Asianet Suvarna News Asianet Suvarna News

ನಾನು ಸತ್ತಿಲ್ಲ, ನೀರು ಕೊಡಿ; ರೈಲು ದುರಂತದ ಶವಗಳ ರಾಶಿಯಲ್ಲಿದ್ದ ವ್ಯಕ್ತಿಯ ರಕ್ಷಣೆ!

ಒಡಿಶಾ ರೈಲು ದುರಂತದ ನೋವಿ ಕತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿದೆ. ಮನಮಿಡಿಯು ಘಟನೆಗಳು ಒಂದು ಕ್ಷಣ ಕಣ್ಣಂಚಲ್ಲಿ ನೀರು ಜಿನುಗಿಸದೇ ಇರದು.ಅಪಘಾತದ ವೇಳೆ ತೀವ್ರವಾಗಿ ಗಾಯೊಂಡು ಪ್ರಜ್ಞಾಹೀನನಾಗಿದ್ದ ವ್ಯಕ್ತಿ ಸತ್ತಿದ್ದಾನೆ ಎಂದು ಶವಾಗಾರಕ್ಕೆ ಕಳುಹಿಸಲಾಗಿತ್ತು. ಶವಗಳ ರಾಶಿಯಲ್ಲಿದ್ದ ಈ ವ್ಯಕ್ತಿ ಕೊನೆಗೆ ತನ್ನ ಬದುಕಿಸುವಂತೆ ರಕ್ಷಣಾ ಸ್ವಯಂ ಸೇವಕರಲ್ಲಿ ಕೇಳಿಕೊಂಡ ಘಟನೆ ನಡೆದಿದೆ. 
 

I Am alive please give me water Odisha train accident injured man ask workers to rescue from mortuary to Hospital ckm
Author
First Published Jun 8, 2023, 8:08 PM IST

ಒಡಿಶಾ(ಜೂ.08): ಒಡಿಶಾದಲ್ಲಿ ಸಂಭವಿಸಿದ ಮಹಾ ರೈಲು ದುರಂತದಲ್ಲಿ ಮಡಿದ ಹಲವರ ಗುರುತು ಪತ್ತೆಯಾಗಿಲ್ಲ. ಇತ್ತ ಕುಟುಂಬಸ್ಥರ ತಮ್ಮವರ ಮೃತದೇಹಕ್ಕೆ ಹುಡುಕಾಟ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳ ನರಳಾಟದ ನೋವು ಹೇಳತೀರದು. ಇದರ ನಡುವೆ ಭೀಕರತೆ, ಮನಮಿಡಿಯು ಘಟನೆಗಳ ವಿವರವೂ ಬಗಿರಂಗವಾಗುತ್ತಿದೆ. ಇತ್ತೀಚೆಗ ಶವಗಳ ರಾಶಿಯಲ್ಲಿದ್ದ ಮಗನನ್ನು ತಂದೆ ಬದುಕಿಸಿದ್ದರು. ಇದೀಗ ಶವಗಳ ರಾಶಿಯಲ್ಲಿ ಬಿದ್ದಿದ್ದ ಜೀವಂತ ವ್ಯಕ್ತಿ, ಕೊನೆಗೆ ಶವಗಳನ್ನು  ಬದಿಗೆ ಸರಿಸಿ ಮತ್ತಷ್ಟು ಮೃತದೇಹಳನ್ನು ಶಾಲೆಗೆ ರವಾನಿಸಲು ಬಂದ ಸ್ವಯಂ ಸೇವಕರ ಬಳಿ ಕಾಪಾಡುವಂತೆ ಕೋರಿದ ಘಟನೆ ನಡದಿದೆ.

ಒಡಿಶಾ ರೈಲು ದುರಂತದ(Odisha Train Accident) ಬಳಿಕ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು. ಬದುಕಿದವರನ್ನು ಆಸ್ಪತ್ರೆ (Hospital) ದಾಖಲಿಸಲಾಗಿತ್ತು. ಇತ್ತ ಮೃತ ದೇಹಗಳನ್ನು ಬಾಲಾಸೋರ್ ಸರ್ಕಾರಿ ಶಾಲೆಗೆ ರವಾನಿಸಲಾಗಿತ್ತು. ತೀವ್ರವಾಗಿ ಗಾಯೊಂಡ ಪಶ್ಚಿಮ ಬಂಗಾಳದ 34 ವರ್ಷದ ರಾಬಿನ್ ನೈಯಾ ರೈಲು ಹಳಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದದರು. 

ಕೊರಮಂಡಲ್ ಎಕ್ಸ್‌ಪ್ರೆಸ್ ಅಪಘಾತದ ಬೆಚ್ಚಿ ಬೀಳಿಸುವ ವಿಡಿಯೋ ಬಹಿರಂಗ!

ರಕ್ತದ ನಡುವಿದ್ದ ರಾಬಿನ್ ನಯ್ಯಾ ದೇಹದಲ್ಲಿ ಯಾವುದೇ ಚಲನವಲ ಇರಲಿಲ್ಲ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ರಾಬಿನ್ ನೈಯಾನನ್ನು ಮೃತದೇಹ ಜೊತೆ ಇಡಲಾಗಿತ್ತು. ಹಳಿಗಳ ಬದಿಯಲ್ಲಿ ಹಲವು ಮೃತದೇಹಗಳನ್ನು ಇರಿಸಲಾಗಿತ್ತು. ಇದಲ್ಲಿ ರಾಬಿನ್ ನೈಯಾ ಕೂಡ ಇದ್ದರು. ಬಳಿಕ ಈ ಶವಗಳನ್ನು ಬಾಲಾಸೋರ್ (Balasore) ಸರ್ಕಾರಿ ಶಾಲೆಗೆ ರವಾನಿಸಲಾಗಿತ್ತು.  ಬಾಲಾಸೋರ್ ಸರ್ಕಾರಿ ಶಾಲೆಯಲ್ಲಿ ಮೃತದೇಹಗಳ ರಾಶಿ ಬಿದ್ದಿತ್ತು. 

ಮೃತದೇಹಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸ್ವಯಂ ಸೇವಕರು ಬಂದು ಶವಗಳ ರಾಶಿಯನ್ನು ಸರಿಸಿ ಮೃತದೇಹಕ್ಕೆ ಜಾಗ ಮಾಡಿಕೊಡುತ್ತಿದ್ದರು. ಇತ್ತ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ರಾಬಿನ್ ನೈಯಾಗೆ ಪ್ರಜ್ಞೆ ಬಂದಾಗ ಎಲ್ಲಿದ್ದೇನೆ ಅನ್ನೋದೇ ಅರ್ಥವಾಗಿಲ್ಲ. ಗಂಭೀರ ಗಾಯದಿಂದ ಕೈ ಮೇಲಕ್ಕೆತ್ತಲು, ಕೂಗಲು ಸಾಧ್ಯವಾಗುತ್ತಿಲ್ಲ. ಒಂದು ಕಾಲು ಗಂಭೀರವಾಗಿ ಗಾಯಗೊಂಡಿದೆ. ಒಂದು ಕಾಲಿನ ಮೂಲಕ ಸಹಾಯ ಕೇಳುವ ಪ್ರಯತ್ನ ಮಾಡಿದ್ದಾನೆ. ಸಾಧ್ಯವಾಗಿಲ್ಲ. ಕೋಣೆಗೆ ಸ್ವಯಂ ಸೇವಕರು ಆಗಮಿಸಿದಾಗ ತನ್ನ ಕಾಲು ಆಡಿಸುವ ಮೂಲಕ ಸ್ವಯಂ ಸೇವಕರ ಗಮಸೆಳೆಯುವ ಪ್ರಯತ್ನ ಮಾಡಿದ್ದಾನೆ.

ಕೊರಮಂಡಲ್ ಬಳಿಕ ಮತ್ತೊಂದು ರೈಲು ದುರಂತ, ನಾಲ್ವರು ಕಾರ್ಮಿಕರ ಸಾವು, ಹಲವರು ಗಂಭೀರ!

ಇದನ್ನು ಗಮಮಿಸಿದ ಸ್ವಯಂ ಸೇವಕರು ಹತ್ತಿರ ಬಂದಿದ್ದಾರೆ. ಈ ವೇಳೆ ನಾನು ಸತ್ತಿಲ್ಲ, ನೀರು ಕೊಡಿ,ನನ್ನ ಬದುಕಿಸಿ ಎಂದು ರಾಬಿನ್ ಸಣ್ಣ ಧ್ವನಿಯಲ್ಲಿ ಹೇಳಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ವಯಂ ಸೇವಕರು ರಾಬಿನ್ ಮಿಯಾನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಮೆದಿನಿಪುರ್ ಮೆಡಿಕಲ್ ಕಾಲೇಜಿನಲ್ಲಿ ರಾಬಿನ್ ಮಿಯಾಗೆ ಸರ್ಜರಿ ಮಾಡಲಾಗಿದೆ. ಸದ್ಯ ರಾಬಿನ್ ನೈಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಚರ್ನೆಖಲಿ ಗ್ರಾಮದ ರಾಬಿನ್, ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಮೂಲಕ ಆಂಧ್ರ ಪ್ರದೇಶಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಈತನ ಜೊತೆ ಇದೇ ಗ್ರಾಮದ 6 ಮಂದಿ ಇದ್ದರು. ಆದರೆ ಇವರ ಸುಳಿವಿಲ್ಲ. 

Follow Us:
Download App:
  • android
  • ios