Asianet Suvarna News Asianet Suvarna News

ವಿದೇಶದ ಕಮ್ಯುನಿಸಂನ ಒಪ್ಕೋತೀರಿ, ಆರೆಸ್ಸೆಸ್‌ ಸಿದ್ಧಾಂತ ಯಾಕೆ ಬೇಡ: ಕೇರಳ ರಾಜ್ಯಪಾಲ ಅರಿಫ್‌ ಮೊಹಮದ್‌ ಪ್ರಶ್ನೆ!

ವಿದೇಶ ನೆಲದ ಕಮ್ಯುನಿಸಿಂ ಹಾಗೂ ಅದರ ಸಿದ್ಧಾಂತಗಳನ್ನು ಒಪ್ಪಿಕೊಂಡು, ಅಪ್ಪಿಕೊಂಡು ಇವರೆಲ್ಲಾ ಪಾಲನೆ ಮಾಡುತ್ತಿದ್ದಾರೆ, ಹೀಗಿದ್ದಲ್ಲಿ ನಮ್ಮದೇ ನೆಲದ ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಳ್ಳುವುದರಲ್ಲಿ ಏನು ತಪ್ಪಿದೆ ಎಂದು ಕೇರಳ ರಾಜ್ಯಪಾಲ ಅರಿಫ್‌ ಮೊಹಮದ್‌ ಖಾನ್‌ ಸೋಮವಾರ ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ್ದಾರೆ.

You are okay with foreign communism why not RSS ideology asks Kerala Governor Arif Mohammad Khan san
Author
First Published Sep 19, 2022, 9:11 PM IST

ತಿರುವನಂತಪುರ (ಸೆ. 19): ಭಾರತದ ಯಾವುದೇ ರಾಜ್ಯದ ರಾಜ್ಯಪಾಲರೊಬ್ಬರು ಆರೆಸ್ಸೆಸ್ ಮುಖ್ಯಸ್ಥರನ್ನು ಭೇಟಿ ಮಾಡಿದ್ದು 2015ರಲ್ಲಿಯೇ ಕೊನೆ. ಅಂದು ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದ ರಾಮ್‌ ನಾಯ್ಕ್‌, ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗ್ವತ್‌ ಅವರನ್ನು ಭೇಟಿ ಮಾಡಿದ್ದರು. ಅಂದು ಉತ್ತರ ಪ್ರದೇಶದ ರಾಜಭವನದಲ್ಲಿಯೇ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದೇ ರೀತಿ ಸೆಪ್ಟೆಂಬರ್ 17 ರಂದು ಕೇರಳ ರಾಜ್ಯಪಾಲ ಅರಿಫ್‌ ಮೊಹಮದ್‌ ಖಾನ್‌, ಆರೆಸ್ಸೆಸ್‌ನ ಕಾರ್ಯಕರ್ತನೊಬ್ಬನ ಮನೆಯಲ್ಲಿ ಮೋಹನ್‌ ಭಾಗ್ವತ್‌ ಅವರನ್ನು ಭೇಟಿಯಾಗಿದ್ದರು. ಸೋಮವಾರ ನಡೆದ ರಾಜ್ಯಪಾಲರೊಬ್ಬರ ಮೊಟ್ಟಮೊದಲ ಸುದ್ದಿಗೋಷ್ಠಿಯಲ್ಲಿ ಕೇರಳ ಸರ್ಕಾರ ತಮ್ಮ ಮೇಲೆ ಒತ್ತಡಹೇರುತ್ತಿರುವ ರೀತಿಯನ್ನು ಎಳೆಎಳೆಯಾಗಿ ವಿವರಿಸಿದ ಅವರಿಗೆ ಆರೆಸ್ಸೆಸ್‌ ಮುಖ್ಯಸ್ಥರನ್ನು ಭೇಟಿಯಾದ ಪ್ರಶ್ನೆಗಳೂ ಎದುರಾದವು. ಅದಕ್ಕೆ ನೇರವಾಗಿ ಹಾಗೂ ಅಷ್ಟೇ ಸ್ಪಷ್ಟವಾಗಿ ಉತ್ತರ ನೀಡಿದ ಅರಿಫ್‌ ಮೊಹಮದ್‌ ಖಾನ್‌, ನಮ್ಮ ದೇಶಕ್ಕೆ ಸಂಬಂಧಪಡದ ಎಲ್ಲಿಯೂ ಹುಟ್ಟಿದ ಕಮ್ಯುನಿಸಂನಲ್ಲಿ ನಿಮ್ಮದೆಂದು ಅಪ್ಪಿಕೊಂಡು ಆಚರಣೆ ಮಾಡುತ್ತಿರುವಾಗ ನಮ್ಮದೇ ನೆಲದ ಆರೆಸ್ಸೆಸ್‌ ಸಿದ್ಧಾಂತವನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ. ಆ ಸಿದ್ಧಾಂತ ಯಾಕೆ ಬೇಡ ಎಂದು ಪ್ರಶ್ನೆ ಮಾಡಿದರು. 



ಆರೆಸ್ಸೆಸ್‌ ಎಂದಿಗೂ ಯಾವುದೇ ಸರ್ಕಾರದ ಭಾಗವಾಗಿರಲಿಲ್ಲ. ಆಯಾ ರಾಜ್ಯಗಳಲ್ಲಿ ಆಗುವರಾಜಕೀಯ ಕೊಲೆಗಳು ಹಾಗೂ ಅದರ ನಂತರದ ಎಲ್ಲಾ ಸನ್ನಿವೇಶಗಳ ಜವಾಬ್ದಾರಿ ಸ್ಥಳೀಯಯ ಸರ್ಕಾರಗಳದ್ದಾಗಿರುತ್ತದೆ ಎಂದು ಹೇಳಿದರು. ಆರೆಸ್ಸೆಸ್‌ನ ಅತ್ಯಂತ ದೊಡ್ಡ ವಾರ್ಷಕ ಕಾರ್ಯಕ್ರಮವಾದ ಒಟಿಸಿ ಕ್ಯಾಂಪ್‌ (ಆಫೀಸರ್ಸ್‌ ಟ್ರೇನಿಂಗ್ ಕ್ಯಾಂಪ್‌) ಅಂತಿಮ ದಿನದ ಕಾರ್ಯಕ್ರಮಕ್ಕೆ ಅಂದಾಜು 6 ಬಾರಿ ಭೇಟಿ ನೀಡಿದ್ದೇನೆ. ಆರೆಸ್ಸೆಸ್‌ಗೆ ಸಂಬಂಧವೇ ಇಲ್ಲದ, ಸಮಾಜದ ಪ್ರಮುಖರನ್ನು ಕೊನೆಯ ದಿನದ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ಇದು ಅವರ ಸಂಪ್ರದಾಯ. ನಾನು ಆರೆಸ್ಸೆಸ್‌ನ ಜೊತೆಗಿನ ಈ ಸಂಬಂಧವನ್ನು ಇಷ್ಟಪಟ್ಟಿದ್ದೇನೆ. ಅದರಲ್ಲಿ ನೀವು ಅಚ್ಚರಿ ಪಡುವುದು ಏನಿದೆ ಎಂದು ಪ್ರಶ್ನೆ ಮಾಡಿದರು.

ಆರೆಸ್ಸೆಸ್‌ ಮುಖ್ಯಸ್ಥರನ್ನು ರಾಜಭವನದ ಬದಲಾಗಿ, ಸ್ಥಳೀಯ ಕಾರ್ಯಕರ್ತನ ಮನೆಯಲ್ಲಿ ರಾಜ್ಯಪಾಲರೊಬ್ಬರು ಭೇಟಿ ಮಾಡಿದ್ದು ತಪ್ಪಲ್ಲವೇ ಎನ್ನುವ ಪ್ರಶ್ನೆಗೆ, 'ಅವರು ಆ ಪ್ರದೇಶಕ್ಕೆ ಬರುವವರಿದ್ದರು. ರಾಜ್ಯ ಸರ್ಕಾರ ಸಾಂವಿಧಾನಿಕ ಮುಖ್ಯಸ್ಥನ ಹುದ್ದೆಯಲ್ಲಿ ನಾನಿದ್ದೇನೆ. ಕನಿಷ್ಠ ಅವರು ಇಲ್ಲಿ ಬರುತ್ತಿರುವ ವಿಷಯವೇ ನನಗೆ ಗೊತ್ತಿರಲಿಲ್ಲ. ಅವರು ಇಲ್ಲಿಗೆ ಬಂದಿದ್ದು ಗೊತ್ತಾದಾಗ ಭೇಟಿ ಮಾಡಿ ಅವರ ಕ್ಷೇಮ ವಿಚಾರಿಸಿದ್ದೇನೆ. ಹಾಗೇನಾದರೂ ಮತ್ತೆ ಅವರು ಇಲ್ಲಿಗೆ ಬಂದಲ್ಲಿ ಖಂಡಿತಾ ಭೇಟಿ ಮಾಡುತ್ತೇನೆ ಎಂದು ಹೇಳಿದರು.

ವಿದೇಶಿ ಕಮ್ಯುನಿಸಂ ಒಪ್ಪುವುದಾದರೆ, ಭಾರತದ ಆರ್‌ಎಸ್ಎಸ್ ಒಪ್ಪುವುದರಲ್ಲಿ ತಪ್ಪೇನಿದೆ? ರಾಜ್ಯಪಾಲರ ಖಡಕ್ ಪ್ರಶ್ನೆ!

ಆರೆಸ್ಸೆಸ್‌ ಏನಾದರೂ ನಿಷೇಧಿತ ಸಂಘಟನೆಯೇ, ಹಾಗೇನಾದರೂ ಆಗಿದ್ದಲ್ಲಿದೇಶದ ಮೊದಲ ಪ್ರಧಾನಿ ಪಂಡಿತ್‌ ಜವಹರಲಾಲ್‌ ನೆಹರೂ 1963 ಗಣರಾಜ್ಯೋತ್ಸವ ಪರೇಡ್‌ಗೆ ಆರೆಸ್ಸೆಸ್‌ ಅನ್ನು ಏಕೆ ಆಹ್ವಾನಿಸುತ್ತಿದ್ದರು ಎಂದು ಕೇಳಿದರು. 1962ರ ಇಂಡೋ-ಚೀನಾ ಯುದ್ಧದ ವೇಳೆ ಆರೆಸ್ಸೆಸ್‌ನ ಕೆಲಸದಿಂದಾಗಿ ಪ್ರಭಾವಿತರಾಗಿದ್ದರಿಂದ 1963ರ ಗಣರಾಜ್ಯೋತ್ಸವ ಪರೇಡ್‌ಗೆ ಆರೆಸ್ಸೆಸ್‌ಗೆ ಆಹ್ವಾನ ನೀಡಿದ್ದರು. 3 ಸಾವಿರ ಸದಸ್ಯ ಆರೆಸ್ಸೆಸ್‌ ಈ ಪರೇಡ್‌ನಲ್ಲಿ ಭಾಗವಹಿಸಿತ್ತು.

Kerala Governor VS CM Vijayan: ತಮ್ಮ ಹತ್ಯೆ ದಾಳಿ ವೀಡಿಯೋ ಬಹಿರಂಗಗೊಳಿಸಿದ ಅರಿಫ್ ಮೊಹಮದ್!

ಆರೆಸ್ಸೆಸ್‌ನಿಂದ ನನಗೆ ಬೆಂಬಲ: 1986ರ ಶಹ ಬಾನೋ ಕೇಸ್‌ನಿಂದಲೂ ಆರೆಸ್ಸೆಸ್‌ ನನಗೆ ಬೆಂಬಲ ನೀಡಿದೆ. ಆರೆಸ್ಸೆಸ್‌ ಮಾತ್ರವಲ್ಲದೆ ಸಿಪಿಎಂನ ಹಿರಿಯ ನಾಯಕ ನಂಬೂದರಿಪಾದ್‌ ಕೂಡ ನನಗೆ ಬೆಂಬಲ ನೀಡಿದ್ದರು. ಆದರೆ, 1991ರವರೆಗೂ ನನ್ನ ಜೊತೆ ಇದ್ದ ಎಡಪಕ್ಷ ಆಮೇಲೆ ಬೆಂಬಲ ವಾಪಾಸ್‌ ತೆಗೆದುಕೊಂಡಿತು. ಆ ಬಳಿಕ ಅವರು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಅದರ ಸದಸ್ಯರಿಗೆ ಹತ್ತಿರವಾದರು ಎಂದು ಹೇಳಿದರು. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಒತ್ತಡದ ಕಾರಣದಿಂದಾಗಿಯೇ ರಾಜೀವ್‌ ಗಾಂಧಿ ಶಹ ಬಾನೋ ತೀರ್ಪನ್ನು ಬದಾಯಿಸುವಲ್ಲಿ ಯಶಸ್ವಿಯಾಗಿದ್ದರು.

Follow Us:
Download App:
  • android
  • ios