ಕೊರೋನಾ ಕಾರಣ ಭಾರತದ ಬಹುತೇಕ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್ ಮನೆಯಿಂದ ಕೆಲಸ ಯಶಸ್ವಿಯಾಗಿರುವ ಕಾರಣ ಮುಂದುವರಿಸಲು ನಿರ್ಧಾರ ಉದ್ಯಮಿ ಹರ್ಷಾ ಗೋಯೆಂಕಾಗೆ ಉದ್ಯೋಗಿ ಪತ್ನಿಯಿಂದ ಬಂದು ವಿಶೇಷ ಪತ್ರ ಉತ್ತರಿಸಲು ತಡಕಾಡಿದ ಹರ್ಷಾ ಗೋಯೆಂಕಾ

ಮುಂಬೈ(ಸೆ.12): ಕೊರೋನಾ ವಕ್ಕರಿಸಿದ ಬಳಿಕ ದೇಶದಲ್ಲಿನ ಹಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿತು. ಸರಿಸುಮಾರು 2 ವರ್ಷಗಳಿಂದ ಹಲವು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಕಂಪನಿಗಳು ವರ್ಕ್ ಫ್ರಮ್ ಶಾಶ್ವತ ಮಾಡಲು ಚಿಂತಿಸುತ್ತಿದೆ. ಇದರ ನಡುವೆ ವರ್ಕ್ ಫ್ರಮ್ ಹೋಮ್ ಬೇಕು, ಬೇಡ ಅನ್ನೋ ವಾದ, ಚರ್ಚೆಗಳು ಜೋರಾಗಿದೆ. ಆದರೆ ಕೈಗಾರಿಕೋದ್ಯಮಿ ಹರ್ಷಾ ಗೋಯೆಂಕಾಗೆ ತನ್ನ ಉದ್ಯೋಗಿ ಪತ್ನಿ ಬರೆದಿರುವ ಪತ್ರ ಗಂಭೀರ ಚಿಂತನೆ ಹುಟ್ಟು ಹಾಕಿದೆ.

ಶೇ.57 ಭಾರತೀಯರಿಗೆ ವರ್ಕ್ ಫ್ರಮ್ ಹೋಮ್‌ನಲ್ಲಿ ಹೆಚ್ಚು ಕೆಲಸದ ಭಾರ; ಸಮೀಕ್ಷಾ ವರದಿ!

ಭಾರತದ ಖ್ಯಾತ ಉದ್ಯಮಿ ಹರ್ಷಾ ಗೋಯೆಂಕಾ ಇತ್ತೀಚೆಗೆ ಪತ್ರವನ್ನು ಸ್ವೀಕರಿಸಿದ್ದಾರೆ. ತನ್ನ ಕಂಪನಿ ಉದ್ಯೋಗಿಯಾಗಿರುವ ಮನೋಜ್ ಪತ್ನಿಯ ಪತ್ರಕ್ಕೆ ಉತ್ತರಿಸಲು ಗೋಯೆಂಕ ತಡಬಡಾಯಿಸಿದ್ದಾರೆ. ಈ ಪತ್ರದಲ್ಲಿ ಮನೆಯಿಂದ ಕೆಲಸ ಮುಂದುವರಿಸಿದರೆ, ನಮ್ಮ ದಾಂಪತ್ಯ ಜೀವನ ಖಂಡಿತವಾಗಿ ಮುಂದುವರಿಯುವುದಿಲ್ಲ ಎಂದಿದ್ದಾಳೆ. 

ಮನೋಜ್ ಪತ್ನಿಯ ಪತ್ರ:
ಸರ್,
ನಾನು ನಿಮ್ಮ ಕಂಪನಿ ಉದ್ಯೋಗಿ ಮನೋಜ್ ಪತ್ನಿ. ನನ್ನ ಪತಿ ಎರಡು ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ. ಅವರು ಎಲ್ಲಾ ಕೊರೋನಾ ಪಾಲಿಸುತ್ತಾರೆ. ದಯವಿಟ್ಟು ನನ್ನ ಪತಿಗೆ ಕಚೇರಿಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕಳಕಳಿಯಾಗಿ ವಿನಂತಿಸುತ್ತಿದ್ದೇನೆ.

ವರ್ಕ್ ಫ್ರಮ್ ಹೋಮ್ ಮುಂದುವರಿಸಿದರೆ, ನಮ್ಮ ದಾಂಪತ್ಯ ಜೀವನ ಖಂಡಿತವಾಗಿಯೂ ಮುಂದುವರಿಯುವುದಿಲ್ಲ. ನನ್ನ ಪತಿ ದಿನಕ್ಕೆ 10 ಬಾರಿ ಚಹಾ ಕೇಳುತ್ತಾರೆ. ಒಂದೊಂದು ಕೋಣೆಯಲ್ಲಿ ಕೂತ ಕೆಲಸ ಮಾಡುತ್ತಾರೆ. ಈ ಕೋಣೆಯಲ್ಲಿನ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿರುತ್ತದೆ. ಪ್ರತಿ ಭಾರಿ ಆಹಾರ, ತಿನಿಸು ಕೇಳುತ್ತಾರೆ. ಕೆಲಸದ ನಡುವೆ ನನ್ನ ಪತಿ ಸಣ್ಣ ನಿದ್ದೆಯನ್ನು ಮಾಡುತ್ತಾರೆ.

ನನಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳುತ್ತಿದ್ದೇನೆ. ಇದರ ನಡುವೆ ಕೆಟ್ಟು ಹೋಗಿರುವ ನನ್ನ ವಿವೇಕ ಮರಳಿ ಪಡೆಯಲು ನಿಮ್ಮ ಬೆಂಬಲ ಕೋರುತ್ತಿದ್ದೇನೆ.

ವರ್ಕ್ ಫ್ರಮ್ ಹೋಮ್ ಮುಂದುವರಿಸಲು ರೆಡಿನಾ? ಅಧ್ಯಯನ ವರದಿಯ ಕುತೂಹಲ ಮಾಹಿತಿ ಪ್ರಕಟ!

ಇದು ಉದ್ಯೋಗಿ ಮನೋಜ್ ಪತ್ನಿ, ಹರ್ಷಾ ಗೋಯೆಂಕಾಗೆ ಬರೆದ ಪತ್ರ. ಈ ಪತ್ರವನ್ನು ಹರ್ಷಾ ಗೋಯೆಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ, ಈ ಪತ್ರಕ್ಕೆ ಯಾವ ರೀತಿ ಉತ್ತರ ನೀಡಬೇಕು ಅನ್ನೋದೇ ತಿಳಿಯುತ್ತಿಲ್ಲ ಎಂದಿದ್ದಾರೆ.

ಹರ್ಷಾ ಗೋಯೆಂಕಾ ಟ್ವೀಟ್‌ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. ಹಲವು ಉದ್ಯೋಗಿಗಳು, ಕಂಪನಿ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಪತಿಯನ್ನು ಮತ್ತೆ ಕಚೇರಿಗೆ ಕರೆಸುವುದು ಸೂಕ್ತ ಎಂದಿದ್ದಾರೆ. ಇನ್ನೂ ಕೆಲವರು ಪತ್ನಿಗೂ ಉದ್ಯೋಗ ನೀಡಿ ಎಲ್ಲವೂ ಸರಿಯಾಗಲಿದೆ ಎಂದು ಸಲಹೆ ನೀಡಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…