿದೆ. ರಾಜ್ಯಪಾಲರ ಭಾಷಣದ ವೇಳೆ, ಇತಿಹಾಸಕಾರ ಇರ್ಫಾನ್ ಹಬೀಬ್ ಮಧ್ಯಪ್ರವೇಶಿಸಿದಾಗ ಸಭಿಕರಿಂದ ಪ್ರತಿಭಟನೆಗಳು ವ್ಯಕ್ತವಾಗಿದ್ದವು.

ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ರಾಜಭವನದಲ್ಲಿ ರಾಜ್ಯಪಾಲರು ಪತ್ರಿಕಾಗೋಷ್ಠಿ ಕರೆದಿರುವುದು ಇದೇ ಮೊದಲ ಬಾರಿಯಾಗಿದೆ. ಭಾನುವಾರ ಕಣ್ಣೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ವೇಳೆ ತಮ್ಮ ಮೇಲೆ ಹತ್ಯೆ ದಾಳಿಯ ಪ್ರಯತ್ನ ಮಾಡಲಾಗಿತ್ತು ಎಂದು ಆರೋಪಿಸಿದ್ದರು. ಆದರೆ, ಅವರುಗಳು ನನ್ನನ್ನು ಕೊಂದರೆ ಆಗುವ ಪರಿಣಾಮದ ಬಗ್ಗೆ ತಿಳಿದಿದ್ದರು. ಹೀಗಾಗಿ ಅವರು ನನ್ನನ್ನು ಕೊಲ್ಲುವ ಬದಲು ಹೆದರಿಸುವ ಪ್ರಯತ್ನ ಮಾಡಿದ್ದರು ಎಂದಿದ್ದರು. ಆದರೆ, ಎರ್ನಾಕುಲಂಗೆ ಬಂದ ರಾಜ್ಯಪಾಲರು ಇದು ಹತ್ಯೆ ಯತ್ನ ಅಲ್ಲ, ಬೆದರಿಕೆಯ ಕೃತ್ಯ ಎಂದು ತಿದ್ದಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಕೈವಾಡ ಇದರಲ್ಲಿದೆ ಎಂದು ಆರೋಪಿಸಿದ್ದಾರೆ.

Exclusive Interview: ಶಿಕ್ಷಣ ಸಂಸ್ಥೆಯಲ್ಲಿದ್ಧಾಗ ಅಲ್ಲಿಯ ನಿಯಮ ಪಾಲಿಸಲೇಬೇಕು: ಕೇರಳ ರಾಜ್ಯಪಾಲ

ರಾಜಭವನದ (Rajbhavan) ಸಭಾಂಗಣದಲ್ಲಿ ಹಾಕಲಾಗಿದ್ದ ಎರಡು ದೈತ್ಯ ಪರದೆಗಳಲ್ಲಿ ಘಟನೆಯ ವೀಡಿಯೊಗಳನ್ನು ಹಂಚಿಕೊಂಡ ಖಾನ್ (AM Khan), ಈಗ ಮುಖ್ಯಮಂತ್ರಿಗಳ ಕಚೇರಿಯಲ್ಲಿ (ಸಿಎಂಒ) ಇರುವ ಹಿರಿಯ ಅಧಿಕಾರಿ ಕೆ.ಕೆ.ರಾಗೇಶ್ (KK Ragesh) ಪೊಲೀಸರು ತಮ್ಮ ಕಾರ್ಯಗಳನ್ನು ನಿರ್ವಹಿಸದಂತೆ ತಡೆಯುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು ಎಂದು ಹೇಳಿದರು  "ಕಪ್ಪು ಅಂಗಿ ಧರಿಸಿದ್ದಕ್ಕಾಗಿ ಜನರನ್ನು ಬಂಧಿಸುವ ಕೇರಳ (Kerala state) ರಾಜ್ಯದಲ್ಲಿ, ಈ ಘಟನೆಗಳು ನಡೆಯುತ್ತವೆ. ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು ಮತ್ತು ಜನರು ನನ್ನ ಬಳಿಗೆ ಬರದಂತೆ ತಡೆದರು. "ಮುಖ್ಯಮಂತ್ರಿ ಕಚೇರಿಯಲ್ಲಿರುವ (Chief Minister Office) ಹಿರಿಯ ಅಧಿಕಾರಿಯೊಬ್ಬರು ತಮ್ಮ ಕಾರ್ಯಗಳನ್ನು ನಿರ್ವಹಿಸದಂತೆ ಪೊಲೀಸರು ತಡೆಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು" ಎಂದು ಅವರು ಹೇಳಿದರು.

Exclusive Interview: UCC ಜಾರಿಗೆ ಆಗ್ರಹ, ಹಿಜಾಬ್ ವಿವಾದ ಬಿಟ್ಟು ಓದಿಗೆ ಗಮನ ಕೊಡಿ: ಕೇರಳ ರಾಜ್ಯಪಾಲ

2019ರಲ್ಲಿ ಹಿಸ್ಟರಿ ಕಾಂಗ್ರೆಸ್ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆದಾಗ ಕೆಕೆ ರಾಗೇಶ್ ರಾಜ್ಯಸಭಾ ಸದಸ್ಯರಾಗಿದ್ದರು. ನಂತರ, ಕೆಕೆ ರಾಗೇಶ್ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ಏನಿದು ವಿಚಾರ: ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳ ನೇಮಕದಲ್ಲಿ (appointment of vice-chancellors in universities) ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಜಗಳ ಈಗ ಸಾರ್ವಜನಿಕವಾಗಿದೆ. ಈಗಾಗಲೇ ಈ ವಿವಾದಾತ್ಮಕ ಮಸೂದೆಯನ್ನು ರಾಜ್ಯ ವಿಧಾನಸಭೆಯು ಅಂಗೀಕರಿಸಿದೆ.  ವಿಜಯನ್ ಅವರ ಖಾಸಗಿ ಕಾರ್ಯದರ್ಶಿಯ ಸಂಬಂಧಿಯನ್ನು ಅಲ್ಲಿ ಬೋಧಕ ಹುದ್ದೆಗೆ ನೇಮಿಸಲು ಕಣ್ಣೂರು ವಿಶ್ವವಿದ್ಯಾಲಯದ ಕ್ರಮದಿಂದ ರಾಜ್ಯಪಾಲರು ಎಡ ಸರ್ಕಾರದ (Left Government ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Latest Videos
Follow Us:
Download App:
  • android
  • ios