ಐಐಟಿಯನ್ ಅರವಿಂದ್ ಶ್ರೀನಿವಾಸ್ ಎಲಾನ್ ಮಸ್ಕ್ಗೆ ಸವಾಲು ಹಾಕಿ ಸುದ್ದಿಯಲ್ಲಿದ್ದಾರೆ. ಇವರು Perplexity AIನ ಸಹ-ಸಂಸ್ಥಾಪಕ ಮತ್ತು CEO. ಗೂಗಲ್ ಮತ್ತು OpenAIನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇತ್ತೀಚೆಗೆ, ಇನ್‌ಸ್ಟಾಗ್ರಾಮ್ಗಿಂತ Perplexity AIನಲ್ಲಿ ಹೆಚ್ಚು ಸಮಯ ಕಳೆಯುವುದರ ಬಗ್ಗೆ ಪ್ರತಿಕ್ರಿಯಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. ಇವರ AI ಆಧಾರಿತ ಸರ್ಚ್ ಎಂಜಿನ್ಗೆ ಜೆಫ್ ಬೆಜೋಸ್ ಸೇರಿದಂತೆ ಪ್ರಮುಖ ಹೂಡಿಕೆದಾರರ ಬೆಂಬಲವಿದೆ.

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ಗೆ (Elon Musk) ಚಾಲೆಂಜ್ ಮಾಡಿದ ಐಐಟಿಯನ್ ಈಗ ಭಾರಿ ಸುದ್ದಿಯಲ್ಲಿದ್ದಾರೆ. ಗೂಗಲ್ ಮತ್ತು OpenAI ನಂತಹ ದೊಡ್ಡ ಟೆಕ್ ಕಂಪನಿಗಳಲ್ಲಿ ಕೆಲಸ ಮಾಡಿದ ಈ ಹುಡುಗನ ಹೆಸರು ಅರವಿಂದ್ ಶ್ರೀನಿವಾಸ್. ಅರವಿಂದ್ ಶ್ರೀನಿವಾಸ್ ಅವರು ಎಲಾನ್ ಮಸ್ಕ್ಗೆ ಸವಾಲು ಹಾಕಿ, ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ನಿಂದ ಹಣ ಪಡೆಯುವುದನ್ನು ತಡೆಯಲು ಸಾಧ್ಯವೇ ಎಂದು ಕೇಳಿದಾಗ ಸುದ್ದಿಯಲ್ಲಿದ್ದರು.

ವಿಶ್ವದ ಅಲ್ಟ್ರಾ ರಿಚ್ ಉದ್ಯಮಿಗಳ ಪಟ್ಟಿ ಬಹಿರಂಗ, ಅಂಬಾನಿ-ಅದಾನಿಗೆ ಎಷ್ಟನೇ ಸ್ಥಾನ?

ನಂತರ ಗೂಗಲ್‌ CEO ಸುಂದರ್ ಪಿಚೈ (Sundar Pichai) ಜೊತೆಗಿನ ಅವರ ಫೋಟೋ ವೈರಲ್ ಆಯ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ AI ಆಕ್ಷನ್ ಸಮ್ಮಿಟ್‌ನಲ್ಲಿ ಭಾಗವಹಿಸಲು ಪ್ಯಾರಿಸ್ಗೆ ಹೋದಾಗ ಈ ಭೇಟಿಯಾಯ್ತು. ಶ್ರೀನಿವಾಸ್ ಕೃತಕ ಬುದ್ಧಿಮತ್ತೆ (AI) ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ವ್ಯಕ್ತಿ. ಇತ್ತೀಚೆಗೆ, ಇನ್ಸ್ಟಾಗ್ರಾಮ್‌ಗಿಂತ Perplexity AIನಲ್ಲಿ ಹೆಚ್ಚು ಸಮಯ ಕಳೆಯುವುದಾಗಿ ಹೇಳಿಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ಇದರಿಂದಾಗಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.

ಎರಡು AI ಡಿವೈಸ್‌ಗಳ ನಡುವಿನ ಸಂಭಾಷಣೆ ಕಂಡು ಆತಂಕಕ್ಕೊಳಗಾದ ಜಗತ್ತು; ಇದು ಮುಂದಿನ ಅಪಾಯದ ಮುನ್ಸೂಚನೆಯೇ?

ಅರವಿಂದ್ ಶ್ರೀನಿವಾಸ್ ಯಾಕೆ ಸುದ್ದಿಯಲ್ಲಿದ್ದಾರೆ?:
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ X (Twitter) ನಲ್ಲಿ ಒಬ್ಬ ಬಳಕೆದಾರರು ಸ್ಕ್ರೀನ್‌ಶಾಟ್‌ ಹಂಚಿಕೊಂಡು, ತಾನು ಇನ್ಸ್ಟಾಗ್ರಾಮ್ನಲ್ಲಿ ಕೇವಲ 50 ನಿಮಿಷ ಮತ್ತು Perplexity AIನಲ್ಲಿ 1 ಗಂಟೆ 43 ನಿಮಿಷ ಕಳೆದಿದ್ದೇನೆ ಎಂದು ಹೇಳಿದ್ದಾರೆ. ಈ ಬದಲಾವಣೆಯ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ ಎಂದು ಬಳಕೆದಾರರು ಶ್ರೀನಿವಾಸ್ ಅವರನ್ನು ಕೇಳಿದರು. ಅದಕ್ಕೆ ಪ್ರತಿಕ್ರಿಯೆಯಾಗಿ, ಶ್ರೀನಿವಾಸ್ ಮೆಟಾ ಪ್ಲಾಟ್ಫಾರ್ಮ್ ಅನ್ನು ಟೀಕಿಸಿ, 'ಜನರು ಇನ್ಸ್ಟಾಗ್ರಾಮ್ಗಿಂತ Perplexityಯಲ್ಲಿ ಹೆಚ್ಚು ಸಮಯ ಕಳೆಯುವುದು ಜಗತ್ತಿಗೆ ಒಳ್ಳೆಯದು' ಎಂದರು.

ಅರವಿಂದ್ ಶ್ರೀನಿವಾಸ್ ಯಾರು, Perplexity AI ಜೊತೆಗಿನ ಸಂಬಂಧವೇನು?:
ಅರವಿಂದ್ ಶ್ರೀನಿವಾಸ್ Perplexity AI ನ ಸಹ-ಸಂಸ್ಥಾಪಕ ಮತ್ತು CEO ಆಗಿದ್ದಾರೆ. ಅವರು ಭಾರತೀಯ ಮೂಲದ ಇಂಜಿನಿಯರ್. ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅವರ AI-ಆಧಾರಿತ ಸರ್ಚ್ ಎಂಜಿನ್‌ಗೆ ಜೆಫ್ ಬೆಜೋಸ್ ಸೇರಿದಂತೆ ಪ್ರಮುಖ ಹೂಡಿಕೆದಾರರ ಬೆಂಬಲವಿದೆ. ಶ್ರೀನಿವಾಸ್ 2022 ರಲ್ಲಿ ಆಂಡಿ ಕೊನ್ವಿನ್ಸ್ಕಿ, ಡೆನಿಸ್ ಯರಾಟ್ಸ್ ಮತ್ತು ಜಾನಿ ಹೋ ಅವರೊಂದಿಗೆ ಸೇರಿ Perplexity AI ಅನ್ನು ಸ್ಥಾಪಿಸಿದರು. ಅವರು ಐಐಟಿ ಮದ್ರಾಸ್‌ನಲ್ಲಿ ಬಿಟೆಕ್ ಮಾಡಿದ್ದಾರೆ. 2017 ರಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಡಬಲ್ ಡಿಗ್ರಿ ಪೂರ್ಣಗೊಳಿಸಿದರು.

ಕೆನಡಾದಲ್ಲಿ ಎಲಾನ್ ಮಸ್ಕ್ ವಿರುದ್ಧ ಪ್ರತಿಭಟನೆ, ಪೌರತ್ವ ರದ್ದತಿಗೆ ಅರ್ಜಿ! ಅಮೆರಿಕದ ಪಾತ್ರ ಏನು?

ಅರವಿಂದ್ ಶ್ರೀನಿವಾಸ್ ವೃತ್ತಿ ಜೀವನ:
ಶ್ರೀನಿವಾಸ್ 2018 ರಲ್ಲಿ OpenAI ನಲ್ಲಿ ರಿಸರ್ಚ್ ಇಂಟರ್ನ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 2020-21 ರಲ್ಲಿ ಗೂಗಲ್ (Google) ಮತ್ತು DeepMind ನಂತಹ ಪ್ರಮುಖ ಟೆಕ್ ಕಂಪನಿಗಳಲ್ಲಿ ಹಲವು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. Perplexity AI ಅನ್ನು ಸ್ಥಾಪಿಸುವ ಮೊದಲು ರಿಸರ್ಚ್ ಸೈಂಟಿಸ್ಟ್ ಆಗಿ OpenAI ಗೆ ಮರಳಿದರು.