ಸಿಖ್ ವಿರೋಧಿ ದಂಗೆ ಕುರಿತು ಮಾತನಾಡಿದ ಮಾಜಿ ಪ್ರಧಾನಿ| ನರಸಿಂಹ್ ರಾವ್ ದೋಷ ಗುರುತಿಸಿದ ಮನಮೋಹನ್ ಸಿಂಗ್| ಐ.ಕೆ. ಗುಜ್ರಾಲ್ ಮಾತು ಕೇಳಿದ್ದರೆ ಸಿಖ್ ವಿರೋಧಿ ದಂಗೆ ಸಂಭವಿಸುತ್ತಿರಲಿಲ್ಲ ಎಂದ ಸಿಂಗ್| ‘ಸೇನೆ ಕರೆಸುವಂತೆ ಗುಜ್ರಾಲ್ ಮಾಡಿದ್ದ ಮನವಿಗೆ ರಾವ್ ಸ್ಪಂದಿಸಲಿಲ್ಲ’| ಗುಜ್ರಾಲ್ ಜೊತೆಗಿನ ಒಡನಾಟ ಸ್ಮರಿಸಿದ ಮಾಜಿ ಪ್ರಧಾನಿ ಡಾ.ಸಿಂಗ್| 

ನವದೆಹಲಿ(ಡಿ.05): 1984ರ ಸಿಖ್ ವಿರೋಧಿ ದಂಗೆ ಸಮಯದಲ್ಲಿ ಅಂದಿನ ಗೃಹ ಸಚಿವ ನರಸಿಂಹ್ ರಾವ್, ಮಾಜಿ ಪ್ರಧಾನಿ ಐ.ಕೆ ಗುಜ್ರಾಲ್ ಮಾತನ್ನು ಕೇಳಿದ್ದರೆ ಹಿಂಸಾಚರಾವನ್ನು ತಪ್ಪಿಸಬಹುದಿತ್ತು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

ಸಿಖ್ ನರಮೇಧ: ಆಗಿದ್ದಾಗೋಯ್ತು ಎಂದಿದ್ದ ಪಿತ್ರೋಡಾ ಕ್ಷಮೆಯಾಚನೆ!

Scroll to load tweet…

ಮಾಜಿ ಪ್ರಧಾನಿ ದಿವಂಗತ ಐ.ಕೆ ಗುಜ್ರಾಲ್ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸಿಂಗ್, ಸಿಖ್ ವಿರೋಧಿ ದಂಗೆ ಸಮಯದಲ್ಲಿ ಆದಷ್ಟು ಬೇಗ ಸೇನೆಯನ್ನು ಕರೆಸುವಂತೆ ಗುಜ್ರಾಲ್ ನರಸಿಂಹ್ ರಾವ್ ಅವರಿಗೆ ಮನವಿ ಮಾಡಿದ್ದರು. ಆದರೆ ಗುಜ್ರಾಲ್ ಮನವಿಗೆ ರಾವ್ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ.

ನಾಚಿಕೆಯಾಗಬೇಕು: ಅತ್ಯಾಪ್ತ ಸ್ಯಾಮ್ ಪಿತ್ರೋಡಾಗೆ ರಾಹುಲ್ ತರಾಟೆ!

Scroll to load tweet…

ತುರ್ತು ಪರಿಸ್ಥಿತಿ ನಂತರ ತಮ್ಮ ಹಾಗೂ ಗುಜ್ರಾಲ್ ನಡುವಿನ ಸಂಬಂಧ ಗಾಢವಾಯಿತು ಎಂದಿರುವ ಸಿಂಗ್, ಗುಜ್ರಾಲ್ ಯೋಜನಾ ಆಯೋಗದ ರಾಜ್ಯ ಖಾತೆ ಸಚಿವರಾಗಿದ್ದಾಗ ನಾನು ಹಣಕಾಸು ಸಚಿವಾಲಯದ ಆರ್ಥಿಕ ಸಲಹೆಗಾರನಾಗಿದ್ದೆ. ನಂತರದ ದಿನಗಳಲ್ಲಿ ನಮ್ಮ ಸ್ನೇಹ ಬೆಳೆಯಿತು ಎಂದು ಸ್ಮರಿಸಿದರು.