Asianet Suvarna News Asianet Suvarna News

ಪ್ರಮಾಣವಚನ ಸ್ವೀಕಾರದ ವೇಳೆ 'ಜೈ ಪ್ಯಾಲೆಸ್ತೇನ್‌..' ಘೋಷಣೆ ಕೂಗಿದ ಅಸಾದುದ್ದೀನ್‌ ಓವೈಸಿ!


ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಲೋಕಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ ಜೈ ಪ್ಯಾಲೆಸ್ತೇನ್‌ ಎಂದು ಘೋಷಣೆ ಕೂಗಿರುವುದು ವಿವಾದಕ್ಕೆ ಕಾರಣವಾಗಿದೆ.
 

Hyderabad MP Asaduddin Owaisi Jai Palestine slogan during oath in Lok Sabha stirs row san
Author
First Published Jun 25, 2024, 4:56 PM IST

ನವದೆಹಲಿ (ಜೂ.25):  ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ 18 ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ "ಜೈ ಪ್ಯಾಲೆಸ್ತೀನ್" ಎಂದು ಘೋಷಣೆ ಕೂಗಿದರು. ಇದು ವಿವಾದಕ್ಕೆ ಕಾರಣವಾಗಿದೆ. ಐದನೇ ಬಾರಿಗೆ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಒವೈಸಿ, ನಂತರ ಎಕ್ಸ್‌ನಲ್ಲಿ ಈ ಕುರಿತಾಗಿ ಪೋಸ್ಟ್‌ ಮಾಡಿದ್ದರು, ಭಾರತದಲ್ಲಿ ಸಾಮಾಜಿಕವಾಗಿ ಕೆಳಸ್ಥರದಲ್ಲಿರುವವರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪ್ರಸ್ತಾಪಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.  ಅಸಾದುದ್ದೀನ್ ಓವೈಸಿ ಪ್ರಮಾಣ ವಚನ ಸ್ವೀಕರಿಸಲು ತೆರಳುತ್ತಿದ್ದಂತೆ ಬಿಜೆಪಿ ಸಂಸದರು 'ಜೈ ಶ್ರೀರಾಮ್' ಘೋಷಣೆ ಕೂಗಲು ಆರಂಭಿಸಿದರು. ಘೋಷಣೆಗಳಿಂದ ವಿಚಲಿತರಾಗದ ಓವೈಸಿ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು "ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್" ಎಂದು ಹೇಳುವ ಮೂಲಕ ತಮ್ಮ ಪ್ರಮಾಣವಚನವನ್ನು ಮುಕ್ತಾಯ ಮಾಡಿದರು.

2019 ರಲ್ಲಿ, ಓವೈಸಿ ತಮ್ಮ ಪ್ರಮಾಣವಚನವನ್ನು "ಜೈ ಭೀಮ್, ಅಲ್ಲಾ-ಓ-ಅಕ್ಬರ್ ಮತ್ತು ಜೈ ಹಿಂದ್" ಎಂಬ ಪದಗಳೊಂದಿಗೆ ಮುಕ್ತಾಯಗೊಳಿಸಿದರು. 2024 ರ ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರನ್ನು 3.3 ಲಕ್ಷ ಮತಗಳಿಂದ ಓವೈಸಿ ಸೋಲಿಸಿ ಸಂಸತ್‌ಗೆ ಪ್ರವೇಶ ಪಡೆದಿದ್ದಾರೆ. ಅವರ ಘೋಷಣೆಯ ಬಗ್ಗೆ ವಿವಾದ ಭುಗಿಲೆದ್ದಂತೆ, ಓವೈಸಿ ಅವರು 'ಜೈ ಪ್ಯಾಲೆಸ್ತೀನ್' ಎಂದು ಹೇಳಬಾರದು ಎಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ ಎಂದು ವಾದ ಮಾಡಿದ್ದಾರೆ.

ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಓವೈಸಿ ನೀಡಿದ 'ಜೈ ಪ್ಯಾಲೆಸ್ತೀನ್' ಘೋಷಣೆ "ಸಂಪೂರ್ಣವಾಗಿ ತಪ್ಪು" ಮತ್ತು ಸಂವಿಧಾನದ ವಿರುದ್ಧವಾಗಿದೆ ಎಂದಿದ್ದಾರೆ. ಒಂದೆಡೆ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಮತ್ತೊಂದೆಡೆ ಸಂವಿಧಾನದ ವಿರುದ್ಧ ಘೋಷವಾಕ್ಯ ಮಾಡುತ್ತಿದ್ದು, ಓವೈಸಿಯ ಅಸಲಿ ಮುಖ ಹೊರಬಿದ್ದಿದೆ .ಪ್ರತಿದಿನ ದೇಶ ಹಾಗೂ ಸಂವಿಧಾನದ ವಿರುದ್ಧ ಕಿಡಿಕಾರಿದ್ದಾರೆ ಎಂದು ರೆಡ್ಡಿ ಹೇಳಿದರು.

ಓವೈಸಿ ಅವರ ಘೋಷಣೆಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, "ನಾವು ಯಾವುದೇ ದೇಶವನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ, ಆದರೆ ಯಾವುದೇ ದೇಶದ ಹೆಸರನ್ನು ಸದನದಲ್ಲಿ ತೆಗೆದುಕೊಳ್ಳುವುದು ಸರಿಯಲ್ಲ" ಎಂದು ಹೇಳಿದರು. ಕಳೆದ ವರ್ಷ, ಇಸ್ರೇಲ್ ಮತ್ತು ಗಾಜಾ ನಡುವೆ ಯುದ್ಧ ಪ್ರಾರಂಭವಾದಾಗ, ಪ್ಯಾಲೆಸ್ತೀನ್ ಪರಿಸ್ಥಿತಿಯು ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ವಿಷಯವಲ್ಲ ಆದರೆ ಮಾನವೀಯತೆಯ ವಿಷಯವಾಗಿದೆ ಎಂದು ಓವೈಸಿ ಹೇಳಿದರು. ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುವನ್ನು "ಡೆವಿಲ್‌" ಎಂದು ಟೀಕೆ ಮಾಡಿದ್ದರು.

ಓವೈಸಿಯ ಕೋಟೆಯಲ್ಲಿ ಅರಳುತ್ತಾ ಕಮಲ? ಗೆಲ್ತಾರಾ ಮಾಧವಿ ಲತಾ? ಎಕ್ಸಿಟ್ ಪೋಲ್‌ನಲ್ಲಿ ಏನಿದೆ?

ಪ್ಯಾಲೆಸ್ತೇನ್‌ ಪರ ಹೋರಾಟ ಮಾಡುವ ಭಯೋತ್ಪಾದಕ ಸಂಘಟನೆಯಾದ ಹಮಾಸ್ ವಿರುದ್ಧ ಇಸ್ರೇಲ್‌ನ ಯುದ್ಧವು ಜೂನ್‌ನಲ್ಲಿ ಎಂಟನೇ ತಿಂಗಳಿಗೆ ಪ್ರವೇಶಿಸಿತು, ಸುಮಾರು 40,000 ಜನರು ಇಲ್ಲಿಯವರೆಗೂ ಸಾವು ಕಂಡಿದ್ದು, ಲಕ್ಷಕ್ಕೂ ಅಧಿಕ ಜನ ಸ್ಥಳಾಂತರಗೊಂಡಿದ್ದಾರೆ.

ಕನಿಷ್ಠ ಕಾರ್‌ ಕೂಡ ಹೊಂದಿಲ್ಲದ ದೇಶದ ಹೈಪ್ರೊಫೈಲ್‌ ರಾಜಕಾರಣಿಗಳು ಇವರು!

Latest Videos
Follow Us:
Download App:
  • android
  • ios