IIT, IIM ಓದಿಲ್ಲ, ಗೂಗಲ್‌ನಲ್ಲಿ 2 ಕೋಟಿ ರೂಪಾಯಿ ವೇತನ ಕೆಲಸ ಗಿಟ್ಟಿಸಿದ ಬಿಹಾರದ ಪದವೀಧರ!

ಐಐಟಿ, ಐಐಎಂ ಓದಿಲ್ಲ, ಈ ಬಿಹಾರದ ಸಾಫ್ಟ್‌ವೇರ್ ಎಂಜಿನೀಯರ್ ಇದೀಗ ಲಂಡನ್ ಗೂಗಲ್ ಕಚೇರಿಯಲ್ಲಿ ವಾರ್ಷಿಕ 2 ಕೋಟಿ ರೂಪಾಯಿ ಸಂಬಳದ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಈತನ ಸಾಧನೆ ಇದೀಗ ಸಾಮಾನ್ಯ ಪದವೀಧರರಿಗೂ ಸ್ಪೂರ್ತಿಯಾಗಿದೆ.

Bihar 24 year old graduate secure rs 2 crore salary job at google ckm

ಪಾಟ್ನಾ(ಸೆ.19) ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನೋದು ಬಹುತೇಕರ ಕನಸು. ಗೂಗಲ್ ವೇತನ, ಸೌಲಭ್ಯಗಳಿಂದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಹಲವರು ಬಯಸುತ್ತಾರೆ. ಇದಕ್ಕಾಗಿ ಐಐಟಿ, ಐಐಎಂ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಈ ಯಾವುದೇ ಸಂಸ್ಥಗಳಲ್ಲಿ ಅಧ್ಯಯನ ಮಾಡದ 24 ವರ್ಷದ ಬಿಹಾರದ ಸಾಫ್ಟ್‌ವೇರ್ ಎಂಜಿನಿಯರ್ ಇದೀಗ ಲಂಡನ್ ಗೂಗಲ್ ಕಚೇರಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಈತನ ವಾರ್ಷಿಕ ವೇತನ ಬರೋಬ್ಬರಿ 2 ಕೋಟಿ ರೂಪಾಯಿ. 

ಪಾಟ್ನಾದ ನ್ಯಾಷನಲ್ ಇನ್ಸ್ಟ್‌ಟ್ಯೂಟ್ ಟೆಕ್ನಾಲಜಿಯಲ್ಲಿ ಎಂಜಿನೀಯರಿಂಗ್ ಪದವಿ ಪಡೆದಿರುವ ಜಮುಯಿ ಜಿಲ್ಲೆಯ ಅಭಿಷೇಕ್ ಕುಮಾರ್ ತನ್ನ ಪ್ರತಿಭೆ, ಸಾಮರ್ಥ್ಯದ ಮೂಲಕ ಇದೀಗ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಇದೀಗ ಅಭಿಷೇಕ್ ಮನೆ ಮಾತ್ರವಲ್ಲ, ಗ್ರಾಮ, ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈತನ ತಂದೆ ಇಂದ್ರದೇವ್ ಯಾದವ್ ಜಮುಯಿ ಸಿವಿಲ್ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಮಂಜು ದೇವಿ ಗೃಹಿಣಿ. ಅಭಿಷೇಕ್ ಕುಟುಂಬ ಝಾಝಾ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.

ಕೆಲಸ ಕಳೆದುಕೊಂಡು ಡೆಲಿವರಿ ಬಾಯ್ ಆದ ಟೆಕ್ಕಿ, ಬೀದಿಗೆ ಬಿದ್ದು ಬೀದಿಯಿಂದ ಕಟ್ಟಿದ ಜೀವನ ನೆನೆದು ಭಾವುಕ!

2022ರಲ್ಲಿ ಅಭಿಷೇಕ್ ಎಂಜಿನೀಯರಿಂಗ್ ಪದವಿ ಮುಗಿಸಿದ ಬೆನ್ನಲ್ಲೇ ಅಮೇಜಾನ್ ಕಂಪನಿ ವಾರ್ಷಿಕ 1.08 ಕೋಟಿ ಸಂಬಳ ನೀಡಿ ಉದ್ಯೋಗ ನೀಡಿತ್ತು. ಮಾರ್ಚ್ 2023ರ ವರೆಗೆ ಅಭಿಷೇಕ್ ಅಮೇಜಾನ್ ಸಂಸ್ಥೆಯಲ್ಲಿ ಕೆಲಸ ಮಾಡಿ ಬಳಿಕ ಜರ್ಮನ್ ಮೂಲಕ ಫಾರಿನ್ ಎಕ್ಸೇಂಜ್ ಟ್ರೇಡಿಂಗ್ ಯೂನಿಟ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೀಗ ಗೂಗಲ್ ಸಂಸ್ಥೆಯಲ್ಲಿ ಬರೋಬ್ಬರಿ 2 ಕೋಟಿ ವೇತನದ ಕೆಲಸ ಗಿಟ್ಟಿಸಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದಾರೆ.

ಈ ಯಶಸ್ಸನ್ನು ಅಭಿಷೇಕ್ ಪೋಷಕರು ಹಾಗೂ ಹಿರಿಯ ಸಹೋದರನಿಗೆ ಅರ್ಪಿಸಿದ್ದಾರೆ. ಪ್ರತಿಯೊಬ್ಬ ಸಾಫ್ಟ್‌ವೇರ್ ಎಂಜಿನೀಯರ್‌ಗೆ ಗೂಗಲ್‌ನಲ್ಲಿ ಕೆಲಸ ಮಾಡಬೇಕು ಅನ್ನೋದು ಕನಸಾಗಿರುತ್ತದೆ. ಹಲವರು ಪ್ರಯತ್ನಿಸುತ್ತಾರೆ. ಆದರೆ ನನಗೆ ಅದೃಷ್ಠ ಒಲಿದು ಬಂದಿದೆ. ಇದು ಅತೀವ ಸಂಸತ ತಂದಿದೆ ಎಂದು ಅಭಿಷೇಕ್ ಹೇಳಿದ್ದಾರೆ.

ಇದರ ನಡುವೆ ಹಲವು ಪ್ರತಿಷ್ಠಿತ ಸಂಸ್ಥೆಗಳಿಗೆ ಆಫರ್‌ಗಳು ಬಂದಿದೆ. ಇದೀಗ ಟೆಕ್ ದೈತ್ಯ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಅಭಿಷೇಕ್ 1ನೇ ತರಗತಿಯಿಂದ 10ನೇ ತರಗತಿವರೆಗೆ ಝಾಝಾದ ಸಿಟಿ ಸ್ಕೂಲ್‌ನಲ್ಲಿ ಪೂರೈಸಿದ್ದಾರೆ. ಇದೀಗ ಅಭಿಷೇಕ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸಾಮಾನ್ಯ ಕುಟುಂಬದಿಂದ ಬಂದಿರುವ ಅಭಿಷೇಕ್ ಇದೀಗ ಅತ್ಯುನ್ನತ ಸಂಸ್ಥೆಯಲ್ಲಿ ದೊಡ್ಡ  ಮೊತ್ತದ ವೇತನ ಉದ್ಯೋಗ ಪಡೆದುಕೊಂಡಿರುವುದು ಗ್ರಾಮದ ಹೆಮ್ಮೆ ಎಂದು ಸ್ಥಳೀಯರು ಹೇಳಿದ್ದಾರೆ. 

ಅಭಿಷೇಕ್ ಸಾಧನೆ ಇಡೀ ಗ್ರಾಮಕ್ಕೆ ಹಾಗೂ ಬಿಹಾರಕ್ಕೆ ಸ್ಪೂರ್ತಿಯಾಗಿದೆ. ಅಭಿಷೇಕ್ ರೀತಿ ಹಲವು ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು, ಈ ದಿಕ್ಕಿನಲ್ಲಿ ಸಾಗಲು ನರೆವಾಗಲಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

SBI ಬ್ಯಾಂಕ್‌ನಲ್ಲಿ 1511 ಉದ್ಯೋಗ ಅವಕಾಶ, ತಿಂಗಳಿಗೆ 64,820 ರೂ ವೇತನ!
 

Latest Videos
Follow Us:
Download App:
  • android
  • ios