ವರ್ಕ್ ಫ್ರಮ್ ಹೋಮ್ ಮುಂದುವರಿಸಲು ರೆಡಿನಾ? ಅಧ್ಯಯನ ವರದಿಯ ಕುತೂಹಲ ಮಾಹಿತಿ ಪ್ರಕಟ!

First Published Dec 26, 2020, 3:44 PM IST

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಹಲವು ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿದೆ. ಇದೀಗ ಹೆಚ್ಚಿನ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಿ ಎನ್ನುತ್ತಿದೆ. ಕೊರೋನಾ ಕಾರಣ ವರ್ಕ್ ಫ್ರಮ್ ಹೋಮ್ ಪಡೆದ ಹಲವರು ಇದೀಗ ಮತ್ತೆ ಆಫೀಸ್‌ಗೆ ಹಾಜರಾಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾದರೆ ವರ್ಕ್ ಫ್ರಮ್ ಹೋಮ್ ಮುಂದುವರಿಸುವ ಕುರಿತು ಭಾರತೀಯರುಅಭಿಪ್ರಾಯವೇನು? ಡೆಲ್ ಅಧ್ಯಯನ ವರದಿಯ ಕುತೂಹಲ ಮಾಹಿತಿ ಇಲ್ಲಿದೆ.

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಕಚೇರಿಗಳು ಅನಿವಾರ್ಯವಾಗಿ ಮುಚ್ಚಬೇಕಾಯಿತು. ಈ ವೇಳೆ ಹಲವು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿತ್ತು.

ಕೊರೋನಾ, ಆರೋಗ್ಯ, ಸುರಕ್ಷತೆ ದೃಷ್ಟಿಯಿಂದ ಇದು ಅನಿವಾರ್ಯವಾಗಿತ್ತು. ಹೀಗಾಗಿ ಹಲವರು ನಗರ ತೊರೆದು ತಮ್ಮ ತಮ್ಮ ಊರು ಸೇರಿಕೊಂಡು ಮನೆಯಿಂದ ಕೆಲಸ ಆರಂಭಿಸಿದರು.

ಇದೀಗ ಮನೆಯಿಂದ ಕೆಲಸ ಮುಂದುವರಿಸಲು ಅಥವಾ ಮತ್ತೆ ಕಚೇರಿಗೆ ಹಾಜರಾಗಿ ಕೆಲಸ ಮಾಡುವ ಕುರಿತು ಭಾರತೀಯರ ಅಭಿಪ್ರಾಯವೇನು? ಈ ಕುತೂಹಲ ಮಾಹಿತಿಯನ್ನು ಡೆಲ್ ಅಧ್ಯಯನ ವರದಿ ಬಹಿರಂಗ ಮಾಡಿದೆ.

ಈ ವರದಿ ಪ್ರಕಾರ ಭಾರತದ 10ರಲ್ಲಿ 9 ಮಂದಿ ಮನೆಯಿಂದಲೇ ಸುದೀರ್ಘ ಕಾಲದ ವರೆಗೆ ಕೆಲಸ (ವರ್ಕ್ ಫ್ರಮ್ ಹೋಮ್) ಮುಂದುವರಿಸಲು ಇಷ್ಟಪಡುತ್ತಿದ್ದಾರೆ.

ಭಾರತದ ಶೇಕಡಾ 91 ರಷ್ಟು ಮಂದಿ ವರ್ಕ್ ಫ್ರಮ್ ಹೋಮ್ ಮುಂದುವರಿಸಲು ಇಷ್ಟಪಟ್ಟಿದ್ದಾರೆ. ನಗರ, ಟ್ರಾಫಿಕ್, ಕಚೇರಿ ಕಿರಿಕಿರಿ ಬೇಡ ಎಂದು ಡೆಲ್  ಅಧ್ಯಯನ ವರದಿ ಹೇಳುತ್ತಿದೆ.

ಇದೇ ವೇಳೆ 9% ಮಂದಿ, ಖಾಸಗಿ ಬದುಕಿಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಕಚೇರಿಗೆ ವಾಪಸ್ ಆಗಿ ಕೆಲಸ ಮುಂದುವರಿಸಲು ಇಷ್ಟಪಡುತ್ತಿದ್ದೇವೆ ಎಂದಿದ್ದಾರೆ.

ಈ ಅಧ್ಯಯನಕ್ಕಾಗಿ ಡೆಲ್ ಕಂಪನಿ 7,000 ವೃತ್ತಿಪರರನ್ನು ಸಮೀಕ್ಷೆ ಮೂಲಕ ಅಭಿಪ್ರಾಯ ಪಡೆದಿತ್ತು. ಏಷ್ಯಾ, ಜಪಾನ್‌ಗೆ ಹೋಲಿಸಿದರೆ ಭಾರತದಲ್ಲೇ ಮನೆಯಿಂದ ಕೆಲಸ ಮುಂದುವರಿಸಲು ಹೆಚ್ಚಿನವರು ಇಷ್ಟಪಟ್ಟಿದ್ದಾರೆ.

ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಯಿಸಿಕೊಂಡಿದೆ. ಆದರೆ ಹಲವು ಕಂಪನಿಗಳು ನಿರ್ಧಾರ ಬದಲಿಸಿಲ್ಲ. ಐಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮುಂದುವರಿಸಲು ಉತ್ಸುಕವಾಗಿದೆ.

ಕೊರೋನಾ ಹಾವು ಏಣಿ ಆಟ ಆಡುತ್ತಿದೆ. ಕಡಿಮೆಯಾಗುತ್ತಿದೆ ಅನ್ನೋವಾಗಲೇ ಹೊಸ ವೈರಸ್ ತಳಿ ಪತ್ತೆಯಾಗಿದೆ. ಹೀಗಾಗಿ ಹಲವರು ಮತ್ತೆ ಕಚೇರಿಗೆ ತೆರಳಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?