ಈ ದಿನಗಳಲ್ಲಿ ಬೈಪಾಸ್ ಅಪೆಂಡಿಸೈಟಿಸ್‌ನಂತೆ ಎಂದು ಹೇಳಿದರು. ಹಾಗೂ, ನಾನು ಗೂಗಲ್‌ನಲ್ಲಿ ಪರಿಶೀಲಿಸಿದ್ದೇನೆ. ಅದನ್ನು ಗುಣಪಡಿಸಬಹುದು ಎಂದು ಅದು ಹೇಳುತ್ತದೆ ಎಂದು ರೋಹಟಗಿ ಅವರ ವಾದದ ನಂತರ ನ್ಯಾಯಮೂರ್ತಿ ತ್ರಿವೇದಿ ಹೇಳಿದ್ದಾರೆ.

ದೆಹಲಿ (ನವೆಂಬರ್ 28, 2023): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಿಂದ ಬಂಧನಕ್ಕೊಳಗಾಗಿದ್ದ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. 

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ, ಬಾಲಾಜಿಗೆ ವೈದ್ಯಕೀಯ ಜಾಮೀನು ನೀಡಲು ನಿರಾಕರಿಸಿದಾಗ, "ನಿಮ್ಮ ಅನಾರೋಗ್ಯವು ಗಂಭೀರ ಅಥವಾ ಜೀವಕ್ಕೆ ಅಪಾಯಕಾರಿ ಎಂದು ತೋರುತ್ತಿಲ್ಲ" ಎಂದು ಹೇಳಿದರು. ವಿಚಾರಣೆಯ ಹಿಂದಿನ ದಿನಾಂಕದಂದು, ನ್ಯಾಯಾಲಯವು ಸೆಂಥಿಲ್‌ ಬಾಲಾಜಿಯ ಇತ್ತೀಚಿನ ವೈದ್ಯಕೀಯ ವರದಿಗಳನ್ನು ಕೇಳಿತ್ತು.

ಇದನ್ನು ಓದಿ: Breaking: ತಮಿಳುನಾಡು ಸರ್ಕಾರಕ್ಕೆ ಶಾಕ್‌: ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಸಚಿವ ವಿ. ಸೆಂಥಿಲ್ ಬಾಲಾಜಿ ಬಂಧಿಸಿದ ಇಡಿ

ತಮಿಳುನಾಡು ಸಚಿವರ ಪರ ವಾದ ಮಾಡಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಎಲ್ಲಾ ವೈದ್ಯಕೀಯ ವರದಿಗಳನ್ನು ಪೀಠಕ್ಕೆ ತೋರಿಸಿದರು ಮತ್ತು ಇದು ಜಾಮೀನಿನ ಪ್ರಕರಣವಾಗಿದೆ. ಈ ವ್ಯಕ್ತಿಗೆ ಬೈಪಾಸ್ (ಶಸ್ತ್ರಚಿಕಿತ್ಸೆ) ಅಗಿದೆ ಮತ್ತು ಇದು ಬ್ರೈನ್ ಸ್ಟ್ರೋಕ್‌ಗೆ ಕಾರಣವಾಗಬಹುದು ಎಂದು ಹೇಳಿದರು. ಆದರೆ, ಜಾಮೀನು ನೀಡುವುದಕ್ಕೆ ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಈ ತರ್ಕವನ್ನು ಅನುಸರಿಸಿದರೆ, ಶೇಕಡಾ 70 ರಷ್ಟು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ" ಎಂದು ಹೇಳಿದರು. 

ಅಲ್ಲದೆ, ಈ ಬಗ್ಗೆ ಮಾತನಾಡಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ, ಅತ್ಯಂತ ಗಂಭೀರವಾಗಿರುವಂತೆ ತೋರುತ್ತಿಲ್ಲ. ಈ ದಿನಗಳಲ್ಲಿ ಬೈಪಾಸ್ ಅಪೆಂಡಿಸೈಟಿಸ್‌ನಂತೆ ಎಂದು ಹೇಳಿದರು. ಹಾಗೂ, ನಾನು ಗೂಗಲ್‌ನಲ್ಲಿ ಪರಿಶೀಲಿಸಿದ್ದೇನೆ. ಅದನ್ನು ಗುಣಪಡಿಸಬಹುದು ಎಂದು ಅದು ಹೇಳುತ್ತದೆ ಎಂದು ರೋಹಟಗಿ ಅವರ ವಾದದ ನಂತರ ನ್ಯಾಯಮೂರ್ತಿ ತ್ರಿವೇದಿ ಹೇಳಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿರುವ ತಮಿಳುನಾಡು ಸಚಿವನ ಚಾಲಕನ ಮನೆಯಲ್ಲಿ ಸಿಕ್ತು ಬರೋಬ್ಬರಿ 22 ಲಕ್ಷ ರು. ನಗದು!

ಬಳಿಕ, ಯಾವುದೇ ರಿಲೀಫ್‌ ನೀಡಲು ನಿರಾಕರಿಸಿದ ಪೀಠ, ನೀವು ಅರ್ಹತೆಯ ಮೇಲೆ ರೆಗ್ಯುಲರ್‌ ಜಾಮೀನಿಗೆ ಅರ್ಜಿ ಸಲ್ಲಿಸಿ. ವೈದ್ಯಕೀಯ ಜಾಮೀನು ನಮಗೆ ತೃಪ್ತಿ ಹೊಂದಿಲ್ಲ. ಅರ್ಜಿಯನ್ನು ಹಿಂತೆಗೆದುಕೊಳ್ಳಲಾಗಿದೆ" ಎಂದು ಜಡ್ಜ್‌ಗಳು ಹೇಳಿದರು. ಕಳೆದ ತಿಂಗಳು ಸೆಂಥಿಲ್ ಬಾಲಾಜಿ ಅವರ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು.

ಸೆಂಥಿಲ್‌ ಬಾಲಾಜಿ 2011 ರಿಂದ 2016 ರವರೆಗೆ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದಂತೆ ಜೂನ್ 13 ರಂದು ಇಡಿ ಅವರನ್ನು ಬಂಧಿಸಿತ್ತು. ಬಂಧನದ ನಂತರ, ಬಾಲಾಜಿ ಎದೆನೋವಿನ ಬಗ್ಗೆ ದೂರು ನೀಡಿದರು ಮತ್ತು ಚೆನ್ನೈನ ಓಮಂಡೂರರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಆರ್ಟರಿಯಲ್ಲಿ 3 ಬ್ಲಾಕ್‌ ಆಗಿರುವುದನ್ನು ಪತ್ತೆಹಚ್ಚಿದರು. ಕೆಲವು ದಿನಗಳ ನಂತರ, ಅವರು ಕಾವೇರಿ ಆಸ್ಪತ್ರೆಯಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನ ಸರಿ: ಮದ್ರಾಸ್‌ ಹೈಕೋರ್ಟ್