ನಾನು ಶಿವ, ನೀನು ಪಾರ್ವತಿ, ದಿಲ್ ಡ್ಯಾನ್ಸ್ ಆಡೋಣ ಬಾರ, ಹೀಗೆ ಹೇಳುತ್ತಾ ಮಹಿಳೆ ಜೊತೆ ಮಂಚದಾಟ ನಡೆಸಿದ ಮತ್ತೊಬ್ಬ ಜ್ಯೋತಿಷಿ ವಿರುದ್ದ ಕೇಸ್ ದಾಖಲಾಗಿದೆ. ನಾಸಿಕ್‌ನ ಅಶೋಕ್ ಖಾರಟ್ ಗುರೂಜಿಯ ಪ್ರಕರಣದ ಬಳಿಕ ಈ ಕೇಸ್ ಬಯಲಾಗಿದೆ.

ಪಾಲ್ಘರ್ (ಮಾ.27) ದೇಶಾದ್ಯಂತ ಇದೀಗ ರಾಸಲೀಲೆ ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿದೆ. ನಾಸಿಕ್‌ನ ಸ್ವಯಂಘೋಷಿತ ದೇವಮಾನ ಅಶೋಕ್ ಖಾರಟ್ ಹಲವು ಮಹಿಳೆಯ ಜೊತೆನ ವಿಡಿಯೋಗಳು ಹೊರಬಂದು ಅರೆಸ್ಟ್ ಆಗಿದ್ದಾರೆ. ಇತ್ತ ಗೋವಾದಲ್ಲಿ ಬಿಜೆಪಿ ನಾಯಕ ಪುತ್ರ ಅಪ್ರಾಪ್ತ ಬಾಲಕಿಯರ ಬಳಸಿಕೊಂಡು ಅರೆಸ್ಟ್ ಆಗಿದ್ದರೆ, ಮಹಾರಾಷ್ಟ್ರದ ಸಚಿವ ಮಂಗಳ ಮುಖಿ ಜೊತೆಗಿರುವ ಅಸಭ್ಯ ಭಂಗಿಗಳ ವಿಡಿಯೋ ವೈರಲ್ ಆಗಿ ಕೋಲಾಹಲ ಸೃಷ್ಟಿಸಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಮತ್ತೊಬ್ಬ ಜ್ಯೋತಿಷಿಯ ರಾಸಲೀಲೆ ಪ್ರಕರಣ ಬೆಳಕಿಗೆ ಬಂದಿದೆ. ನಾಸಿಕ್ ಕಳ್ಳ ಗುರೂಜಿ ಅಶೋಕ್ ಖಾರಟ್ ಕೇಸ್ ಕೋಲಾಹಲ ಸೃಷ್ಟಿಯಾದ ಬೆನ್ನಲ್ಲೇ ಇದೀಗ ಮಹಿಳೆಯೊಬ್ಬರು ಪಾಲ್ಘಾರ್ ಜ್ಯೋತಿಷಿ ಎಂದು ಮೋಸ ಮಾಡಿ ಅತ್ಯಾ** ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.

ನಾನು ಮಹಾದೇವ,ನೀನು ಪಾರ್ವತಿ

ಈ ಜ್ಯೋತಿಷಿ ತಾನು ದೇವಮಾನವ ಎಂದಿದ್ದಾನೆ. ನಾನು ಮಹಾದೇವನ (ಶಿವ) ಅವತಾರ ಎಂದು ಹೇಳಿಕೊಂಡು ಮಹಿಳೆಗೆ ಧಾರ್ಮಿಕ ವಿಚಾರಗಳನ್ನು ತುಂಬಿದ್ದು ಮಾತ್ರವಲ್ಲ, ಆಕೆಯ ಸಮಸ್ಯೆಗಳನ್ನೇ ಹಿಡಿದು ಬಳಸಿಕೊಂಡ ಘಟನೆ ನಡೆದಿದೆ. ನಾನು ಮಹಾದೇವ, ನೀನು ಪಾರ್ವತಿ ಎಂದು ಆಕೆಗೆ ಆಧ್ಯಾತ್ಮಿಕ ವಿಚಾರಗಳನ್ನು ತಲೆಗೆ ತುಂಬಿ ಮಹಿಳೆಯನ್ನು ಬಳಸಿಕೊಂಡಿದ್ದಾನೆ. ಬಳಿಕ ವಿಡಿಯೋ ರೆಕಾರ್ಡ್ ಮಾಡಿ ಪದೇ ಪದೇ ಮಹಿಳೆಗೆ ಬೆದರಿಕೆ ಹಾಕಿ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.

ನಾಸಿಕ್ ಪ್ರಕರಣದ ಬಳಿಕ ಧೈರ್ಯ ಮಾಡಿ ದೂರು ನೀಡಿದ ಮಹಿಳೆ

ನಾಸಿಕ್ ಸ್ವಯಂಘೋಷಿತ ದೇವಮಾನ ಬಂಧಿತ ಅಶೋಕ್ ಕಾರಟ್ ಪ್ರಕರಣ ಬೆಳಕಿಗೆ ಬಂದ ಬಳಿಕ ಧೈರ್ಯ ಮಾಡಿ ಈ ಮಹಿಳೇ 40 ವರ್ಷದ ಜ್ಯೋತಿಷಿ ವಿರುದ್ಧ ದೂರು ನೀಡದ್ದಾರೆ. ಪುಣೆ ನಿವಾಸಿಯಾಗಿರುವ ಈ ಮಹಿಳೆಗೆ 2023ರಲ್ಲಿ ಈ ಜ್ಯೋತಿಷಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ. ಜ್ಯೋತಿಷಿಯ ಕೆಲ ವಿಡಿಯೋಗಳು, ಪ್ರವಚನಗಳ ರೀಲ್ಸ್ ಮೂಲಕ ಪರಿಚಯವಾಗಿದ್ದ ಈ ಜ್ಯೋತಿಷಿ ಜೊತೆ ಮಹಿಳೆ ತನ್ನ ಕಷ್ಟಗಳನ್ನು ಹೇಳಿಕೊಂಡು ಪರಿಹಾರ ಸೂಚಿಸಲು ಮನವಿ ಮಾಡಿದ್ದಾಳೆ.

ಸಿಕ್ಕಿದ್ದೇ ಚಾನ್ಸ್ ಎಂದುಕೊಂಡ ಈ ಜ್ಯೋತಿಷಿ ಮಹಿಳೆಯನ್ನು ಭೇಟಿ ಮಾಡಲು ಪುಣೆಗೆ ಆಗಮಿಸಿದ್ದ. ಇದರ ಅರಿವಿಲ್ಲದ ಮಹಿಳೆ ಪುಣೆಯಲ್ಲಿ ಜ್ಯೋತಿಷಿಯನ್ನು ಭೇಟಿಯಾಗಲು ಹೋಗಿದ್ದಾರೆ. ಅಲ್ಲಿ ಕೆಲ ಧಾರ್ಮಿಕ ವಿಧಿವಿಧಾನಗಳನ್ನು ಮಾಡುವ ಕಳ್ಳ ನಾಟಕ ಆಡಿದ್ದಾನೆ. ನಾನು ಮಹಾದೇವನ ಅವತಾರ,ಈ ಪೂಜೆಯಲ್ಲಿ ನೀನು ಪಾರ್ವತಿ. ಮಹಾದೇವ, ಪಾರ್ವತಿ ಪೂಜೆ ಮಾಡುತ್ತಾನೆ ಎಂದೆಲ್ಲಾ ತಲೆಗೆ ತುಂಬಿ ಒಂದಷ್ಟು ಪೂಜೆ ಸೇರಿದಂತೆ ಮಂತ್ರಗಳನ್ನು ಪಠಿಸಿದ್ದಾನೆ. ಹೋಮಗಳನ್ನು ಮಾಡಿದ್ದಾನೆ. ಇಡೀ ದಿನ ನೀನು ಪಾರ್ವತಿಯಾಗಿರಬೇಕು ಎಂದಿದ್ದಾನೆ. ಬಳಿಕ ಆಕೆಯನ್ನು ಬಳಸಿಕೊಂಡಿದ್ದಾನೆ. ಇದು ಮಹಾದೇವನ ಇಚ್ಚೆ ಎಂದೆಲ್ಲಾ ಹೇಳಿ ಆಕೆಯನ್ನು ಬಳಸಿಕೊಂಡಿದ್ದಾನೆ.

ಈ ವೇಲೆ ವಿಡಿಯೋ ಮಾಡಿಕೊಂಡ ಈತ ಬಳಿಕ ಮಹಿಳೆಗೆ ವಿಡಿಯೋ ಕಳುಹಿಸಿ ಬೆದರಿಸಿ ನಿರಂತರವಾಗಿ ಈ ರೀತಿ ಬಳಸಿಕೊಂಡಿದ್ದಾನೆ. ಇಷ್ಟು ದಿನ ಮೌನವಾಗಿದ್ದ ಮಹಿಳೆ ಇದೀಗ ನಾಸಿಕ್ ಅಶೇಕ್ ಖಾರಟ್ ಪ್ರಕರಣ ಬೆಳಕಿಗೆ ಬಂದ ಬಳಿಕ ಧೈರ್ಯ ಮಾಡಿ ಆಪ್ತರ ಜೊತೆಗೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಇದೇ ವೇಳೆ ಕೆಲ ವಿಡಿಯೋಗಳು ಸೇರಿದಂತೆ ಇತರ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ. ಇದೀಗ ಪೊಲೀಸರು ನಾಪತ್ತೆಯಾಗಿರುವ ಈ ಜ್ಯೋತಿಷಿ ಬಂಧಿಸಲು ತನಿಖೆ ತೀವ್ರಗೊಳಿಸಿದ್ದಾರೆ. ಈ ಪ್ರಕರಣ ಮಹಾರಾಷ್ಟ್ರದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.