Asianet Suvarna News Asianet Suvarna News

ಫೈನಲ್‌ ಮ್ಯಾಚ್‌ಗೂ ಮುನ್ನ ಮೋದಿ ಸ್ಟೇಡಿಯಂನಲ್ಲಿ ಅತ್ಯಾಕರ್ಷಕ ಏರ್‌ಶೋ: ಬೆರಗಾದ ಪ್ರೇಕ್ಷಕರು

ಮಧ್ಯಾಹ್ನ 1.30 ಕ್ಕೆ ಮೋದಿ ಸ್ಟೇಡಿಯಂನಲ್ಲಿ ಟಾಸ್‌ ಮುಗಿಯುತ್ತಿದ್ದಂತೆ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಚಮತ್ಕಾರಿಕ ತಂಡವು ರೋಮಾಂಚನಕಾರಿ ವೈಮಾನಿಕ ಪ್ರದರ್ಶನ ನೀಡಿದೆ.

iaf surya kiran team s air show wows crowd ahead of world cup final ash
Author
First Published Nov 19, 2023, 2:46 PM IST

ಅಹಮದಾಬಾದ್ (ನವೆಂಬರ್ 19, 2023): ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅತ್ಯಂತ ಕುತೂಹಲ ಘಟ್ಟದ ವಿಶ್ವಕಪ್ ಫೈನಲ್‌ ಪಂದ್ಯ ನಡೆಯುತ್ತಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ ಆರಂಭಕ್ಕೂ ಮುನ್ನ ರೋಮಾಂಚನಕಾರಿ ಏರ್‌ಶೋ ಪ್ರದರ್ಶನ ನಡೆದಿದೆ. ಇದನ್ನು ನೋಡಿದ ಕ್ರಿಕೆಟ್‌ ಅಭಿಮಾನಿಗಳು ಬೆರಗಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನ 1.30 ಕ್ಕೆ ಮೋದಿ ಸ್ಟೇಡಿಯಂನಲ್ಲಿ ಟಾಸ್‌ ಮುಗಿಯುತ್ತಿದ್ದಂತೆ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಚಮತ್ಕಾರಿಕ ತಂಡವು ರೋಮಾಂಚನಕಾರಿ ವೈಮಾನಿಕ ಪ್ರದರ್ಶನ ನೀಡಿದೆ. ಗುರುವಾರ, ಶುಕ್ರವಾರವೇ ಸೂರ್ಯ ಕಿರಣ್ ತಂಡ ಇದರ ತಾಲೀಮು ನಡೆಸಿದ್ದು, ಇಂದು ಗಾಳಿಯಲ್ಲಿ ಸುಮಾರು 15 ನಿಮಿಷಗಳ ಕಾಲ ನಡೆಸಿದ ಚಮತ್ಕಾರವು ಭಾರತ - ಆಸೀಸ್‌ ಫೈನಲ್‌ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳನ್ನು ಬೆರಗುಗೊಳಿಸಿತು.

ಇದನ್ನು ಓದಿ: ಅಹಮದಾಬಾದ್‌ ಹೋಟೆಲ್‌ ರೇಟ್‌ ದುಬಾರಿ ಆಯ್ತಾ? ಫೈನಲ್‌ ಮ್ಯಾಚ್‌ ಆದ್ಮೇಲೆ ಇಲ್ಲಿ ಫ್ರೀಯಾಗಿ ಮಲಗ್ಬೋದು ನೋಡಿ!

ಐಎಎಫ್‌ನ ಸೂರ್ಯ ಕಿರಣ್ ತಂಡದ ಸದಸ್ಯರು ಬೆರಗುಗೊಳಿಸುವ ಪ್ರದರ್ಶನ ನೀಡಿದ್ದು, ವೈಮಾನಿಕ ಪ್ರದರ್ಶನವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಪ್ರೇಕ್ಷಕರನ್ನು ಆಕರ್ಷಿಸಲು ವಿವಿಧ ರಚನೆ, ಸಾಹಸಗಳ ಮೂಲಕ ಆಕಾಶದಲ್ಲಿ ಚಿತ್ತಾರ ಮೂಡಿಸಿದ್ದಾರೆ. 

ವಿಶ್ವಕಪ್‌ ಕ್ರಿಕೆಟ್‌ ಪಮದ್ಯಾವಳಿಯಲ್ಲಿ ಭಾರತವು ಗುಂಪು ಹಂತದ್ಲಿ ಅನಾಯಾಸವಾಗಿ ಆಡಿದ್ದು, 9 ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳಲ್ಲಿ ಲೀಲಾಜಾಲವಾಗಿ ಜಯಗಳಿಸುವ ಮೂಲಕ 18 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿದೆ. ಇನ್ನು, ನ್ಯೂಜಿಲೆಂಡ್ ವಿರುದ್ಧದ ಸೆಮಿ-ಫೈನಲ್ ಘರ್ಷಣೆಯಲ್ಲಿ ಏರಿಳಿತದ ನಡುವೆಯೂ ಭಾರತದ ಬ್ಯಾಟರ್‌ಗಳು ಉತ್ತಮ ಮೊತ್ತ ಗಳಿಸಿದ್ದು, ಜತೆಗೆ ಮೊಹಮ್ಮದ್ ಶಮಿ ಅವರ ಸಮಯೋಚಿತ ಸ್ಟ್ರೈಕ್‌ಗಳು ಒತ್ತಡವನ್ನು ಕಡಿಮೆ ಮಾಡಿತು. ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ 70 ರನ್‌ಗಳ ಜಯ ಸಾಧಿಸುವುದರೊಂದಿಗೆ ಮುಕ್ತಾಯವಾಯಿತು.

ಚಿಂತೆ ಬೇಡ, ಈ ಸಲ ಕಪ್ ನಮ್ದೇ..! ಗಂಗೂಲಿ ಮಾಡಿದ ತಪ್ಪನ್ನೇ ಮಾಡಿದ್ರಾ ಕಮಿನ್ಸ್..?

ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಸ್ಟ್ರೇಲಿಯಾ ಮೂರು ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಜಯಶಾಲಿಯಾಗಿ ಫೈನಲ್‌ ಪ್ರವೇಶಿಸಿದೆ. ಭಾರತವು ಇಂದು ವಿಶ್ವಕಪ್‌ ವಿಜೇತರಾದರೆ ತವರಿನ ನೆಲದಲ್ಲಿ ಗೆದ್ದ ಎರಡನೇ ಸಂದರ್ಭವನ್ನು ಗುರುತಿಸುತ್ತದೆ.

ಈ ಅದ್ಭುತ ಪಂದ್ಯ ಆರಂಭಕ್ಕೂ ಮುನ್ನ ಇಂದಿನ ಏರ್‌ಶೋ ಪ್ರೇಕ್ಷಕರನ್ನು ಹಾಗೂ ಟಿವಿ ನೋಡುತ್ತಿರುವ ವೀಕ್ಷಕರನ್ನು ನಿಜಕ್ಕೂ ರಂಜಿಸಿದೆ. 

WORLD CUP 2023 FINAL: ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು?

Follow Us:
Download App:
  • android
  • ios