Asianet Suvarna News Asianet Suvarna News

ಭಾರಿ ಮಳೆಯಿಂದಾಗಿ ಗುಡಿಸಲಿನ ಮೇಲೆ ಬಿದ್ದ ಸೇನಾ ಕಟ್ಟಡದ ಗೋಡೆ, 9 ಮಂದಿ ಸಾವು!

ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಸ್ಥಳೀಯ ವೈದ್ಯರು ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
 

in Lucknow Dilkusha area 9 dead after wall collapsed due to heavy rainfall city waterlogged san
Author
First Published Sep 16, 2022, 6:47 PM IST

ಲಕ್ನೋ (ಸೆ.16): ಕಳೆದ 24 ಗಂಟೆಗಳಲ್ಲಿ ಸುರಿದ ಭಾರೀ ಮಳೆಗೆ ಲಕ್ನೋದಲ್ಲಿ ಗೋಡೆ ಕುಸಿದು ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ಜಲಾವೃತವಾಗಿದೆ. ಗೋಡೆ ಕುಸಿತದಿಂದ ಗಾಯಗೊಂಡವರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತಪಟ್ಟವರಿಗೆ ₹ 4 ಲಕ್ಷ ಮತ್ತು ಗಾಯಾಳುಗಳ ಚಿಕಿತ್ಸೆಗೆ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. "ಕೆಲವು ಕಾರ್ಮಿಕರು ದಿಲ್ಕುಶಾ ಪ್ರದೇಶದಲ್ಲಿನ ಆರ್ಮಿ ಎನ್‌ಕ್ಲೇವ್‌ನ ಹೊರಗೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ರಾತ್ರಿಯ ಭಾರೀ ಮಳೆಯಿಂದಾಗಿ, ಆರ್ಮಿ ಎನ್‌ಕ್ಲೇವ್‌ನ ಗಡಿ ಗೋಡೆ ಕುಸಿದಿದೆ" ಎಂದು ಜಂಟಿ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಪಿಯೂಷ್ ಮೊರ್ಡಿಯಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. "ನಾವು 3 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿದ್ದೇವೆ. ಒಂಬತ್ತು ದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಯಿತು ಮತ್ತು ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ" ಎಂದು ಹೇಳಿದ್ದಾರೆ.    

ರಾತ್ರಿಯ ಎಡೆಬಿಡದ ಮಳೆಯ ಸುರಿದ (Rain) ಕಾರಣದಿಂದಾಗಿ ಇಂದು ಮುಂಜಾನೆ 4 ಗಂಟೆಗೆ ಶಾಲೆಗಳನ್ನು (School) ಮುಚ್ಚುವಂತೆ ಆದೇಶ ಹೊರಡಿಸಲಾಗಿತ್ತು. ಹಲವಾರು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್‌ನ ಭಾರೀ ಮಳೆಯ (Yellow Alert) ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಲಕ್ನೋ ಜಿಲ್ಲಾಡಳಿತವು  (lucknow district administration) ಹಳೆಯ ಶಿಥಿಲಗೊಂಡ ಕಟ್ಟಡಗಳ ಬಗ್ಗೆ ಎಚ್ಚರವಹಿಸುವಂತೆ ಜನರಿಗೆ ಸಲಹೆ ನೀಡಿದೆ.

 ಹಿನ್ನೆಲೆಯಲ್ಲಿ ಎಲ್ಲಾ ಜನರು ಸಂಪೂರ್ಣ ಮುಂಜಾಗ್ರತೆ ವಹಿಸಬೇಕು. ಹಳೆಯ ಶಿಥಿಲಗೊಂಡ ಕಟ್ಟಡಗಳ ಬಗ್ಗೆ ಎಚ್ಚರದಿಂದಿರಿ. ತೀರಾ ಅಗತ್ಯವಿದ್ದಾಗ ಹೊರಗೆ ಬನ್ನಿ. ಜನಸಂದಣಿ ಮತ್ತು ಟ್ರಾಫಿಕ್ ಜಾಮ್ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ತೆರೆದ ಚರಂಡಿಗಳು, ವಿದ್ಯುತ್ ತಂತಿಗಳು ಮತ್ತು ಕಂಬಗಳಿಂದ ದೂರವಿರಿ ಎಂದು ಎಚ್ಚರಿಕೆಯನ್ನು ಜಿಲ್ಲಾಡಳಿತವು ನೀಡಿದೆ. ಇದಲ್ಲದೆ, ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಕಟ್ಟೆಚ್ಚರದಿಂದ ಇರುವಂತೆ ಸರ್ಕಾರವು ಸೂಚಿಸಿದೆ.

ರಾಮನಗರ ಧಾರಾಕಾರ ಮಳೆ; ಕೊಟ್ಟಿಗೆ ಕುಸಿದು ಇಬ್ಬರು ಮಕ್ಕಳು ಸಾವು

"ಆಸ್ಪತ್ರೆಗಳಲ್ಲಿ ಆಘಾತ ನಿರ್ವಹಣೆ, ಹಾವು ಕಡಿತ, ವಿದ್ಯುತ್ ಆಘಾತ ಮತ್ತು ನೀರಿನಿಂದ ಹರಡುವ ರೋಗಗಳ ಚಿಕಿತ್ಸೆಗೆ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಿ. ತುರ್ತು ಸೇವೆಗಳಲ್ಲಿ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಔಷಧಿಗಳ ವ್ಯವಸ್ಥೆ ಮತ್ತು ರೋಗಿಗಳ ವಾಹನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಜಿಲ್ಲಾಡಳಿತ ಹೇಳಿದೆ. ಲಕ್ನೋದಲ್ಲಿ ಇಡೀ ತಿಂಗಳಲ್ಲಿ ಕಾಣುವ ಮಳೆ ಒಂದೇ ದಿನದಲ್ಲಿ ಸುರಿದಿದೆ. ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 155.2 ಮಿಮೀ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (indian meteorological department) ತಿಳಿಸಿದೆ. ಹವಾಮಾನ ಕಛೇರಿಯ ಪ್ರಕಾರ, ಲಕ್ನೋ ಸಾಮಾನ್ಯವಾಗಿ ಸೆಪ್ಟೆಂಬರ್‌ನ ಸಂಪೂರ್ಣ ತಿಂಗಳಿಗೆ ಪಡೆಯುವ ಸರಾಸರಿ 211.5 ಮಿ.ಮೀ ಆಗಿದೆ.

ಕುಸಿದ ನಿರ್ಮಾಣ ಹಂತದ ಗೋಡೆ, ಆರು ಕಾರ್ಮಿಕರ ಸಾವು

ರಾಷ್ಟ್ರಪತಿ ಸಂತಾಪ: ಕಟ್ಟಡದ ಗೋಡೆ ಕುಸಿದ 9 ಮಂದಿ ದಾರುಣ ಸಾವನ್ನಪ್ಪಿದ ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (president draupadi murmu) ಸಂತಾಪ ವ್ಯಕ್ತಪಡಿಸಿದ್ದಾರೆ. 'ಗೋಡೆ ಕುಸಿದು ಸಾವು ಕಂಡಿರುವ ಸುದ್ದಿ ಕೇಳಿ ಬಹಳ ದುಃಖವಾಗಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಗಾಯಗೊಂಡಿರುವ ವ್ಯಕ್ತಿಗಳು ಶೀಘ್ರ ಚೇತರಿಕೆ ಕಾಣಲಿ' ಎಂದು ರಾಷ್ಟ್ರಪತಿ ಭವನ (rashtrapati bhavan) ಹಿಂದಿಯಲ್ಲಿ ಟ್ವೀಟ್‌ ಮಾಡಿದೆ.

Follow Us:
Download App:
  • android
  • ios