ಭಾರತೀಯ ಜಾನಪದ ನೃತ್ಯಕ್ಕೆ ಮನಸೋತು ಕಾಲು ಕುಣಿಸಿದ ಐಎಂಎಫ್ ಮುಖ್ಯಸ್ಥೆ... ವೀಡಿಯೋ
ಜಿ-20 ಶೃಂಗಸಭೆಗೆ ದೇಶದ ರಾಜಧಾನಿ ಸಜ್ಜಾಗಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಿ-20ಗೆ ಆಗಮಿಸುವ ಗಣ್ಯರನ್ನು ನೃತ್ಯದ ಮೂಲಕ ಸ್ವಾಗತಿಸಲು ಜಾನಪದ ನೃತ್ಯಕಾರರನ್ನು ನಿಯೋಜಿಸಲಾಗಿದೆ.

ಜಿ-20 ಶೃಂಗಸಭೆಗೆ ದೇಶದ ರಾಜಧಾನಿ ಸಜ್ಜಾಗಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಿ-20ಗೆ ಆಗಮಿಸುವ ಗಣ್ಯರನ್ನು ನೃತ್ಯದ ಮೂಲಕ ಸ್ವಾಗತಿಸಲು ಜಾನಪದ ನೃತ್ಯಕಾರರನ್ನು ನಿಯೋಜಿಸಲಾಗಿದೆ. ಇಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥೆ ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ (New Delhi Airport) ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ವೇಳೆ ಸಾಮೂಹಿಕ ನೃತ್ಯವನ್ನು ಪ್ರದರ್ಶಿಸಲಾಯಿತು.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ವ್ಯವಸ್ಥಾಪಕ ನಿರ್ದೇಶಕಿ ಮತ್ತು ಅಧ್ಯಕ್ಷೆ ಕ್ರಿಸ್ಟಲಿನಾ ಜಾರ್ಜಿವಾ (Kristalina Georgieva)ಅವರನ್ನು ದೇಶಕ್ಕೆ ಸ್ವಾಗತಿಸುವ ಸಲುವಾಗಿ ಸಾಂಸ್ಕೃತಿಕ ತಂಡವು ಸಂಬಲ್ಪುರಿ ಹಾಡಿನಲ್ಲಿ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಪ್ರದರ್ಶಿಸಿತು. ಈ ಹಾಡಿಗೆ ಮನಸೋತ ಜಾರ್ಜಿವಾ ಕೂಡ ಈ ನೃತ್ಯಕ್ಕೆ ಹೆಜ್ಜೆ ಹಾಕಲು ಪ್ರಯತ್ನಿಸುವ ಮೂಲಕ ನೃತ್ಯಕಾರರಿಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.
ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರೋ ಪಾಕ್‌ಗೆ ವೆಂಕಟರಮಣನಾದ IMF: 3 ಬಿಲಿಯನ್ ಡಾಲರ್ ಸಾಲ ಘೋಷಣೆ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan)ಅವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸಂಬಲ್ಪುರಿ ಬೀಟ್ಸ್‌ನ್ನು ಕೇಳುತ್ತಿದ್ದರೆ ಹೆಜ್ಜೆ ಹಾಕದಿರುವುದು ಕಷ್ಟ ಎಂದು ಬರೆದುಕೊಂಡಿದ್ದಾರೆ. ಇಂಟರ್ನ್ಯಾಷನಲ್ ಮಾನಿಟರಿ ಫಂಡ್‌ನ ಎಂಡಿ ಜಿ20 ಶೃಂಗಸಭೆಗಾಗಿ ಆಗಮಿಸಿದ್ದು ಅವರಿಗೆ ಸಂಬಲ್ಪುರಿ ಹಾಡು ಹಾಗೂ ನೃತ್ಯದೊಂದಿಗೆ ಸ್ವಾಗತ ಕೋರಲಾಯ್ತು ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೋ ಶೇರ್ ಆದ ಸ್ವಲ್ಪ ಹೊತ್ತಿನಲ್ಲೇ ಸಾವಿರಾರು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ಇದೊಂದು ಅದ್ಭುತ ಕ್ಷಣ ಒಡಿಯಾ ಪಾಲಿಗೆ ಇದೊಂದು ಹೆಮ್ಮೆಯ ಕ್ಷಣ ಇದು ನಮ್ಮ ಸಂಸ್ಕೃತಿ ಹಾಗೂ ಸಂಗೀತಾದ ಶಕ್ತಿ ಹೀಗೆ ಕಾಮೆಂಟ್ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ ಹಾಗೂ ಸಂಗೀತಾದ ಸುಂದರ ಅನಾವರಣ ಮಾಡಲಾಗಿದೆ. ಅವರು ಅಷ್ಟೊಂದು ದೊಡ್ಡ ಹುದ್ದೆಯಲ್ಲಿದ್ದರೂ ಅವರಲ್ಲಿರುವ ಮಗು ಮನಸ್ಸನ್ನು ಅವರು ಸಾಯಲು ಬಿಟ್ಟಿಲ್ಲ ಆಕೆಗೆ ಧನ್ಯವಾದ ಹೇಳಬೇಕು ಎಂತ ಹ ಬೆಚ್ಚನೆಯ ಸ್ವಾಗತ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವಿಶ್ವ ಆರ್ಥಿಕ ಪ್ರಗತಿಯಲ್ಲಿ ಭಾರತದ ಪಾಲು ಶೇ. 15: ಐಎಂಎಫ್ ಮೆಚ್ಚುಗೆ; ಕೇಂದ್ರ ಬಜೆಟ್‌ಗೂ ಶ್ಲಾಘನೆ
ನಾಳೆಯಿಂದ ಜಿ-20 ಸಭೆ ದೆಹಲಿಯ ಪ್ರಗತಿ ಮೈದಾನದಲ್ಲಿ ನಿರ್ಮಿಸಲಾಗಿರುವ ಭಾರತ್ ಮಂಡಪಂನಲ್ಲಿ ಆರಂಭವಾಗಲಿದೆ. ಈ ಶೃಂಗದಲ್ಲಿ ಜಗತ್ತಿನ ಪ್ರಭಾವಿ ನಾಯಕರಾದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಮಾತ್ರವಲ್ಲದೇ ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ಉನ್ನತ ಆಡಳಿತಗಾರರು ಭಾಗವಹಿಸಿದ ವಿಶ್ವದ ಅನಾರೋಗ್ಯಕರ ಸಮಸ್ಯೆಗಳ ಚರ್ಚೆಗೆ ಸಾಕ್ಷಿಯಾಗಲಿದ್ದಾರೆ.