ಮುಂಬೈ(ಡಿ.09): ಈ ಶೋನಲ್ಲಿ ಅನಿಲ್ ಕಪೂರ್‌ಗೆ ವಾಯುಸೇನಾ ಅಧಿಕಾರಿಯ ಪಾತ್ರ ನೀಡಲಾಗಿದೆ. ಹೀಗಿರುವಾಗ ದೃಶ್ಯವೊಂದರಲ್ಲಿ ಅನಿಲ್ ಕಪೂರ್ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಅಲ್ಲದೇ ಅನಿಲ್ ಕಪೂರ್ ಈ ದೃಶ್ಯವಿರುವ ವಿಡಿಯೋವನ್ನೂ ಟ್ವೀಟ್ ಮಾಡಿದ್ದಾರೆ. ಹೀಗಿರುವಾಗ ಅತ್ತ ಭಾರತೀಯ ವಾಯುಸೇನಾ ಟ್ವೀಟ್ ಅಕೌಂಟ್‌ನಿಂದ ಇದನ್ನು ರೀಟ್ವೀಟ್ ಮಾಡಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಕುಟುಂಬಕ್ಕೆ ಪುಟ್ಟ ಅಥಿತಿ ಬರ ಮಾಡಿಕೊಂಡ ಅನಿಲ್ ಕಪೂರ್!

ವಾಯುಸೇನೆ ತನ್ನ ಟ್ವೀಟ್‌ನಲ್ಲಿ ಈ ವಿಡಿಯೋದಲ್ಲಿ ಭಾರತೀಯ ವಾಯುಸೇನಾ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಯೂನಿಫಾರಂ ಧರಿಸಿದ ಅನಿಲ್ ಕಪೂರ್ ಬಳಸಿದ ಪದಗಳು ಒಪ್ಪಿಕೊಳ್ಳುವಂತಹುದಲ್ಲ. ಇದು ನಮ್ಮ ಸೇನಾಬಲದ ಅಸಲಿ ನಡತೆಯನ್ನು ತೋರಿಸುತ್ತಿಲ್ಲ. ಸೇನೆಗೆ ಸಂಬಂಧಿಸಿದ ಈ ದೃಶ್ಯವನ್ನು ಈ ಕೂಡಲೇ ತೆಗೆಯಬೇಕು ಎಂದಿದೆ.

ಕರಣ್ ಮನೆ ಮುಂದೆ ಅನಿಲ್ ಕಪೂರ್, ನೀತು ಕಪೂರ್, ಕೈರಾ ಅಡ್ವಾಣಿ..!

ಒಟಿಟಿ ಫ್ಲಾಟ್ಫಾರಂಗಳಲ್ಲಿ ಸೇನೆಗೆ ಸಂಬಂಧಿಸಿದ ಅನೇಕ ಸೀರೀಸ್‌ಗಳು ಬಿಡುಗಡೆಯಾಗಿದ್ದು, ನಮ್ಮ ಸೈನ್ಯದ ಶೌರ್ಯದ ಕತೆಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಹೀಗಿರುವಾಗ ಅನುರಾಗ್ ಕಷ್ಯಪ್ ಅವರ ಈ ಶೋ ಭಾರೀ ವಿವಾದವೊಂದನ್ನು ಹುಟ್ಟಿ ಹಾಕಿದೆ.