ದಿವಾಳಿ ಪಾಕ್‌ಗೆ ಮೋದಿ ಆರ್ಥಿಕ ಸಹಾಯ ಮಾಡ್ಬಹುದು: ‘ರಾ’ ಮಾಜಿ ಮುಖ್ಯಸ್ಥ ದುಲತ್‌ ವಿಶ್ವಾಸ

ದುಲತ್‌ ಅವರು ರಾ ಮುಖ್ಯಸ್ಥರಾಗಿದ್ದಾಗ ಪಾಕಿಸ್ತಾನದಲ್ಲಿ ಭಾರಿ ಬೇಹುಗಾರಿಕೆ ನಡೆಸಿ ಆ ದೇಶದ ನಾಡಿ ಮಿಡಿತ ಅರಿತಿದ್ದರು. ಈ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

i feel pm modi will bail out pakistan ex raw chief amarjit singh dulat ash

ಕೋಲ್ಕತಾ (ಫೆಬ್ರವರಿ 26, 2023): ಭಾರತ-ಪಾಕಿಸ್ತಾನ ವೈರಿಗಳಂತೆ ಎದುರು ಬದುರಾಗಿ ನಿಂತಿದ್ದರೂ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಕೊನೆಗೆ ಆರ್ಥಿಕ ಸಹಾಯ ಮಾಡಬಹುದು ಎಂದು ‘ರಾ’ ಗುಪ್ತಚರ ಸಂಸ್ಥೆಯ ಮಾಜಿ ಅಧ್ಯಕ್ಷ ಅಮರ್‌ಜಿತ್‌ ಸಿಂಗ್‌ ದುಲತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಪಿಟಿಐ ವಿಡಿಯೋ’ಗೆ ಸಂದರ್ಶನ ನೀಡಿರುವ ದುಲತ್‌, ‘ಮೋದಿ ಅವರು ಸಂಕಷ್ಟದಲ್ಲಿ ತತ್ತರಿಸುತ್ತಿರುವ ಪಾಕಿಸ್ತಾನಕ್ಕೆ ಈ ವರ್ಷಾಂತ್ಯದಲ್ಲಿ ಸಹಾಯಕ್ಕೆ ಮುಂದಾಗಬಹುದು ಎಂಬುದು ನನ್ನ ಭಾವನೆ’ ಎಂದು ಹೇಳಿದರು. ಆದರೆ, ‘ನನಗೆ ಯಾವುದೇ ಆಂತರಿಕ ಮಾಹಿತಿ ಇಲ್ಲ. ಇದು ನನ್ನ ಊಹೆಯಷ್ಟೇ’ ಎಂದು ಅವರು ಸ್ಪಷ್ಟಪಡಿಸಿದರು.

ದುಲತ್‌ ಅವರು ರಾ ಮುಖ್ಯಸ್ಥರಾಗಿದ್ದಾಗ ಪಾಕಿಸ್ತಾನದಲ್ಲಿ ಭಾರಿ ಬೇಹುಗಾರಿಕೆ ನಡೆಸಿ ಆ ದೇಶದ ನಾಡಿ ಮಿಡಿತ ಅರಿತಿದ್ದರು. ಈ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

ಇದನ್ನು ಓದಿ: ಪಾಕ್‌ ಬಳಿಕ ಮತ್ತೊಂದು ದೇಶದ ದುಸ್ಥಿತಿ: ಮತಪತ್ರಕ್ಕೂ ದುಡ್ಡಿಲ್ಲದೆ ಹಲವು ಎಲೆಕ್ಷನ್‌ಗಳನ್ನೇ ಮುಂದೂಡಿದ ಲಂಕಾ..!

ಕಾಮಗಾರಿ ಬಿಲ್‌ ಹಣ, ಸರ್ಕಾರಿ ನೌಕರರ ವೇತನ ಬಿಡುಗಡೆಗೆ ಪಾಕ್‌ ತಡೆ
ಇಸ್ಲಾಮಾಬಾದ್‌: ಇತಿಹಾಸದಲ್ಲೇ ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಕಾಮಗಾರಿಗಳಿಗೆ ಬಿಲ್‌ ಹಣ, ಸರ್ಕಾರಿ ನೌಕರರ ವೇತನ ಬಿಡುಗಡೆ ಮಾಡುವುದಕ್ಕೆ ತಡೆ ನೀಡಿದೆ. ಯಾವುದೇ ಹಣವನ್ನು ಬಿಡುಗಡೆ ಮಾಡದಂತೆ ಅಕೌಂಟೆಂಟ್‌ ಜನರಲ್‌ಗೆ ಸೂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರ ಸಚಿವಾಲಯಗಳು ನಡೆಸುತ್ತಿರುವ ಕಾಮಗಾರಿಗಳ ಬಿಲ್‌ ಮೊತ್ತವನ್ನು ಮುಂದಿನ ಆದೇಶದವರೆಗೆ ತಡೆಹಿಡಿಯುವಂತೆ ಹಣಕಾಸು ಸಚಿವಾಲಯ ಸೂಚಿಸಿದೆ. ಚೀನಾ ಸಹಾಯ ದೊರೆತ ಬಳಿಕ ಪಾಕಿಸ್ತಾನದ ಪರಿಸ್ಥಿತಿ ಕೊಂಚ ಸುಧಾರಿಸಿದ್ದರೂ ಅಂತಾರಾಷ್ಟ್ರೀಯ ಹಣಕಾಸು ನಿಧಿ ನೀಡುವ 1.1 ಬಿಲಿಯನ್‌ ಡಾಲರ್‌ ಸಾಲಕ್ಕಾಗಿ ಕಾಯುತ್ತಿದೆ. ಆರ್ಥಿಕ ದುಸ್ಥಿತಿಯಿಂದ ಹೊರಬರಲು ಇತ್ತೀಚಿಗೆ ಪಾಕಿಸ್ತಾನ ಹಲವು ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡಿತ್ತು.

ಪಾಕ್‌, ಶ್ರೀಲಂಕಾಕ್ಕೆ ಚೀನಾ  ಸಾಲ ಕಳವಳಕಾರಿ: ಅಮೆರಿಕ
ವಾಷಿಂಗ್ಟನ್‌: ಭಾರತದ ನೆರೆಹೊರೆಯ ದೇಶಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ಚೀನಾ ನೀಡಿರುವ ಬೃಹತ್‌ ಸಾಲ, ಕಳವಳಕಾರಿ ಬೆಳವಣಿಗೆ ಎಂದು ಅಮೆರಿಕ ಹೇಳಿದೆ. ಇಂಥ ನೆರವಿನ ಮೂಲಕ ಚೀನಾ, ಪಾಕ್‌ ಮತ್ತು ಲಂಕಾವನ್ನು ತನ್ನ ತಾಳಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ಅಮೆರಿಕ ಶಂಕೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: ನಾವೀಗ ದಿವಾಳಿಯಾಗಿರುವ ದೇಶದಲ್ಲಿದ್ದೇವೆ; ಈ ಪರಿಸ್ಥಿತಿಗೆ ನಾವೇ ಕಾರಣ: ಪಾಕ್‌ ರಕ್ಷಣಾ ಮಂತ್ರಿ

ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಮತ್ತು ಮಧ್ಯ ಏಷ್ಯಾ ವಲಯಗಳಿಗೆ ಸಂಬಂಧಿಸಿದ ಅಮೆರಿಕದ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಡೊನಾಲ್ಡ್‌ ಲು ಹೇಳಿದ್ದಾರೆ. ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಅವರ ಭಾರತ ಭೇಟಿಗೂ ಮುನ್ನ ಡೊನಾಲ್ಡ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತವನ್ನು ಒಳಗೊಂಡ ವಲಯದಲ್ಲಿ, ನಾವು ಪ್ರತಿ ದೇಶಗಳಿಗೂ ಅವರದ್ದೇ ನಿರ್ಧಾರ ಕೈಗೊಳ್ಳಲು ಬಿಡುತ್ತೇವೆಯೇ ಹೊರತೂ ಹೊರಗಿನ ಯಾವುದೇ ದೇಶಗಳ ಒತ್ತಡಕ್ಕೆ ಒಳಗಾಗುವಂತೆ ಬಲವಂತ ಮಾಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಟರ್ಕಿಗೆ ನೆರವು ನೀಡಿದ ವ್ಯಕ್ತಿಗೆ ಪಾಕ್‌ ಪ್ರಧಾನಿ ಮೆಚ್ಚುಗೆ; ಪಾಕ್‌ಗೇಕೆ ಸಹಾಯ ಮಾಡಿಲ್ಲ ಎಂದು ನೆಟ್ಟಿಗರ ವ್ಯಂಗ್ಯ

Latest Videos
Follow Us:
Download App:
  • android
  • ios