ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರೋ ಪಾಕ್‌ಗೆ ವೆಂಕಟರಮಣನಾದ IMF: 3 ಬಿಲಿಯನ್‌ ಡಾಲರ್‌ ಸಾಲ ಘೋಷಣೆ

ಪಾಕಿಸ್ತಾನ ಮತ್ತು ಐಎಂಎಫ್‌ ಕಳೆದ ತಿಂಗಳು ಸಿಬ್ಬಂದಿ ಮಟ್ಟದ ಒಪ್ಪಂದವನ್ನು ತಲುಪಿದೆ. ಈ ಮೂಲಕ ನಗದು ಕೊರತೆಯಿಂದ ಬಳಲುತ್ತಿರುವ ರಾಷ್ಟ್ರಕ್ಕೆ ಹೆಚ್ಚು ಅಗತ್ಯವಿರುವ ಹಣವನ್ನು ಭದ್ರಪಡಿಸಿದೆ.

imf approves 3 billion bailout for pakistan shehbaz sharif tweets ash

ಇಸ್ಲಾಮಾಬಾದ್ (ಜುಲೈ 13, 2023): ತೀವ್ರ ಆರ್ಥಿಕ ಸಂಕಷ್ಟ, ಬೆಲೆ ಏರಿಕೆಯಿಂದ ನಲುಗಿದ್ದ ಪಾಕಿಸ್ತಾನಕ್ಕೆ ಐಎಂಎಫ್‌ ಕೊನೆಗೂ ಬೇಲ್‌ಔಟ್‌ ನೀಡಿದೆ. ಅಂದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮಂಡಳಿಯು ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್‌ ಮೊತ್ತದ ಸಾಲದ ನೆರವಿಗೆ ಬುಧವಾರ ಅನುಮೋದಿಸಿದೆ. ಹಲವು ತಿಂಗಳುಗಳಿಂದ ಈ ಕುರಿತು ಹಗ್ಗಜಗ್ಗಾಟ ನಡೆಯುತ್ತಲೇ ಇತ್ತು, ಅನೇಕ ಷರತ್ತುಗಳನ್ನು ಹಾಕಿತ್ತು. ಅಲ್ಲದೆ, ದಕ್ಷಿಣ ಏಷ್ಯಾದ ಈ ದೇಶಕ್ಕೆ ಸಹಾಯ ಮಾಡಲು ತಕ್ಷಣವೇ ಸುಮಾರು 1.2 ಶತಕೋಟಿ ಡಾಲರ್‌ ಹಣವನ್ನು ನೀಡುವುದಾಗಿಯೂ ಹೇಳಿದೆ. 

ಪಾಕಿಸ್ತಾನ ಮತ್ತು ಐಎಂಎಫ್‌ ಕಳೆದ ತಿಂಗಳು ಸಿಬ್ಬಂದಿ ಮಟ್ಟದ ಒಪ್ಪಂದವನ್ನು ತಲುಪಿದೆ. ಈ ಮೂಲಕ ನಗದು ಕೊರತೆಯಿಂದ ಬಳಲುತ್ತಿರುವ ರಾಷ್ಟ್ರಕ್ಕೆ ಹೆಚ್ಚು ಅಗತ್ಯವಿರುವ ಹಣವನ್ನು ಭದ್ರಪಡಿಸಿದೆ. ಮಂಡಳಿಯ ಅನುಮೋದನೆಯ ಬಳಿಕ ಈಗ ಮೊದಲ ಕಂತು ನೀಡಲಾಗಿದ್ದು, ಉಳಿದ ಹಣ ನಂತರದ ಕಂತುಗಳಲ್ಲಿ ಬರುತ್ತವೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಪಾಕ್‌ ಬಜೆಟ್‌ 14 ಲಕ್ಷ ಕೋಟಿ: ಸಾಲ ತೀರಿಸಲೆಂದೇ 7 ಲಕ್ಷ ಕೋಟಿ ರೂ. ಮೀಸ​ಲು

ಈ ಸಂಬಂಧ ಹೇಳಿಕೆ ನೀಡಿದ IMF, ‘’ಅಂತಾರಾಷ್ಟ್ರೀಯ ಹಣಕಾಸು ನಿಧಿ’’ಯ (IMF) ಕಾರ್ಯನಿರ್ವಾಹಕ ಮಂಡಳಿಯು ಪಾಕಿಸ್ತಾನಕ್ಕೆ 9-ತಿಂಗಳ ಸ್ಟ್ಯಾಂಡ್-ಬೈ ಅರೇಂಜ್ಮೆಂಟ್ (SBA) ಅನ್ನು SDR2,250 ಮಿಲಿಯನ್ ಮೊತ್ತಕ್ಕೆ (ಸುಮಾರು $3 ಬಿಲಿಯನ್ ಅಥವಾ 111 ಪ್ರತಿಶತ ಕೋಟಾ) ಅಧಿಕಾರಿಗಳ ಆರ್ಥಿಕ ಸ್ಥಿರೀಕರಣ ಕಾರ್ಯಕ್ರಮದ ಬೆಂಬಲಕ್ಕೆ ಅನುಮೋದಿಸಿದೆ’’ ಎಂದು ತಿಳಿಸಿದೆ.

ಪಾಕಿಸ್ತಾನಕ್ಕೆ ಸವಾಲಿನ ಆರ್ಥಿಕ ಘಟ್ಟದಲ್ಲಿ ಈ ನೆರವು ಬರುತ್ತದೆ ಎಂದೂ ಐಎಂಎಫ್‌ ಹೇಳಿದೆ. ಕಷ್ಟಕರವಾದ ಬಾಹ್ಯ ಪರಿಸರ, ವಿನಾಶಕಾರಿ ಪ್ರವಾಹಗಳು ಮತ್ತು ನೀತಿ ತಪ್ಪು ಹೆಜ್ಜೆಗಳು ದೊಡ್ಡ ಹಣಕಾಸಿನ ಮತ್ತು ಬಾಹ್ಯ ಕೊರತೆಗಳಿಗೆ ಕಾರಣವಾಗಿದ್ದು, ಇದರಿಂದ ಹಣದುಬ್ಬರ ತೀವ್ರ ಏರಿಕೆಯಾಗಿದೆ ಎಂದೂ ತಿಳಿಸಿದೆ. 

ಇದನ್ನೂ ಓದಿ: ಪಾಕ್‌ಗೆ 18 ಸಾವಿರ ಕೋಟಿ ಸಾಲ ನೀಡಿ ದಿವಾಳಿ ಆಗದಂತೆ ಬಚಾವ್‌ ಮಾಡಿದ ಚೀನಾ: ಹಣ ಉಳಿಸಲು ವೆಚ್ಚ ಕಡಿತ ಮಾಡಿದ ಪಾಕ್‌ ಪ್ರಧಾನಿ

ಈ ಮಧ್ಯೆ, IMF ನಿರ್ಧಾರವನ್ನು ತಕ್ಷಣವೇ ಸ್ವಾಗತಿಸಿದ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್, ಆರ್ಥಿಕತೆಯನ್ನು ಸ್ಥಿರಗೊಳಿಸಲು ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಸರ್ಕಾರದ ಪ್ರಯತ್ನಗಳಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. 

ಈ ಸಂಬಂಧ ಟ್ವೀಟ್‌ ಮಾಡಿದ ಶೆಹಬಾಜ್‌ ಷರೀಫ್‌ "ಇದು ಮಧ್ಯಮ-ಅವಧಿಯ ಆರ್ಥಿಕ ಸವಾಲುಗಳನ್ನು ತಕ್ಷಣವೇ ಜಯಿಸಲು ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಮುಂದಿನ ಸರ್ಕಾರಕ್ಕೆ ಮುಂದಿನ ಹಾದಿಯನ್ನು ರೂಪಿಸಲು ಹಣಕಾಸಿನ ಸ್ಥಳವನ್ನು ನೀಡುತ್ತದೆ" ಎಂದೂ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. "ತುಂಬಾ ಅಡೆತಡೆಗಳ ನಡುವೆ ಮತ್ತು ತೋರಿಕೆಯಲ್ಲಿ ಅಸಾಧ್ಯವೆಂದು ತೋರುವ ಗಡುವಿನ ವಿರುದ್ಧ ಈ ಮೈಲಿಗಲ್ಲನ್ನು ಸಾಧಿಸಲಾಯಿತು, ಅತ್ಯುತ್ತಮ ತಂಡದ ಪ್ರಯತ್ನವಿಲ್ಲದೆ ಸಾಧ್ಯವಿರಲಿಲ್ಲ’’ ಎಂದೂ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾವೀಗ ದಿವಾಳಿಯಾಗಿರುವ ದೇಶದಲ್ಲಿದ್ದೇವೆ; ಈ ಪರಿಸ್ಥಿತಿಗೆ ನಾವೇ ಕಾರಣ: ಪಾಕ್‌ ರಕ್ಷಣಾ ಮಂತ್ರಿ

IMF ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಡುವೆ ಸಹಿ ಮಾಡಿದ 2019 ರ ಒಪ್ಪಂದದ ಅನುಸರಣೆಯ ಕೊರತೆಯಿಂದಾಗಿ IMF ಸಾಲದ ನಿರ್ಣಾಯಕ 1.1 ಬಿಲಿಯನ್‌ ಡಾಲರ್‌ ಭಾಗವನ್ನು ಬಿಡುಗಡೆ ಮಾಡಲು ನಿರಾಕರಿಸಿದಾಗ ಡಿಸೆಂಬರ್‌ನಿಂದ ಬೇಲ್‌ಔಟ್‌ ತಡೆಹಿಡಿಯಲಾಗಿತ್ತು. ಏಪ್ರಿಲ್ 2022 ರಲ್ಲಿ ಸಂಸತ್ತಿನಲ್ಲಿ ಅವಿಶ್ವಾಸ ಮತದಲ್ಲಿ ಇಮ್ರಾನ್‌ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಶೆಹಬಾಜ್‌ ಷರೀಫ್ ಅವರು ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಬೇಸಿಗೆಯಲ್ಲಿ ವಿಧ್ವಂಸಕ ಪ್ರವಾಹಗಳಿಂದ 1,739 ಜನರು ಬಲಿಯಾಗಿದ್ದು, ಇದರಿಂದ 2 ಮಿಲಿಯನ್ ಮನೆಗಳು ನಾಶವಾಗಿತ್ತು. ಅದರಿಂದ ಪಾಕಿಸ್ತಾನದ ಆರ್ಥಿಕತೆಯು 30 ಬಿಲಿಯನ್ ಡಾಲರ್‌ ನಷ್ಟವನ್ನು ಉಂಟುಮಾಡಿ ದೊಡ್ಡ ಆಘಾತಕ್ಕೆ ಸಾಕ್ಷಿಯಾಯಿತು. 

ವಿಶ್ಲೇಷಕರ ಪ್ರಕಾರ, ವಿದೇಶಿ ಸಾಲಗಳನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಪಾಕಿಸ್ತಾನಕ್ಕೆ ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ 20 ಬಿಲಿಯನ್ ಡಾಲರ್‌ ಅಗತ್ಯವಿದೆ. ಆದರೂ, ಈ ವರ್ಷದ ಆರಂಭದಲ್ಲಿ, ವಿದೇಶಿ ವಿನಿಮಯ ಮೀಸಲು 4 ಬಿಲಿಯನ್‌ ಡಾಲರ್‌ಗಿಂತ ಕಡಿಮೆಯಿತ್ತು. ಈ ಹಣವು ನಾಲ್ಕು ವಾರಗಳ ಆಮದು ಬಿಲ್‌ಗೆ ಮಾತ್ರ ಸಾಕಾಗಿತ್ತು, ಆದರೂ ಪಾಕಿಸ್ತಾನವು ಡಾಲರ್‌ಗಳನ್ನು ಉಳಿಸಲು ಕೆಲವು ಆಮದುಗಳನ್ನು ನಿಷೇಧಿಸಿತ್ತು. 

ಇದನ್ನೂ ಓದಿ: ಟರ್ಕಿಗೆ ನೆರವು ನೀಡಿದ ವ್ಯಕ್ತಿಗೆ ಪಾಕ್‌ ಪ್ರಧಾನಿ ಮೆಚ್ಚುಗೆ; ಪಾಕ್‌ಗೇಕೆ ಸಹಾಯ ಮಾಡಿಲ್ಲ ಎಂದು ನೆಟ್ಟಿಗರ ವ್ಯಂಗ್ಯ

Latest Videos
Follow Us:
Download App:
  • android
  • ios