ವಿಶ್ವ ಆರ್ಥಿಕ ಪ್ರಗತಿಯಲ್ಲಿ ಭಾರತದ ಪಾಲು ಶೇ. 15: ಐಎಂಎಫ್‌ ಮೆಚ್ಚುಗೆ; ಕೇಂದ್ರ ಬಜೆಟ್‌ಗೂ ಶ್ಲಾಘನೆ

ಭಾರತದ ಆರ್ಥಿಕತೆ ಪ್ರಕಾಶಮಾನವಾಗಿದ್ದು, ವಿಶ್ವ ಆರ್ಥಿಕ ಬೆಳವಣಿಗೆಗೆ ಭಾರತದ ಪಾಲು ಶೇ. 15 ಎಂದು ಐಎಂಎಫ್‌ ಹೇಳಿದೆ. ಇನ್ನು, ಕೇಂದ್ರ ಬಜೆಟ್‌, ನೀತಿಗಳು ಅಭಿವೃದ್ಧಿಗೆ ಪೂರಕವಾಗಿದ್ದು, ಕೋವಿಡ್‌ ಕಾಲದ ಹಿನ್ನಡೆಯನ್ನು ನೀತಿ ಹಿಮ್ಮೆಟ್ಟಿಸಿವೆ ಎಂದು ಐಎಂಎಫ್‌ ಎಂಡಿ ಕ್ರಿಸ್ಟಲಿನಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

indian economy to contribute 15 percent of global growth in 2023 imf md ash

ವಾಷಿಂಗ್ಟನ್‌ (ಫೆಬ್ರವರಿ 23, 2023): ವಿಶ್ವ ಆರ್ಥಿಕತೆಯಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಪ್ರಕಾಶಮಾನ ಸ್ಥಾನದಲ್ಲಿದೆ. 2023ರಲ್ಲಿ ಒಟ್ಟು ಜಾಗತಿಕ ಬೆಳವಣಿಗೆಯ ಶೇ.15ರಷ್ಟುಕೊಡುಗೆಯನ್ನು ಭಾರತ ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಭಾರತದ ಕಾರ್ಯಕ್ಷಮತೆ ಸಾಕಷ್ಟು ಪ್ರಭಾವಶಾಲಿಯಾಗಿದೆ. ಈ ವರ್ಷ, ಭಾರತವು ಹೆಚ್ಚಿನ ಬೆಳವಣಿಗೆ ದರವನ್ನು ಉಳಿಸಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಮಾರ್ಚ್‌ನಲ್ಲಿ ಕೊನೆಗೊಳ್ಳುವ ವರ್ಷಕ್ಕೆ ಶೇ.6.8 ರಷ್ಟು ಪ್ರಗತಿ ಕಾಣಲಿದೆ. 

ಇದು ವಿಶ್ವದ ಇತರ ಆರ್ಥಿಕತೆಗಳಂತೆ ಸ್ವಲ್ಪ ನಿಧಾನವಾದರೂ ಜಾಗತಿಕ ಸರಾಸರಿಗಿಂತ ಹೆಚ್ಚಾಗಿದೆ. ಅದೇ ರೀತಿ ಭಾರತವು 2023 ರಲ್ಲಿ ಜಾಗತಿಕ ಬೆಳವಣಿಗೆ ಶೇ.15 ರಷ್ಟು ತನ್ನ ಕೊಡುಗೆ ಒದಗಿಸುತ್ತದೆ. ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗದ ಬೆಳವಣಿಗೆಯ ದರವಾಗಿದೆ’ ಎಂದರು.

ಇದನ್ನು ಓದಿ: ಜಾಗತಿಕ ಬೆಳವಣಿಗೆ ದರ ಇಳಿಸಿದ IMF;2023ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.6.1

‘ಕೋವಿಡ್‌ ಸಾಂಕ್ರಾಮಿಕದಿಂದ ಆದ ಕಷ್ಟ-ನಷ್ಟವನ್ನು ಡಿಜಿಟಲೀಕರಣವು ಸರಿದೂಗಿಸಿದೆ. ವಿವೇಕಯುತ ಹಣಕಾಸು ನೀತಿ ಮತ್ತು ಮುಂದಿನ ವರ್ಷದ ಬಜೆಟ್‌ನಲ್ಲಿ ಒದಗಿಸಲಾದ ಬಂಡವಾಳ ಹೂಡಿಕೆಗಳು, ಆರ್ಥಿಕ ಬೆಳವಣಿಗೆಯು ವೇಗ ಕಾಪಾಡಿಕೊಳ್ಳಲು ನೆರವಾಗಲಿದೆ’ ಎಂದು ಹೇಳಿದರು.

ಜಾಗತಿಕ ಬೆಳವಣಿಗೆಯು ಕಳೆದ ವರ್ಷದ ಶೇ. 3.4ರಿಂದ ಶೇ. 2.9ಕ್ಕೆ 2023ರಲ್ಲಿ ನಿಧಾನಗೊಳ್ಳಲಿದೆ. ಹಾಗಾಗಿ 2023ನೇ ಸಾಲು ಕಷ್ಟಕರವೆಂದು ಕಂಡುಬರುತ್ತಿದ್ದರೂ ಈ ಸಮಯದಲ್ಲಿ ಭಾರತವು ಪ್ರಕಾಶಮಾನವಾದ ತಾಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: 2023ರಲ್ಲಿ ವಿಶ್ವದಲ್ಲಿ ಆರ್ಥಿಕ ಹಿಂಜರಿತ: ಆರ್ಥಿಕ ತಜ್ಞರ ಎಚ್ಚರಿಕೆ

ಭಾರತ ಏಕೆ ಪ್ರಕಾಶಮಾನವಾದ ತಾಣವಾಗಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಐಎಂಎಫ್‌ ವ್ಯವಸ್ಥಾಪಕ ನಿರ್ದೇಶಕರು, ಈಗಾಗಲೇ ಸಾಕಷ್ಟು ಉತ್ತಮವಾಗಿ ಚಲಿಸುತ್ತಿರುವ ಡಿಜಿಟಲೀಕರಣವನ್ನು ಸಾಂಕ್ರಾಮಿಕ ರೋಗದ ಪ್ರಭಾವದಿಂದ ಹೊರಬರಲು ಮತ್ತು ಬೆಳವಣಿಗೆ ಹಾಗೂ ಉದ್ಯೋಗಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಪ್ರಮುಖ ಡ್ರೈವರ್‌ ಆಗಿ ಪರಿವರ್ತಿಸಲು ದೇಶವು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ಶ್ಲಾಘಿಸಿದರು.

ಎರಡನೆಯದಾಗಿ, ಭಾರತದ ಹಣಕಾಸಿನ ನೀತಿಯು ಆರ್ಥಿಕ ಪರಿಸ್ಥಿತಿಗಳಿಗೆ ಸ್ಪಂದಿಸುವಂತಿದೆ. ನಾವು ಹೊಸ ಬಜೆಟ್ ಮಂಡಿಸಿರುವುದನ್ನು ನೋಡಿದ್ದೇವೆ ಮತ್ತು ಇದು ಹಣಕಾಸಿನ ಬಲವರ್ಧನೆಗೆ ಬದ್ಧತೆಯನ್ನು ಸೂಚಿಸುತ್ತದೆ, ಅದೇ ಸಮಯದಲ್ಲಿ ಬಂಡವಾಳ ಹೂಡಿಕೆಗಳಿಗೆ ಗಮನಾರ್ಹ ಹಣಕಾಸು ಒದಗಿಸುತ್ತದೆ. ಮತ್ತು ಮೂರು, ಏಕೆಂದರೆ ಭಾರತ ಸಾಂಕ್ರಾಮಿಕ ರೋಗದಿಂದ ಪಾಠಗಳನ್ನು ಕಲಿಯಲು ಮತ್ತು ಕೆಲವು ತಿಂಗಳುಗಳಿಂದ ನಿಜವಾಗಿಯೂ ಕಷ್ಟಕರವಾದ ಸಮಯವನ್ನು ಜಯಿಸಲು ಅತ್ಯಂತ ಬಲವಾದ ನೀತಿಗಳನ್ನು ಜಾರಿಗೆ ತರಲು ಹಿಂಜರಿಯಲಿಲ್ಲ ಎಂದು ಕ್ರಿಸ್ಟಲಿನಾ ಜಾರ್ಜಿವಾ ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ: ಮುಂದಿನ 20 ವರ್ಷ ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ವೇಗದ ಪ್ರಗತಿ

ನಿರ್ಮಲಾ ಸೀತಾರಾಮನ್‌ ಬಜೆಟ್‌ನಿಂದ ಪ್ರಭಾವಿತನಾಗಿದ್ದೇನೆ. ಕೋವಿಡ್‌ ಪರಿಸ್ಥಿತಿಯಿಂದ ಪಾಠ ಕಲಿತ ಭಾರತ, ಅದಕ್ಕೆ ತಕ್ಕುದಾಗಿ ಆರ್ಥಿಕ ನೀತಿ ಜಾರಿಗೆ ತಂದಿದೆ ಎಂದೂ ಹೇಳಿದರು. 
ಅಲ್ಲದೆ, ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಭಾರತದ ವಾರ್ಷಿಕ ಬಜೆಟ್‌ನಲ್ಲಿ ಎರಡು ವಿಷಯಗಳಿಂದ ಪ್ರಭಾವಿತರಾಗಿದ್ದೇನೆ ಎಂದು IMF ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಒಟ್ಟಾರೆಯಾಗಿ, ವಿತ್ತ ಸಚಿವರು ಬಹಳ ಚಿಂತನಶೀಲ ಕೆಲಸ ಮಾಡಿದ್ದಾರೆ ಎಂದೂ ಅವರು ಹೇಳಿದರು.

ಕ್ರಿಸ್ಟಲಿನಾ ಜಾರ್ಜಿವಾ ಅವರ ಪ್ರಕಾರ ಮೊದಲನೆಯದು, ಭಾರತದಲ್ಲಿ ಹಣಕಾಸಿನ ಜವಾಬ್ದಾರಿಯೊಂದಿಗೆ ಅಭಿವೃದ್ಧಿ ಅಗತ್ಯಗಳನ್ನು ಸಮತೋಲನಗೊಳಿಸುವುದರ ಮೇಲೆ ಎಷ್ಟು ಕಾಳಜಿಯನ್ನು ಇರಿಸಲಾಗಿದೆ ಎಂಬುದನ್ನು ತೋರಿಸುತ್ತದೆ. ಅಂದರೆ, ನೀವು ಹೊಂದಿರುವ ಬಜೆಟ್‌, ಬೆಳವಣಿಗೆ-ಪೋಷಕ ಖರ್ಚುಗಳ ಮೇಲೆ ಕೇಂದ್ರೀಕರಿಸುವ ಮೂಲಕ ಆದಾಯದ ಬದಿಯಲ್ಲಿ ವಾಸ್ತವಿಕವಾಗಿದೆ. ಮತ್ತು ಎರಡನೆಯದಾಗಿ, ಬಂಡವಾಳ ವೆಚ್ಚಗಳಲ್ಲಿ ಹೂಡಿಕೆ ಇದ್ದು, ಅದು ಬೆಳವಣಿಗೆಗೆ ದೀರ್ಘಾವಧಿಯ ಅಡಿಪಾಯವನ್ನು ಒದಗಿಸುತ್ತದೆ ಎಂದೂ ಐಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜಿವಾ ಅವರು ಹೇಳಿದರು.

ಇದನ್ನೂ ಓದಿ: ವಿಶ್ವದಲ್ಲಿ ಆರ್ಥಿಕ ಹಿಂಜರಿತ ಆದರೂ ಲಾಭದಲ್ಲಿ ಭಾರತ

Latest Videos
Follow Us:
Download App:
  • android
  • ios