ಅಹಮದಾಬಾದ್‌ ಹೋಟೆಲ್‌ ರೇಟ್‌ ದುಬಾರಿ ಆಯ್ತಾ? ಫೈನಲ್‌ ಮ್ಯಾಚ್‌ ಆದ್ಮೇಲೆ ಇಲ್ಲಿ ಫ್ರೀಯಾಗಿ ಮಲಗ್ಬೋದು ನೋಡಿ!

ಭಾರತ vs ಆಸ್ಟ್ರೇಲಿಯಾ ICC ODI ವಿಶ್ವಕಪ್ ಫೈನಲ್‌ ಪಂದ್ಯ ನೋಡಲು ಹೋಗುವ ಅಭಿಮಾನಿಗಳಿಗೆ, ಅದರೆ ವಸತಿಗೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದವರಿಗೆ ಅಹಮದಾಬಾದ್‌ನಲ್ಲಿರುವ ವೇಕ್‌ಫಿಟ್ ಸ್ಟೋರ್ ಉಚಿತವಾಗಿ ತಂಗಲು ಅವಕಾಶ ನೀಡುತ್ತಿದೆ.  

this bed store in ahmedabad will let people sleep for free after world cup final ash

ಅಹಮದಾಬಾದ್‌ (ನವೆಂಬರ್ 19, 2023): ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಶ್ವಕಪ್ ಫೈನಲ್‌ ನಡೆಯುತ್ತಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ  ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಮಹತ್ವದ ಪಂದ್ಯ ನಡೆಯುತ್ತಿದೆ. ಈ ಕಾರಣಕ್ಕಾಗಿ ಅಹಮದಾಬಾದ್‌ಗೆ ಹೋಗಲು ವಿಮಾನ ಟಿಕೆಟ್‌ ದರ ಮಾತ್ರವಲ್ಲ, ಅಲ್ಲಿನ ಹೋಟೆಲ್, ಲಾಡ್ಜ್‌ಗಳಲ್ಲೂ ರೂಮಿನ ದರ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಒಂದು ಲಕ್ಷ - ಎರಡು ಲಕ್ಷ ಹೀಗೆ ರೂಮಿನ ದರ ತುಂಬಾ ಹೆಚ್ಚಾಗಿದೆ. 

ಈ ಹಿನ್ನೆಲೆ  ಪೀಠೋಪಕರಣಗಳು ಮತ್ತು ಹಾಸಿಗೆ ಬ್ರ್ಯಾಂಡ್‌ವೊಂದು ವಿಶಿಷ್ಟವಾದ ಪ್ರಚಾರದ ಸಾಹಸದೊಂದಿಗೆ ಬಂದಿದೆ. ನವೆಂಬರ್ 19 ರಂದು ಭಾರತ vs ಆಸ್ಟ್ರೇಲಿಯಾ ICC ODI ವಿಶ್ವಕಪ್ ಫೈನಲ್‌ ಪಂದ್ಯ ನೋಡಲು ಹೋಗುವ ಅಭಿಮಾನಿಗಳಿಗೆ, ಅದರೆ ವಸತಿಗೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದವರಿಗೆ ಗುಜರಾತ್‌ನಲ್ಲಿರುವ ವೇಕ್‌ಫಿಟ್ ಸ್ಟೋರ್ 
ತನ್ನ ಬಾಗಿಲು ತೆರೆಯುತ್ತದೆ.

ಇದನ್ನು ಓದಿ: ಸಾಫ್ಟ್‌ವೇರ್‌ ಎಂಜಿನಿಯರ್ ಆಗೋದು ತುಂಬಾ ಸುಲಭ; ಇದು ಮಾತ್ರ ತುಂಬಾ ಕಷ್ಟ ಅಂದ್ರು ನಾರಾಯಣ ಮೂರ್ತಿ

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ಬಗ್ಗೆ ಶನಿವಾರ ಮಧ್ಯಾಹ್ನ ವೇಕ್‌ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಈ ಪೋಸ್ಟ್‌ ಹಂಚಿಕೊಂಡಿದ್ದಾರೆ. ವಿಶ್ವಕಪ್ ಫೈನಲ್‌ಗೆ ಪಂದ್ಯ ನೋಡಲು ಬರುವವರು ತಮ್ಮ ಅಂಗಡಿಯಲ್ಲಿ ಒಂದು ರಾತ್ರಿ ಉಚಿತವಾಗಿ ತಂಗಬಹುದು ಎಂದು ಘೋಷಿಸಿದರು.

ನೀವು ಭಾರತದ ಗೆಲುವನ್ನು ನೋಡಿದ ನಂತರ ಅಹಮದಾಬಾದ್‌ನಲ್ಲಿ ಹೋಟೆಲ್ ಕೊಠಡಿಗಳಿಲ್ಲವೇ? ಯಾವ ತೊಂದರೆಯಿಲ್ಲ. ವೇಕ್‌ಫಿಟ್‌ಗೆ ಬನ್ನಿ - ನಮ್ಮ ಬಾಗಿಲುಗಳು ತೆರೆದಿರುತ್ತವೆ ಎಂದು ಚೈತನ್ಯ ರಾಮಲಿಂಗೇಗೌಡ ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ: ಸಾಫ್ಟ್‌ವೇರ್‌ ಎಂಜಿನಿಯರ್ ಆಗೋದು ತುಂಬಾ ಸುಲಭ; ಇದು ಮಾತ್ರ ತುಂಬಾ ಕಷ್ಟ ಅಂದ್ರು ನಾರಾಯಣ ಮೂರ್ತಿ

ಉಚಿತ ವಾಸ್ತವ್ಯದ ಕೊಡುಗೆಯನ್ನು ಪಡೆಯಲು, ಜನರು ಸರ್ಖೇಜ್ - ಗಾಂಧಿನಗರದಲ್ಲಿರುವ ವೇಕ್‌ಫಿಟ್ ಸ್ಟೋರ್‌ಗೆ ಭೇಟಿ ನೀಡಬಹುದು. ರಾತ್ರಿ ಉಳಿಯಲು ಅವರು ತಮ್ಮ ಪಂದ್ಯದ ಟಿಕೆಟ್ ತೋರಿಸಬೇಕು. ಆಸಕ್ತರು IndiaJeetega@wakefit.co ಗೆ ಇಮೇಲ್ ಕಳುಹಿಸುವ ಮೂಲಕ ತಮ್ಮ ಸ್ಥಳಗಳನ್ನು ಮುಂಚಿತವಾಗಿ ಬುಕ್ ಮಾಡಬಹುದು ಎಂದೂ ಮಾಹಿತಿ ನೀಡಿದ್ದಾರೆ.

ಐಸಿಸಿ ವಿಶ್ವಕಪ್ 2023 ರ ಫೈನಲ್‌ಗಾಗಿ ದೇಶಾದ್ಯಂತದ ಕ್ರಿಕೆಟ್ ಉತ್ಸಾಹಿಗಳು ಗುಜರಾತ್‌ನ ರಾಜಧಾನಿಯಲ್ಲಿ ಪಂದ್ಯ ನೋಡಲು ಬಂದಿದ್ದಾರೆ. ವಿದೇಶಿಗಳು ಸಹ ಸೇರಿದ್ದಾರೆ. ಈ ಹಿನ್ನೆಲೆ ಅಹಮದಾಬಾದ್‌ನಲ್ಲಿನ ಹೋಟೆಲ್‌ಗಳ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ್ದು, ಕೆಲ ಹೋಟೆಲ್‌ಗಳಲ್ಲಿ 1 ರಾತ್ರಿಗೆ 2 ಲಕ್ಷ ರೂ. ನೀಡ್ಬೇಕಿದೆ.

ಇದನ್ನೂ ಓದಿ: 100 ದಿನದಲ್ಲೇ ರೆಡಿಯಾಯ್ತು ಟೆಸ್ಲಾ ಸೈಬರ್‌ ಟ್ರಕ್‌ ಮರದ ವಾಹನ: ಎಲಾನ್‌ ಮಸ್ಕ್‌ ಪ್ರತಿಕ್ರಿಯೆ ಹೀಗಿದೆ..

1,32,000 ಆಸನ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಥಳವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ತಿಂಗಳ ಹಿಂದೆ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದಾಗಲೇ ಈ ನಗರದ ಹೆಚ್ಚಿನ ಹೋಟೆಲ್‌ಗಳ ರೂಮುಗಳು ಮಾರಾಟವಾಗಿದ್ದವು. ಈ ಹಿನ್ನೆಲೆ ವೇಕ್‌ಫಿಟ್ ಅಂಗಡಿಯು ಕ್ರಿಕೆಟ್-ಪ್ರೇಮಿಗಳಿಗೆ ಉಚಿತವಾದ ವಾಸ್ತವ್ಯದ ಆಯ್ಕೆ ನೀಡಿದೆ. 

ಇದನ್ನೂ ಓದಿ: ಜಾಗತಿಕ ತೈಲ ದರ, ಹಣದುಬ್ಬರ ಇಳಿಕೆಗೆ ಭಾರತ ಕಾರಣ: ಜಗತ್ತಿನ ಧನ್ಯವಾದಕ್ಕಾಗಿ ಕಾಯುತ್ತಿದ್ದೇವೆಂದ ಎಸ್‌. ಜೈಶಂಕರ್‌!

Latest Videos
Follow Us:
Download App:
  • android
  • ios